ನಮಸ್ತೆ ಪ್ರೀತಿಯ ವೀಕ್ಷಕರೆ ಮೇಘನಾ ರಾಜ್ ಸದ್ಯ ತಮ್ಮ ಜೀವನದಲ್ಲಿ ನಡೆದ ಮರೆಯಲಾಗದ ಅತ್ಯಂತ ಕಹಿ ಘಟನೆಯಿಂದ ಇದೀಗ ಚೇತರಿಸಿಕೊಂಡು ಮತ್ತೆ ಸಿನೆಮಾ ಕಿರುತೆರೆ ಅಂತ ಬ್ಯುಸಿ ಆಗುವ ಮೂಲಕ ಹೊಸ ಬದುಕಿನ ಆರಂಭವನ್ನು ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿಯೂ ಆಗಾಗ ತಮ್ಮ ಜೀವನದ ಆಗುಹೋಗುಗಳನ್ನು ಹೊಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಇದೀಗ ಮಾಧ್ಯಮದ ಸಂದರ್ಶವೊಂದರಲ್ಲಿ ನಟಿ ಮೇಘನಾ ರಾಜ್ ತಮ್ಮ ಎರಡನೇ ಮದುವೆಯ ಬಗ್ಗೆ ಮಾತನಾಡಿದ್ದು ನೇರವಾಗಿ ಇರೋ ವಿಚಾರವನ್ನು ಹಂಚಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ ತಮ್ಮ ನಿರ್ಧಾರದ ಬಗ್ಗೆಯೂ ಹೇಳಿಕೊಂಡಿದ್ದಾರೆ. ಹೌದು ಎರಡು ವರ್ಷಗಳ ಹಿಂದೆ ಎಲ್ಲವೂ ಸರಿ ಇದ್ದ ನಟಿ ಮೇಘನಾ ರಾಜ್ ಅವರ ಜೀವನದ ದಿಕ್ಕೇ ಬದಲಾಗಿತ್ತು. ಇನ್ನೂ ಚಿರು ಸರ್ಜಾ ಅವರು ಕೇವಲ 35ನೇ ವಯಸ್ಸಿಗೆ ಅಕಾಲಿಕವಾಗಿ ಇಲ್ಲವಾದರು. ನೋವಿನ ಆ ಕ್ಷಣದಲ್ಲಿ ಮೇಘನಾ ರಾಜ್ ತಮ್ಮ ಮಗುವಿನ ನಿರೀಕ್ಷೆಯಲ್ಲಿದ್ದರು. ಚಿರು ಸರ್ಜಾ ಅಗಲಿಕೆಯ ನೋವಿನಲ್ಲಿ ತನ್ನ ಮಗುವಿಗಾಗಿ ಗಟ್ಟಿಯಾದ ಮೇಘನಾ ರಾಜ್ ಅಕ್ಟೋಬರ್ 22 ರಂದು ತಮ್ಮ ಮಗ ರಾಯನ್ ರಾಜ್ ಸರ್ಜಾಗೆ ಜನ್ಮ ನೀಡಿದರು. ಅಂದಿನಿಂದ ನಟಿ ತನ್ನೆಲ್ಲ ಸಂತೋಷವನ್ನು ಮಗ ರಾಯನ್ನಲ್ಲಿಯೇ ಕಾಣುತ್ತಿದ್ದಾರೆ.
ತಂದೆಯ ಬಗ್ಗೆ ಮಗನಿಗೆ ಹಲವು ವಿಚಾರ ತಿಳಿ ಹೇಳುವುದರಿಂದ ಹಿಡಿದು ಜೀವನದ ಉತ್ತಮ ಮೌಲ್ಯಗಳನ್ನು ಕಲಿಸುವವರೆಗೆ ಮೇಘನಾ ರಾಜ್ ಮಗನನ್ನು ಪ್ರೀತಿಯಿಂದ ಬೆಳೆಸುತ್ತಿದ್ದಾರೆ. ಇನ್ನೂ ಕಳೆದ ವರ್ಷ ಮತ್ತೆ ತಮ್ಮ ವೃತ್ತಿ ಬದುಕಿನ ಕಡೆ ಗಮನ ನೀಡಬೇಕಾದ ಅನಿವಾರ್ಯತೆಯಿಂದ ಕುರುತೆರೆಗೆ ಕಾಲಿಟ್ಟು ಮೇಘನಾ ರಾಜ್ ಡ್ಯಾಸಿಂಗ್ ಚಾಂಪಿಯನ್ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡರು. ನಂತರ ಇದೀಗ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಕೂಡ ಭಾಗವಹಿಸುತಿದ್ದರು ಸಿನೆಮಾಗಳಲ್ಲಿಯೂ ಬ್ಯುಸಿ ಆಗಿದ್ದಾರೆ.
ಇನ್ನು ಈ ನಡುವೆ ಬಾಲಿವುಡ್ ನ ಬಬಲ್ ವಾಹಿನಿಗೆ ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ಮೇಘನಾ ರಾಜ್ ಅವರು ತಮ್ಮ ಎರಡನೇ ಮದುವೆಯ ಬಗ್ಗೆ ನೇರವಾಗಿ ಹೇಳಿಕೊಂಡು ಇದರ ಬಗ್ಗೆ ನಿರ್ಧಾರ ನನ್ನದೇ ಎಂದಿದ್ದಾರೆ. ಮೇಘನಾ ರಾಜ್ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಂಡಾಗ ಕಿರುತೆರೆ ಶೋಗಳಲ್ಲಿ ಭಾಗವಹಿಸಿದಾಗ ನಾನಾ ರೀತಿಯ ಜನರಿಂದ ನಾನಾ ರೀತಿಯ ಪ್ರತಿಕ್ರಿಯೆ ಬಂದಿರೋದು ಉಂಟು. ಹೌದು ಮೇಘನಾ ರಾಜ್ ಚಿರುವನ್ನು ಮರೆತು ತಮ್ಮ ಜೀವನವನ್ನು ಸಂಪೂರ್ಣವಾಗಿ ಆನಂದಿಸುತಿದ್ದಾರೆ ಎಂದು ನೆಟ್ಟಿಗರು ಟ್ರೋ-ಲ್ ಮಾಡಿದ್ದರು.
ಅದಕ್ಕೆ ಪ್ರತಿಕ್ರಿಯೆ ನೀಡಿದ ಮೇಘನಾ ರಾಜ್ ನಾನು ನನ್ನ ಬಗ್ಗೆ ಯಾರಿಗೂ ಏನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ ಎಂದು ಹೇಳಿ ಸುಮ್ಮನಾದರು. ಅಷ್ಟೇ ಅಲ್ಲದೇ ಕೆಲವರು ಮೇಘನಾ ರಾಜ್ ಅವರ ಪೋಸ್ಟ್ ಗಳಿಗೆ ಕಾಮೆಂಟ್ ಮಾಡಿ ಅಯ್ಯೋ ಈಗ ನಿಮಗೆ ಚಿರು ನೆನಪಿಲ್ಲ ಎಂದಿದ್ದರು. ಇದಕ್ಕೆ ಮೇಘನಾ ಪ್ರತಿಕ್ರಿಯೆ ನೀಡಿದ್ದು, ಸಹೋದರ ನಾನು ಅವರನ್ನು ನೆನಪಿಸಿಕೊಳ್ಳುತ್ತೇನೆ ಎಂದು ನಿಮಗೆ ಸಾಬೀತುಪಡಿಸುವ ಅಗತ್ಯವಿಲ್ಲಾ. ಅವರ ಬಗ್ಗೆ ಯೋಚಿಸುವುದು ಯೋಚಿಸದಿರುವುದು ಸಂಪೂರ್ಣವಾಗಿ ನನಗೆ ಬಿಟ್ಟಿದ್ದು.
ನಾನು ಏನು ಮಾಡುತ್ತಿದ್ದೇನೆ. ನಾನು ಏನು ತಿನ್ನುತ್ತಿದ್ದೇನೆ ಎನ್ನುದನ್ನು ತಿಳಿಸಬೇಕಾಗಿಲ್ಲ ಎಂದಿದ್ದರು. ನಾನು ಈ ವ್ಯಕ್ತಿಯನ್ನು ಫಾಲೋ ಮಾಡುತ್ತೇನೆ ಅಥವಾ ಪ್ರತಿದಿನ ಏನು ಮಾಡುತಿದ್ದನೇ ಎಂದು ಯಾರಿಗೂ ತಿಳಿಸುವ ಅವಶ್ಯಕತೆ ನನಗಿಲ್ಲ ಎಂದರು. ಇನ್ನೂ ಆ ಸಂದರ್ಶನದಲ್ಲಿ ತಮ್ಮ ಎರಡನೇ ಮದುವೆ ಬಗ್ಗೆ ಮಾತನಾಡಿದ ಮೇಘನಾ ರಾಜ್ ಎರಡನೇ ಮದುವೆ ಬಗ್ಗೆ ಹೇಳಿಕೊಂಡಿದ್ದಾರೆ. ಹೌದು ತಮ್ಮ ಸುತ್ತ ಮುತ್ತಲಿನ ಎಷ್ಟೋ ಜನರು ತನ್ನನ್ನು ಮತ್ತೆ ಮದುವೆಯಾಗಲು ಹೇಳುತ್ತಿದ್ದಾರೆ ಎಂಬುದರ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಅಷ್ಟೇ ಅಲ್ಲದೇ ಒಂಟಿಯಾಗಿದ್ದು ಮಗನನ್ನು ನೋಡಿಕೊಳ್ಳಲು ಸಲಹೆ ನೀಡುವ ಜನರ ಒಂದು ವಿಭಾಗವೂ ಇದೆ ಎಂದು ಹೇಳಿಕೊಂಡರು. ನಮ್ಮ ಸಮಾಜದ ಮನಸ್ಥಿತಿಯು ವಿಭಿನ್ನವಾಗಿದೆ. ನನಗೆ ಮತ್ತೆ ಮದುವೆಯಾಗಲು ಸಲಹೆ ನೀಡುವ ಜನರ ಗುಂಪು ನನ್ನ ಸುತ್ತ ಇದೆ. ಆದರೆ ಜೊತೆಗೆ ಮತ್ತೊಂದು ವರ್ಗ ನೀವು ನಿಮ್ಮ ಮಗನೊಂದಿಗೆ ಸಂತೋಷವಾಗಿರಬೇಕು ಎಂದು ಹೇಳುವ ಜನರ ಗುಂಪು ಕೂಡ ಇದೆ. ಹಾಗಾದರೆ ನಾನು ಯಾರ ಮಾತು ಕೇಳಲಿ.
ಎಲ್ಲ ಜಿಂಜಾಟದ ನಡುವೆಯೂ ನಾನು ನನ್ನ ಮಾತನ್ನು ಮಾತ್ರ ಕೇಳುತ್ತೇನೆ ಎಂದು ಮೇಘನಾ ರಾಜ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕು ಎಂದಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.