ಎವರ್ ಗ್ರೀನ್ ಹೀರೋ ರಾಮ್ ಕುಮಾರ್ ಅವರ ಸುಂದರ ಸಂಸಾರ ಹೇಗಿದೆ ನೋಡಿ..

ಸುದ್ದಿ

ನಮ್ಮ ಕನ್ನಡ ಚಿತ್ರರಂಗದಲ್ಲಿ ಮೋಸ್ಟ್ ಹ್ಯಾಂಡ್ಸಮ್ ಹೀರೋಗಳಲ್ಲಿ ಒಬ್ಬರಾದ ನಟ ರಾಮ್ ಕುಮಾರ್. ಒಬ್ಬರು ಕೂಡ ಹೌದು ಆಗಿನ ಕಾಲದ ಹೆಂಗಳಿಯರ ಡಿರ್ಮ್ ಬಾಯ್ ಆಗಿದ್ದ ನಟ ಇವರು ಹಲವಾರು ಸೂಪರ್ ಹಿಟ್ ಚಿತ್ರಗಳ್ಳನ್ನು ನಟಿಸಿ ಯಶಸ್ಸನ್ನು ಪಡೆದವರು. ನಟ ರಾಮ್ ಕುಮಾರ್ ಅವರ ತಂದೆ ಕೊಡು ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದವರು ಹಾಗಾಗಿ ಚಿಕ್ಕವಯಸ್ಸಿನಿಂದಲೂ ರಾಮ್ ಕುಮಾರ್ ಅವರಿಗೆ ಸಿನಿಮಾ ಅಂದರೆ ಬಹಳ ಆಸಕ್ತಿ ಇತ್ತು.

1990 ರಲ್ಲಿ ಮೊದಲ ಬಾರಿಗೆ ಆದೇಶ ಎಂಬ ಸಿನಿಮಾದಲ್ಲಿ ನಟಿಸಿದವರು ನಟ ರಾಮ್ ಕುಮಾರ್ ನಂತರ ಮುತ್ತಿನ ಹಾರ ಸಿನಿಮಾದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಸುಹಾಸಿನಿ ಅವರ ಮಗನ ಪಾತ್ರದಲ್ಲಿ ನಡೆಸಿದರು. ನಂತರ ಹೀರೋ ಆಗಿ ಗುರುತಿಸಿಕೊಂಡ ರಾಮ್ ಕುಮಾರ್ ಅವರು ತವರಿನ ತೊಟ್ಟಿಲು, ಹಬ್ಬ, ಸ್ನೇಹಲೋಕ, ತಾಯಿ ಇಲ್ಲದ ತವರು, ಕಾವ್ಯ, ಪೂಜಾ, ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳಿಗೆ ಹೀರೋ ನಟಿಸಿದರು. ಸ್ಯಾಂಡಲ್ವುಡ್ನ ಪ್ರತಿಷ್ಠಿತ ನಿರ್ದೇಶಕರ ಜೊತೆ ಕೆಲಸ ಮಾಡಿದರು ರಾಮಕುಮಾರ್.

ಕನ್ನಡ ಚಿತ್ರರಂಗದ ಹೆಸರಾಂತ ನಟರಾಗಿರುವ ರಾಮ್ ಕುಮಾರ್ ಅವರು ಹಲವಾರು ವರ್ಷಗಳಿಂದ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಮಾಧ್ಯಮಗಳಲ್ಲಿ ಕೂಡ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಇನ್ನು ಅವರ ವೈಯಕ್ತಿಕ ಜೀವನದ ವಿಷಯಕ್ಕೆ ಬಂದರೆ ರಾಮ್ ಕುಮಾರ್ ಅವರು ಡಾಕ್ಟರ್ ರಾಜಕುಮಾರ್ ಮತ್ತು ಪಾರ್ವತಮ್ಮ ದಂಪತಿಯ ಮಗಳು ಪೂರ್ಣಿಮಾ ಅವರನ್ನು ಮದುವೆಯಾಗಿದ್ದಾರೆ ನಟ ರಾಮ್ ಕುಮಾರ್ ಅವರ ಕುಟುಂಬ ಇಂದು ಸುಖಜೀವನ ನಡೆಸುತ್ತಿದ್ದಾರೆ. ರಾಮ್ ಕುಮಾರ್ ಮತ್ತು ಪೂರ್ಣಿಮಾ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ ಒಬ್ಬ ಮಗ ಮತ್ತು ಮಗಳು.ರಾಮ್ ಕುಮಾರ್ ಅವರ ಮಗನ ಹೆಸರು ಧೀರನ್ ರಾಮ್ ಕುಮಾರ್ ಮತ್ತು ಅವರ ಮುದ್ದಿನ ಮಗಳ ಹೆಸರು ಧನ್ಯ ರಾಮ್ ಕುಮಾರ್ ಇವರಿಬ್ಬರೂ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿ ನಟನೆಯಲ್ಲಿ ತೊಡಗಿಕೊಂಡಿದ್ದಾರೆ.

ಧೀರನ್ ರಾಮ್ ಕುಮಾರ್ ನಟನೆಯ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು ಇನ್ನೇನು ಕೆಲವೇ ತಿಂಗಳಿನಲ್ಲಿ ಬಿಡುಗಡೆಗೆ ಕೊಳ್ಳುವುದು ಪಕ್ಕ ಹಾಗೂ ಅವರ ಮಗಳು ಧನ್ಯ ರಾಮ್ ಕುಮಾರ್ ನಟನೆಯ ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಗೊಂಡು ಜನ ಮೆಚ್ಚುಗೆ ಪಾತ್ರವಾಗಿದೆ ಧೀರನ್ ರಾಮ್ ಕುಮಾರ್ ಅವರ ಮೊದಲನೇ ಚಿತ್ರದ ಹೆಸರು ಶಿವ ಲವ್ ಯು ಇದು ಪಕ್ಕಾ ಮಾಸ್ ಸಿನಿಮಾ ಆಗಿದೆ ಸಿನಿಮಾದ ಬಹುತೇಕ ಎಲ್ಲ ಕೆಲಸಗಳು ಮುಗಿದಿದ್ದು ಬಿಡುಗಡೆಗೆ ಸಿದ್ಧವಾಗಿದೆ.

ನಟ ರಾಮ್ ಕುಮಾರ್ ಅವರು ಸಾಕಷ್ಟು ಚಿತ್ರಗಳು ನಟಿಸಿ ಅವರದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಅವರ ಚಿತ್ರಗಳೆಂದರೆ ಫ್ಯಾಮಿಲಿ ಸೆಂಟಿಮೆಂಟ್ ಮತ್ತು ಕಾಮಿಡಿ ಹಾಡುಗಳ ರಸದೌತಣವನ್ನು ತುಂಬಿರುತ್ತಿತ್ತು. ಅವರು ಅಭಿನಯಿಸುತ್ತಿರುವ ಚಿತ್ರದಲ್ಲಿ ಒಂದು ಒಳ್ಳೆ ಸಂದೇಶವನ್ನು ಕೂಡ ಕೊಡುತ್ತಿದ್ದರು ಅವರ ಚಿತ್ರದಿಂದ ಅದೆಷ್ಟು ಸಂಸಾರಕ್ಕೆ ಸುಖ ಜೀವನಕ್ಕೆ ಮಾದರಿಯು ಕೂಡ ಆಗಿತ್ತು. ಇವರ ಕುಟುಂಬದ ಮೇಲೆ ಇಡೀ ಇಡೀ ಕರ್ನಾಟಕದ ಜನತೆಯ ಆಶೀರ್ವಾದ ಇರಲಿ ನಮ್ಮ ಅನಿಸಿಕೆ ನಿಮಗಿಷ್ಟವಾಗಿದಲ್ಲಿ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ


Leave a Reply

Your email address will not be published. Required fields are marked *