ಐತಿಹಾಸಿಕ ನಾಯಕನ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಾ ರಾಕಿಂಗ್ ಸ್ಟಾರ್ ಯಶ್..!?

Entertainment

ಒಂದು ಕಾಲದಲ್ಲಿ ನಮ್ಮ ಕನ್ನಡ ಚಿತ್ರರಂಗ ಇನ್ನೊಂದು ಬೇರೆಲ್ಲಾ ಚಿತ್ರರಂಗಗಳಿಗೆ ಮಾದರಿಯಾಗಿತ್ತು. ನಮ್ಮ ಕನ್ನಡ ಚಿತ್ರರಂಗ ಮಹೋನ್ನತ ಇತಿಹಾಸವನ್ನು ಹೊಂದಿದೆ. ಅಣ್ಣಾವ್ರ ಕಾಲದಲ್ಲಿ ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರರಂಗದ ಬಹುತೇಕ ಚಿತ್ರಗಳು ಬೇರೆ ಭಾಷೆಗಳಿಗೆ ರಿಮೇಕ್ ಆದ ಉದಾಹರಣೆಗಳು ಇದೆ. ಆದರೆ ಅವರೆಲ್ಲರ ಕಾಲ ನಂತರ ಕನ್ನಡ ಚಿತ್ರರಂಗ ಕೊಂಚಮಟ್ಟಿಗೆ ಹಿಂದುಳಿದಿತ್ತು.
ನಿಂತಂತಿದ್ದ ಕನ್ನಡ ಚಿತ್ರರಂಗಕ್ಕೆ ಸಂಚಲನದ ಶಕ್ತಿ ನೀಡಿದ್ದು ನಮ್ಮ ನೆಚ್ಚಿನ ರಾಕಿಂಗ್ ಸ್ಟಾರ್ ಯಶ್ ನಟನೆಯ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸರಣಿ ಚಿತ್ರಗಳು ಎಂದರೆ ತಪ್ಪಾಗಲಾರದು. ಈಗಾಗಲೇ ಕೆಜಿಎಫ್ ಚಿತ್ರದ ಮೊದಲ ಭಾಗ ಭಾರತ ದೇಶದಾದ್ಯಂತ ಹಾಗೂ ವಿಶ್ವಾದ್ಯಂತ ತನ್ನ ಛಾಪನ್ನು ಮೂಡಿಸಿದೆ. ಎರಡನೇ ಭಾಗದ ಬಿಡುಗಡೆಗೆ ಇಡೀ ದೇಶವೆ ಎದುರುನೋಡುತ್ತಿದೆ. ಕೆಜಿಎಫ್ ಚಿತ್ರದ ಎರಡನೇ ಭಾಗವನ್ನು ಕನ್ನಡ ಚಿತ್ರರಂಗದ ಮೊದಲ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಚಿತ್ರವನ್ನಾಗಿ ನೋಡಲು ಎಲ್ಲರೂ ಕಾಯುತ್ತಿದ್ದಾರೆ.
ಒಂದು ಲೆಕ್ಕದಲ್ಲಿ ಹೇಳುವುದಾದರೆ ಕನ್ನಡ ಚಿತ್ರರಂಗದ ಇಂದಿನ ಬೆಳವಣಿಗೆ ರಾಕಿಂಗ್ ಸ್ಟಾರ್ ಯಶ್ ರವರ ಕಾರಣ ಎಂದರೆ ತಪ್ಪಾಗಲಾರದು. ಈಗ ಸದ್ಯಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರ ಹೊಸ ಸಿನಿಮಾ ಎನ್ನುವ ಹಾಗೆ ಟೀಸರ್ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಂಚಲನವನ್ನು ಸೃಷ್ಟಿಸಿದೆ. ಅದರ ನಾಮಫಲಕದಲ್ಲಿ ರಾಜಮೌಳಿ ಅವರ ನಿರ್ದೇಶನ ಹಾಗೂ ಎಂ ಎಂ ಕೀರವಾಣಿ ಅವರು ಸಂಗೀತ ಎಂಬ ಉಲ್ಲೇಖವಿದೆ. ಹೌದು ಈ ಟೀಸರ್ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ರವರು ಶಿವಾಜಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಕುರಿತಂತೆ ಎಲ್ಲೂ ಕೂಡ ಅಧಿಕೃತವಾಗಿ ಘೋಷಣೆಗಳು ಹೊರಬಂದಿಲ್ಲ. ಅದು ಅಲ್ಲದೆ ಈ ಟೀಸರ್ ಅನ್ನು ಸರಿಯಾಗಿ ಗಮನಿಸಿದಾಗ ಇದು ಫೇಕ್ ಹಾಗೂ ಅಭಿಮಾನಿಗಳಿಂದ ಎಡಿಟ್ ಆಗಿರುವ ಟೀಸರ್ ಎನ್ನುವುದಾಗಿ ಇದರಿಂದ ತಿಳಿದುಬರುತ್ತದೆ. ಮೊದಮೊದಲಿಗೆ ನೋಡಲು ನಿಜ ಎಂದು ಅನಿಸಿದರೂ ಕೂಡ ಇದು ನಿಜವಾದ ಸುದ್ದಿಯಲ್ಲ. ಆದರೂ ಕೂಡ ಅಭಿಮಾನಿಗಳಿಗೆ ಯಶ್ ಅವರು ಈಗ ಇರುವ ಲುಕ್ ನಲ್ಲಿ ಶಿವಾಜಿ ಅವರ ಪಾತ್ರವನ್ನು ನಿರ್ವಹಿಸಿದರೆ ಚಂದ ಎನ್ನುವ ಅಭಿಪ್ರಾಯ ಕೂಡ ಇದೆ.


Leave a Reply

Your email address will not be published. Required fields are marked *