ಐಷಾರಾಮಿ ಜೀವನದ ಕನಸು ಕಂಡು ಜೋಡಿಗಳು ಮಾಡಿರುವ ಕೆಲಸಕ್ಕೆ ಈಗ ಜೈಲುಪಾಲು..!?

News

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಹಣ ಎನ್ನುವುದು ಪ್ರಮುಖ ಹಾಗೂ ಮೊದಲ ಆದ್ಯತೆಯ ವಸ್ತುವಾಗಿದೆ. ಹಣ ಇಲ್ಲದಿದ್ದರೆ ಈ ಜಗತ್ತಿನಲ್ಲಿ ಏನೂ ಇಲ್ಲ ಎಂಬಂತೆ ಎಲ್ಲರ ಮನಸ್ಸಿನಲ್ಲಿ ಕೂಡ ಪ್ರಭಾವ ಮೂಡಲಾರಂಭಿಸಿದೆ. ಹೀಗಾಗಿ ಪ್ರತಿಯೊಬ್ಬರ ಮನಸ್ಸಿನಲ್ಲಿ ಕೂಡ ಹೇಗಾದರೂ ಮಾಡಿ ಹಣವನ್ನು ಗಳಿಸಲೇ ಬೇಕೆಂಬ ಹಠ ಭರಿತ ನಿರ್ಧಾರ ಕ್ರೋಡೀಕರಣ ಗೊಂಡಿದೆ.
ಇದಕ್ಕೆ ಉದಾಹರಣೆಯೆನ್ನುವಂತೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ನಡೆದಿರುವಂತಹ ಒಂದು ಘಟನೆ ಬೆಳಕಿಗೆ ಬಂದಿದ್ದು ಎಲ್ಲರಿಗೂ ಆಶ್ಚರ್ಯವನ್ನು ತರಿಸಿದೆ. ಹಾಗಿದ್ದರೆ ಏನಿದು ವಿಚಾರ ಎಂಬುದನ್ನು ತಪ್ಪದೇ ಸಂಪೂರ್ಣವಾಗಿ ತಿಳಿಯೋಣ ಬನ್ನಿ. ಐಷಾರಾಮಿ ಜೀವನದ ಕನಸು ಕಾಣುತ್ತಾ ಅಡ್ಡದಾರಿಯನ್ನು ಹಿಡಿದಿರುವ ಸಿಗಿಲ್ ವರ್ಗಿಸ್ ವಿಷ್ಣುಪ್ರಿಯ ಎನ್ನುವ ಜೋಡಿಗಳನ್ನು ಈಗ ಬೆಂಗಳೂರಿನ ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.
ಸಿಗಿಲ್ ವರ್ಗಿಸ್ ಹಾಗೂ ವಿಷ್ಣುಪ್ರಿಯ ಇಬ್ಬರೂ ಕೂಡ ಕೇರಳ ಮೂಲದವರು. ಮೊದಲಿನಿಂದಲೂ ಕೂಡ ಇವರು ಮಾದಕ ದ್ರವ್ಯಗಳ ವ್ಯಸನ ಗಳಾಗಿದ್ದರು. ಬೆಂಗಳೂರಿಗೆ ಬಂದ ನಂತರ ಇವರು ಪೆಡ್ಲರ್ ಗಳಾಗುತ್ತಾರೆ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೇರಳ ಹಾಗೂ ತಮಿಳುನಾಡಿನ ಕೊಯಮತ್ತೂರಿನಿಂದ ಮಾದಕ ದ್ರವ್ಯಗಳನ್ನು ತರಿಸಿಕೊಂಡು ಮಾರಾಟ ಮಾಡುತ್ತಿದ್ದರು. ಇದನ್ನು ಪತ್ತೆ ಹಚ್ಚಿದ ಪೊಲೀಸರು ಇವರನ್ನು ಈಗ ಬಂಧಿಸಿದ್ದಾರೆ.
ಬರೋಬ್ಬರಿ 8 ಕೋಟಿ ರೂಪಾಯಿ ಮೌಲ್ಯವಿರುವ ಅಂತಹ ವಿವಿಧ ಬಗೆಯ ಮಾದಕ ದ್ರವ್ಯಗಳನ್ನು ಇವರಿಬ್ಬರಿಂದ ವಶಪಡಿಸಿಕೊಂಡಿದ್ದಾರೆ. ನಿಜಕ್ಕೂ ಕೂಡ ಇತ್ತೀಚಿನ ದಿನಗಳಲ್ಲಿ ಹಣಕ್ಕಾಗಿ ಎಂತೆಂತಹ ಅಡ್ಡದಾರಿಗಳನ್ನು ಹಿಡಿದಿದ್ದಾರೆ ಎನ್ನುವುದು ನಿಜಕ್ಕೂ ಕೂಡ ವಿಪರ್ಯಾಸದ ಸಂಗತಿಯಾಗಿದೆ. ಈ ವಿಚಾರದ ಕುರಿತಂತೆ ತಪ್ಪದೆ ನಿಮ್ಮ ಅಭಿಪ್ರಾಯವನ್ನು ಶೇರ್ ಮಾಡಿಕೊಳ್ಳಿ.


Leave a Reply

Your email address will not be published. Required fields are marked *