ಒಂದು ಕಾಲದಲ್ಲಿ ಸಿನಿ ಪ್ರಿಯರ ಹಾಗೂ ಹೆಂಗಳೆಯರ ನಿದ್ದೆಗೆಡಿಸಿದ್ದ ರಾಮಕೃಷ್ಣ ಅವರು ಪುಟ್ಟಣ್ಣ ಕಣಗಾಲ್ ಮನೆ ಕೆಲಸದ ಯುವತಿಯನ್ನು ಮದುವೆಯಾಗಲು ಕಾರಣವೇನು ಗೊತ್ತೇ.? ನೋಡಿ

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಕನ್ನಡ ಚಿತ್ರರಂಗದಲ್ಲಿ ಹಿರಿಯ ನಟರಲ್ಲಿ ಒಬ್ಬರಾಗಿರುವ ರಾಮಕೃಷ್ಣ ಅವರು ಸರಿ ಸುಮಾರು 200 ಕ್ಕೂ ಅಧಿಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಇಂತಹ ಮಹಾನ್ ಕಲಾವಿನದನ ಬದುಕಲ್ಲಿ ಒಂದು ಆಚಾತುರ್ಯಾನೇ ನಡೆದು ಹೋಗುತ್ತೆ. ಇನ್ನೂ ನಟ ರಾಮಕೃಷ್ಣ ಅವರು ತಾನು ದುಡಿದ ಸಂಪಾದನೆಯಲ್ಲಿ ಅವರು ಬೆಂಗಳೂರಿನಲ್ಲಿ ಒಂದು ಸ್ವಂತ ಮನೆಕಟ್ಟುತ್ತಾರೆ ಹಾಗೆ ಇನ್ನೊಂದು ಮನೆಯನ್ನು ನಿರ್ಮಾಣ ಮಾಡಿ ಬಾಡಿಗೆಗೆ ಬಿಡುತ್ತಾರೆ. ಬಾಡಿಗೆ ಬಂದ ಹಣದಿಂದ ಮನೆಯ ಎಲ್ಲಾ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಾರೆ ರಾಮಕೃಷ್ಣ.

ಇನ್ನೂ ರಾಮಕೃಷ್ಣ ಅವರಿಗೆ ತಮ್ಮ ಸ್ವಂತ ಊರಿನಲ್ಲಿ ಜಮೀನನ್ನು ಕೂಡ ಹೊಂದಿರುತ್ತಾರೆ.ಆ ಜಮೀನಿನಲ್ಲಿ ಮಾವಿನ ತೋಟವನ್ನು ಕೂಡ ಮಾಡಿರುತ್ತಾರೆ. ಅಂದು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ರಾಮಕೃಷ್ಣ ಅವರು ಇಂದಿಗೂ ತುಂಬಾ ಸರಳವಾದ ಜೀವನವನ್ನು ನಡೆಸುತ್ತಿದ್ದಾರೆ. ರಾಮಕೃಷ್ಣ ಅವರು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಭಾಷೆಯಲ್ಲೂ ಸಹ ತನ್ನ ಅಭಿನಯದ ಚತುರ್ಯವನ್ನು ತೋರಿಸಿದ್ದಾರೆ.

ಇನ್ನೂ ರಾಮಕೃಷ್ಣ ಅವರು ಸಿನೆಮಾರಂಗ ಮಾತ್ರ ಅಲ್ಲದೆ ರಾಜಕೀಯ ಕ್ಷೇತ್ರಕ್ಕೂ ಕೂಡ ಪ್ರವೇಶಮಾಡಿದ್ದರು.2004 ರಲ್ಲಿ ಜನತಾ ಪಾರ್ಟಿ ಇಂದ ಲೋಕಸಭೆ ಎಲೆಕ್ಷನ್ ನಲ್ಲಿ ಕೂಡ ನಿಂತಿದ್ದರು.ರಾಜಕೀಯದಲ್ಲಿ ಸಂಪೂರ್ಣವಾಗಿ ಸೋತ ನಂತರ ಮತ್ತೆ ಕನ್ನಡಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು.

ನಟ ರಾಮಕೃಷ್ಣ ಅವರು ತಮ್ಮ ಮದುವೆ ವಿಚಾರವನ್ನು ಸಾಕಷ್ಟು ವೇದಿಕೆಯ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ರಾಮಕೃಷ್ಣ ಅವರೇ ಹೇಳುವ ಹಾಗೆ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಂದ ಅವರಿಗೆ ಮನೆ, ಕಾರು ಜೀವನ ಎಲ್ಲವೂ ಸಿಕ್ಕಿತು ಹಾಗೂ ಹೆಣ್ಣು ಸಹ ಅವರಿಂದ ಸಿಕ್ಕಿತು ಎಂದು ಹೇಳಿಕೊಂಡಿದ್ದಾರೆ.ರಾಮಕೃಷ್ಣ ಅವರು ಪುಟ್ಟಣ್ಣ ಕಣಗಾಲ್ ಅವರ ಮನೆಯಲ್ಲಿ ಪಾತ್ರೆಯನ್ನು ತೊಳೆಯುವ ಹೆಣ್ಣನ್ನು ಅವರು ವಿವಾಹವಾಗುತ್ತಾರೆ.

ಇನ್ನು ಪುಟ್ಟಣ್ಣ ಕಣಗಾಲ್ ಅವರ ಮನೆಗೆ ರಾಮಕೃಷ್ಣ ಅವರು ಯಾವಾಗಲು ಹೋಗುತ್ತಿದ್ದರು.ಪುಟ್ಟಣ ಕಣಗಾಲ್ ಅವರ ಗರಡಿಯಲ್ಲಿ ಬೆಳೆದ ಸಾಕಷ್ಟು ನಟರು ತಮ್ಮ ಹೆಚ್ಚಿನ ಸಮಯವನ್ನು ಪುಟ್ಟಣ್ಣ ಕಣಗಾಲ್ ಅವರ ಜೊತೆ ಕಳೆಯುತ್ತಿದ್ದರು. ಇನ್ನೂ ನಟ ರಾಮಕೃಷ್ಣ ಅವರು ಪುಟ್ಟಣ್ಣ ಕಣಗಾಲ್ ಅವರ ಮನೆಗೆ ಹೋದಾಗ ಮಂಗಳ ಎನ್ನುವ ಹುಡುಗಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಮನೆಯ ಎಲ್ಲಾ ಕೆಲಸವನ್ನು ಮಾಡಿಕೊಂಡು ಇರುತ್ತಿದ್ದರು.

ಹೌದು ನಟ ರಾಮಕೃಷ್ಣ ಅವರು ಯಾವಾಗಲು ಪುಟ್ಟಣ್ಣ ಕಣಗಾಲ್ ಅವರ ಮನೆಗೆ ಹೋಗುತ್ತಿದ್ದರಿಂದ ಸಹಜವಾಗಿ ರಾಮಕೃಷ್ಣ ಅವರಿಗೂ ಹಾಗೂ ಅಲ್ಲಿ ಕೆಲಸ ಮಾಡುತ್ತಿರುವ ಮಂಗಳ ಅವರಿಗೂ ಪರಿಚಯ ಆಗುತ್ತದೆ. ಪರಿಚಯ ಆದ ನಂತರ ಆ ಪರಿಚಯ ಸ್ನೇಹವಾಗಿ ತಿರುಗುತ್ತದೆ. ನಂತರ ಸ್ನೇಹವು ಪ್ರೀತಿಯಾಗಿ ಬದಲಾಗಿ. ನಂತರ ಇಬ್ಬರು ಗುರುಹಿರಿಯರು ಸಮ್ಮುಖದಲ್ಲಿ ಮದುವೆ ಕೂಡ ಮಾಡಿಕೊಳ್ಳುತ್ತಾರೆ.ರಾಮಕೃಷ್ಣ ಅವರು ಆ ಸಮಯದಲ್ಲಿ ಯಶಸ್ಸಿನ ನಾಗಲೋಟದಲ್ಲಿ ತೆಲುತ್ತಿದ್ದರು. ತಾನೊಬ್ಬ ದೊಡ್ಡ ಸ್ಟಾರ್ ನಟನೆಂಬ ಹಮ್ಮಿಲ್ಲದೇ ಪ್ರೀತಿಸಿದ ಯುವತಿಯನ್ನು ಮದುವೆಯಾಗಿ ಇಂದಿಗೂ ಸುಖಸಂಸಾರವನ್ನು ಮಾಡುತ್ತಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *