ಒಂದು ಕಾಲದ ಕನ್ನಡದ ಟಾಪ್ ನಟಿ ಸರಿತಾ ರವರು ಈಗ ಹೇಗಿದ್ದಾರೆ ಗೊತ್ತಾ..!?

Cinema Entertainment

ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ನಟಿಯರು ನಟಿಸಿ ಹೋಗಿದ್ದಾರೆ ಆದರೆ ಅದೆಷ್ಟು ವರ್ಷಗಳೇ ಕಳೆಯಲಿ ಇಂದಿಗೂ ಕೂಡ ಕನ್ನಡಿಗರು ನೆನಪಿಡುವಂತಹ ಕೆಲವೇ ಕೆಲವರಲ್ಲಿ ನಟಿಯರಲ್ಲಿ ನಟಿ ಸರಿತಾ ರವರು ಕೂಡ ಒಬ್ಬರು. ಅಣ್ಣಾವ್ರ ಚಿತ್ರಗಳಲ್ಲಿ ಹೆಚ್ಚಾಗಿ ನಾವು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಂತೆ ನಟಿ ಸರಿತಾ ರವರು. ಭಕ್ತ ಪ್ರಹ್ಲಾದ ಚಲಿಸುವ ಮೋಡಗಳು ಹೇಗೆ ಹತ್ತು ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.

ಇಷ್ಟೊಂದು ನಿರರ್ಗಳವಾಗಿ ಕನ್ನಡವನ್ನು ಮಾತನಾಡುತ್ತಿದ್ದರು ಕೂಡ ಸರಿತಾ ರವರು ಮೂಲತಹ ಆಂಧ್ರಪ್ರದೇಶದ ಗುಂಟೂರಿನ ವರು. ಮಾತೃಭಾಷೆ ತೆಲುಗು ಆಗಿದ್ದರೂ ಕೂಡ ಅವರು ಯಾವ ಭಾಷೆಯಲ್ಲಿ ನಟಿಸಲೇ ಅದೇ ಭಾಷೆಯಲ್ಲಿ ಡಬ್ಬಿಂಗ್ ಮಾಡುತ್ತಿದ್ದರು ಎನ್ನುವುದು ನಿಜಕ್ಕೂ ಮೆಚ್ಚಬೇಕಾದ ವಿಚಾರ. ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಮೇರು ನಟರೊಂದಿಗೆ ಕೂಡ ಪರದೆಯನ್ನು ಹಂಚಿಕೊಂಡಿದ್ದಾರೆ.
ದಕ್ಷಿಣ ಭಾರತ ಚಿತ್ರರಂಗದ ಹೆಸರಾಂತ ನಿರ್ದೇಶಕರುಗಳಲ್ಲಿ ನಟಿ ಸರಿತಾ ರವರು ಕೆಲಸ ಮಾಡಿದ್ದಾರೆ. ತೆಲುಗು ಕನ್ನಡ ಹಾಗೂ ತಮಿಳು ಚಿತ್ರರಂಗದಲ್ಲಿ ರಾಜ್ಯ ಪ್ರಶಸ್ತಿಗಳನ್ನು ಕೂಡ ಪಡೆದಿರುವ ಅಂತಹ ಪ್ರತಿಭಾನ್ವಿತ ನಟಿ ಅವರಾಗಿದ್ದರು. ಕೇವಲ ನಟಿಯಾಗಿ ಮಾತ್ರವಲ್ಲದೆ ಸರಿತಾ ರವರು ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೂಡ ಹೆಸರನ್ನು ಸಂಪಾದಿಸಿದವರು. ಹಿಂದಿ ಚಿತ್ರರಂಗದಿಂದ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಬಂದಿರುವಂತಹ ನಟಿಯ ರಾಗಿರುವ ಸುಸ್ಮಿತಾ ಸೇನ್ ಮಾಧವಿ ಸೌಂದರ್ಯ ರವರಿಗೆ ಕೂಡ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ.

ಸರಿತಾ ರವರ ವೈವಾಹಿಕ ಜೀವನದ ಕುರಿತಂತೆ ಹೇಳುವುದಾದರೆ 1975 ರಲ್ಲಿ ವೆಂಕಟಸುಬ್ಬಯ್ಯ ಎನ್ನುವ ತೆಲುಗು ನಟನನ್ನು ಮದುವೆಯಾಗುತ್ತಾರೆ. ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿರುತ್ತೆ ಅಂತ ಹೇಳುತ್ತಾರೆ. ಇವರ ಜೀವನದಲ್ಲಿ ಹಾಗೆ ನಂತರ ನಡೆದಿದ್ದೆ ನಿಜವಾದ ವಿಚಾರ. ಹೌದು ದಿನಾಲು ಕುಡಿದು ಬಂದು ಸರಿತಾ ರವರಿಗೆ ಥಳಿಸುವುದನ್ನು ಮಾಡುತ್ತಿದ್ದರು. ಇದನ್ನು ತಾಳಲಾಗದೆ ಸರಿತಾ ರವರು ಒಂದು ವರ್ಷದ ನಂತರ ತಮ್ಮ ಮೊದಲ ಪತಿಗೆ ವಿವಾಹ ವಿಚ್ಛೇದನವನ್ನು ನೀಡುತ್ತಾರೆ.

12ವರ್ಷಗಳ ಕಾಲ ಆ ಸಿನಿಮಾರಂಗದಲ್ಲಿ ಬಿಜಿಯಾಗಿರುತ್ತಾರೆ. ನಂತರ 1988 ರಲ್ಲಿ ಮಲಯಾಳಂ ಚಿತ್ರರಂಗದ ಖ್ಯಾತ ನಟ ಮುಖೇಶ್ ರವರನ್ನು ಮದುವೆಯಾಗುತ್ತಾರೆ. ಈ ದಂಪತಿಗಳಿಗೆ ಶ್ರವಣ್ ಹಾಗೂ ತೇಜಸ್ ಎನ್ನುವ ಇಬ್ಬರು ಗಂಡು ಮಕ್ಕಳ ಜನಿಸುತ್ತಾರೆ. ಇಲ್ಲಿ ಕೂಡ ಮುಕೇಶ್ ರವರು ಸಿನಿಮಾದಲ್ಲಿ ನಟಿಸಬಾರದು ಹಾಗೆ ಹೀಗೆ ಎಂದು ಹಲವಾರು ಅಡ್ಡಿ-ಆತಂಕಗಳನ್ನು ಸರಿತಾ ರವರಿಗೆ ನೀಡುತ್ತಾರೆ. ಇದರಿಂದ ಬೇಸತ್ತ ಸರಿತಾ ರವರು ಗಂಡನಿಂದ ದೂರವಾಗಿ ಮಕ್ಕಳೊಂದಿಗೆ ದುಬೈಗೆ ತೆರಳುತ್ತಾರೆ.

ಆದರೆ ಈ ಕಡೆ ಸರಿತಾ ರವರ ಎರಡನೇ ಗಂಡ ಮುಖೇಶ್ ರವರು ಸರಿತಾ ರವರಿಗೆ ವಿವಾಹ ವಿಚ್ಛೇದನವನ್ನು ನೀಡದೆ ಎರಡನೇ ಮದುವೆಯಾಗಿದ್ದಾರೆ. ಕಾನೂನಿನ ಪ್ರಕಾರ ವಿವಾಹ ವಿಚ್ಛೇದನ ನೀಡದೆ ಎರಡನೇ ಮದುವೆ ಆಗುವುದು ತಪ್ಪು ನನಗೆ ಜೀವನಾಂಶ ಬೇಕು ಎಂಬುದಾಗಿ ಸರಿತಾ ಅವರು ಕೋರ್ಟ್ ಮೆಟ್ಟಿಲೇರಿದ್ದರು ಕೂಡ ಇದುವರೆಗೂ ಅವರಿಗೆ ನ್ಯಾಯ ಸಿಕ್ಕಿಲ್ಲ. ಆಗೀಗ ಕೆಲವೊಂದು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.

ಈಗ ಅವರು ಯಾವುದೇ ಪರಿಸ್ಥಿತಿಯಲ್ಲಿ ಇರಲಿ ಆದರೆ ಒಂದು ಕಾಲದಲ್ಲಿ ಕನ್ನಡ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗವನ್ನು ಆಳಿದವರು. ಕಪ್ಪು ಬಣ್ಣ ವಿದ್ದರೂ ಕೂಡ ತಮ್ಮ ನಟನೆಯ ಮೂಲಕ ಒಬ್ಬ ನಟಿ ಕೂಡ ಜನಪ್ರಿಯತೆಯನ್ನು ಸಾಧಿಸಬಲ್ಲಳು ಎಂಬುದನ್ನು ಸಾಧಿಸಿ ತೋರಿಸಿದವರು. ಸರಿತಾ ರವರ ನಟನೆಯ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಶೇರ್ ಮಾಡಿಕೊಳ್ಳಿ.


Leave a Reply

Your email address will not be published. Required fields are marked *