ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಯಾರು ಎಂದು ಕೇಳಿದರೆ ನಟರ ಸಾಲಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಹೆಸರು ಖಂಡಿತವಾಗಿ ಕೇಳಿಬರುತ್ತದೆ. ಅದರಲ್ಲೂ ಕನ್ನಡ ಚಿತ್ರರಂಗದಲ್ಲಿ ದರ್ಶನ್ ರವರಿಗೆ ಇರುವಷ್ಟು ಮಾಸ್ ಅಭಿಮಾನಿಗಳು ಯಾವ ಕನ್ನಡದ ನಟನೆಗೂ ಕೂಡ ಇಲ್ಲ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಇದು ಅವರ ತಮ್ಮ ಪರಿಶ್ರಮ ಪ್ರತಿಭೆ ಹಾಗೂ ಸಿನಿಮಾದ ಮೇಲಿನ ಪ್ರೀತಿ ಹಾಗೂ ನಿಷ್ಠೆಯಿಂದ ಪಡೆದುಕೊಂಡ ಬಹುಮಾನ ಎಂದರೆ ತಪ್ಪಾಗಲಾರದು. ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅನುಭವಿಸುತ್ತಿರುವಂತಹ ಸ್ಟಾರ್ ಗಿರಿ ಅದು ಅವರ ಸ್ವಂತದ್ದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಕನ್ನಡ ಚಿತ್ರರಂಗದ ಹಿರಿಯ ನಟನ ಮಗನಾಗಿದ್ದರೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಯಾರು ಕರೆದು ಅವಕಾಶ ನೀಡಲಿಲ್ಲ. ಅವರೇ ಹಂತಹಂತವಾಗಿ ಚಿತ್ರರಂಗದಲ್ಲಿ ಮೇಲೆ ಬಂದು ಇಂದು ಬಾಕ್ಸಾಫೀಸ್ ಸುಲ್ತಾನನಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಮಾಸ್ ಮಹಾರಾಜ ಎಂಬುದಾಗಿ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಕರೆಯುತ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೇವಲ ಸಿನಿಮಾದಲ್ಲಿ ನಟನೆ ಮಾಡುವ ಮೂಲಕ ಮಾತ್ರವಲ್ಲದೆ ಸಮಾಜಸೇವೆಯ ಮೂಲಕವೂ ಕೂಡ ನಿಜಜೀವನದ ಹೀರೋ ಆಗಿದ್ದಾರೆ. ಯಾರೇ ಸಹಾಯ ಕೇಳಿಕೊಂಡು ಬಂದರು ಕೂಡ ಅವರನ್ನು ಬರಿಗೈಯಲ್ಲಿ ಹಿಂದೆ ಕಳಿಸುವುದಿಲ್ಲ ನಮ್ಮ ತೂಗುದೀಪದ ವಂಶದ ನಂದಾದೀಪ.
ಇದಕ್ಕಾಗಿ ಅಭಿಮಾನಿಗಳಿಗೆ ಅವರೆಂದರೆ ಪ್ರಾಣಕ್ಕಿಂತ ಪ್ರೀತಿ. ಅಭಿಮಾನಿಗಳನ್ನು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಪ್ರೀತಿಯಿಂದ ಸೆಲೆಬ್ರೆಟಿಗಳು ಎನ್ನುವುದಾಗಿ ಕರೆಯುತ್ತಾರೆ. ಸದ್ಯಕ್ಕೆ ಕ್ರಾಂತಿ ಸಿನಿಮಾದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ರಂತಹ ಹಲವಾರು ಕಲಾವಿದರೊಂದಿಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರ ಇದೇ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗುವ ಅಂತಹ ಎಲ್ಲಾ ಸಾಧ್ಯತೆಗಳಿವೆ. ಪ್ರತಿ ಸಿನಿಮಾಗೆ 12ರಿಂದ 15 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ಅಂತಹ ನಟರಲ್ಲಿ ತಮ್ಮ ಹೆಸರನ್ನು ಕೂಡ ಶಾಮೀಲಾಗಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಸಿನಿಮಾ ಮಾಡಿದರೆ ಖಂಡಿತವಾಗಿ ಲಾಭ ಪಡೆಯುತ್ತಿವೆ ಎನ್ನುವ ನಂಬಿಕೆ ನಿರ್ಮಾಪಕರಲ್ಲಿ ಇದೆ ಇದಕ್ಕಾಗಿ ಅವರಿಗೆ ಸಿನಿಮಾ ಮಾಡಲು ಸಾಲುಗಟ್ಟಿ ನಿಲ್ಲುತ್ತಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಕಾರು ಹಾಗೂ ಬೈಕುಗಳ ಮೇಲೆ ಎಲ್ಲಿಲ್ಲದ ಹುಚ್ಚು ಎನ್ನುವುದು ನಿಮಗೆ ತಿಳಿದಿದೆ. ಬೆಂಜ್ ಬಿಎಂಡಬ್ಲ್ಯೂ ಆಡಿ ಲ್ಯಾಂಬೋರ್ಗಿನಿ ಸೇರಿದಂತೆ ದರ್ಶನ್ ರವರ ಬಳಿ ಬರೋಬ್ಬರಿ 15 ಕಾರುಗಳಿವೆ. ದರ್ಶನ್ ರವರ ಬಳಿ ಹತ್ತು ಬೈಕು ಗಳಿದ್ದು ಅದರಲ್ಲಿ ಒಂದು ಕೋಟಿ ಬೆಲೆಬಾಳುವಂತಹ ದುಬಾರಿ ಬೈಕ್ ಕೂಡ ಇದೆ. ಇಷ್ಟು ಮಾತ್ರವಲ್ಲದೆ ತಮ್ಮ ತೋಟದ ಮನೆಯಲ್ಲಿ ಪ್ರಾಣಿಗಳನ್ನು ಕೂಡ ಸಾಕಿದ್ದಾರೆ ಮಾತ್ರವಲ್ಲದೆ ಮೃಗಾಲಯದಲ್ಲಿ ಕೂಡ ಹಲವಾರು ಪ್ರಾಣಿಗಳನ್ನು ದತ್ತು ಪಡೆದುಕೊಂಡಿದ್ದಾರೆ ಇದರ ಮೂಲಕ ಪ್ರಾಣಿಗಳ ಕುರಿತಂತೆ ಇರುವಂತಹ ಪ್ರೀತಿಯನ್ನು ದರ್ಶನ್ ಸಮಾಜಕ್ಕೆ ಸಾರಿದ್ದಾರೆ. ದರ್ಶನ್ ಅವರ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.