ನಮ್ಮ ಕನ್ನಡದ ಚಿತ್ರರಂಗದಲ್ಲಿ ಅನೇಕ ಸ್ಟಾರ್ ನಟರು ಬಾನೆತ್ತರಕ್ಕೆ ಬೆಳೆದು ನಿಂತ್ತಿದ್ದಾರೆ. ಇನ್ನು ಕೆಲವರು ಕನ್ನಡ ಚಿತ್ರರಂಗವನ್ನು ಆಳುತ್ತಿದ್ದಾರೆ. ತಮ್ಮದೇ ಆದ ಹವಾ ಸೃಷ್ಟಿಸಿಕೊಂಡಿರುವ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್, ದ್ರುವ ಸರ್ಜಾ, ಉಪೇಂದ್ರ, ಹೀಗೆ ಹಲವಾರು ಹೆಸರುಗಳನ್ನೂ ಪ್ರಸ್ತಾಪ ಪಡಿಸಬಹುದು. ಪ್ರತಿಯೊಬ್ಬ ಹೀರೊ ಕೂಡ ತನ್ನ ಅಭಿಮಾನಿಗಾಳಿಗೋಸ್ಕರ ತಮ್ಮ ಪ್ರಯತ್ನ ಮೀರಿ ಸಿನೆಮಾಗಳಲ್ಲಿ ನಟಿಸುತ್ತಾರೆ. ಅವರ ಅದ್ಭುತ ನಟನೆಗೆ ಪ್ರಶಂಸೆಗೆ ಪಾತ್ರರಾಗುತ್ತಾರೆ.
ಈ ಎಲ್ಲಾ ನಟ ದಿಗ್ಗಜರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಅಪಾರ ಕಲಾ ಸರಸ್ವತಿಯನ್ನು ಒಳಿಸಿಕೊಂಡು ಈ ಎಲ್ಲಾ ನಟರೂ ಅವರದ್ದೇ ಆದ ವಿಶೇಷ ಗುಣವನ್ನು ಹೊಂದಿದ್ದಾರೆ. ಹಾಗಾಗಿ ಪ್ರತಿಯೊಬ್ಬ ನಟನಿಗೂ ಅವರದ್ದೇ ಆದ ದೊಡ್ಡ ಅಭಿಮಾನಿ ಬಳಗನೇ ಇದೆ. ಇವರಲ್ಲಿ ಯಾರದ್ದೇ ಚಿತ್ರ ಬಿಡುಗಡೆಯಾದರು ಅವರ ಅಭಿಮಾನಿಗಳಿಗೆ ಅಬ್ಬವೋ ಹಬ್ಬ. ಫಸ್ಟ್ ಡೇ ಫಸ್ಟ್ ಶೋ ನೋಡಲು ಅಭಿಮಾನಿಗಳು ಕಾಯುತ್ತಿರುತ್ತಾರೆ.
ಹೀಗಿರುವಾಗ ಇಬ್ಬರು ದಿಗ್ಗಜ ಸ್ಟಾರ್ ನಟರು ಒಂದೇ ಸಿನೆಮಾದಲ್ಲಿ ನಟಿಸಿದರೆ ಹೇಗೆ ಇರಬಹುದು ನೀವೇ ಯೋಚನೆ ಮಾಡಿ! ಕಿಚ್ಚ ಸುದೀಪ್ ಹಾಗೂ ಶಿವಣ್ಣ ವಿಲನ್ ಚಿತ್ರದಲ್ಲಿ ಜೊತೆಯಾಗಿ ಅಭಿಯಿಸುವ ಮೂಲಕ ಈಗಾಗಲೇ ಸ್ಯಾಂಡಲ್ವುಡ್ ನಲ್ಲಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಈಗ ಮತ್ತೆ ಅಭಿಮಾನಿಗಳಿಗೆ ಮತ್ತಿಬ್ಬರು ಸ್ಟಾರ್ ನಟರ ಜೊತೆಗೆ ಸಿನೆಮಾ ಮಾಡಿದರೆ ಹೇಗ್ ಇರುತ್ತದೆ. ಹೌದು, ಶಿವಣ್ಣ ಹಾಗೂ ಡಿಬಾಸ್ ಜೊತೆಯಾಗಿ ಸಿನೆಮಾ ಮಾಡಿದರೆ ಕೇಳ ಬೇಕಾ?
ಬಾಕ್ಸ್ ಆಫೀಸ್ ಉಡೀಸ್ ಆಗಿ. ಕನ್ನಡ ಚಿತ್ರರಂಗ ನೆಕ್ಸ್ಟ್ ಲೆವೆಲ್ ಹೋಗೋದು ಪಕ್ಕ! ಶಿವಣ್ಣ ಹಾಗೂ ದರ್ಶನ್ ಮಚ್ಚು, ಲಾಂಗ್ ಹಿಡಿಯೋದರಲ್ಲಿ ಎತ್ತಿದ ಕೈ ಇನ್ನೂ ಇಬ್ಬರು ಒಟ್ಟಿಗೆ ನಟಿಸಿದರೆ ಕೇಳ ಬೇಕಾ ಅವರ ಅಭಿಮಾನಿಗಳು ಹುಚ್ಚೆದ್ದು ಕುಣಿಯೋದು ಗ್ಯಾರಂಟಿ. ಈ ಇಬ್ಬರು ಮಹಾನ್ ಕಲಾವಿದರು ಕ್ಲಾಸ್ ಗೂ ಸೈ ಮಾಸ್ ಗೂ ಸೈ ಎನ್ನುವಂತಿದ್ದಾರೆ. ಹೀಗಾಗಿ ಒಂದು ಕಡೆ ದರ್ಶನ್ ಹಾಗೂ ಶಿವಣ್ಣ ಜೊತೆಯಾಗಿ ಸಿನೆಮಾ ಮಾಡಿದರೆ ಲಾಂಗ್ ಯಾರು ಹಿಡಿಯುತ್ತೀರಿ ಎಂಬ ಪ್ರೆಶ್ನೆಯು ಕೇಳಲಾಗುತ್ತದೆ.
ಹೌದು ಡಾ. ರಾಜ್ ಕುಮಾರ್ ಅವರು ಕುಟುಂಬದ ಕೂಡಿ ದ್ರುವನ್ ಅವರ ಚಿತ್ರದ ಮುಹೂರ್ತ ದಲ್ಲಿ ಶಿವಣ್ಣ ಹಾಗೂ ದರ್ಶನ್ ಪಾಲ್ಗೊಂಡಿದ್ದರು. ಆ ಸಮಯದಲ್ಲಿ ಸಂದರ್ಶಕರು, ಶಿವಣ್ಣ ಅವರ ಬಳಿ, ನೀವು ದರ್ಶನ್ ಒಟ್ಟಿಗೆ ಸಿನೆಮಾ ಮಾಡುತ್ತೀರಾ ಎಂಬ ಪ್ರೆಶ್ನೆಯನ್ನು ಕೇಳುತ್ತಾರೆ. ಅದಕ್ಕೆ, ತಕ್ಷಣ ಉತ್ತರಿಸಿದ ದರ್ಶನ್ ಪಕ್ಕದಲ್ಲಿಯೇ ಇದ್ದ ಶಿವಣ್ಣ ಅವರನ್ನು ನೋಡಿ ನಮ್ಮಿಬ್ಬರನ್ನು ಹ್ಯಾಂಡಲ್ ಮಾಡುವ ಡೈರೆಕ್ಟರ್ ಯಾರಾದರೂ ಸಿಕ್ಕರೆ ಖಂಡಿತ ಇಬ್ಬರು ಒಟ್ಟಿಗೆ ನಟನೆ ಮಾಡುತ್ತೇವೆ ಎಂದು ನಕ್ಕು ತಮಷೆಯಾಗಿಯೇ ಹೇಳಿದ್ದಾರೆ.
ಅದಕ್ಕೆ ಶಿವಣ್ಣ ಅವರೂ ಮಾತನಾಡಿ ದ್ದು, ಒಳ್ಳೆಯ ಕಥೆ ಸಿಕ್ಕರೆ ಖಂಡಿತ ಒಟ್ಟಿಗೆ ಸಿನೆಮಾ ಮಾಡುತ್ತೇವೆ. ಅದರಲ್ಲೇನಿದೆ. ದರ್ಶನ್ ಜೊತೆ ಸಿನೆಮಾ ಮಾಡಬಾರದು ಅಂತ ನನಗೇನು ಇಲ್ಲ. ಇಬ್ಬರು ಒಳ್ಳೆಯ ಸ್ನೇಹಿತರೆ. ಉತ್ತಮವಾದ ಕಥೆ ಬಂದರೆ ಖಂಡಿತ ದರ್ಶನ್ ಜೊತೆ ನಟಿಸುವ ಆಸೆ ನನಗು ಇದೆ. ಎಲ್ಲರ ನಟಿಸಬೇಕು ಎನ್ನುವ ಇಷ್ಟವೂ ಇದೆ. ಅದಕ್ಕೆ ತಕ್ಕಂತೆ ಕಥೆ ಸಿಕ್ಕರೆ ಖಂಡಿತ ಅಭಿಯಿಸುತ್ತೇನೆ ಎಂದು ಶಿವಣ್ಣ ಹೇಳಿದ್ದಾರೆ.
ನ್ನೂ ಇಬ್ಬರು ಜೊತೆಯಾಗಿ ಸಿನೆಮಾ ಮಾಡಿದರೆ ಲಾಂಗ್ ಯಾರ ಕೈಯಲ್ಲಿರುತ್ತೆ ಎನ್ನುವ ಪ್ರೆಶ್ನೆಗೆ ನಟ ದರ್ಶನ್ ಉತ್ತರಿಸಿದ್ದು ಹೀಗೆ, ಶಿವಣ್ಣ ಅವರು ಸೀನಿಯರ್. ಅವರು ಲಾಂಗ್ ಹಿಡಿದರೆ ನಾನು ಅವರ ಹಿಂದೆ ಇರುತ್ತೇನೆ ಎಂದರು ದರ್ಶನ್. ಏನೇ ಆದರು ನಮ್ಮ ಸ್ಟಾರ್ ನಟರನ್ನು ಒಟ್ಟಿಗೆ ತೆರೆಯ ಮೇಲೆ ನೋಡಲು ಮಜಾನೇ ಬೇರೆ ಈ ಘಳಿಗೆ ಆದಷ್ಟು ಬೇಗ ನೆರವೇರಲಿ ಎಂದು ಕೇಳಿಕೊಳ್ಳುವ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.