ಕನಸುಗಾರ ರವಿಚಂದ್ರನ್ ರವರ ಕನಸಿನ ಮನೆ ಹೇಗಿದೆ ಗೊತ್ತ ನೋಡಿ ಮೊದಲಬಾರಿಗೆ! ಅಬ್ಬಬ್ಬಾ ನೋಡಿದ್ರೆ ನಿಜಕ್ಕೂ ಶಾಕ್ ಆಗೋದು ಗ್ಯಾರಂಟಿ.!!

ಸುದ್ದಿ

ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನ ಸಿನಿಮಾಗಳ ಮೂಲಕ ಹೊಸ ಸಂಚಲನವನ್ನು ಸೃಷ್ಟಿಸುವಂತಹ ನಟ ನಿರ್ದೇಶಕ ನಿರ್ಮಾಪಕ ಸಂಗೀತ ತಜ್ಞ ಹೀಗೆ ಹಲವಾರು ವಿಚಾರಗಳಲ್ಲಿ ಸವ್ಯಸಾಚಿ ಯಂತೆ ಕಾಣಿಸಿಕೊಳ್ಳುವ ವ್ಯಕ್ತಿ ಎಂದರೆ ಅದು ನಮ್ಮೆಲ್ಲರ ನೆಚ್ಚಿನ ಕ್ರೇಜಿಸ್ಟಾರ್ ರವಿಚಂದ್ರನ್. ಕ್ರೇಜಿಸ್ಟಾರ್ ರವಿಚಂದ್ರನ್ ರವರ ಸಿನಿಮಾಗಳು 80 ಹಾಗೂ 90ರ ದಶಕದಲ್ಲಿ ದೊಡ್ಡಮಟ್ಟದ ಮಾಡಿದಂತಹ ಚಿತ್ರಗಳು. ಅಂದಿನ ಯುವಕರಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಸಿನಿಮಾಗಳು ಎಂದರೆ ಎಲ್ಲಿಲ್ಲದ ಅಚ್ಚುಮೆಚ್ಚು ಎಂದರೆ ತಪ್ಪಾಗಲಾರದು. ಇನ್ನು ಕ್ರೇಜಿಸ್ಟಾರ್ ರವಿಚಂದ್ರನ್ ರವರ ಕುರಿತಂತೆ ಹೇಳುವುದಾದರೆ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರಾಗಿರುವ ವೀರಸ್ವಾಮಿ ಅವರ ಪುತ್ರ.

ವೀರ ಸ್ವಾಮಿಯವರು ನಿಮಗೆಲ್ಲ ತಿಳಿದಿರುವಂತೆ ಅಣ್ಣಾವ್ರು ವಿಷ್ಣುವರ್ಧನ್ ಸೇರಿದಂತೆ ಹಲವಾರು ಕನ್ನಡ ಚಿತ್ರರಂಗದ ಸ್ಟಾರ್ ನಟರ ಸಿನಿಮಾಗಳಿಗೆ ಬಂಡವಾಳ ಹಾಕಿರುವ ಚಿತ್ರರಂಗದ ಖ್ಯಾತ ನಿರ್ಮಾಪಕರು. ಒಂದು ಕಾಲದಲ್ಲಿ ವೀರಸ್ವಾಮಿ ಅವರ ಈಶ್ವರಿ ಪ್ರೊಡಕ್ಷನ್ ಸಂಸ್ಥೆಯಲ್ಲಿ ನಟಿಸುವುದಕ್ಕೆ ಸಾಲುಗಟ್ಟಿ ನಟ, ನಟಿಯರು ನಿಲ್ಲುತ್ತಿದ್ದರು. ಅವರ ನಂತರ ಕನ್ನಡ ಚಿತ್ರರಂಗಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ರವರು ನಿರ್ಮಾಪಕನಾಗಿ ಕೂಡ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

ಅದರಲ್ಲೂ ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾಗಳಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತ ಚಿತ್ರರಂಗದಲ್ಲಿ ಟ್ರೇಡ್ಮಾರ್ಕ್ ಆಗಿದ್ದರು ಎಂದರೆ ತಪ್ಪಾಗಲಾರದು. ರವಿಚಂದ್ರನ್ ಹಾಗೂ ಹಂಸಲೇಖರವರ ಕಾಂಬಿನೇಷನ್ ಇಡೀ ಕನ್ನಡ ಚಿತ್ರರಂಗವನ್ನು ಅಂದಿನ ಕಾಲದಲ್ಲಿ ಆಳಿದೆ ಎಂದರೆ ತಪ್ಪಾಗಲಾರದು.

ಕನ್ನಡ ಚಿತ್ರರಂಗದ ಫಿಲಂ ಮೇಕರ್ ಗಳಿಗೆ ಶ್ರೀಮಂತವಾಗಿ ಸಿನಿಮಾವನ್ನು ಚಿತ್ರೀಕರಿಸುವ ಕನಸು ಕಾಣುವಂತೆ ಮಾಡಿದ್ದೇ ನಮ್ಮ ಕ್ರೇಜಿಸ್ಟಾರ್ ಎನ್ನಬಹುದು. ಕೋಟಿ ಕೋಟಿ ಬಜೆಟ್ ನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ಸಿನಿಮಾಗಳನ್ನು ಶ್ರೀಮಂತವಾಗಿ ಚಿತ್ರೀಕರಿಸಲು ಪ್ರಾರಂಭಿಸುತ್ತಾರೆ. ಕೇವಲ ಇಷ್ಟೇ ಮಾತ್ರವಲ್ಲದೆ ಸಾಹಿತ್ಯವನ್ನು ಕೂಡ ರವಿಚಂದ್ರನ್ ರವರು ಬರೆಯುತ್ತಾರೆ ಹಾಗೂ ಕೆಲವುಕಾಲ ಸಂಗೀತದ ಕೂಡ ಅವರು ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ರವರ ಈ ಬಹುಮುಖ ಪ್ರತಿಭೆ ಕುರಿತಂತೆ ಬಲ್ಲವರು ಕೆಲವೇ ಕೆಲವು ಮಂದಿ ಮಾತ್ರ. ಅಂದಿನಿಂದ ಇಂದಿನವರೆಗೂ ಕೂಡ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಕೇವಲ ಚಿತ್ರರಂಗದಲ್ಲಿ ಏನನ್ನಾದರೂ ಹೊಸದನ್ನು ಪ್ರಯತ್ನಿಸಬೇಕು ಎನ್ನುವ ಯೋಚನೆಯಲ್ಲಿ ಸಿನಿಮಾಗಳನ್ನು ಮಾಡಿದವರು ತಮ್ಮ ಕನಸಿನನಂತೆ ಸಿನೆಮಾಗಳನ್ನು ಮಾಡುತ್ತಿದ್ದರು.

ಕ್ರೇಜಿಸ್ಟಾರ್ ರವಿಚಂದ್ರನ್ ರವರಿಗೆ ಸಿನಿಮಾ ಹೊರತುಪಡಿಸಿ ತಮ್ಮ ಕುಟುಂಬ ಎಂದರೆ ಎಲ್ಲಿಲ್ಲದ ಅಚ್ಚುಮೆಚ್ಚು. ಬಿಡುವಿನ ಸಮಯದಲ್ಲಿ ಸಂತೋಷವನ್ನು ಕ್ಷಣಗಳನ್ನು ತನ್ನ ತುಂಬು ಕುಟುಂಬದೊಂದಿಗೆ ಕಳೆಯುತ್ತಾರೆ. ಇನ್ನು ಕ್ರೇಜಿಸ್ಟಾರ್ ರವಿಚಂದ್ರನ್ ರವರ ಮನೆ ಕೂಡ ತುಂಬಾನೇ ಆಕರ್ಷಕವಾಗಿ ದೊಡ್ಡದಾಗಿದೆ. ಈ ಫೋಟೋಗಳಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಮನೆಯನ್ನು ನೀವು ಕೂಡ ನೋಡಬಹುದಾಗಿದೆ. ಮನೆಯ ಕುರಿತಂತೆ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೇ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.


Leave a Reply

Your email address will not be published. Required fields are marked *