ಈ ವರ್ಷ ಹಿಂದಿಯಲ್ಲಿ ಬಿಡುಗದೆಯಾಗಿ ಅತೀ ಹೆಚ್ಚು ಜನಮನ್ನಣೆ ಗೊಂಡ ಚಿತ್ರ ಅಂದರೆ ಅದು ದಿ ಕಾಶ್ಮೀರಿ ಫೈಲ್ಸ್ ಚಿತ್ರ. ಇದೀಗ ಕನ್ನಡದಲ್ಲೂ ಸೇರಿದಂತೆ ಹಲವು ಭಾಷೆಗಳಲ್ಲಿ ಸಿನಿಮಾ ಡಬ್ ಆಗಿ ಜೀ 5 ಓಟಿಟಿ ಯಲ್ಲಿ ಬಿಡುಗಡೆಯಗುತ್ತಿದೆ. ಕಾಶ್ಮೀರ ಪಂಡಿತರ ಮೇಲದ ದೌ’ರ್ಜನ್ಯ, ನಿರಾಶ್ರಿತರ ಹ’ತ್ಯೆ ಕುರಿತು ತಯಾರಿಸಿದ್ದ ಈ ಚಿತ್ರ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಕೊಳ್ಳೆ ಹೊಡೆದಿತ್ತು.
ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ರಾಜ್ಯದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಸೇರಿದಂತೆ ರಾಜಕೀಯ ನಾಯಕರು, ಹಲವಾರು ಸೆಲೆಬ್ರಿಟಿಗಳು, ಹಾಗೂ ಜನಸಾಮಾನ್ಯರು ಚಿತ್ರವನ್ನು ನೋಡಿ ಮೆಚ್ಚಿ ಕೊಂಡದಿದ್ದರೆ. ಹಾಗೂ ತಮ್ಮ ಅಭಿಪ್ರಾಯವನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ. ಈ ಚಿತ್ರ ಇಷ್ಟೆಲ್ಲಾ ಸಂಚಲನ ಸೃಷ್ಟಿಸಿದ ನಂತರ ಕಾಶ್ಮೀರಿ ಫೈಲ್ಸ್ ಚಿತ್ರ ಮೇ 13ಕ್ಕೆ ಜೀ 5 ಒಟಿಟಿಯಲ್ಲಿ ಪ್ರಿಮಿಯಾರ್ ಆಗಲಿದೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರ ಕಾಶ್ಮೀರ ಫೈಲ್ಸ್ ನಲ್ಲಿ ದೊಡ್ಡ ತಾರಾಬಳಗ ನಟಿಸಿದ್ದರು. ಅನುಪಮ್ ಖೇರ್, ಮೀಥುನ್ ಚಕ್ರವರ್ತಿ, ಪಲ್ಲವಿ ಜೋಶಿ, ಮತ್ತು ದರ್ಶನ್ ಕುಮಾರ್, ಈ ಚಿತ್ರದಲ್ಲಿ ಪ್ರಮುಖ ಪತ್ರದಲ್ಲಿ ನಟಿಸಿದ್ದರು ಇವರ ಅಭಿನಯಕ್ಕೆ ಇಡೀ ಸಿನಿಮಾರಂಗವೆ ಭೇಷ್ ಎಂದಿತ್ತು.
1991ರ ಸಮಯದ ಕಾಶ್ಮೀರದಲ್ಲಿ ನಡೆದ ಪಂಡಿತರ ಹ’ ತ್ಯೆ ಹಾಗೂ ವಲಸೆಯನ್ನು ಚಿತ್ರದ ತೆರೆಯಮೇಲೆ ತರಲಾಗಿದೆ. ಹೀಗಾಗಿ ಈ ಚಿತ್ರಕ್ಕೆ ವಿ’ರೋ’ಧವು ವ್ಯಕ್ತವಾಗಿತ್ತು. ಈ ವಿರೋ ‘ ಧದ ನಡುವೆಯೂ ಕಾಶ್ಮೀರ ಫೈಲ್ಸ್ ಗೆಲುವಿನ ನಗೆ ಹೊಮ್ಮಿತ್ತು. ಬಾಲಿವುಡ್ ನಲ್ಲಿ ತಯಾರಿಸಿದ್ದ ಈ ಸಿನಿಮಾ ಬರೇ ಹಿಂದಿ ಯಲ್ಲಿ ಮಾತ್ರ ಬುಡುಗಡೆಯಾಗಿತ್ತು.
ಆದ್ರೆ ಈಗ ಅಭಿಮಾನಿಗಳ ಒತ್ತಾಯದ ಮೇರೆಗೆ ಜೀ 5 ಒಟಿಟಿಯಲ್ಲಿ ನಾಲ್ಕು ಭಾಷೆಗಳಲ್ಲಿ ಬೆಳ್ಳಿ ತೆರೆಗೆ ಬರುತ್ತಿದೆ. ನೀವು ನೋಡಿಲ್ಲ ಅಂದರೆ ನಾಡಿದ್ದು ಬಿಡುಗಡೆಯಗುವ ಈ ಚಿತ್ರದ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು