ನಮ್ಮ ಸ್ಯಾಂಡಲ್ವುಡ್ ನಲ್ಲಿ ಬ್ಯೂಟಿಫುಲ್ ಜೋಡಿ ಹಾಗೂ ಹಲವರಿಗೆ ಮಾದರಿ ಯಾಗಿ ಗುರುತಿಸಿ ಕೊಂಡಿರುವಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಕೂಡ ಒಬ್ಬರು. ಈ ಇಬ್ಬರ ಜೋಡಿ ನೋಡಿ ಅದೆಷ್ಟೋ ಜನರು ಇದ್ದರೆ ಇವರ ಹಾಗೆ ಇರಬೇಕು ಎಂದು ಅಂದುಕೊಂಡಿದ್ದಾರೆ. ಹೌದು, ಕನ್ನಡ ಸಿನೆಮಾರಂಗದಲ್ಲಿ ದಶಕಗಳನ್ನು ಯಶಸ್ವಿಯಾಗಿ ಪೂರೈಸಿ, ಅದ್ಭುತ ಕಲಾವಿದೆಯಾಗಿ ಗುರುತಿಸಿಕೊಂಡಿರುವ ನಟಿ ರಾಧಿಕಾ ಪಂಡಿತ್ ಅವರು ಇದೀಗ ಸಿನೆಮಾಕ್ಷೇತ್ರದಿಂದ ಸಂಪೂರ್ಣವಾಗಿ ದೂರ ಉಳಿದಿದ್ದರೆ. ತನ್ನ ಪತಿ ದೇವರ ಬೆನ್ನೆಲುಬಾಗಿ ನಿಂತು ಇಬ್ಬರು ಮಕ್ಕಳನ್ನು ನೋಡಿಕೊಂಡು ನಾಡಿಗೆ ಆದರ್ಶ್ ದಂಪತಿಗಳಾಗಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರೂ ಆಗಾಗ ತಮ್ಮ ಮಕ್ಕಳ ಫೋಟೋ ಹಾಗೂ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ರಾಕಿಂಗ್ ಸ್ಟಾರ್ ಯಶ್ ಅವರು ಅದೆಷ್ಟೇ ಬ್ಯುಸಿ ಇದ್ದರು ಹೆಂಡತಿ ಮಕ್ಕಳಿಗೆ ಸಮಯ ನೀಡಲು ಮಿಸ್ ಮಾಡೋದೇ ಇಲ್ಲ. ಆಗಾಗ ತಮ್ಮ ಕುಟುಂಬ ಜೊತೆ ಔಟಿಂಗ್ ಹೋಗುತ್ತಿರುತ್ತಾರೆ.
ಯಶ್ ಹಾಗೂ ರಾಧಿಕಾ ಪಂಡಿತ್ ಜೋಡಿ ಮೊದಲ ಜೊತೆಯಾಗಿಯೇ ಧಾರಾವಾಹಿಯ ಮೂಲಕ ತಮ್ಮ ಅಭಿನಯದ ಜೀವನವನ್ನು ಪ್ರಾರಂಭಿಸಿದರು. ಅವರು ನಂದ ಗೋಕುಲ ಧಾರಾವಾಹಿಯಲ್ಲಿ ಜೊತೆಗೆ ನಟಿಸಿದ್ದರು. ಆಗಲೇ ಅವರಿಬ್ಬರ ನಡುವೆ ಪ್ರೀತಿ ಎಂಬ ಮೊಳಕೆ ಒಡೆದಿತ್ತು. ಆ ಬಳಿಕ ‘ಮೊಗ್ಗಿನ ಮನಸ್ಸು’ ‘ಡ್ರಾಮಾ’ ‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಇಷ್ಟು ಸಿನೆಮಾಗಳಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಜೊತೆಯಾಗೆ ಕಾಣಿಸಿಕೊಂಡಿದ್ದರು.
ಈ ಕ್ಯೂಟ್ ಜೋಡಿಯ ಅಭಿನಯದ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಆದಾವು. ಹೀಗೆ ರೀಲ್ ಲೈಫ್ ನಲ್ಲಿ ಕಾಣಿಸಿಕೊಂಡ ಈ ಜೋಡಿ ರಿಯಲ್ ಲೈಫ್ ನಲ್ಲಿಯೂ ಜೊತೆಯಾಗಿ ಅಲ್ಲಿಯೂ ಆದರ್ಶ ದಂಪತಿಗಳಾದರು. 2016. ಡಿಸೇಂಬರ್ 9 ರಂದು ಗೋವಾದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರೂ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಈ ಜೋಡಿಗಳ ನಡುವೆ ವಯಸ್ಸಿನ ಅಂತರ ಇದ್ದರೂ ಕೂಡ ಪ್ರೀತಿಯಿಂದ ಮದುವೆಯಾದರೂ. ಇವರಿಬ್ಬರ ಪ್ರೀತಿ ಸುಮಾರು 10 ವರ್ಷಗಳು ನಾವಿಬ್ಬರು ಪ್ರೀತಿಸುತ್ತಿದ್ದೇವೆ ಎಂಬುದನ್ನು ಸ್ವತಃ ರಾಧಿಕಾ ಪಂಡಿತ್ ಮತ್ತು ಯಶ್ ಅವರೇ ಹೇಳಿಕೊಂಡಿದ್ದರು. ಇನ್ನು ಯಾವುದೇ ಪಾತ್ರವಾಗಲಿ ಅದಕ್ಕೆ ಸಲ್ಲ ಬೇಕಾದ ನ್ಯಾಯ ಒದಗಿಸುವಲ್ಲಿ ನಟಿ ರಾಧಿಕಾ ಪಂಡಿತ್ ಎಂದಿಗೂ ಮೋಸ ಮಾಡಿದವರಲ್ಲ ಎನ್ನುದನ್ನ ಇಡೀ ಕನ್ನಡದ ಸಿನಿ ಪಂಡಿತರು ಹಾಗೂ ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ.
ಸುಮಾರು ಹತ್ತು ವರ್ಷದಿಂದ ಕನ್ನಡ ಸಿನೆಮಾ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ಸ್ಯಾಂಡಲ್ವುಡ್ ನ ಚಲುವೆ ರಾಧಿಕಾ ಪಂಡಿತ್ ಕನ್ನಡದ ಬಹುತೇಕ ಸ್ಟಾರ್ ನಟರ ಜೊತೆ ನಟಿಸಿದ್ದಾರೆ. ಆದರೆ ಈ ವರೆಗೂ ಸುದೀಪ್ ಹಾಗೂ ದರ್ಶನ್ ಜೊತೆ ನಟಿಸಿಲ್ಲ. ಇದರ ಬಗ್ಗೆ ಅಭಿಮಾನಿಯೊಬ್ಬರು ನೀವು ಎಲ್ಲಾ ನಟರ ಜೊತೆ ತೆರೆ ಹಂಚಿಕೊಂಡಿದ್ದೀರಾ. ಆದರೆ ದರ್ಶನ್ ಮತ್ತು ಸುದೀಪ್ ಅವರ ಜೊತೆ ಇನ್ನು ನೀವು ಯಾಕೆ ಅಭಿನಯ ಮಾಡಿಲ್ಲ ಅಂತ ಅಭಿಮಾನಿಯೊಬ್ಬರು ಕೇಳಿದ್ದಾರೆ.
ಈ ಪ್ರೆಶ್ನೆಗೆ ಉತ್ತರಿಸಿದ ನಟಿ ರಾಧಿಕಾ ಪಂಡಿತ್. ಕನ್ನಡ ಚಿತ್ರರಂಗದಲ್ಲಿ ಎಲ್ಲಾ ನಾಯಕ ನಟರು ಒಂದೇ, ನಾನು ಯಾರನ್ನು ಕೂಡ ಭೇದಭಾವ ಮಾಡುವುದಿಲ್ಲ, ಚಿತ್ರರಂಗ ಎಂದ ಮೇಲೆ ಅಲ್ಲಿ ಎಲ್ಲರೂ ಕೂಡ ಒಂದೇ, ನನಗೆ ದೊಡ್ಡ ಸ್ಟಾರ್ ನಟ ಅಥವಾ ಹೊಸದಾಗಿ ಬಂದ ನಟ, ಇವರು ದೊಡ್ಡವರು, ಅವರು ಚಿಕ್ಕವರು, ಎಂಬ ಭೇದಭಾವ ಇಲ್ಲ.
ಒಳ್ಳೆಯ ಪಾತ್ರ ಮತ್ತು ಒಳ್ಳೆಯ ಕಥೆ ಸಿಕ್ಕರೆ ಖಂಡಿತವಾಗಿ ನಾನು ಯಾವ ನಟರ ಜೊತೆ ಬೇಕಾದರೂ ನಟನೆ ಮಾಡುವುದಕ್ಕೆ ನಾನು ಸಿದ್ದನಿದ್ದೇನೆ ಎಂದಿದ್ದಾರೆ ನಟಿ ರಾಧಿಕಾ ಪಂಡಿತ್. ಈ ಮೂಲಕ ತಾನು ಅವರೊಂದಿಗೆ ನಟಿಸದಿರಲು ಯಶ್ ಕಾರಣ ಅಲ್ಲ ಅನ್ನುದನ್ನು ಎಲ್ಲರಿಗೂ ಮಾನವರಿಗೆ ಮಾಡಿದ್ದಾರೆ. ಈ ವಿಷಯದ ಕುರಿತು ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.