ಸ್ಯಾಂಡಲ್ವುಡ್ ನ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್ ಗೆ ಎಂಟ್ರಿಕೊಟ್ಟು ಕೆಲವು ಸಿನೆಮಾಗಳಲ್ಲಿ ಅಭಿನಯಿಸಿ ತನ್ನದೇ ಆದ ಅಭಿಮಾನಿಗಳ ಬಳಗವನ್ನೇ ಕಟ್ಟಿಕೊಂಡಿದ್ದರೆ. ನಟಿ ನಟಿ ರಶ್ಮಿಕಾ ಮಂದಣ್ಣ ಇತ್ತೀಚಿಗೆ ಬಾರಿ ಗಾಸಿಪ್ ಗಳಿಗೆ ತುತ್ತಾಗುತ್ತಿದ್ದಾರೆ. ಹೌದು ಕೆಲವು ಚಿತ್ರಗಳನ್ನು ಮಾಡಿದ ಬಳಿಕ ಆಕೆ ಟಾಲಿವುಡ್ ನಟ ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ನಲ್ಲಿದ್ದಾರೆ ಎಂಬ ಮಾತುಗಳು ಜೋರಾಗಿಯೇ ಸುದ್ಧಿ ಮಾಡಿತ್ತು. ಇದೀಗ ಬಾಲಿವುಡ್ ನ ಸ್ಟಾರ್ ಕಿಡ್ ಒಬ್ಬರು ಸಹ ಈ ಕುರಿತು ಹೇಳಿದ್ದು, ಎಲ್ಲೆಡೆ ಬಾರಿ ವೈ’ರಲ್ ಆಗುತ್ತಿದೆ.
ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ ಮಗಳಾದ ಸಾರಾ ಅಲಿ ಖಾನ್ ಅವರು ನಟಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಡುವಿನ ಲವ್ ಲೈಫ್ ಬಗ್ಗೆ ಳಿತಿಸಿದ್ದಾರೆ. ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುತ್ತಿರುವ ವಿವಾದಿತ ಕಾಫಿ ವಿತ್ ಕರಣ್ ಎಂಬ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಸಾರಾ ಅಲಿ ಖಾನ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಬಾಲಿವುಡ್ ನಲ್ಲಿ ವಿವಾದಿತ ಶೋ ಎಂದೇ ಕರೆಯಲಾಗುವ ಖ್ಯಾತ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಸೀಸನ್ 7 ನಲ್ಲಿ ಅನೇಕ ಸ್ಟಾರ್ ಗಳು ಭಾಗಿಯಾಗಿದ್ದರು.
ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಬ್ಯೂಟಿಫುಲ್ ನಾಯಕಿಯಾರಾದ ಸಾರಾ ಅಲಿ ಖಾನ್ ಹಾಗೂ ಜಾಹ್ನವಿ ಕಪೂರ್ ರವರು ಸಹ ಭಾಗಿಯಾಗಿದ್ದರು. ಈ ವೇಳೆ ಈ ಇಬ್ಬರೂ ತಾರೆಯರು ಸಿನೆಮಾರಂಗಕ್ಕೆ ಸಂಬಂಧಿಸಿದ ಕೆಲವೊಂದು ಬಿಸಿ ಬಿಸಿ ಗಾಸಿಪ್ ಗಳನ್ನು ಹೊರಹಕಿದ್ದಾರೆ. ಜೊತೆಗೆ ತಮ್ಮ ಡೇಟಿಂಗ್ ಜೀವನ ಶೈಲಿಯ ಬಗ್ಗೆ ಸಹ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನೂ ಈ ಶೋ ನಲ್ಲಿ ಸಾರಾ ಅಲಿ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಸೃಷ್ಟಿಸುವ ಹೇಳಿಕೆ ಒಂದನ್ನು ನೀಡಿದ್ದಾರೆ.
ಸದ್ಯ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸೇರಿದಂತೆ ಸಿನೆಮಾಕ್ಷೇತ್ರದಲ್ಲಿ ಬಿಸಿ ಬಿಸಿ ಹಾಟ್ ಟಾಪಿಕ್ ಆಗಿದೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ನಡುವೆ ಲವ್ ಬಗ್ಗೆ ಬಹಿರಂಗಪಡಿಸಿದ್ದಾರೆ ಸಾರಾ ಅಲಿ ಖಾನ್. ಈ ಕಾರ್ಯಕ್ರಮದಲ್ಲಿ ಜಾಹ್ನವಿ ಕಪೂರ್ ರಶ್ಮಿಕಾ ಮಂದಣ್ಣ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫಾಲೋವರ್ಸ್ ಸಂಖ್ಯೆ ಏರಿಕೆಯಾದ ವಿಚಾರ ಮಾತನಾಡುತ್ತಿದ್ದಾಗ, ಮಧ್ಯೆ ಎಂಟ್ರಿ ಕೊಟ್ಟ ಸಾರಾ ಅಲಿ ಖಾನ್ ಅವರು ವಿಜಯ್ ದೇವರಕೊಂಡ ಹೆಸರನ್ನು ಪ್ರಸ್ತಾಪಿಸಿದ್ದಾರೆ.
ಇನ್ನೂ ತನಗೂ ಸಹ ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಮಾಡುವ ಆಸೆಯಿದೆ ಎಂದು ಸಾರಾ ಬಹಿರಂಗಪಡಿಸಿದ್ದಾರೆ. ಇಲ್ಲಿಯವರೆಗೆ ಯಾವುದೇ ನಟನಗಲೀ ಅಥವಾ ನಟಿಯಾಗಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಬಗ್ಗೆ ಮಾತನಾಡಿರಲಿಲ್ಲ. ಅನೇಕ ಕಾರ್ಯಕ್ರಮಗಳಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಒಟ್ಟಾಗಿ ಕಾಣಿಸಿಕೊಂಡರೂ ಸಹ ಎಲ್ಲಿಯೂ ಅದರ ಬಗ್ಗೆ ಮಾತನಾಡಿರಲಿಲ್ಲ. ಇದೀಗ ಸಾರಾ, ರಶ್ಮಿಕಾ,ಹಾಗೂ ವಿಜಯ್ ದೇವರಕೊಂಡ ನಡುವೆ ಲವ್ ಲೈಫ್ ಬಗ್ಗೆ ಮಾತನಾಡಿದ್ದು, ಆ ಚರ್ಚೆಯ ಬಗ್ಗೆ ಇದೀಗ ಸಿನೆಮಾರಂಗದಲ್ಲಿ ದೊಡ್ಡ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಇನ್ನೂ ಟಾಲಿವುಡ್ ನಲ್ಲಿ ಗೀತಾ ಗೋವಿಂದಂ ಎಂಬ ಚಿತ್ರದ ಬಳಿಕ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಡುವೆ ಪ್ರೀತಿ ಶುರುವಾಗಿದೆ ಎಂದು ಹೇಳಲಾಗುತಿತ್ತು. ಜೊತೆಗೆ ಅನೇಕ ಬಾರಿ ಖಾಸಗಿ ಕಾರ್ಯಕ್ರಮದಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಗೋವಾದಲ್ಲಿ ಹೊಸ ವರ್ಷ ಆಚರಣೆ, ವಿದೇಶ ಪ್ರವಾಸ ಈ ಎಲ್ಲಾ ಕಾರಣಕ್ಕೆ ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದು, ಶೀಘ್ರದಲ್ಲೇ ಈ ಜೋಡಿಗಳು ಮದುವೆ ಸಹ ಅಗಲಿದ್ದಾರೆ ಎನ್ನಲಾಗಿತ್ತು.
ಆದರೆ ರಶ್ಮಿಕಾ ಮಂದಣ್ಣ ಇತ್ತೀಚಿಗೆ ವಿಜಯ್ ದೇವರಕೊಂಡ ನಿಂದ ಅಂತರ ಕಾಯಿದ್ದುಕೊಂಡಿದ್ದಾರೆ. ವಿಜಯ್ ದೇವರಕೊಂಡ ಅವರ ಹುಟ್ಟುಹಬ್ಬಕ್ಕೂ ಕೂಡ ರಶ್ಮಿಕಾ ಮಂದಣ್ಣ ವಿಶ್ ಕೂಡ ಮಾಡಿರಲಿಲ್ಲ. ಸದ್ಯ ಸಾರಾ ಹೇಳಿರುವ ಚರ್ಚೆಗೆ ಇದೀಗ ದೊಡ್ಡ ಚರ್ಚೆಗೆ ಬುನಾದಿಯನ್ನು ಹಾಡಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.