ಕನ್ನಡದ ನಟನಿಗೆ ಬಾರಿ ಅವಮಾನ ಸಾವಿತ್ರಮ್ಮಗಾರು ಅಬ್ಬಾಯಿ.. ಧಾರಾವಾಹಿ ಸೆಟ್ ನಲ್ಲಿ ಕನ್ನಡ ನಟ ಚಂದನ್ ಗೆ ತಂತ್ರಜ್ಞರಿಂದ ಕಪಾಳಮೋಕ್ಷ! ಅಷ್ಟಕ್ಕೂ ಆಗಿದ್ದೇನು ನೋಡಿ.?

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಇಂದು ಬೆಳಿಗ್ಗೆ ಯಿಂದ ಸೋಷಿಯಲ್ ಮೀಡಿಯಾದಲ್ಲಿ ನಟ ಚಂದನ್ ಮೇಲೆ ಹ@ಲ್ಲೆ ಮಾಡಿರುವ ಬಗ್ಗೆ ಸಿಕ್ಕಾಪಟ್ಟೆ ವೈ@ರಲ್ ಆಗುತ್ತಿದೆ ಅಷ್ಟಕ್ಕೂ ಅಲ್ಲಿ ನಡೆದಿದ್ದಾರರು ಏನು ಅಲ್ಲಿ ನಟ ಚಂದನ್ ಯಿಂದ ತಪ್ಪಾಗಿದ್ಯಾ ಅಥವಾ ಹ@ಲ್ಲೆ ಮಾಡಿರುವರಿಂದ ತಪ್ಪಾಗಿದ್ಯಾ ನೋಡೋಣ ಬನ್ನಿ ಅಲ್ಲಿ ನಡೆದ ಘಟನೆಯಾ ಸಂಪೂರ್ಣ ಮಾಹಿತಿಯ ತಿಳಿಯಲು ಮುಂದೆ ಓದಿ

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿರುವ, ಹಿರಿ ತೆರೆಯಲ್ಲಿ ಸಹಾ ಹೆಸರು ಮಾಡಿರುವ ನಟ ಚಂದನ್ ಕುಮಾರ್ ಕನ್ನಡ ಕಿರುತೆರೆಯ ಜೊತೆಗೆ ತೆಲುಗು ಕಿರುತೆರೆಯಲ್ಲಿ ಸಹಾ ಬ್ಯುಸಿಯಾಗಿರುವ ನಟ. ತೆಲುಗಿನಲ್ಲಿ ಒಂದರ ನಂತರ ಇನ್ನೊಂದು ಎನ್ನುವಂತೆ ಸೀರಿಯಲ್ ಗಳಲ್ಲಿ ನಾಯಕನಾಗಿ ನಟಿಸುತ್ತಾ ಅಲ್ಲಿನ ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು, ಅಭಿಮಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು ನಟ ಚಂದನ್ ಕುಮಾರ್.

ಹೀಗಿದ್ದ ಚಂದನ್ ಅವರು ತಾವು ನಟಿಸುತ್ತಿರುವ ತೆಲುಗು ಸೀರಿಯಲ್ ನ ತಂತ್ರಜ್ಞರ ಜೊತೆ ಕಿ’ರಿಕ್ ಮಾಡಿಕೊಂಡಿರುವ ವಿಡಿಯೋ ಒಂದು ಇದೀಗ ವೈ@ರಲ್ ಆಗಿದೆ‌. ನಟ ಚಂದನ್ ಕುಮಾರ್ ಅವರು ಸಾವಿತ್ರಮ್ಮಗಾರಿ ಅಬ್ಬಾಯಿ ಎನ್ನುವ ಮೆಗಾ ಸೀರಿಯಲ್ ನಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದಾರೆ.

ಈ ಸೀರಿಯಲ್ ನ ಚಿತ್ರೀಕರಣದ ವೇಳೆ ಚಂದನ್ ಕುಮಾರ್ ಅವರು ಕ್ಯಾಮೆರಾ ಅಸಿಸ್ಟೆಂಟ್ ಮೇಲೆ ಹ@ಲ್ಲೆ ಮಾಡಿದ್ದು, ಕೆಟ್ಟ ಪದ ಬಳಿಸಿ ಬೈದಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಮಾತಿಗೆ ಮಾತಿಗೆ ಬೆಳೆದು ಅದು ದೊಡ್ಡ ಜಗಳವಾಗಿ ಮಾರ್ಪಾಟಾಗಿದೆ. ಅಲ್ಲದೇ ನಟನ ಮೇಲೆ ಸೀರಿಯಲ್ ನ ತಂತ್ರಜ್ಞರು ಹ @ಲ್ಲೆ ಯನ್ನು ನಡೆಸಿದ್ದಾರೆ. ಈ ವೇಳೆ ತಂತ್ರಜ್ಞರೊಬ್ಬರು ನಟನಿಗೆ ಕಪಾಳ ಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.

ನಟ ಚಂದನ್ ಕುಮಾರ್ ಈ ಹಿಂದೆಯೂ ಒಮ್ಮೆ ಕ್ಯಾಮರಾ ಅಸಿಸ್ಟೆಂಟ್ ಜೊತೆಗೆ‌ ಕಿತ್ತಾಡಿಕೊಂಡು, ಹೊಡೆದಿದ್ದರು ಎನ್ನುವುದಾಗಿ ಸುದ್ದಿಗಳಾಗಿವೆ. ಅದೇ ವಿಚಾರಕ್ಕೆ ಈಗ ಮತ್ತೊಮ್ಮೆ ಗಲಾಟೆ ನಡೆದಿದೆ. ತೆಲುಗು ಸೀರಿಯಲ್ ನ ತಂತ್ರಜ್ಞರು ನಟನನ್ನು ನೀನೇನು ದೊಡ್ಡ ಸ್ಟಾರ್ ಅಂತ ಅನ್ಕೊಂಡಿದ್ದೀಯಾ? ಅಸಲಿಗೆ ನಿನ್ನ ಬ್ಯಾಕ್ ಗ್ರೌಂಡ್ ಏನು? ಎಂದೆಲ್ಲಾ ಜೋರು ಜೋರಾಗಿ ಮಾತನಾಡಿರುವುದು ಸಹಾ ವೀಡಿಯೋದಲ್ಲಿ ಕೇಳಿ ಬಂದಿದೆ. ಈ ಘಟನೆ ತಿಂಗಳ ಹಿಂದೆ ನಡೆದಿದೆ ಎನ್ನಲಾಗಿದ್ದು, ವೀಡಿಯೋ ಈಗ ಹೊರ ಬಂದಿದೆ.

ಪ್ಯಾಟೆ ಮಂದಿ ಕಾಡಿಗೆ ಬಂದ್ರು ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ ಪರಿಚಯವಾದ ಚಂದನ್ ಕುಮಾರ್ ಅವರು ಅನಂತರ ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದರು. ಇದಾದ ಮೇಲೆ ಅವರು ಬಿಗ್ ಬಾಸ್ ನಲ್ಲಿ ಸದ್ದು ಮಾಡಿದ್ದರು. ಸರ್ವಮಂಗಳ ಮಾಂಗಲ್ಯೇ ಸೀರಿಯಲ್ ನಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು‌.

ಪ್ರಸ್ತುತ ಅವರು ನಾಯಕನಾಗಿರುವ ಮರಳಿ ಮನಸಾಗಿದೆ ಸೀರಿಯಲ್ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದುಕೊಂಡಿದೆ. ಈ ಘಟನೆಯ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.


Leave a Reply

Your email address will not be published. Required fields are marked *