ಇಂದಿನ ಜನರೇಷನ್ ನಲ್ಲಿ ಯುವಜನತೆ ವಿದ್ಯಾವಂತರಾಗಿದ್ದರೂ ಕೂಡ ಬುದ್ಧಿಯನ್ನು ಉಪಯೋಗಿಸುವುದರಲ್ಲಿ ಸಾಕಷ್ಟು ಹಿಂದೆ ಬಿದ್ದಿದ್ದಾರೆ ಎಂದು ಹೇಳಬಹುದಾಗಿದೆ. ತಮ್ಮ ಜೀವನದಲ್ಲಿ ನಿರ್ಧಾರ ಮಾಡುವಾಗಲು ಕೂಡ ಹೆಚ್ಚಿನ ಆಸಕ್ತಿ ವಹಿಸಿ ವಿಚಾರದ ಕುರಿತಂತೆ ತಿಳಿದುಕೊಂಡು ನಿರ್ಧಾರ ಮಾಡುವುದಿಲ್ಲ. ಕಂಡ ತಕ್ಷಣ ಇಷ್ಟವಾದರೆ ಸಾಕು ವಸ್ತುವನ್ನು ಒಳ್ಳೆಯದು ಎಂದುಕೊಂಡು ಬಿಡುತ್ತಾರೆ. ಆದರೆ ಅದರಲ್ಲಿ ಕೆಟ್ಟ ಪರಿಣಾಮಗಳು ಕೂಡ ಮುಂದಿನ ದಿನಗಳಲ್ಲಿ ಕಂಡುಬರಬಹುದು ಎನ್ನುವುದಾಗಿ ಅವರು ಯೋಚಿಸುವುದಿಲ್ಲ. ನಾವು ಇಂದಿನ ವಿಚಾರದಲ್ಲಿ ಹೇಳುವುದು ಹೊರಟಿರುವುದು ಕೂಡ ಇದೆ ವಿಚಾರವನ್ನು. ಇತ್ತೀಚೆಗಷ್ಟೆ ನಡೆದಿರುವ ಈ ಘಟನೆಯಲ್ಲಿ ಇದೇ ರೀತಿಯ ಪರಿಣಾಮವನ್ನು ಆ ಹುಡುಗಿ ಎದುರಿಸಬೇಕಾಗಿದೆ.
ಹಾಗಿದ್ದರೆ ನಿಜವಾಗಲೂ ಎಲ್ಲಿ ನಡೆದಿದ್ದೇನು ಎನ್ನುವುದನ್ನು ತಿಳಿಯೋಣ ಬನ್ನಿ. ಪ್ರೀತಿ ಮಾಡುವುದು ತಪ್ಪಲ್ಲ ಆದರೆ ಪ್ರೀತಿ ಮಾಡುವ ವ್ಯಕ್ತಿಯ ಕುರಿತಂತೆ ತಿಳಿಯದೆ ಮನೆಯವರ ವಿರೋಧ ಕಟ್ಟಿಕೊಂಡು ಏನೇ ಕಷ್ಟ ಬಂದರೂ ಕೂಡ ನಾವು ಜೀವಿಸುತ್ತವೆ ಎನ್ನುವ ಭಂಡ ಧೈರ್ಯವನ್ನು ಇಟ್ಟುಕೊಳ್ಳುವುದು ತಪ್ಪು. ತಾವು ಪ್ರೀತಿಸುವವರ ಕುರಿತಂತೆ ನಿಜವಾದ ಮಾಹಿತಿಗಳನ್ನು ಇಟ್ಟುಕೊಳ್ಳದೆ ಜೀವನದಲ್ಲಿ ಮುಂದೆ ನಡೆದರೆ ಏನಾಗುತ್ತದೆ ಎನ್ನುವುದಕ್ಕೆ ಇಂದು ನಾವು ಹೇಳುವ ಕಥೆ ನಿಮಗೆ ಜೀವಂತ ಉದಾಹರಣೆ ಎಂದು ಹೇಳಬಹುದಾಗಿದೆ. ನಿಮ್ಮನ್ನು ಹುಟ್ಟಿನಿಂದಲೂ ಇಂದಿನವರೆಗೂ ಕೂಡ ಸಾಕುತ್ತಿರುವ ಅಂತಹ ತಂದೆ-ತಾಯಿಯ ಕುರಿತಂತೆ ಒಂದು ಕ್ಷಣವಾದರೂ ಈ ಸಂದರ್ಭದಲ್ಲಿ ಯೋಚಿಸಿ ನಂತರ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂಬ ಅರಿವು ಈ ವಿಚಾರವನ್ನು ಕೇಳಿದ ನಂತರ ನಿಮಗೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇಂದು ನಾವು ಹೇಳಲು ಹೊರಟಿರುವ ಈ ಘಟನೆ ನಡೆದಿರುವುದು ತುಮಕೂರಿನಲ್ಲಿ. ತುಮಕೂರಿನ ಚೈತ್ರಾ ಎನ್ನುವವರು ಮನೆಯವರ ವಿರೋಧದ ನಡುವೆಯೂ ಕೂಡ ತಾನು ಪ್ರೀತಿಸಿರುವ ನಿಖಿಲ್ ಎನ್ನುವವರನ್ನು ಅಂತರ್ಜಾತಿ ವಿವಾಹವಾಗಿದ್ದರು. ಇದು ಇದಾಗಲೇ ಎಲ್ಲರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ತರಹ ಮದುವೆಯಾದಾಗ ದೀರ್ಘಕಾಲದವರೆಗೆ ಸೌಹಾರ್ದಯುತವಾಗಿ ಸಂಸಾರ ನಡೆಸಿಕೊಂಡು ಬದುಕಿದರೆ ಮಾತ್ರ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡಿದಂತಾಗುತ್ತದೆ. ಅದಕ್ಕೆ ವೈವಾಹಿಕ ಜೀವನದಿಂದ ಓಡಿಹೋದರೆ ಖಂಡಿತವಾಗಿ ಸಮಾಜ ಮತ್ತೊಮ್ಮೆ ಪ್ರೀತಿಸಿ ಮದುವೆಯಾಗುವವರನ್ನು ಬೆಂಬಲಿಸುವುದಿಲ್ಲ ಎನ್ನುವುದು ಖಂಡಿತವಾಗಿ ಒಪ್ಪಿಕೊಳ್ಳಲೇಬೇಕಾದ ಅಂಶ. ಮನೆಯವರು ಕೂಡ ಇದೇ ಕಾರಣಕ್ಕಾಗಿ ಪ್ರೀತಿಸಿ ಮದುವೆ ಆಗುವುದನ್ನು ವಿರೋಧಿಸುತ್ತಾರೆ.
ಇಲ್ಲಿ ಚೈತ್ರ ಹಾಗೂ ನಿಖಿಲ್ ರವರ ಮದುವೆಯಲ್ಲಿ ಆಗಿದ್ದು ಕೂಡ ಇದೇ. ಚೈತ್ರ ರವರನ್ನು ಮದುವೆಯಾದ ಏಳೇ ದಿನದಲ್ಲಿ ನಿಖಿಲ್ ಕಾಣೆಯಾಗಿದ್ದಾನೆ ಎಂಬುದಾಗಿ ಚೈತ್ರ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ಅಷ್ಟೊಂದು ಪ್ರೀತಿಸಿ ಮದುವೆಯಾಗಿದ್ದ ನಿಖಿಲ್ ಏಳೇ ದಿನಕ್ಕೆ ಓಡಿ ಹೋಗುವಂಥದ್ದು ಏನಾಗಿತ್ತು ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಸದ್ಯಕ್ಕೆ ಚೈತ್ರ ಓಡಿ ಹೋಗಿರುವ ತನ್ನ ಪತಿಗಾಗಿ ಮನೆಯಲ್ಲಿ ಕೂತು ಕಾಯುತ್ತಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.