ಕನ್ನಡ ಕೋಟ್ಯಧಿಪತಿಯಲ್ಲಿ ಅಪ್ಪು ಪಡೆಯುತ್ತಿದ್ದ ಸಂಭಾವನೆ ಹಣ ಯಾವಾ ಕೆಲಸಕ್ಕೆ ಹೋಗುತಿತ್ತು ಗೊತ್ತಾ.? ಅಬ್ಬಾ ನಿಜವಾದ ಹೀರೋ ಅಂದ್ರೆ ಇವರೇ ಕಣ್ರೀ.

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಕರುನಾಡಿನ ಮೆಚ್ಚಿನ ಮಗನನ್ನು ಕಳೆದು ಕೊಂಡು ಸರಿ ಸುಮಾರು 9 ತಿಂಗಳು ಕಳೆದಿದೆ ಆದರೂ ಕೂಡ ಅವರ ನೆನೆಪಿನಿಂದ ಆಚೆ ಬರಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಅಪ್ಪು ಬದುಕಿದ್ದಾಗ ಅವರು ಮಾಡಿರುವಂತಹ ದಾನ ಧರ್ಮಾ ಅವರಿರುವಾಗ ಅದ್ಯಾವುದು ಕೂಡ ಹೊರ ಬಂದಿರಲಿಲ್ಲ. ಆದರೆ ಅಪ್ಪು ಅಗಲಿದ ನಂತರ ಅವರ ಎಲ್ಲಾ ರೀತಿಯ ಸಾಮಾಜಿಕ ಸೇವೆಗಳು ಒಂದೊಂದಾಗಿ ಹೊರ ಬರುತ್ತಿದೆ.

ಅಪ್ಪು ಜೊತೆಗೆ ಇಲ್ಲ ಎನ್ನುವುದನ್ನು ಒಪ್ಪಿಕೊಳ್ಳಲು ಮನಸ್ಸು ಸಿದ್ದವಿಲ್ಲ. ಅಪ್ಪು ಎಲ್ಲರೊಂದಿಗೂ ಸಾಮಾನ್ಯರಂತೆ ಇರುತ್ತಿದ್ದ ವ್ಯಕ್ತಿ. ದೊಡ್ಮನೆಯ ಮಗನಾದರೂ ಒಂದಿಷ್ಟು ಆದರ್ಶಗಳು, ಸಾಮಾಜಿಕ ಕಳಕಳಿಯ ಕೆಲಸಗಳಿಗೆ ಕಿಂಚ್ಚಿತ್ತು ಕೊರತೆ ಇರಲಿಲ್ಲ. ಶ್ರೀಮಂತಿಕೆ ಇದ್ದರು ಸಾಮಾನ್ಯ ರಂತೆ ಬೆಳೆದರು. ಎಲ್ಲರೂ ಚನ್ನಾಗಿ ಇರಬೇಕು ಎಂದು ಬಯಸಿದ ವ್ಯಕ್ತಿ ಯೂ ಕೇವಲ 46ನೇ ವಯಸ್ಸಿಗೆ ತನ್ನ ಬದುಕಿನದ ಪಯಣಕ್ಕೆ ಅಂತ್ಯ ಹಾಡಿದರು ಇವರ ಸರಲವಾದ ವ್ಯಕ್ತಿತ್ವ ಇವರು ಮಾಡಿರುವ ಸಾಮಾಜಿಕ ಸೇವೆಗಳು ಎಂದಿಗೂ ಶಾಶ್ವತ ವಾಗಿರುತ್ತದೆ.

ಅಂದಹಾಗೆ, ಅಗಲಿಕೆಯ ನಂತರವೂ ಅಪ್ಪನ ಹಾದಿಯಲ್ಲೇ ನಡೆದ ಪುನೀತ್ ಅವರು ತನ್ನ ಎರಡು ಕಣ್ಣುಗಳುನ್ನು ದಾನ ಮಾಡಿ ಅನೇಕರ ಬದುಕಿಗೆ ಬೆಳಕಾಗಿದ್ದಾರೆ. ಪುನೀತ್ ಅವರು 19 ಗೋಶಾಲೆ, 16 ವೃದ್ದಾಶ್ರಮಗಳನ್ನು ನೋಡಿಕೊಳ್ಳುತ್ತಿದ್ದರು. ಅದರ ಜೊತೆಗೆ 45ಕ್ಕೂ ಹೆಚ್ಚು ಶಾಲಾ ಮಕ್ಕಳನ್ನು ವಿದ್ಯಾಭ್ಯಾಸ ನೋಡಿಕೊಳ್ಳುತ್ತಿದ್ದರು. ಅದಕ್ಕಿಂತ ಹೆಚ್ಚಾಗಿ ಶಕ್ತಿಧಮಾ ಮೂಲಕ ಸಾವಿರಾರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದರು. ಆದರೆ ಇದನೆಲ್ಲಾ ಯಾವತ್ತಿಗೂ ಯಾರ ಬಳಿಯೂ ಹೇಳಿಕೊಂಡವರಲ್ಲ. ಯಾವುದೇ ಪ್ರಚಾರವನ್ನು ಬಯಸದೇ ನಿಸ್ವಾರ್ಥ ಸೇವೆಯನ್ನು ಮಾಡಿದ ಅಪ್ಪು ಅವರನ್ನು ಎಲ್ಲರೂ ನೆನಪಿಸಿಕೊಳ್ಳದೆ ಇರಲು ಸಾಧ್ಯವೇ.

ಅಣ್ಣಾವ್ರ ಕುಟುಂಬದ ಜೊತೆಗೆ ಹಿರಿಯ ನಿರ್ದೇಶಕ ದೊರೆ ಭಗವಾನ್ ಅವರಿಗೆ ಮೊದಲಿನಿಂದಲೂ ಒಡನಾಟವಿದೆ. ಅಂದಹಾಗೆ, ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅಪ್ಪುವಿನ ಕುರಿತಾದ ಕೆಲವು ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ಪುನೀತ್ ಗೆ ಕನ್ನಡದ ಕೋಟ್ಯಧಿಪತಿ ಶೋನಿಂದ 8 ಕೋಟ ರೂಪಾಯಿ ಸಂಭಾವನೆ ಬಂತು. ಅದನ್ನು ಶಕ್ತಿಧಾಮಕ್ಕೆ ವರ್ಗಾವಣೆ ಮಾಡಿದ್ದಾರೆ. ಅವರ ಶಕ್ತಿಧಾಮದಲ್ಲಿ ನೂರಾರು ಮಕ್ಕಳು ಇದ್ದಾರೆ. ಎಲ್ಲರೂ ಬೇರೆ ಬೇರೆ ಶಾಲೆಗೆ ಹೋಗುತ್ತಾರೆ. ಮಕ್ಕಳಿಗಾಗಿ ಶಕ್ತಿಧಾಮದಲ್ಲಿಯೇ ಒಂದು ಶಾಲೆಯನ್ನು ಕಟ್ಟಿಸಬಹುದಲ್ಲ ಎಂಬ ಆಲೋಚನೆ ಅವರಿಗೆ ಮೂಡಿತು. ಕೂಡಲೇ ಮ್ಯಾನೇಜಿಂಗ್ ಟ್ರಸ್ಟ್ ಬಳಿ ಮಾತನಾಡಿದರು.

ಶಾಲೆಗೆ ಎಷ್ಟು ಹಣ ಬೇಕಾಗುತ್ತದೆ ಎಂಬ ವಿಚಾರ ತಿಳಿದುಕೊಂಡು ಶಾಲೆ ಸ್ಥಾಪನೆ ಕೆಲಸ ಮಾಡಿ ಎಂದು ಹೇಳುತ್ತಾರೆ. ಶಾಲೆ ಶುರು ಮಾಡುವುದಕ್ಕೆ ಅಪ್ಪು ಒಂದು ಕಂಡೀಷನ್ ಕೂಡ ಹಾಕಿದ್ದರು. ಇದು ಬರೀ ಹೆಣ್ಣುಮಕ್ಕಳ ಶಾಲೆ ಆಗಿರಬೇಕು. ನಮ್ಮ ಶಕ್ತಿಧಾಮದ ಮಕ್ಕಳು ಇಲ್ಲೇ ಓದಬೇಕು. ಹೊರಗಡೆಯಿಂದ ಬರುವ ಬಡ ಹೆಣ್ಣುಮಕ್ಕಳಿಗೂ ಪ್ರವೇಶ ನೀಡಬೇಕು. ಯಾರಿಂದಲೂ ಫೀಸ್ ಮತ್ತು ಡೊನೇಷನ್ ಸ್ವೀಕರಿಸುವಾಂತಿಲ್ಲ. ಎಲ್ಲಾ ಮಕ್ಕಳಿಗೂ ಸಮವಸ್ತ್ರವನ್ನು ನಾನೇ ಒದಗಿಸುತ್ತೇನೆ. ಈ ಷರತ್ತುಗಳಿಗೆ ಒಪ್ಪುವುದಾದರೆ. ನೀವು ಶಾಲೆ ಸ್ಥಾಪನೆಯ ಕೆಲಸ ಶುರುಮಾಡಿ ಎಂದು ಪುನೀತ್ ಹೇಳಿದ್ದರು.

ಅಪ್ಪು ಶಾಲೆ ನಿರ್ಮಾಣ ಮಾಡಬೇಕು ಎಂಬ ಕನಸನ್ನು ಇಂದು ಅವರ ಕುಟುಂಬದವರು ನನಸು ಮಾಡುತ್ತಿದ್ದಾರೆ. ಅನುಮತಿಗಾಗಿ ಸರ್ಕಾರದ ಬಳಿ ಮನವಿಯನ್ನು ಸಲ್ಲಿಸಿದ್ದಾರೆ. ಸರ್ಕಾರದ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆ ಶಾಲೆಗೆ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನೇ ಇಡಲಾಗುತ್ತದೆ ಎಂಬ ಮಾಹಿತಿಯನ್ನು ಕೂಡ ದೊರೆ ಭಾಗವನ್ ತಿಳಿಸಿದ್ದಾರೆ. ಅಪ್ಪು ನಮ್ಮ ಜೊತೆ ಇಲ್ಲ. ಆದರೆ ಅವರು ಮಾಡಿದ ಕೆಲಸ ಶಾಶ್ವತವಾಗಿ ಇರುತ್ತದೆ. ಅವರು ನಮ್ಮ ನಾಡಿನ ಹೆಮ್ಮೆಯ ಪುತ್ರ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಎಂದಿಗೂ ಅಜರಾಮರ ಎಂದು ದೊರೆ ಭಗವಾನ್ ಪುನೀತ್ ರಾಜ್ ಕುಮಾರ್ ಬಗ್ಗೆ ಹೇಳಿದ್ದರು.


Leave a Reply

Your email address will not be published. Required fields are marked *