ಕನ್ನಡ ಚಿತ್ರರಂಗಕ್ಕೆ ರಾಜ್ ಕುಮಾರ್ ನಂಬರ್ 1 ಆದರೆ ನೀವೇನು ಎಂದು ದೊರೆ ಭಗವಾನ್ ವಿಷ್ಣುವರ್ಧನ್ ಅವರಿಗೆ ಕೇಳಿದಾಗ ವಿಷ್ಣುವರ್ಧನ್ ಕೊಟ್ಟ ಉತ್ತರ ಏನು ಗೊತ್ತೇ ? ನೀವೇ ನೋಡಿ ಖಂಡಿತ ಬೆರಗಾಗುತ್ತೀರಾ.

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಕನ್ನಡದ ಚಿತ್ರರಂಗದಲ್ಲಿ ಮರೆಯಲಾಗದ ಎರಡು ಮಾಣಿಕ್ಯಗಳೆಂದರೆ ಅದು ವರನಟ ಡಾ. ರಾಜ್ ಕುಮಾರ್ ಹಾಗೂ ಡಾ. ವಿಷ್ಣುವರ್ಧನ್ ಅವರು ಈ ಇಬ್ಬರೂ ಮಹಾನ್ ನಟರನ್ನು ಮರೆಯಲು ಸಾಧ್ಯನೇ ಇಲ್ಲ. ರಾಜ್ ಕುಮಾರ್ ಹಾಗೂ ವಿಷ್ಣುವರ್ಧನ್ ಯಾವ ರೀತಿ ಇದ್ದರು ಎಂಬುದಕ್ಕೆ ಹಲವಾರು ಉದಾಹರಣೆಗಳು ನೋಡಲು ಸಿಗುತ್ತದೆ. ಕಲಾವಿದರೆಲ್ಲರೂ ಒಂದೇ ಸಮಾನ ಎಂದು ರಾಜ್ ಕುಮಾರ್ ಎಂದು ಹೇಳುತ್ತಿದ್ದರೆ, ಕಲಾವಿದರೆಲ್ಲರೂ ರಾಜ್ ಕುಮಾರ್ ಅವರ ರೀತಿ ಇರಬೇಕು ಎಂದು ವಿಷ್ಣುವರ್ಧನ್ ಅವರ ಹೃದಯದ ಮಾತಾಗಿತ್ತು.

ಈ ಇಬ್ಬರೂ ಮಹಾನ್ ನಟರ ಜೋಡಿ ಇಂದ ಮತ್ತೊಮ್ಮೆ ಸಿನೆಮಾವನ್ನು ತೆರೆ ಮೇಲೆ ತರಲು ಹಲವಾರು ನಿರ್ದೇಶಕರು, ನಿರ್ಮಾಪಕರು ಸಾಕಷ್ಟು ಪ್ರಯತ್ನ ಪಟ್ಟಿದ್ದು ಉಂಟು, ಆದರೆ ಅವರಿಬ್ಬರಿಗೂ ಸರಿ ಹೊಂದುವ ಕಥೆ ಹೊಂದಾಣಿಕೆ ಆಗದೆ, ಒಳ್ಳೆಯ ತಂತ್ರಜ್ಞಾನದ ಕೊರತೆಯಿಂದ ಇಬ್ಬರು ಒಟ್ಟಿಗೆ ಮತ್ತೊಮ್ಮೆ ಬೆಳ್ಳಿ ಪರದೆಯಲ್ಲಿ ಕಾಣಿಸಲಿಲ್ಲ. ಆದರೆ ಇವರಿಬ್ಬರೂ ವೇದಿಕೆಯಲ್ಲಿ ಒಟ್ಟಿಗೆ ಇದ್ದಾಗ ತಮ್ಮದೇ ಆದ ಸ್ಥಾನ ಮನವನ್ನು ಅಭಿಮಾನಿಗಳಿಂದ ಪಡೆದುಕೊಳ್ಳುತ್ತಿದ್ದರು.

ನಿರ್ದೇಶಕ ದೊರೆ ಭಗವಾನ್ ಅವರು ರಾಜ್ ಕುಮಾರ್ ಅವರ ಬ್ಯಾನರ್ ನಲ್ಲಿ ಮೂಡಿ ಬರುವ ಸಿನೆಮಾಗಳಿಗೆ ಕಾಯಂ ನಿರ್ದೇಶಕರಾಗಿದ್ದರು. ಭಗವಾನ್ ಅವರು ರಾಜ್ ಕುಮಾರ್ ಅವರ ನಿರ್ಮಾಣದ ಸಂಸ್ಥೆಯಲ್ಲಿ ಅಲ್ಲದೆ ತಮ್ಮ ನಿರ್ಮಾಣದ ಸಿನೆಮಾದಲ್ಲಿಯೂ ಕೂಡ ಅವರನ್ನು ಹಾಕಿಕೊಂಡು ಸಿನೆಮಾ ತೆಗೆದಿದ್ದರು. ಈ ಸಂದರ್ಭದಲ್ಲಿ ದೊರೆ ಭಗವಾನ್ ಅವರು ನೀನು ನಕ್ಕರೆ ಹಾಲು ಸಕ್ಕರೆ ಸಿನೆಮಾವನ್ನು ಮಾಡಲು ಮುಂದಾಗುತ್ತಾರೆ.

ಈ ಚಿತ್ರಕ್ಕೆ ಯಾರನ್ನು ಹಾಕಿಕೊಳ್ಳುವುದು ಎಂದು ದೊರೆ ಭಗವಾನ್ ಅವರು ಕೇಳಿದಾಗ ಪಾರ್ವತಮ್ಮ ಅವರು ಹೇಳುವ ಹೆಸರು ವಿಷ್ಣುವರ್ಧನ್ ಎಂದು. ಇದಾದ ನಂತರ ದೊರೆ ಭಗವಾನ್ ಅವರು ವಿಷ್ಣುವರ್ಧನ್ ಅವರ ಬಳಿ ಹೋಗಿ ಕಥೆಯನ್ನು ಹೇಳಿದಾಗ ಕಥೆಯನ್ನು ಕೇಳಿ ವಿಷ್ಣುವರ್ಧನ್ ತುಂಬಾ ಇಷ್ಟಪಟ್ಟು ಸಿನೆಮಾದಲ್ಲಿ ನಟನೆ ಮಾಡಲು ಒಪ್ಪಿಗೆ ನೀಡುತ್ತಾರೆ. ಸಿನೆಮಾ ಶೋಟಿಂಗ್ ಮಾಡುವ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರ ಸರಳತೆ, ಪ್ರಾಮಾಣಿಕತೆ, ಸಜ್ಜನಿಕೆ ನೋಡಿ ನಿರ್ದೇಶಕ ದೊರೆ ಭಗವಾನ್ ಅವರು ಬೆರಗಾಗಿ ಹೋಗಿದ್ದರು.

ಈ ಸಂದರ್ಭದಲ್ಲಿ ದೊರೆ ಭಗವಾನ್ ಅವರು ವಿಷ್ಣುವರ್ಧನ್ ಅವರ ಬಳಿ ಹೋಗಿ ಒಂದು ಮಾತನ್ನು ಕೇಳುತ್ತಾರೆ, ದೊರೆ ಭಗವಾನ್ ಅವರು ನಾನು ಇಲ್ಲಿಯವರೆಗೆ ರಾಜ್ ಕುಮಾರ್ ಅವರ ಬಳಿ ಕೆಲಸ ಮಾಡಿದ್ದೇನೆ, ಅವರು ನಂಬರ್ 1 ಈಗ ನಿಮ್ಮ ಜೊತೆ ಕೆಲಸ ಮಾಡಿದ ಮೇಲೆ ಅವರನ್ನು ಬಿಟ್ಟರೆ ನೀವೇ ನಂಬರ್ 1 ಎಂದು ಹೇಳುತ್ತಾರೆ.

ಈ ಮಾತನ್ನು ಕೇಳಿದ ನಂತರ ವಿಷ್ಣುವರ್ಧನ್ ಅವರು ದೊರೆ ಭಗವಾನ್ ಅವರಿಗೆ ನೀವು ಹೇಳಿದ್ದು ತಪ್ಪು, ರಾಜ್ ಕುಮಾರ್ ಅವರು ಮೊದಲನೇ ಸ್ಥಾನದಲ್ಲಿದ್ದಾರೆ ನಾವು ಯಾರೂ ಕೂಡ ಅವರ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ, ಆದ್ದರಿಂದ ಅವರು ನಡೆದುಕೊಂಡು ಬಂದ ದಾರಿಯಲ್ಲಿ ನಾವು ನಡೆದುಕೊಂಡು ಹೋಗಬೇಕು ಎಂದು ಆ ಮಹಾನ್ ನಟ ವಿಷ್ಣುವರ್ಧನ್ ಅವರು ಹೇಳುತ್ತಾರೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *