ಕನ್ನಡ ಚಿತ್ರರಂಗದ ಮೇರು ನಟ ಡಾ.ವಿಷ್ಣುವರ್ಧನ್ ಅವರು ಮನೆಯೊಂದನ್ನು ಬಿಟ್ಟು ಬೇರೇನೂ ಆಸ್ತಿನೆ ಮಾಡಿಲ್ಲ ಯಾಕೆ.? ಇಷ್ಟು ದೊಡ್ಡ ನಟನಿಗೆ ಸಮಾಧಿಗೂ ಜಾಗವಿಲ್ಲ ನೋಡಿ

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಕನ್ನಡ ಚಿತ್ರರಂಗದಲ್ಲಿ ಸಾಹಸ ಸಿಂಹ ಎಂದೇ ಖ್ಯಾತರಾಗಿದ್ದ ವಿಷ್ಣು ನಮ್ಮನೆಲ್ಲಾ ಅಗಲಿ 13ವರ್ಷಗಳು ಕಳೆಯುತ್ತಿವೆ. ಆದರೂ ಇಂದಿಗೂ ಕನ್ನಡಿಗರ ಮನದಲ್ಲಿ ನೆಚ್ಚಿನ ಯಜಮಾನನಾಗಿ ಉಳಿದುಕೊಂಡಿದ್ದಾರೆ. ಕನ್ನಡ ಚಿತ್ರರಂಗ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಚಿತ್ರಗಳಲ್ಲಿ ಡಾ.ವಿಷ್ಣುವರ್ಧನ್​​ ನಟಿಸಿ ಅಧಿಕ ಸಂಖ್ಯೆ ಅಭಿಮಾನಿಗಳನ್ನು ಪಡೆದಿದ್ದರು.

ವಿಷ್ಣುವರ್ಧನ್ ನಿಜವಾದ ಹೆಸರು ಸಂಪತ್ ಕುಮಾರ್ , ನಾಗರಹಾವು ಚಿತ್ರೀಕರಣದ ವೇಳೆ ನಿರ್ದೇಶಕ ಪುಟ್ಟಣ್ಣ ಕಣಗಲ್ ವಿಷ್ಣುವರ್ಧನ್ ಎಂದು ನಾಮಕರಣ ಮಾಡಿದ್ದರು. ಚಿತ್ರಬ್ರಹ್ಮ ಅಂತಾ ಕರೆಯಿಸಿಕೊಂಡಿದ್ದ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ವಿಷ್ಣುವರ್ಧನ್ ಚೊಚ್ಚಲ ಬಾರಿಗೆ ಅಭಿನಯದ ನಾಗರಹಾವು ಸಿನಿಮಾ 5 ಜಿಲ್ಲೆಗಳಲ್ಲಿ ಶತ ದಿನ ಪೂರೈಸಿತ್ತು. ಸ್ಯಾಂಡಲ್ ವುಡ್ನಲ್ಲಿ 14ಕ್ಕೂ ಹೆಚ್ಚು ಚಿತ್ರಗಳಲ್ಲಿ ದ್ವಿ ಪಾತ್ರದಲ್ಲಿ ನಟಿಸಿರುವ ಏಕೈಕ ನಟ ಅಂದರೆ ಡಾ ವಿಷ್ಣುವರ್ಧನ್ ಅನ್ನೋದು ಹೆಮ್ಮೆಯ ವಿಷಯ.

ವಿಷ್ಣುವರ್ಧನ್ ಕನ್ನಡ,ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಭಾಷೆ ಸೇರಿದಂತೆ 220ಕ್ಕೂ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಹಿನ್ನಲೆಯಲ್ಲಿ ರಾಷ್ಟ್ರೀಯ ಪ್ರತಿಷ್ಠಿತ ಸಿಎಸ್​​ಎಸ್, ​​ ಐಬಿಎನ್​ ಚಾನಲ್ 2008ರಲ್ಲಿ ಮೋಸ್ಟ್ ಪಾಪ್ಯೂಲರ್ ಕನ್ನಡ ನಟ ಎಂದು ಬಿರುದು ನೀಡಿ ಗೌರವಿಸಿವೆ. ಕನ್ನಡ ಚಿತ್ರರಂಗದಲ್ಲಿ ಡಾ ವಿಷ್ಣುವರ್ಧನ್ ಜೊತೆ ಅತಿ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿರೋ ನಿರ್ದೇಶಕ ಅಂದ್ರೆ ಭಾರ್ಗವ. ಅಸಾಧ್ಯ ಅಳಿಯಾ ಚಿತ್ರದ ಮೂಲಕ ಹೊಂದಾದ ಈ ಜೋಡಿ ಒಟ್ಟಾರೆ 23 ಚಿತ್ರದಲ್ಲಿ ಅವರಿಬ್ಬರ ಕಾಂಬಿನೇಷನ್ ಮೂಡಿ ಬಂದಿದ್ದವು.

ನಾಗರ ಹಾವು ಚಿತ್ರದಿಂದ ಆಪ್ತರಕ್ಷಕ ಚಿತ್ರದವರಿಗೂ ಎಸ್.ಪಿ.ಬಾಲಸುಬ್ರಮಣ್ಯಂ ವಿಷ್ಣುವರ್ಧನ್ ಚಿತ್ರದ ಹಾಡುಗಳಿಗೆ ಧ್ವನಿಯಾಗುವ ಮೂಲಕ ದಾಖಲೆ ಬರೆದಿದ್ದರು. ನಾಗರಹಾವು’ ಸ್ಕ್ರೀನ್ ಟೆಸ್ಟ್​ ವೇಳೆ ಇವರಿಬ್ಬರೂ ಪರಸ್ಪರ ಮೊದಲ ಬಾರಿ ಭೇಟಿಯಾಗಿದ್ದರು. ಮೊದಲ ಚಿತ್ರದಲ್ಲೇ ದುಷ್ಮನ್​ಗಳಾಗಿ ಮಾರಾಮಾರಿ ಸೀನ್. ರೀಲ್​ನಲ್ಲಿ ಗುದ್ದಾಡಿಕೊಂಡಿದ್ದ ಇವರು ರಿಯಲ್​ನಲ್ಲಿ ಪ್ರಾಣಮಿತ್ರರಾದರು. ಎಲ್ಲಿಯವರೆಗೆ ಅಂದರೆ ವಿಷ್ಣುಗೆ ದಿನಕ್ಕೆರಡು ಬಾರಿ ಅಂಬಿಯೊಂದಿಗೆ ಫೋನ್​ನಲ್ಲಿ ಮಾತನಾಡದೇ ಇದ್ದರೆ ಅದೇನೋ ಕಳೆದುಕೊಂಡಂತಾಗುತ್ತಿತ್ತಂತೆ.

ವಿಷ್ಣು ಅಷ್ಟೊಂದು ಅಂಬಿಯನ್ನು ಹಚ್ಚಿಕೊಂಡಿದ್ದರು. ವಿಷ್ಣುವರ್ಧನ್ ಹಾಗೂ ಅಂಬರೀಷ್ ಅವರ ಸ್ನೇಹ ಅದ್ಯಾವ ಮಟ್ಟದಲ್ಲಿತ್ತು ಎಂದರೆ  ‘ನಾನು ಸತ್ತಾಗ ನನ್ನ ಹೆಣವನ್ನು ಹೊರಲು ಅಂಬರೀಶ್ ಖಂಡಿತಾ ಎಲ್ಲಿದ್ದರೂ ಬಂದೇ ಬರುತ್ತಾನೆ’ ಎಂದು ಹೇಳಿದ್ದರು.ಎಲ್ಲರಿಗೂ ಆತ ಮಹಾನ್ ಒರಟ, ಭಯಾನಕ ಕೋಪಿಷ್ಠ. ಆದರೂ ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುವ ಅದ್ಭುತ ಹೃದಯವಂತ. ಅವರ ಸ್ನೇಹದ ಬಲೆಯಲ್ಲಿ ಒಮ್ಮೆ ಹೊಕ್ಕರೆ ಅದರಿಂದ ಹೊರ ಬರುವುದು ತುಸು ಕಷ್ಟ.

ಅಂತಹ ಸ್ನೇಹಮಯಿ. ಇದು ರೆಬೆಲ್ ಸ್ಟಾರ್​ ಬಗೆಗೆ ಅವರ ಗೆಳೆಯರು ಹೇಳುವ ಮಾತುಗಳು. ವಿಷ್ಣುವರ್ಧನ್ ಹಾಗೂ ಅಂಬರೀಷ್ ಜೋಡಿ ಸ್ನೇಹಕ್ಕೆ ಭಾಷ್ಯ ಬರೆದಿದ್ದರು. ಗೆಳೆತನಕ್ಕೆ ಹೊಸ ಮೆರಗು ನೀಡಿದ್ದರು. ವಿಷ್ಣುವರ್ಧನ್ ಸದೃಯಿ, ಸ್ನೇಹಮಯಿ ಸ್ವಭಾವದವರು. ಯಾರಿಗೂ ನೋವಾಗದ ಹಾಗೆ ನಡೆದುಕೊಳ್ಳುತ್ತಿದ್ದರು.ಆದರೆ ರೆಬೆಲ್ ಸ್ಟಾರ್ ಇವೆಲ್ಲದಕ್ಕೂ ತದ್ವಿರುದ್ದ. ಸೀದಾಸಾದಾ ಮನುಷ್ಯ. ಬಿರುದಿಗೆ ತಕ್ಕಂತೆ ರೆಬೆಲ್ ಆಗಿರುತ್ತಿದ್ದರು. ಅಂತಹ ಅಂಬಿಯನ್ನು ವಿಷ್ಣು ಹಚ್ಚಿಕೊಂಡಿದ್ದರು.

ಅಂಬರೀಷ್ ಕೂಡ ವಿಷ್ಣುವನ್ನು ಜೀವದ ಗೆಳೆಯನನ್ನಾಗಿ ಮಾಡಿಕೊಂಡಿದ್ದರು. ಸಾಹಸಸಿಂಹ ಕಣ್ಮುಚ್ಚಿದಾಗ ಅದೆಲ್ಲಿಂದಲೋ ಅಂಬಿ ಓಡೋಡಿ ಬಂದಿದ್ದರು. ಎಳೇ ಮಗುವಿನಂತೆ ಕಣ್ಣೀರಿಟ್ಟದ್ದರು. ಆಪ್ತಮಿತ್ರನನ್ನು ನೋಡಿ ಒಡಹುಟ್ಟಿದವರಿಗಿಂತಲೂ ಹೆಚ್ಚಾಗಿ ರೋಧಿಸಿದ್ದರು. ಅಂದೇ ರೆಬೆಲ್ ಸ್ಟಾರ್ ಆಗಿ ಮೆರೆದ ಕರುನಾಡ ಕರ್ಣನ ಮುಗ್ಧತೆ ಹೊರ ಜಗತ್ತಿಗೆ ಗೊತ್ತಾಗಿದ್ದು. ವಿಷ್ಣುದಾದ ಹೇಳಿದ ಮಾತು ಅಕ್ಷರಶಃ ಸತ್ಯವಾಗಿತ್ತು ಎಂಬುದು ಇಡೀ ಜಗತ್ತಿಗೆ ತಿಳಿದು ಬಂದಿದ್ದು. ವಿಷ್ಣುವರ್ಧನ್​ ಜೀವನದ ಕೊನೆ ದಿನಗಳಲ್ಲಿ ಆಧ್ಯಾತ್ಮಿಕ ಆಸಕ್ತಿ ಹೊಂದಿದ್ದರು.

ಸದಾ ಕಾಲ ತಾನು ಚೆನ್ನಾಗಿ ಕಾಣಬೇಕು, ಲೆದರ್ ಜಾಕೆಟ್ ಧರಿಸಬೇಕೆಂದಿದ್ದವರು ಕಾಲಕಳೆದಂತೆ ಬಿಳಿ ವಸ್ತ್ರ ಧಾರಿಯಾಗಿ ಸಾಯಿಬಾಬನಂತೆ ಕಾಣುತ್ತಿದ್ದರು. ಜೀವನದಲ್ಲಿ ಲೌಕಿಕ ಬದುಕು ನಶ್ವರ ಎಂಬ ಭಾವನೆ ಅವರಲ್ಲಿ ಇತ್ತು ಆದ ಕಾರಣ ಅಲೌಕಿಕ ಬದುಕು ಅರಸುತ್ತಾ ಆಧ್ಯಾತ್ಮಿಕ ಬನ್ನಂಜೆ ಗೋವಿಂದಾಚಾರ್ಯರನ್ನು ಗುರುಗಳಾಗಿ ಸ್ವೀಕರಿಸಿದ್ದರು. ಅಷ್ಟೇ ಅಲ್ಲ ವಿಷ್ಣುವರ್ಧನ್ ಸಂಖ್ಯಾ ಭವಿಷ್ಯವನ್ನು ಹೆಚ್ಚು ನಂಬುತ್ತಿದ್ದರು. ಹೀಗಾಗಿ ವಿಷ್ಣುದಾದ ಕಾರಿನ ಹಾಗೂ ಮೊಬೈಲ್ ನಂ.321 ನಿಂದ ಕೂಡಿರುತ್ತಿತ್ತು.

ಅದರೊಂದಿಗೆ ಅವರು ಜಯನಗರದ ಒಂದು ಮನೆ ಬಿಟ್ಟರೆ ಉಳಿದಂತೆ ಯಾವುದೇ ಆಸ್ತಿ ಮಾಡಿಲ್ಲವೆಂದು ಒಂದು ಬಳಗ ಹೇಳಿದರೆ ಇನ್ನೂಂದು ಬಳಗ ಅವರು ಲೆದರ್ ಬಿಸಿನೆಸ್ ಮಾಡಲು ಹೋಗಿ ಲಾಸ್ ಆದರೂ ಹಾಗಾಗಿ ಆಸ್ತಿ ಅಷ್ಟಾಗಿ ಅವರ ಹೆಸರಲಿಲ್ಲ ಎಂಬ ಅಭಿಪ್ರಾಯ ತಿಳಿದು ಬಂದಿದೆ‌. ಅವರು ಅಗಲಿದ ಬಳಿಕ ಅವರ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಬಂದಿದ್ದು ಬಳಿಕ ಸರಿಯಾಗಿದೆ ಅಂತೆ. ಒಟ್ಟಾರೆಯಾಗಿ ನಾವೆಷ್ಟು ಆಸ್ತಿ‌ಮಾಡಿದರು ಸಾಯುವ ಕೊನೆ ಕ್ಷಣಕ್ಕೆ ಯಾವುದು ಬರುವುದಿಲ್ಲ. ಪ್ರೀತಿಯೊಂದೆ ಶಾಶ್ವತ ಎನ್ನಲು ವಿಷ್ಣು ಬದುಕೆ ನಿದರ್ಶನವಾಗಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪಾದೆ ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *