ಕನ್ನಡ ಚಿತ್ರರಂಗದ ಸ್ಟಾರ್ ನಟರ ಹುಟ್ಟೂರು ಯಾವುದು ನಿಮಗೆ ಗೊತ್ತಾ.? ನೋಡಿ ಸಂಪೂರ್ಣ ಮಾಹಿತಿ

ಸುದ್ದಿ

ನಮಸ್ತೆ ಪ್ರೀತಿಯ ಓದುಗರೇ ಇಂದು ನಾವು ನಿಮಗೆ ನಮ್ಮ ಕನ್ನಡ ಚಿತ್ರರಂಗದ ಸ್ಟಾರ್ ನಟರ ಹುಟ್ಟೂರು ಯಾವುದು ಎಂಬುದು ನಿಮಗೆ ಈ ಲೇಖನದಲ್ಲಿ ತಿಳಿಸುತ್ತೇವೆ ಬನ್ನಿ. ಕನ್ನಡ ಚಿತ್ರರಂಗದಲ್ಲಿ ಅನೇಕ ಸ್ಟಾರ್ ನಟ ನಟಿಯರು ತಮ್ಮ ನಟನೆಯಿಂದ ಬದುಕನ್ನು ಕಟ್ಟಿಕೊಂಡಿದ್ದಾರೆ. ಹೆಚ್ಚಿನ ನಟರಿಗೆ ಈ ಚಿತ್ರರಂಗವು ಕೈ ಹಿಡಿದಿದೆ.
ಎಷ್ಟೋ ಹೊಸ ಪ್ರತಿಭೆಗಳು ಬಂದು ಸ್ಟಾರ್ ನಟರಾಗಿ ಹೊರಹೋಮ್ಮಿದ್ದಾರೆ. ಪ್ರತಿಯೊಂದು ಸ್ಟಾರ್ ನಟನಿಗೂ ಅವರದ್ದೇ ಆದ ಅಭಿಮಾನ ಬಳಗಾವಿದೆ ಆ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನ ಸ್ವಂತ ಹುಟ್ಟುರು ಯಾವುದು ಎಂಬುದು ತಿಳಿಯುವ ಕುತೂಹಲ ಇದ್ದೆ ಇರುತ್ತದೆ. ಹಾಗೆ ನಿಮಗೆ ಇಂದು ನಿಮ್ಮ ನೆಚ್ಚಿನ ನಟನ ಹುಟ್ಟೂರು ಯಾವುದು ಎಂಬುದನ್ನು ಹೇಳುತ್ತೇವೆ ಬನ್ನಿ. ಸ್ಯಾಂಡಲ್ವುಡ್ ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದೇ ಖ್ಯಾತಿ ಹಿಂದಿರುವ ದರ್ಶನ್ ಕನ್ನಡ ಚಿತ್ರರಂಗದ ಪ್ರಮುಖ ನಟ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡವರು.

ಬಾಕ್ಸ್ ಆಫೀಸ್ ಸುಲ್ತಾನ್ ದಾಸ ಎಂದೇ ಅಭಿಮಾನಿಗಳು ಕರೆಯುತ್ತಾರೆ. ಕನ್ನಡ ಚಿತ್ರರಂಗದ ಹಿರಿಯ ನಟ ತೂಗುದೀಪ ಶ್ರೀನಿವಾಸ್ ಅವರ ಹಿರಿಯ ಪುತ್ರ ತಮ್ಮ ಸಿನಿ ಜರ್ನಿಯಲ್ಲಿ ಸುಮಾರು ಐವತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡ ಸಿನಿ ರಸಿಕರ ಬಹು ಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ.
ನಟ ದರ್ಶನ್ ಅವರು 1977 ರ ಫೆಬ್ರವರಿ 16 ಶಿವರಾತ್ರಿಯ ದಿನದಂದು ಮದ್ಯಾಹ್ನ ಪೊನ್ನಪೇಟೆಯ ರಾಮಕೃಷ್ಣ ಸೇವಾಶ್ರಮದಲ್ಲಿ ತೂಗುದೀಪ ಶ್ರೀನಿವಾಸ್ ಮತ್ತು ಮೀನಾ ದಂಪತಿಗಳ ಹಿರಿಯ ಪುತ್ರನಾಗಿ ಹುಟ್ಟಿದರು. ದರ್ಶನ್ ಅವರ ಬಾಲ್ಯದ ಹೆಸರು ಹೇಮಂತ್ ಕುಮಾರ್. ಬಾಲ್ಯದ ವಿದ್ಯಾಭ್ಯಾಸ ಮುಗಿಸಿದ್ದೆಲ್ಲ ಮೈಸೂರಿನಲ್ಲಿಯೇ. ನಂತರ ಸಿನಿಮಾರಂಗದಲ್ಲಿ ಸಕ್ರಿಯರಾಗುವ ಮೂಲಕ ನಾಯಕ ನಟನಾಗಿ ಅತೀ ದೊಡ್ಡ ಮಟ್ಟದಲ್ಲಿ ಬೆಳೆದರೂ. ಈಗ ದರ್ಶನ್ ಸದ್ಯಕ್ಕೆ ಕ್ರಾಂತಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಚಿತ್ರರಂಗದಲ್ಲಿ ರೋರಿಂಗ್ ಸ್ಟಾರ್ ಶ್ರೀ ಮುರಳಿ ಎಂದೇ ಖ್ಯಾತಿ ಪಡೆದಿರುವ ಇವರ ಬಗ್ಗೆ ಎಲ್ಲರಿಗೂ ಗೊತ್ತು 1981 ರ ಡಿಸೇಂಬರ್ 17 ರಂದು ಬೆಂಗಳೂರಿನಲ್ಲಿ ಇವರು ಜನಿಸಿದರು. ಇವರ ತಂದೆ ಚೆನ್ನೆಗೌಡರ ಕನ್ನಡ ಚಿತ್ರರಂಗದ ಒಬ್ಬ ಪ್ರಮುಖ ನಿರ್ಮಾಪಕರು ಮತ್ತು ಅಣ್ಣಾವ್ರು ರ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಅವರ ಸಹೋದರರು. ಶ್ರೀ ಮುರಳಿ ಅವರ ಅಣ್ಣ ಇವರು ಸಿನೆಮಾ ಕ್ಷೇತ್ರ ಹಾಗೂ ರಿಯಾಲಿಟಿ ಶೋ ಗಳಲ್ಲಿ ಬಹುಬೇಡಿಕೆಯ ನಟನಾಗಿ ಕಾಣಿಸಿಕೊಂಡಿದ್ದಾರೆ.
ಇತ್ತೀಚಿಗೆ ಬಿಡುಗಡೆಯದ ಕೆಜಿಎಫ್ 2 ಚಿತ್ರದ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿರುವ ರಾಕಿಂಗ್ ಸ್ಟಾರ್ ಯಶ್ ಅವರು ನಿಮಗೆ ಗೊತ್ತೇ ಇದೆ ಯಶ್ ಅವರು ಬರೇ ನಟನೆ ಮಾತ್ರ ಅಲ್ಲದೇ ಸಮಾಜಮುಖಿ ಕೆಲಸಗಳಲ್ಲಿ ಯಶ್ ಅವರು ಸಾಕಷ್ಟು ಸುದ್ಧಿಯಲ್ಲಿ ಇದ್ದರು. 1986 ರಲ್ಲಿ ಜನವರಿ 8ರಂದು ಹಾಸನ ಜಿಲ್ಲೆಯ ಭುವನಹಳ್ಳಿಯಲ್ಲಿ ಅರುಣ್ ಕುಮಾರ್ ಮತ್ತು ಪುಷ್ಪ ದಂಪತಿಗಳ ಮಗನಾಗಿ ಯಶ್ ಜನಿಸಿದರು. ಯಶ್ ಅವರ ಬಾಲ್ಯದ ಹೆಸರು ನವೀನ್ ಕುಮಾರ್ ಗೌಡ. ಯಶ್ ಅವರ ತಂದೆ ಬೆಂಗಳೂರಿನಲ್ಲಿ ಸರ್ಕಾರಿ ಬಸ್ ಚಾಲಕರಾಗಿ ಇಂದಿಗೂ ಸೇವೆ ಸಲ್ಲಿಸುತ್ತಿದ್ದಾರೆ.

ಮಗ ದೊಡ್ಡ ಸ್ಟಾರ್ ಆದರೂ ಕಿಂಚಿತ್ತೂ ದೊಡ್ಡತನ ಇಲ್ಲದೆ ಎಲ್ಲರೊಂದಿಗೆ ಇದ್ದಾರೆ. ಯಶ್ ಅವರು ಮೊದಲು ಬಾರಿಗೆ ಕಿರುತೆರೆಯಲ್ಲಿ ಮೊದಲ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಸಿನಿಮಾದಲ್ಲಿಯೂ ನಟಿಸಿದ್ದರು. ಮೊದಲು ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಂಡರು. ಆ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು ನಂತರ ಯಶ್ ಅವರು ಹಿಂತ್ತಿರುಗಿ ನೋಡಿದ್ದೇ ಇಲ್ಲ. ಕೆಜಿಎಫ್ 2 ಹಿಟ್ ಆದ ಬಳಿಕ ಯಶ್ ಅವರ ಪಾಲಿಗೆ ಸಿಕ್ಕಾಪಟ್ಟೆ ಆಫರ್ಸ್ ಗಳು ಬರುತ್ತಿದೆ.
ದೊಡ್ಮನೆ ಕುಟುಂಬದ ಕುಡಿ ಕರುನಾಡ ಚಕ್ರವರ್ತಿ ಶಿವಣ್ಣ ಇವರು ಹ್ಯಾಟ್ರಿಕ್ ಹೀರೊ ಎಂದೇ ಸ್ಯಾಂಡಲ್ವುಡ್ ನಲ್ಲಿ ಹೆಸರು ಗಳಿಸಿದ್ದಾರೆ. ಶಿವಣ್ಣ ಅವರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಸುಮಾರು ಮೂರು ದಶಕಗಳಿಂದ ನೂರಿಪ್ಪಾತೈದುಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರ ಮನಗೆದ್ದಿದ್ದಾರೆ. ಡಾ. ರಾಜಕುಮಾರ್ ಅವರ ಹಿರಿಯ ಪುತ್ರ. 1961 ಜೂಲೈ 12 ರಂದು ಮುದ್ರಾಸಿನ ಕಲ್ಯಾಣಿ ಹಾಸ್ಪಿಟಲ್ ನಲ್ಲಿ ಸಂಜೆ 6 ಗಂಟೆಗೆ ಜನಿಸಿದರು. ಇನ್ನು ಇನ್ನು ಶಿವಣ್ಣ ಅವರು ಬಾಲ್ಯದಲೇ ಇರುವಾಗಲೇ ಅವರಿಗೆ ಮಲಯಾಳಂ ಚಿತ್ರದಲ್ಲಿ ನಟಿಸಲು ಆಫರ್ ಬಂದಿತ್ತು. ಅವರ ತಾಯಿ ಮಗ ಡಿಗ್ರಿ ಮುಗಿಸಿದ ಮೇಲೆ ಸಿನೆಮಾ ರಂಗಕ್ಕೆ ಹೋಗಲಿ ಎಂದು ಹೇಳಿದ್ದರು. 1986 ರಲ್ಲಿ ಶ್ರೀನಿವಾಸ್ ರಾವ್ ನಿರ್ದೇಶನದ “ಆನಂದ” ಚಿತ್ರದಲ್ಲಿ ನಟಿಸಿ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳ ದಂಡನ್ನೇ ಹೊಂದಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರ ನಮ್ಮ ಸ್ಯಾಂಡಲ್ವುಡ್ ನಲ್ಲಿ ನಾಯಕ ನಟರಾಗಿ ಸಕ್ರಿಯರಾಗಿದ್ದರು. ಕರ್ನಾಟಕದ ಜನರು ಅಪ್ಪು ಎಂದೇ ಕರೆಸಿಕೊಳ್ಳುವ ಪುನೀತ್ ನಟರಾಗಿ ಮಾತ್ರವಲ್ಲದೆ ಗಾಯಕರಾಗಿ, ನಿರ್ಮಾಪಕರಾಗಿಯೂ ಗುರುತಿಸಿ ಕೊಂಡವರು. ಸುಮಾರು ನಾಲ್ಕು ದಶಕಗಳ ತಮ್ಮ ಸಿನಿ ಜೀವದಲ್ಲಿ ಬಾಲ ಕಲಾವಿದನ 14 ಮತ್ತು ನಾಯಕನಾಗಿ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 1975 ರಲ್ಲಿ ಮಾರ್ಚ್ 17 ರಂದು ಚನ್ನೈ ನ ಕಲ್ಯಾಣಿ ಹಾಸ್ಪಿಟಲ್ ನಲ್ಲಿ ಪಾರ್ವತಮ್ಮ ನವರ ಕಿರಿಯ ಪುತ್ರನಾಗಿ ಜನಿಸಿದರು. ಇನ್ನು ಪುನೀತ್ ರಾಜ್ ಕುಮಾರ್ ಅವರು ಆರು ತಿಂಗಳು ಮಗುವಿದ್ದಾಗ 76 ರಲ್ಲಿ ತೆರೆಕಂಡ ” ಪ್ರೇಮದ ಕಾಣಿಕೆ ” ಚಿತ್ರದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಸಾಕಷ್ಟು ಚಿತ್ರಗಳಲ್ಲಿ ಬಾಲನಟನಾಗಿ ಕಾಣಿಸಿಕೊಂಡರು. ಮೊದಲು ಅಪ್ಪು ಚಿತ್ರದ ಮೂಲಕ ನಾಯಕ ನಟನಾಗಿ ಕಾಣಿಸಿಕೊಂಡರು. ಅದಾದ ಬಳಿಕ ಅಪ್ಪು ಅವರ ಕೊನೆಯ ಚಿತ್ರ ಜೇಮ್ಸ್ ಕಳೆದ ಮಾರ್ಚ್ ನಲ್ಲಿ ತೆರೆಕಂಡು ಒಳ್ಳೆಯ ಹೆಸರು ಗಳಿಸಿತ್ತು. ಕಳೆದ ಅಕ್ಟೊಬರ್ 29 ರಂದು ನಮ್ಮ ಪ್ರೀತಿಯ ಅಪ್ಪು ಅವರು ನಿಧಾನರಾದರು.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಾಹುಬಷ ಚಿತ್ರಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಇವರು ಸಂಜೀವ್ ಮಂಜಪ್ಪ ಮತ್ತು ಸರೋಜ ದಂಪತಿಗಳ ಮುದ್ದು ಮಗನಾಗಿ ಸೆಪ್ಟೆಂಬರ್ 1973 ರಲ್ಲಿ ಹುಟ್ಟಿದರು. ಇವರ ಹುಟ್ಟೂರು ಶಿವಮೊಗ್ಗ. ಕಿಚ್ಚ ಸುದೀಪ್ ಅವರು ಓದಿರೋದು ದಯಾನಂದ ಸಾಗರ್ ಕಾಲೇಜು ನಲ್ಲಿ ಕಿಚ್ಚ ಸುದೀಪ್ ಅವರು ಉದಯ ಟಿವಿ ಯಲ್ಲಿ ಪ್ರಸಾರವಾಗುತ್ತಿದ್ದ ‘ಪ್ರೇಮದ ಕಾದಂಬರಿ’ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಸುದೀಪ್ ಅವರು ತಯಾತ್ವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇದೀಗ ಕಿಚ್ಚ ಸುದೀಪ್ ಅವರು ಬಹುಬೇಡಿಕೆಯ ನಟನಾಗಿ ಬೆಳೆದಿದ್ದರೆ. ಹೀಗೆ ನಮಗೆ ಗೊತ್ತಿರುವ ಹಾಗೆ ಸಾಕಷ್ಟು ನಾಯಕ ನಟರು ಬದುಕನ್ನು ಕಟ್ಟಿಕೊಂಡಿದ್ದಾರೆ.


Leave a Reply

Your email address will not be published. Required fields are marked *