ಕಬ್ಜಾ ಚಿತ್ರತಂಡದಿಂದ ಶಾಕಿಂಗ್ ನ್ಯೂಸ್; ಚಿತ್ರದಿಂದ ಹೊರ ಬಂದ ಕಿಚ್ಚ ಸುದೀಪ್, ಕಾರಣ ಏನು ಗೊತ್ತಾ..!?

ಸುದ್ದಿ

ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಬಾಹುಬಲಿ ಹಾಗೂ ಕೆಜಿಎಫ್ ಸರಣಿ ಚಿತ್ರಗಳು ಬಿಡುಗಡೆಯಾದ ಮೇಲೆ ಪ್ಯಾನ್ ಇಂಡಿಯಾ ಸಿನಿಮಾಗಳ ತಯಾರಿಕೆ ಹಾಗೂ ಬಿಡುಗಡೆ ಜಾಸ್ತಿಯಾಗುತ್ತಿದೆ. ಅದರಲ್ಲೂ ಬೇರೆ ಚಿತ್ರರಂಗಗಳಿಗೆ ಹೋಲಿಸಿದರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಎಲ್ಲದಕ್ಕಿಂತ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಪಂಚಭಾಷಾ ಚಿತ್ರ ಎಂದ ಮೇಲೆ ಅದಕ್ಕೆ ತಕ್ಕಂತೆ ಕಂಟೆಂಟ್ ಹಾಗೂ ಮೇಕಿಂಗ್ ಕೂಡ ಇರಬೇಕಾಗುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಹಲವಾರು ಪಂಚಭಾಷಾ ಸಿನಿಮಾಗಳ ಘೋಷಣೆ ನಡೆದಿದೆ.

ಅವುಗಳಲ್ಲಿ ಕಬ್ಜಾ ಚಿತ್ರ ಕೂಡ ಒಂದು. ಐ ಲವ್ ಯು ಸಿನಿಮಾದ ನಂತರ ಆರ್ ಚಂದ್ರು ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವಂತಹ ಚಿತ್ರ ಇದು. ಈಗಾಗಲೇ ರಿಯಲ್ ಸ್ಟಾರ್ ಉಪೇಂದ್ರ ರವರ ಹಲವಾರು ಫಸ್ಟ್ ಲುಕ್ ಪೋಸ್ಟರ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದ್ದು ಸಿನಿಮಾ ಪ್ರೇಕ್ಷಕರಿಗೆ ಚಿತ್ರದ ಕುರಿತಂತೆ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ. ಚಿತ್ರದಲ್ಲಿ ಪರಭಾಷ ನಾಯಕಿಯರು ಕೂಡ ಇದ್ದಾರೆ. ಈಗಾಗಲೇ ನಟಿ ಶ್ರೇಯಾ ಶರಣ್ ರವರ ಫಸ್ಟ್ ಲುಕ್ ಬಿಡುಗಡೆಯಾಗಿರುವುದು ನಿಮಗೆಲ್ಲ ಗೊತ್ತಿದೆ. ಸ್ವಾತಂತ್ರ್ಯ ನಂತರದ ಕಾಲಘಟ್ಟದಲ್ಲಿ ಈ ಸಿನಿಮಾ ಸಾಗಿಬರುತ್ತದೆ.

ಇನ್ನು ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ರವರ ಜೊತೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು ಕಿಚ್ಚ ಸುದೀಪ್ ರವರು ಭಾರ್ಗವ್ ಭಕ್ಷಿಯನ್ನುವ ಪ್ರಮುಖ ಪಾತ್ರದಲ್ಲಿ ಕಬ್ಜಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಕಿಚ್ಚ ಸುದೀಪ್ ರವರ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ. ಕೆಲವು ದಿನಗಳ ಶೂಟಿಂಗ್ ನಲ್ಲಿ ಕೂಡ ಕಿಚ್ಚ ಸುದೀಪ್ ರವರು ಕಾಣಿಸಿಕೊಂಡಿದ್ದಾರೆ. ಆದರೆ ಈಗ ಕಿಚ್ಚ ಸುದೀಪ್ ಹಾಗೂ ಕಬ್ಜಾ ಚಿತ್ರದ ಕುರಿತಂತೆ ಯಾರೂ ಕೂಡ ಊಹಿಸಲಾಗದಂತಹ ಗಾಳಿಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಹಾಗಿದ್ದರೆ ಆ ಗಾಳಿಸುದ್ದಿ ಅಥವಾ ಗಾಸಿಪ್ ಏನು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಗೆಳೆಯರೆ ಗಾಳಿಸುದ್ದಿಯ ಪ್ರಕಾರ ಕಿಚ್ಚ ಸುದೀಪ್ ರವರು ಕಬ್ಜಾ ಚಿತ್ರದಿಂದ ಹೊರ ಬಂದಿದ್ದಾರೆ ಎಂಬ ಮಾಹಿತಿಗಳು ಕೇಳಿಬರುತ್ತಿವೆ. ಹೌದು ಈಗಾಗಲೇ ಕಿಚ್ಚ ಸುದೀಪ್ ರವರು ಹಲವಾರು ದಿನಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಲಾಕ್ಡೌನ್ ಕೂಡ ಇದ್ದ ಕಾರಣ ಚಿತ್ರದ ಚಿತ್ರೀಕರಣ ಎನ್ನುವುದು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತಿತ್ತು ಇದೇ ಕಾರಣದಿಂದಾಗಿ ಕಿಚ್ಚ ಸುದೀಪ್ ರವರ ಬಿಲ್ಡಪ್ ದೃಶ್ಯಗಳನ್ನು ಚಂದ್ರುರವರು ಡ್ಯೂಪ್ ಹಾಕಿಕೊಂಡು ಚಿತ್ರೀಕರಿಸಿದ್ದಾರೆ. ಆದರೆ ನಿರ್ದೇಶಕ ಚಂದ್ರುರವರು ಕಿಚ್ಚ ಸುದೀಪ್ ರವರಿಗೆ ತಿಳಿಸದೆ ಇಂತಹ ಕೆಲಸವನ್ನು ಮಾಡಿದ್ದಾರೆ. ಹೀಗಾಗಿ ನಿರ್ದೇಶಕರ ವಿರುದ್ಧ ಅಸಮಾಧಾನಗೊಂಡಿರುವ ಕಿಚ್ಚ ಸುದೀಪ್ ರವರು ಚಿತ್ರೀಕರಣದಿಂದ ಹೊರಬಂದಿದ್ದಾರೆ ಎಂಬುದಾಗಿ ಸುದ್ದಿ ಕೇಳಿ ಬಂದಿದೆ. ಮುಂದಿನ ದಿನಗಳಲ್ಲಿ ಇದು ಎಷ್ಟು ಸತ್ಯ ಹಾಗೂ ಸುಳ್ಳು ಎಂಬುದನ್ನು ಕಾದುನೋಡಬೇಕಾಗಿದೆ.


Leave a Reply

Your email address will not be published. Required fields are marked *