ಕಬ್ಜ ಸಿನಿಮಾವನ್ನು ಕೆಜಿಎಫ್ ಗೆ ಹೋಲಿಕೆ ಮಾಡುವವರಿಗೆ ಖಡಕ್ ಉತ್ತರ ಕೊಟ್ಟ ರಿಯಲ್ ಸ್ಟಾರ್ ಉಪೇಂದ್ರ.! ಉಪ್ಪಿ ಉತ್ತರಕ್ಕೆ ನೆಟ್ಟಿಗರು ಗಪ್ ಚುಪ್, ಹೇಳಿದ್ದೇನು ಗೊತ್ತಾ?

ಸುದ್ದಿ

ಸ್ಯಾಂಡಲ್ವುಡ್ ನಲ್ಲಿ ಸಾಕಷ್ಟು ಫ್ಯಾನ್ ಇಂಡಿಯಾ ಸಿನೆಮಾಗಳು ತೆರೆಗೆ ಬಂದು ಕನ್ನಡ ಸಿನೆಮಾ ರಂಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಸದ್ಯಕ್ಕೆ ಇಡೀ ಸಿನಿ ಲೋಕದಲ್ಲಿ ಸದ್ದು ಮಾಡುತ್ತಿರುವ ಬಹುನಿರೀಕ್ಷಿತ “ಕಬ್ಜ” ಸಿನೆಮಾ ಈಗಾಗಲೇ ಸಿನಿಪ್ರೇಕ್ಷಕರನ್ನು ಕುತೂಹಲ ಕೆರಳಿಸಿದೆ. ರೆಟ್ರೋ ಶೈಲಿಯಲ್ಲಿ ಮೂಡಿ ಬರುತ್ತಿರುವ ಚಿತ್ರ ಇದಾಗಿದ್ದು ಭೂಗತ ಲೋಕದ ಕಥೆಯನ್ನು ಆಧರಿಸಿದೆ. ಅಷ್ಟೇ ಅಲ್ಲದೇ, ಈ ಸಿನೆಮಾವು 70 ಕೋಟಿ ವೆಚ್ಚದಲ್ಲಿ ಸಿನೆಮಾ ನಿರ್ಮಾಣ ಮಾಡಲಾಗಿದೆ. ಇನ್ನು 1970-80ರಲ್ಲಿ ನಡೆವ ಕಥೆ ಹೊಂದಿದ್ದು ಉಪೇಂದ್ರ ಮಾಫಿಯಾ ಡಾನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರವು ಕನ್ನಡ ಸೇರಿದಂತೆ ಸುಮಾರು ಒಂಬತ್ತು ಭಾಷೆಯಲ್ಲಿ ಮೂಡಿ ಬರಲಿದೆ. ಈ ಸಿನೆಮಾಕ್ಕೆ ಆರ್. ಚಂದ್ರು ಅವರು ನಿರ್ದೇಶನ ಮಾಡಿದ್ದಾರೆ. ಕಿಚ್ಚ ಸುದೀಪ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಟೀಸರ್ ಮೊನ್ನೆ ಬಿಡುಗಡೆಯಾಗಿದ್ದು, ಟೀಸರ್ ನೋಡಿ ಸಿನೆಮಾವನ್ನು ಕೆಜಿಎಫ್ ಸಿನೆಮಾಕ್ಕೆ ಹೋಲಿಕೆ ಮಾಡಿದ್ದಾರೆ. ಈ ಕುರಿತು ರಿಯಲ್ ಸ್ಟಾರ್ ಉಪೇಂದ್ರ ಅವರು ಏನು ಹೇಳಿದ್ದಾರೆ ನೋಡಿ.

ಕನ್ನಡದಲ್ಲಿ ಸಾಕಷ್ಟು ಸಿನೆಮಾವನ್ನು ನಿರ್ದೇಶನ ಮಾಡಿರುವ ಆರ್ ಚಂದ್ರು ನಿರ್ದೇಶದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಟಿಸಿರುವ “ಕಬ್ಜ” ಸಿನೆಮಾದ ಟೀಸರ್ ಸೆಪ್ಟೆಂಬರ್ 17ರಂದು ಬಿಡುಗಡೆಯಗಿ ಟೀಸರ್ ನಲ್ಲಿ ಕೆಜಿಎಫ್ ಚಿತ್ರದ ಛಾಯೆ ದಟ್ಟವಾಗಿ ಎದ್ದು ಕಾಣುತ್ತಿದೆ. ಕಬ್ಜ ಸಿನೆಮಾದ ಟೀಸರ್ ನೋಡಿದರೆ ಕೆಜಿಎಫ್ ಸಿನೆಮಾ ನೆನಪಾಗುತ್ತದೆ ಪಕ್ಕಾ. ಮೊನ್ನೆ ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ ಅದ್ದೂರಿಯಾಗಿ ಟೀಸರ್ ರಿಲೀಸ್ ಮಾಡಲಾಯಿತು. ಟಾಲಿವುಡ್ ಸ್ಟಾರ್ ನಟ ರಾಣಾ ದಗ್ಗುಬಾಟಿ ಅವರು ಮುಖ್ಯ ಅತಿಥಿಯಾಗಿ ಬಂದು ಟೀಸರ್ ಬಿಡುಗಡೆ ಮಾಡಿದ್ದಾರೆ.

ಸೆಪ್ಟೆಂಬರ್ 18 ರಂದು ನಟ ಉಪೇಂದ್ರ ಅವರ ಹುಟ್ಟುಹಬ್ಬದ ಕಾರಣ, ಸೆಪ್ಟೆಂಬರ್ 17ರಂದು ಟೀಸರ್ ಬಿಡುಗಡೆಯಾಗಿದೆ. ಹೌದು, ಉಪೇಂದ್ರ ಜೊತೆ ಕಿಚ್ಚ ಸುದೀಪ್ ಕೂಡ ನಟಿಸಿದ್ದಾರೆ. ನಾಯಕಿಯಾಗಿ ಶ್ರೀಯಾ ಶರಣ್ ತೆರೆಹಂಚಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅವರ ಗೆಟಪ್ ಕೂಡ ಇದರಲ್ಲಿ ರಿವೀಲ್ ಅಗಿದ್ದು, ಟೀಸರ್ ನೋಡಿ ರಾಣಾ ದಗ್ಗುಬಾಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಈ ಟೀಸರ್ ರಿಲೀಸ್ ಮಾಡಿದ್ದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ.

ಈ ರೀತಿ ದಕ್ಷಿಣ ಭಾರತದ ಸಿನೆಮಾಗಳ ಶಕ್ತಿ ಇಡೀ ಪ್ರಪಂಚಕ್ಕೆ ತಿಳಿಯಬೇಕು. ಕಬ್ಜ ಚಿತ್ರತಂಡಕ್ಕೆ ಒಳ್ಳೆದಾಗಲಿ. ಉಪೇಂದ್ರ, ಸುದೀಪ್, ಶ್ರೀಯಾ ಶರಣ್ ರೀತಿಯ ಕಲಾವಿದರು ಇರುವುದು ಈ ಚಿತ್ರದ ಬಲ. ನಿರ್ದೇಶಕ ಚಂದ್ರು ಎಲ್ಲರ ಪಾತ್ರವನ್ನು ತೋರಿಸಿರುವ ರೀತಿ ನನ್ನ ಗಮನ ಸೆಳೆಯಿತು. ಹಿನ್ನಲೆ ಸಂಗೀತ ನನ್ನ ಕಿವಿಯಲ್ಲಿ ಇನ್ನು ಗುನುಗುತ್ತಿದೆ’ ಎಂದು ರಾಣಾ ದಗ್ಗುಬಾಟಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ಈ ವೇಳೆಯಲ್ಲಿ ಸಿನೆಮಾದಲ್ಲಿ ಸುದೀಪ್ ಅವರ ಪಾತ್ರದ ಬಗ್ಗೆ ನಿರ್ದೇಶಕ ಆರ್ ಚಂದ್ರು ಮಾತನಾಡಿದ್ದು, ಈ ಸಿನೆಮಾದಲ್ಲಿ ಸುದೀಪ್ ಅವರು ಡೈಮಂಡ್ ತರಹದ ಪಾತ್ರ ಮಾಡಿದ್ದಾರೆ.

ಸಾಕಷ್ಟು ಸುರ್ಪ್ರೈಸ್ ಗಳು ಈ ಚಿತ್ರದಲ್ಲಿ ಇದೇ ಎಂದು ಹೇಳುತ್ತಾ, ಸಿನೆಮಾದ ಕುರಿತಾಗಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. “ಕಬ್ಜ” ಸಿನೆಮಾದ ಟೋನ್ ಕೆಜಿಎಫ್ ಸಿನೆಮಾ ಸರಣಿಯನ್ನೇ ಹೋಲುತ್ತಿದೆ. ಹೌದು, ಕೆಜಿಎಫ್ ಮಾದರಿಯಲ್ಲಿಯೇ ಮಹಾತ್ವಾಕಾಂಕ್ಷಿ ಬಾಲಕ, ಆತನ ತಾಯಿ, ಬಾಲ್ಯದಲ್ಲಿ ಬಡತನ, ತಿನ್ನಲು ಉಟಕ್ಕೂ ಪರದಾಟ, ಹುಡುಗ ಗ್ಯಾಂಗ್ ಸ್ಟಾರ್ ಆಗುವುದು, ಕೆಟ್ಟವರೇ ತುಂಬಿರುವ ಕಪ್ಪು ಮಣ್ಣಿನ ಊರು, ಅಲ್ಲೊಬ್ಬ ದೈತ್ಯ ವಿಲನ್ ಅವನನ್ನು ಕೊಲ್ಲುವ ನಾಯಕ ಇದೇ ಕಥೆಯನ್ನು ಕಬ್ಜ ಸಹ ಒಳಗೊಂಡಿದೆ ಎನ್ನುವುದು ಟೀಸರ್ ನಿಂದಲೇ ತಿಳಿಯುತ್ತದೆ

ಇನ್ನು ಕೆಜಿಎಫ್ ಸಿನೆಮಾದ ಕೆಲವು ಮುಖ್ಯ ದೃಶ್ಯಗಳಿಗೂ “ಕಬ್ಜ” ಸಿನೆಮಾದಲ್ಲಿ ತೋರಿಸಲಾಗಿರುವ ದೃಶ್ಯಗಳಿಗೂ ಬಹಳಷ್ಟು ಹೋಲಿಕೆ ಇದೆ. ‘ಕಬ್ಜ’ ಸಿನೆಮಾದ ಟೀಸರ್ ಪ್ರೆಸೆಂಟೇಷನ್ ಕೂಡ ಕೆಜಿಎಫ್ 2 ಸಿನೆಮಾದ ಟ್ರೈಲರ್ ಪ್ರೆಸೆಂಟೇಷನ್ ಮಾದರಿಯಲ್ಲೇ ಇದೆ. ಸಂಭಾಷಣೆ ಇಲ್ಲದೆ, ಕೇವಲ ಬಂ-ದೂ-ಕಿ-ನ ಶೂಟ್ ಮಾಡುವ ಶಬ್ದವನ್ನಷ್ಟೇ ಟೀಸರ್ ನ ಹಿನ್ನೆಲೆ ಸಂಗೀತವಾಗಿ ಬಳಸಲಾಗಿದೆ.

ಅದರ ಜೊತೆಗೆ, ಇನ್ಸ್ಟುಮೆಂಟ್ ಸಂಗೀತದ ಬಳಕೆಯಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಕೂಡ ಆರಂಭವಾಗಿದೆ. ಈ ಕುರಿತು ರಿಯಲ್ ಸ್ಟಾರ್ ಉಪೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದು, ಈ ಸಿನೆಮಾವನ್ನು ಕೆಜಿಎಫ್ ಗೆ ಹೋಲಿಕೆ ಮಾಡ್ತಾ ಇದ್ದಾರೆ. ಕೆಜಿಎಫ್ ಗೆ ಹೋಲಿಕೆ ಮಾಡ್ತಾ ಇರುವುದು ಒಂದು ತರಹದಲ್ಲಿ ಸಂತೋಷವೇ.

ಕೆಜಿಎಫ್ ತರಹದ ಕನ್ನಡದಲ್ಲಿ ಇನ್ನೊಂದು ಸಿನೆಮಾ ಮಾಡ್ತೇವೆ ಅಂದ್ರೆ ಹೆಮ್ಮೆ ಪಡುವ ವಿಚಾರ. ಸಿನೆಮಾ ಬಂದ ಮೇಲೆ ಕೆಜಿಎಫ್ ಬೇರೇನೇ ಕಥೆ, ಕಬ್ಜ ಬೇರೇನೇ ಕಥೆ ಅಂತ ಗೊತ್ತಾಗುತ್ತದೆ. ಮೇಕಿಂಗ್ ನೋಡಿದಾಗ ಕೆಜಿಎಫ್ ಸಿನೆಮಾದ ಹಾಗೆ ಕಾಣಿಸುತ್ತದೆ’ ಎಂದಿದ್ದಾರೆ ನೆಟ್ಟಿಗರು. ನೀವು ಕಬ್ಜ ಸಿನೆಮಾದ ಟೀಸರ್ ನೋಡಿದ್ದಲ್ಲಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *