ಕಮಲಿಯ ಹಾಟ್ ಡ್ಯಾನ್ಸ್ ನೋಡಿ ನೆಟ್ಟಿಗರು ಫುಲ್ ಫಿದಾ !

ಸುದ್ದಿ

ಎಷ್ಟೋ ಜನರು ಸಣ್ಣ ವಯಸ್ಸಿನಿಂದಲೂ ನಾನೊಬ್ಬ ಒಳ್ಳೆಯ ಕಲಾವಿದನಾಗಬೇಕು ಎಂಬ ಆಸೆ ಇಟ್ಟುಕೊಂಡಿರುತ್ತಾರೆ. ಅದಕ್ಕಾಗಿ ಬೇಕಾದ ಶ್ರಮವನ್ನು ಹಾಕಿ ಕಲಾವಿದರೂ ಆಗುತ್ತಾರೆ. ಆದರೆ ಅವರಿಗೆ ಲಕ್ ಕೈಕೊಟ್ಟಿತು ಎಂದರೆ ಜನಪ್ರೀತಿ ಸಿಗುವುದಿಲ್ಲ. ಕೆಲವೊಬ್ಬರು ಅಚಾನಕ್ಕಾಗಿ ಬಣ್ಣದ ಲೋಕಕ್ಕೆ ಬಂದು ಬಿಡುತ್ತಾರೆ. ಅವರಿಗೆ ಜನರ ಪ್ರೀತಿ ವಿಶ್ವಾಸ ಸಿಗುತ್ತದೆ. ಅವರನ್ನು ಜನರು ತಮ್ಮ ಮನೆಯ ಮಕ್ಕಳ ರೀತಿ ಕಾಣುತ್ತಾರೆ. ಎಲ್ಲಿಯೇ ಹೋದರೂ ಮಾತನಾಡಿಸುತ್ತಾರೆ. ಅಭಿಮಾನಿಸುತ್ತಾರೆ. ಸೆಲ್ಫೀ ತೆಗೆಸಿಕೊಳ್ಳಲು ಮುಗಿಬೀಳುತ್ತಾರೆ. ಕಲಾವಿದರು ಒಮ್ಮೆ ಜನಪ್ರೀತಿ ಗಳಿಸಿದ ನಂತರ ಅವರು ಮಾಡುವ ಸಣ್ಣ ಸಣ್ಣ ಕೆಲಸಗಳು ಸುದ್ದಿಯಾಗುತ್ತದೆ. ಹೀಗೆ ಸದಾ ಕಾಲ ಸುದ್ದಿಯಲ್ಲಿರುವ ನಟಿಯರಲ್ಲಿ ಅಮೂಲ್ಯ ಗೌಡ ಕೂಡ ಒಬ್ಬರು.

ಅಮೂಲ್ಯ ಗೌಡ ಎಂದರೆ ನಿಮಗೆ ಯಾರೆಂದು ಅರ್ಥವಾಗದೇ ಇರಬಹುದು. ಆದರೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರಾವಾಹಿಯ ಕಮಲಿ ಎಂದರೆ ತಕ್ಷಣ ಇವಳೇನಾ? ಎಂದು ಉದ್ಘಾರ ನಿಮ್ಮಿಂದ ಬರದೆ ಇರದು. ಕಮಲಿ ಧಾರಾವಾಹಿ ಈಗಾಗಲೇ ೧೦೦೦ ಕಂತುಗಳನ್ನು ಪೂರೈಸಿ ಮುನ್ನುಗುತ್ತಿದೆ. ಇಂದಿಗೂ ತನ್ನ ವೀಕ್ಷಕರನ್ನು ಅದು ಕಳೆದುಕೊಂಡಿಲ್ಲ. ಕಥಾ ನಾಯಕ ರಿಷಿಗಾಗಿ ಅನಿಕಾ ಕಮಲಿ ವಿರುದ್ಧ ಮಾಡುವ ಕುತಂತ್ರಗಳು, ಕಮಲಿ ಅದನ್ನು ಎದುರಿಸುವುದು ಹೀಗೆ ಕಮಲಿ ಧಾರಾವಾಹಿ ನಡೆಯುತ್ತಿದೆ. ಎಷ್ಟೋ ಜನರು ತೆರೆಯ ಮೇಲೆ ಸಾಂಪ್ರದಾಯಿಕವಾಗಿ ಕಾಣಿಸಿಕೊಳ್ಳುವ ಕಲಾವಿದರು ತೆರೆಯ ಹಿಂದೆಯೂ ಸಾಂಪ್ರದಾಯಕವಾಗಿಯೇ ಇರುತ್ತಾರೆ ಎಂದುಕೊಳ್ಳುತ್ತಾರೆ. ಕೆಲವು ಕಲಾವಿದರು ಅದೇ ರೀತಿ ಇರಬಹುದು. ಆದರೆ ಹೆಚ್ಚಿನ ಕಲಾವಿದರು ಬಹಳ ಮಾಡರ್ನ್ ಆಗಿ ಇರುತ್ತಾರೆ. ಇದಕ್ಕೆ ಬೆಸ್ಟ್ ಉದಾಹರಣೆ ಎಂದರೆ ನಟಿ ಅಮೂಲ್ಯ ಗೌಡ.

ನಟಿ ಅಮೂಲ್ಯ ಗೌಡ ಅವರು ತೆರೆಯ ಮೇಲೆ ಎಷ್ಟು ಫೇಮಸ್ಸೋ ತೆರೆಯ ಹಿಂದೆಯೂ ಕೂಡ ಅಷ್ಟೇ ಫೇಮಸ್ ಆಗಿದ್ದಾರೆ. ಅಮೂಲ್ಯ ಅವರು ಜನಿಸಿದ್ದು ಜನೆವರಿ ೮, ೧೯೯೩ರಲ್ಲಿ. ಮೂಲತಃ ಇವರು ಮೈಸೂರಿನವರು. ತಮ್ಮ ವಿದ್ಯಾಭ್ಯಾಸ ಮುಗಿದ ಬಳಿಕ ೨೦೧೪ರಲ್ಲಿ ಸ್ವಾತಿಮುತ್ತು ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ನಂತರ ಅವರು ಪುನರ್‌ವಿವಾಹ ಎನ್ನುವ ಧಾರಾವಾಹಿಯಲ್ಲಿ ಅಭಿನಯಿಸಿದರಾದರೂ ಅವರಿಗೆ ಹೆಸರು ತಂದುಕೊಟ್ಟಿದ್ದು ಮಾತ್ರ ಕಮಲಿ ಧಾರಾವಾಹಿ. ನಟಿ ಅಮೂಲ್ಯ ಅವರು ಟ್ರೆಡಿಶನ್ ಹಾಗೂ ಮಾಡರ್ನ್ ಯಾವುದೇ ಪಾತ್ರವಾದರೂ ಒಗ್ಗುವಂತಹ ಕಲಾವಿದೆ. ಯಾಕೆಂದರೆ ಕಮಲಿ ಧಾರಾವಾಹಿಯಲ್ಲಿ ಪಕ್ಕಾ ಹಳ್ಳಿಹುಡುಗಿಯ ತರಹ ಕಾಣಿಸಿಕೊಳ್ಳುವ ಅಮೂಲ್ಯ ಅವರು ನಿಜ ಜೀವನದಲ್ಲಿ ಸಖತ್ ಮಾಡರ್ನ್ ಹುಡುಗಿಯಾಗಿದ್ದಾರೆ.ನಿಜಜೀವನದ ಅವರ ಅವತಾರ ನೋಡಿ ಜನ ನಿಬ್ಬೇರಗಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಇವರು ಹಂಚಿಕೊಳ್ಳುವ ಫೋಟೊಗಳನ್ನು ನೋಡಿ ಕಮಲಿ ಧಾರಾವಾಹಿಯಲ್ಲಿ ನಟಿಸುವ ನಟಿ ಇವರೇನಾ ಎಂದು ಮಾತನಾಡಿಕೊಳ್ಳುವಷ್ಟು ಅಚ್ಚರಿ ಪಡುವಂತೆ ಇದ್ದಾರೆ ಅಮೂಲ್ಯ. ಸ್ವಲ್ಪ ಸಮಯ ಬಿಡುವು ಸಿಕ್ಕರೆ ಸಾಕು ಅವರು ಸೋಶಿಯಲ್ ಮಿಡಿಯಾದಲ್ಲಿ ಸಕ್ರಿಯರಾಗಿಬಿಡುತ್ತಾರೆ. ಆಗಾಗ ರೀಲ್ಸ್ ಮಾಡಿ ಹಂಚಿಕೊಳ್ಳುತ್ತ ಇರುತ್ತಾರೆ. ಇದೀಗ ಟ್ರೆಂಡ್ ಹಾಡೊಂದಕ್ಕೆ ನಟಿ ಅಮೂಲ್ಯ ಅವರು ಹಾಟ್ ಡ್ರಸ್ ಹಾಕಿಕೊಂಡು ರೀಲ್ಸ್ ಮಾಡಿ ಸಾಮಾಜಿ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದು ಸಖತ್ ವೈರಲ್ ಆಗಿದೆ. ಇವರೇನಾ ಕಮಲಿ ಧಾರಾವಾಹಿಯಲ್ಲಿ ನಟಿಸುವವರು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಅಷ್ಟು ಹಾಟ್ ಆಗಿ ಕಾಣುತ್ತಿದ್ದಾರೆ ನಟಿ ಅಮೂಲ್ಯ.

ನಟಿ ಅಮೂಲ್ಯ ಎಂದಾಕ್ಷಣ ಗಮನ ಸೆಳೆಯುವುದೇ ಅವರ ಉದ್ದವಾದ ಹಾಗೂ ದಟ್ಟವಾದ ಕೂದಲು. ಯಾವಾಗಲೂ ಕೂದಲನ್ನು ಫ್ರಿಯಾಗಿ ಬಿಟ್ಟಿರುತ್ತಾರೆ. ನಟಿ ಅಮೂಲ್ಯ ಅವರು ಸಿಟಿ ಹುಡುಗಿಯ ಪಾತ್ರಕ್ಕೂ ಸೈ, ಹಳ್ಳಿ ಹುಡುಗಿಯ ರೀತಿ ಲಂಗ-ಧಾವಣಿ ಧರಿಸಲು ಸೈ. ಕಮಲಿ ಧಾರಾವಾಹಿಯಲ್ಲಿ ಅಪ್ಪಟ ಹಳ್ಳಿ ಸೊಗಡಿನ ಮಾತುಗಳನ್ನು ಆಡುವ ಮೂಲಕ ಜನರ ಮನಸ್ಸು ದೋಚಿದ್ದಾರೆ. ಈ ಮೂಲಕ ಕನ್ನಡ ನಾಡಿಗ ಮನೆ ಮಗಳಾಗಿದ್ದಾರೆ.


Leave a Reply

Your email address will not be published. Required fields are marked *