ಕರಾಟೆ ಕಿಂಗ್ ಶಂಕರ್ ನಾಗ್ ಅವರ ಮಗಳು ಹೇಗಿದ್ದಾರೆ ಗೊತ್ತಾ..? ಅವರು ಶುರು ಮಾಡಿರುವ ಹೊಸ ಉದ್ಯಮ ಯಾವುದು ಗೊತ್ತಾ?

ಸುದ್ದಿ

ಕನ್ನಡ ಚಿತ್ರರಂಗದಲ್ಲಿ ಮರೆಯಲಾಗದ ಮಾಣಿಕ್ಯ ಅಂದರೆ ಅದು ನಮ್ಮ ಕರಾಟೆ ಕಿಂಗ್ ಶಂಕರ್ ನಾಗ್ ಅವರು ಶಂಕರ್ ನಾಗ್ ಅವರು ನಮ್ಮನ್ನು ಆಗಲಿ 30ವರ್ಷಗಳೇ ಕಳೆದರು ಇಂದಿಗೂ ಸಹ ನಮ್ಮ ಮನಸ್ಸಿನಲ್ಲಿ ಇಂದಿಗೂ ಅಜರಾಮರ ವಾಗಿದ್ದರೆ. ನವೆಂಬರ್ 9, 1954 ರಂದು ಉತ್ತರ ಕನ್ನಡದ ಹೊನ್ನಾವರದಲ್ಲಿ ಜನಿಸಿದರು. ಅವರು. ತಮ್ಮ ಶಿಕ್ಷಣ ಮುಗಿಸಿ ಮುಂಬೈಗೆ ಹೋದ ನಂತರ ಶಂಕರ್ ನಾಗ್ ಅವರಿಗೆ ಮರಾಠಿ ನಾಟಕಗಳ ಮೇಲೆ ಆಸಕ್ತಿ ಮೂಡಿತು.

ಶಂಕರ್ ನಾಗ್ ಅವರು ನಾಟಕದ ರಿಹರ್ಸಲ್ ಸಮಯದಲ್ಲಿ ಅರುಂಧತಿ ನಾಗ್ ರನ್ನು ಭೇಟಿಮಾಡಿದರು. ಶಂಕರ್ ನಾಗ್ ಅವರು ನಮ್ಮ ಭಾರತ ಚಿತ್ರರಂಗ ಒಂದು ಅದ್ಭುತ ಪ್ರತಿಭೆ. ಶಂಕರ್ ನಾಗ್ ಅವರು ನಟನೆ, ನಿರ್ದೇಶನ, ನಿರ್ಮಾಣ, ಮತ್ತು ಬರಹಗಾರ ಕೂಡ ಹೌದು. ನಮ್ಮ ಕನ್ನಡ ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ. ಅವರ ಚಿತ್ರಗಳನ್ನು ಕಂಡು ಅವರ ಅಭಿಮಾನಿಗಳು ಇಂದಿಗೂ ತಮ್ಮ ನೆಚ್ಚಿನ ನಟನನ್ನು ಕಂಡು ನೆನೆಯುತ್ತಾರೆ.

ಆ ಕಾಲದಲ್ಲಿ ಶಂಕರ್ ನಾಗ್ ಅವರು ಸೀತಾರಾಮು, ಪ್ರೀತಿ ಮಾಡು ತಮಾಷೆ ನೋಡು, ನೋಡಿ ಸ್ವಾಮಿ ನಾವಿರೋದೇ ಹೀಗೆ, ಮಿಂಚಿನ ಓಟ, ಮೂಗನ ಸೇಡು, ಆಟೋ ರಾಜ, ಸಾಂಗ್ಲಿಯಾನ, ಸೇರಿದಂತೆ ಹೀಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ ಮತ್ತು ಹಲವಾರು ಚಿತ್ರಗಳನ್ನು ಅವರು ನಿರ್ದೇಶನ ಮಾಡಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಇವರ ಕೊಡುಗೆಗಳು ಬಹಳ ಪ್ರಾಮುಖ್ಯತೆ ಹೊಂದಿದ್ದು. ಮಾಲ್ಗುಡಿ ಡೇಸ್ ಧಾರಾವಾಹಿ. ನಮ್ಮ ಭಾರತದ ಪ್ರಸಿದ್ದ ಲೇಖಕರಾದ ಆರ್. ಕೆ ನಾರಾಯಣ್ ಅವರ ಕೃತಿ ಮಾಲ್ಗುಡಿ ಡೇಸ್ ಅನ್ನು ಆಧಾರಿಸಿದ ತಯಾರಿಸಲಾಗಿತ್ತು. ಈ ಧಾರಾವಾಹಿ ಇಂದಿಗೂ ಸಹ ಅಂದಿನಷ್ಟೇ ಜನಪ್ರಿಯತೆ ಹೊಂದಿದೆ. ಶಂಕರ್ ನಾಗ್ ಅವರ ಸಾಂಸಾರಿಕ ಜೀವನದ ವಿಷಯಕ್ಕೆ ಬಂದರೆ, ಅರುಂಧತಿ ನಾಗ್ ಅವರನ್ನು ಮದುವೆಯಾದರು ಶಂಕರ್ ನಾಗ್ ಈ ದಂಪತಿಗಳಿಗೆ ಕಾವ್ಯ ನಾಗ್ ಎಂಬ ಹೆಸರಿನ ಮಗಳಿದ್ದಾಳೆ.

ಶಂಕರ್ ನಾಗ್ ಅವರು ನಮ್ಮಿಂದ ಸುಮಾರು ವರ್ಷಗಳು ಕಳೆದ ನಂತರ ಬೆಂಗಳೂರಿನಲ್ಲಿ ಶಂಕರ್ ನಾಗ್ ಅವರ ಹೆಸರಿನಲ್ಲಿ ರಂಗಮಂದಿರ ನಿರ್ಮಿಸಿ, ಅದಕ್ಕೆ ರಂಗಶಂಕರ ಎಂದು ನಾಮಕರಣ ಮಾಡಲಾಯಿತು. ಶಂಕರ್ ನಾಗ್ ಅವರ ಮಗಳು ಈಗ ಏನು ಮಾಡುತ್ತಿದ್ದಾರೆ ಗೊತ್ತಾ..? ನೀವು ತಿಳಿಯ ಬೇಕಾದರೆ ಈ ಲೇಖನ ವನ್ನು ಸಂಪೂರ್ಣವಾಗಿ ಓದಿ.
ಶಂಕರ್ ನಾಗ್ ಅವರ ಮುದ್ದಿನ ಮಗಳು ಕಾವ್ಯ ಅವರಿಗೆ ಅಪ್ಪ ಅಮ್ಮ ನ ಹಾಗೇ ರಂಗ ಭೂಮಿಯಲ್ಲಿ ಅವರಿಗೆ ಆಸಕ್ತಿ ಇರಲಿಲ್ಲ. ಇವರ ಆಸಕ್ತಿ ಬೇರೆಯದೇ ಇತ್ತು. ವೈಲ್ಡ್ ಲೈಫ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಮದುವೆಯಾಗಿ ವಿದೇಶಕ್ಕೆ ತೆರಳಿದರು. ಆದರೆ ಅವರು ಹುಟ್ಟಿದ ನಾಡಿನಲ್ಲಿ ಏನಾದರು ಮಾಡಬೇಕೆಂಬ ಆಸೆಯಿಂದ, ಬೆಂಗಳೂರಿಗೆ ಬಂದು ಇಲ್ಲ ಹೊಸದಾದ ಸಂಸ್ಥೆಯೊಂದನ್ನು ಶುರು ಮಾಡಿದ್ದಾರೆ.

ಕೋಕೋನೆಸ್ ಎಂಬ ಶುದ್ಧ ತೆಂಗಿನ ಎಣ್ಣೆಯನ್ನು ತಯಾರಿಸುತ್ತಾರೆ. ವರ್ಜಿನ್ ಎಣ್ಣೆಯನ್ನು ಕಾವ್ಯ ನಾಗ್ ಅವರ ಕಂಪನಿಯಲ್ಲಿ ತಯಾರಿಸಲಾಗುತ್ತದೆ. ಇವರು ಸಂಸ್ಥೆಯಲ್ಲಿ ತಯಾರಿಸುವ ವರ್ಜಿನ್ ಎಣ್ಣೆಯು ನಮ್ಮ ಬೆಂಗಳೂರಿನಲ್ಲಿ ಹಲವಾರು ಸೋಪ್ಗಳಲ್ಲಿ ದೊರೆಯುತ್ತದೆ. ಇವರ ಕಂಪನಿಯಲ್ಲಿ ತಯಾರಿಸುವ ಎಣ್ಣೆಯಿಂದ ಬಾಣoತಿಯರಿಗೆ ಮತ್ತು ಚಿಕ್ಕ ಮಕ್ಕಳಿಗೆ ಅರೋಗ್ಯಕ್ಕೆ ಉತ್ತಮವಾಗಿದೆ. ಅಂದು ಶಂಕರ್ ನಾಗ್ ಅವರು ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ ಹಾಗೇ ಅವರ ಪತ್ನಿ ಕೂಡ ಅರುಂಧತಿ ನಾಗ್ ಕೂಡ ನಮ್ಮ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಇವರ ಕೊಡುಗೆ ಸದಾ ನೆನಪಿನಲ್ಲಿ ಇಟ್ಟಿರುವ ಹಾಗೇ ಮಾಡಿದ್ದಾರೆ.
ಅವರ ಅಭಿಮಾನಿಗಳು ಶಂಕರ್ ನಾಗ್ ಅವರ ಪ್ರತಿ ವರ್ಷ ಅವರ ಹುಟ್ಟುಹಬ್ಬ ದಂದು ವಿಶೇಷವಾಗಿ ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ತಂದೆ ತಾಯಿಯ ಹದೆಯಲ್ಲೇ ಅವರ ಮಗಳು ಕೂಡ ಸಾಗುತ್ತಿದ್ದಾರೆ ಇದೇ ತರ ಅವರ ಸೇವೆ ಮುಂದುವರಿಯಲಿ ಎಂದು ಆಶಿಸುತ್ತೇವೆ ಧನ್ಯವಾದಗಳು.


Leave a Reply

Your email address will not be published. Required fields are marked *