ಕಲಾವಿದರ ಸಂಘದಲ್ಲಿ ವಿಷ್ಣುವರ್ಧನ್ ಅವರ ಹೆಸರಿಲ್ಲ ಯಾಕೆ ಗೊತ್ತೇ.? ಇಷ್ಟು ದೊಡ್ಡ ನಟನಿಗೆ ಅವಮಾನ ಮಾಡಿದ್ದು ಯಾರೂ ನೋಡಿ.

ಸುದ್ದಿ

ಸ್ಯಾಂಡಲ್ವುಡ್ ನ ಸ್ರೇಷ್ಟ ನಟ ಡಾ. ವಿಷ್ಣುವರ್ಧನ್ ಅವರು ವಿಧಿವಶರಾದ ಮೇಲೆ ವಿಷ್ಣುವರ್ಧನ್ ಅವರಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ ಎಂಬ ಚರ್ಚೆಗಳು ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಚರ್ಚೆ ಆಗುತ್ತಿರುತ್ತದೆ. ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ವಿಷ್ಣುವರ್ಧನ್ ಅವರ ಅಭಿಮಾನಿಗಳು ಕೂಡ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಕನ್ನಡದಲ್ಲಿ ಹಿರಿಯ ನಟರು ಎಂದಾಗ ನೆನಪಿಗೆ ಮೊದಲು ಬರೋದು ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್, ಶಂಕರ್ ನಾಗ್, ಅಂಬರೀಷ್ ಅವರ ಹೆಸರು ನೆನಪಿಗೆ ಬರುತ್ತದೆ.

ಎಲ್ಲೋ ಒಂದು ಕಡೆ ಬೇರೆ ನಟರಿಗೆ ಸಿಕ್ಕ ಗೌರವ, ಪ್ರಾಮುಖ್ಯತೆ ವಿಷ್ಣುವರ್ಧನ್ ಅವರಿಗೆ ಸಿಗಲಿಲ್ಲ ಎಂಬ ನೋವು ಪ್ರತಿಯೊಬ್ಬರಲ್ಲೂ ಕಾಣುತ್ತಿರುತ್ತದೆ. ರಾಜ್ ಕುಮಾರ್ ಹಾಗೂ ವಿಷ್ಣುವರ್ಧನ್ ಅವರು ಅವರದ್ದೇ ಆದ ಶೈಲಿಯಲ್ಲಿ ಪ್ರಖ್ಯಾತಿಯನ್ನು ಪಡೆದುಕೊಂಡಿರುವ ಹಾಗೂ ಕೀರ್ತಿಯನ್ನು ಸಂಪಾದಿಸಿದ್ದರು ಆದ್ದರಿಂದ ಇಬ್ಬರನ್ನು ಹೋಲಿಕೆ ಮಾಡುವುದು ತಪ್ಪಾಗುತ್ತದೆ. ಚಾಮರಾಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ವಿಷ್ಣುವರ್ಧನ್ ಅವರ ಹೆಸರು ಇಲ್ಲಿದೆ ಇರುವುದು ಅವರ ಅಭಿಮಾನಿಗಳಲ್ಲಿ ಬೇಸರವನ್ನು ಮೂಡಿಸಿದೆ.

ಕಲಾವಿದರ ಸಂಘದಲ್ಲಿ ರಾಜ್ ಕುಮಾರ್ ಅವರ ಹೆಸರನ್ನು ಹಾಕಲಾಗಿದೆ ಹಾಗೂ ಅಂಬರೀಷ್ ಅವರ ಹೆಸರನ್ನು ಕೂಡ ಹಾಕಲಾಗಿದೆ. ಇವರಿಬ್ಬರ ಮಧ್ಯೆ ವಿಷ್ಣುವರ್ಧನ್ ಅವರ ಹೆಸರು ಕೂಡ ಹಾಕಬೇಕಾಗಿತ್ತು ಏಕೆಂದರೆ ಕನ್ನಡದ ಮೇರು ನಟರಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಕೂಡ ಒಬ್ಬರು. ಈ ವಿಷಯದ ಬಗ್ಗೆ ಪ್ರಸ್ತಾಪ ಮಾಡಿದಾಗ ಬರುತ್ತಿದ್ದ ಉತ್ತರ ಏನೆಂದರೆ ಯಾವಾಗ ವಿಷ್ಣುವರ್ಧನ್ ಅವರು ನಾಯಕತ್ವವನ್ನು ವಹಿಸಿಕೊಂಡಿದ್ದರು ಎಂದು ಹೇಳಿ ವಿಷಯವನ್ನು ಅಲ್ಲಿಗೆ ಮೋಟಕು ಗೊಳಿಸುತ್ತಿದ್ದರು.

ಹಾಗೆ ನೋಡೊಲು ಹೋದರೆ ವಿಷ್ಣುವರ್ಧನ್ ಅವರು ಹಲವಾರು ಬಾರಿ ಸಿನೆಮಾದ ಹಾಗೂ ಚಿತ್ರರಂಗದ ವಿಶೇಷವಾಗಿ ಧ್ವನಿಯೆತ್ತಿದ್ದಾರೆ. ಹಾಗೂ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಆದರೆ ವಿಷ್ಣುವರ್ಧನ್ ಅವರಿಗೆ ಸಿಗಬೇಕಾಗಿದ್ದ ಕನಿಷ್ಠ ಗೌರವವು ಕೂಡ ಸಿಗುತ್ತಿಲ್ಲ ಎಂಬುದು ಬೇಸರದ ಸಂಗತಿ. ವಾಣಿಜ್ಯ ಮಂಡಳಿಯಲ್ಲೂ ಕೂಡ ರಾಜ್ ಕುಮಾರ್ ಪತ್ತಳಿಯನ್ನು ಇಡಲಾಗಿದೆ, ಆದರೆ ವಿಷ್ಣುವರ್ಧನ್ ಅವರ ಪತ್ತಳಿಯನ್ನು ಇಟ್ಟಿಲ್ಲ. ಬೇರೆ ನಟರಿಗೆ ಕೊಟ್ಟಂತ ಪ್ರಾಮುಖ್ಯತೆಯನ್ನು ವಿಷ್ಣುವರ್ಧನ್ ಅವರಿಗೆ ನೀಡಲಿಲ್ಲ ಎಂಬುದು ಅವರ ಅಭಿಮಾನಿಗಳಲ್ಲಿ ಇವರ ಬೇಸರದ ಸಂಗತಿ.

ಡಾ. ವಿಷ್ಣುವರ್ಧನ್ ಅವರು ತಾವು ಮಾಡಿದ ಸಹಾಯವನ್ನು ಎಲ್ಲಿಯೂ ಹೇಳಿಕೊಳ್ಳಬಾರದು ಎಂದು ಹೇಳಿ ಸಹಾಯವನ್ನು ಮಾಡುತ್ತಿದ್ದರು. ವಿಷ್ಣುವರ್ಧನ್ ಅವರ ಈ ಗುಣದಿಂದಾಗಿ ಅವರು ಮಾಡಿದ ಸಹಾಯ ಇಂದಿಗೂ ಯಾರಿಗೂ ತಿಳಿದಿಲ್ಲ ಎಂದರೆ ತಪ್ಪಾಗಲಾರದು. ವಿಷ್ಣುವರ್ಧನ್ ಅವರು 2009ರಲ್ಲಿ ಇಹಲೋಕ ತ್ಯಜಿಸಿದದ್ದಾರೆ. ಆದರೆ ಇಲ್ಲಿಯವರೆಗೂ ಅವರ ಸ್ಮಾರಕ ಸರಿಯಾಗಿ ಆಗಿಲ್ಲ ಮತ್ತು ಅವರ ಹೆಸರನ್ನು ಹೇಳಿಕೊಂಡು ಬಂದ ಎಷ್ಟೋ ನಟರು ವಿಷ್ಣುವರ್ಧನ್ ಅವರ ವಿಷಯ ಬಂದಾಗ ಮಾತನಾಡಿರಿವುದು ಕೂಡ ತುಂಬಾ ಕಡಿಮೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *