ಕಲ್ಲಂಗಡಿ ಹಣ್ಣಿನ ಕುರಿತಂತೆ ನಿಮಗೆ ಗೊತ್ತಿಲ್ಲದ ಅಂಶಗಳು ಇಲ್ಲಿವೆ ನೋಡಿ; ಇದು ಎಷ್ಟು ಆರೋಗ್ಯಕಾರಿ ಗೊತ್ತಾ..!?

Health information

ಬೇಸಿಗೆ ಬಂತೆಂದರೆ ಸಾಕು ದ್ರವ ಪದಾರ್ಥಗಳನ್ನು ಹೆಚ್ಚಾಗಿ ಕುಡಿಯಬೇಕು ಅಥವಾ ತಿನ್ನಬೇಕೆಂಬ ಆಸೆ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಕಲ್ಲಂಗಡಿ ಹಣ್ಣು ಕೂಡ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಅಷ್ಟಕ್ಕೂ ಕಲ್ಲಂಗಡಿ ಹಣ್ಣಿನಲ್ಲಿರುವ ಪ್ರಾಮುಖ್ಯತೆಗಳನ್ನು ಅದರ ಉಪಯೋಗಗಳು ಏನು ಎಂಬುದನ್ನು ಸವಿವರವಾಗಿ ತಿಳಿಯೋಣ ಬನ್ನಿ.

ವಯಸ್ಕರಿಂದ ಹಿಡಿದು ಚಿಕ್ಕಮಕ್ಕಳ ವರೆಗೆ ಕಲ್ಲಂಗಡಿ ಹಣ್ಣು ಎಂದರೆ ಎಲ್ಲರಿಗೂ ಕೂಡ ಇಷ್ಟ. ಹೊರಗೆ ಹಸಿರು ಸಿಪ್ಪೆಯಿಂದ ಕೂಡಿರುವ ಕಲ್ಲಂಗಡಿ ಹಣ್ಣು ಒಳಗೆ ಕೆಂಪು ಕೆಂಪಾಗಿರುತ್ತದೆ. ಬೇಸಿಗೆ ಸಮಯದಲ್ಲಿ ಬಾಯಾರಿಕೆಯನ್ನು ಹೋಗಲಾಡಿಸಲು ಅತ್ಯಂತ ಹೆಚ್ಚು ನೀರಿನ ಅಂಶವನ್ನು ಹೊಂದಿರುವ ಹಣ್ಣಾಗಿರುವ ಕಲ್ಲಂಗಡಿ ಹಣ್ಣನ್ನು ಎಲ್ಲರೂ ಕೂಡ ತಿನ್ನುತ್ತಾರೆ. ಇದರಿಂದ ಜ್ಯೂಸ್ ಕೂಡ ಮಾಡುತ್ತಾರೆ. ವಿಟಮಿನ್ ಎ ಸೇರಿದಂತೆ ಹಲವಾರು ಪೋಷಕಾಂಶಗಳನ್ನು ಕಲ್ಲಂಗಡಿ ಹಣ್ಣು ಹೊಂದಿರುತ್ತದೆ. ಕ್ಯಾನ್ಸರ್ ಹಾಗೂ ಮಧುಮೇಹದಂತಹ ದೊಡ್ಡ ದೊಡ್ಡ ಕಾಯಿಲೆಗಳನ್ನು ಕೂಡ ನಿವಾರಿಸುವಲ್ಲಿ ಕಲ್ಲಂಗಡಿ ಹಣ್ಣಿನ ಸೇವನೆ ಉಪಯೋಗಕಾರಿಯಾಗಿದೆ ಎಂಬುದು ಈಗಾಗಲೇ ವೈಜ್ಞಾನಿಕವಾಗಿ ಸಾಬೀತಾಗಿರುವ ಅಂಶವಾಗಿದೆ. ಶ್ರೀಮಂತ ಪೋಷಕಾಂಶಗಳನ್ನು ಕೂಡ ಈ ಹಣ್ಣು ಹೊಂದಿದೆ.

ದೇಹದಲ್ಲಿ ರಕ್ತದ ಸರಾಗ ಚಲಾವಣೆಗೆ ಕಲ್ಲಂಗಡಿ ಹಣ್ಣಿನ ಸೇವನೆ ಉಪಯುಕ್ತಕಾರಿ ಯಾಗಿದೆ. ಇತ್ತೀಚಿನ ದಿನಗಳಲ್ಲಿ ಹೃದಯದ ಸಮಸ್ಯೆಗಳು ಜನರಲ್ಲಿ ಹೆಚ್ಚಾಗಿದೆ ಎಂಬುದು ನಮಗೆಲ್ಲ ಗೊತ್ತಿರುವ ವಿಚಾರವಾಗಿದೆ. ಇದರಲ್ಲಿರುವ ಲೈಕೋಪಿನ್ ಎನ್ನುವ ಅಂಶ ಹೃದಯದ ಸಮಸ್ಯೆಗಳನ್ನು ದೂರ ಮಾಡುವಲ್ಲಿ ಸಹಾಯಕಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ರುದಯದ ಸಮಸ್ಯೆಯಿಂದಾಗಿ ಎಷ್ಟು ಜನರು ಮರಣಕ್ಕೆ ಈಡಾಗುತ್ತಿದ್ದಾರೆ ಎಂಬುದು ನಮಗೆಲ್ಲರಿಗೂ ಗೊತ್ತಿದೆ. ಹೀಗಾಗಿ ತಪ್ಪದೆ ಕಲ್ಲಂಗಡಿ ಹಣ್ಣನ್ನು ಸೇವಿಸುವುದನ್ನು ಮಾತ್ರ ಮರೆಯಬೇಡಿ. ಅದರಲ್ಲಿ ಕೂಡ ಬೇಸಿಗೆ ಸಮಯದಲ್ಲಿ ನಿಮ್ಮ ದೇಹ ಎನ್ನುವುದು ನಿರ್ಜಲೀಕರಣಕ್ಕೆ ಒಳಗಾಗುತ್ತದೆ. ಹೀಗಾಗಿ ತಪ್ಪದೆ ದೇಹದಲ್ಲಿ ನೀರಿನ ಅಂಶ ಹೆಚ್ಚು ಮಾಡಿಕೊಳ್ಳಲು ಕಲ್ಲಂಗಡಿ ಹಣ್ಣನ್ನು ಸೇವಿಸಬೇಕಾಗುತ್ತದೆ.

ಕಲ್ಲಂಗಡಿ ಹಣ್ಣಿನಲ್ಲಿ 92 ಪ್ರತಿಶತದಷ್ಟು ನೀರು ಅಡಗಿರುತ್ತದೆ. ಇಷ್ಟು ಮಟ್ಟದ ಪೋಷಕಾಂಶ ಆಗಿದ್ದರು ಕೂಡ ಕ್ಯಾಲೋರಿ ಕಡಿಮೆ ಇರುತ್ತದೆ. ಇದರಿಂದಾಗಿ ನಿಮ್ಮ ತೂಕ ನಿರ್ವಹಣೆ ಕೂಡ ಚೆನ್ನಾಗಿ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ಜನರು ಸಾಕಷ್ಟು ಮಾನಸಿಕ ಒತ್ತಡಗಳಿಂದಾಗಿ ಬಳಲುತ್ತಿರುತ್ತಾರೆ. ದೈನಂದಿನ ಕಲ್ಲಂಗಡಿ ಹಣ್ಣಿನ ಬಳಕೆಯಿಂದಾಗಿ ಮಾನಸಿಕ ಒತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಿಕೊಳ್ಳಬಹುದು. ಸ್ನಾಯುವಿನ ಸಮಸ್ಯೆಗೆ ಕೂಡ ಕಲ್ಲಂಗಡಿ ಹಣ್ಣಿನ ಬಳಕೆಯ ಉತ್ತಮವಾದದ್ದು. ಬೀಟಾ ಕ್ರಿಪ್ಟೋಕ್ಸಾಂಥಿನ್ ಎಂಬ ವರ್ಣದ್ರವ್ಯ ದಿಂದಾಗಿ ಸಂಧಿವಾತ ಹಾಗೂ ಉರಿಯೂತವನ್ನು ಕಂಟ್ರೋಲ್ ಮಾಡಬಹುದಾಗಿದೆ. ಚರ್ಮಗಳ ಆರೋಗ್ಯಕ್ಕೂ ಕೂಡ ಕಲ್ಲಂಗಡಿ ಹಣ್ಣಿನಲ್ಲಿರುವ ಪೋಷಕಾಂಶ ಹಾಗೂ ವಿಟಮಿನ್ ಗಳು ರಾಮಬಾಣವಾಗಿದೆ.

ನಿಮ್ಮ ಸ್ಕಿನ್ ನಲ್ಲಿ ಏಜಿಂಗ್ ಪ್ರಾಬ್ಲಮ್ ಗಳು ಪ್ರಾರಂಭವಾಗಿದ್ದರೆ ದೈನಂದಿನ ಕಲ್ಲಂಗಡಿ ಹಣ್ಣುಗಳ ಬಳಕೆಯಿಂದಾಗಿ ಚರ್ಮಗಳ ಸುಕ್ಕುಗಟ್ಟುವಿಕೆ ಹಾಗೂ ಇನ್ನಿತರ ಸಮಸ್ಯೆಗಳು ದೂರವಾಗಿ ತ್ವಚೆ ಯಲ್ಲಿ ತಾಜಾತನ ಇರುತ್ತದೆ. ಇದರಲ್ಲಿ ಫೈಬರ್ ಅಂಶ ಕೂಡ ಇರುವುದರಿಂದಾಗಿ ನಿಮ್ಮ ಪಚನಕ್ರಿಯೆ ಎನ್ನುವುದು ಚೆನ್ನಾಗಿ ನಡೆಯುವುದು ಮಾತ್ರವಲ್ಲದೆ ನಿಮ್ಮ ಕರುಳಿನ ಆರೋಗ್ಯಕ್ಕೆ ಕೂಡ ಇದು ಸಹಾಯಕಾರಿ. ಮಧುಮೇಹದ ರೋಗಿಗಳು ಕೂಡ ಈ ಕಾರಣದಿಂದಾಗಿ ಬೇರೆ ಹಣ್ಣುಗಳನ್ನು ತಿನ್ನಲು ಸಾಧ್ಯವಾಗಿರುವುದಿಲ್ಲ ಆದರೆ ಕಲ್ಲಂಗಡಿ ಹಣ್ಣನ್ನು ಯಾವುದೇ ಹಿಂದೇಟು ಹಾಕದೆ ಮುಕ್ತವಾಗಿ ತಿನ್ನಬಹುದಾಗಿದೆ. ಯಾಕೆಂದರೆ ಮಧುಮೇಹದ ಅಂಶವನ್ನು ಹೆಚ್ಚಿಸುವ ಅಂಶಗಳು ಕೇವಲ ಕಲ್ಲಂಗಡಿ ಹಣ್ಣಿನಲ್ಲಿ ಇಲ್ಲ. ಹೀಗಾಗಿ ಯಾವುದೇ ರೀತಿಯ ಕಾಯಿಲೆಯನ್ನು ಹೊಂದಿದ್ದರೂ ಕೂಡ ನೀವು ಕಲ್ಲಂಗಡಿ ಹಣ್ಣನ್ನು ತಿನ್ನುವುದರಿಂದ ಅದರ ಕುರಿತಂತೆ ನಿಯಂತ್ರಣವನ್ನು ಸಾಧಿಸಬಹುದಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಕಲ್ಲಂಗಡಿ ಹಣ್ಣು ಸರ್ವತೋಮುಖ ವಿಧದಲ್ಲಿ ಆರೋಗ್ಯಕರ ಹಣ್ಣಾಗಿದೆ. ಸ್ವಾಸ್ಥ್ಯ ಆರೋಗ್ಯಕ್ಕಾಗಿ ಕಲ್ಲಂಗಡಿ ಹಣ್ಣನ್ನು ತಿನ್ನುವುದು ಅವಶ್ಯಕವಾಗಿದೆ ಎಂದರೆ ತಪ್ಪಾಗಲಾರದು. ಈ ಕುರಿತಂತೆ ನಿಮ್ಮ ಸ್ನೇಹಿತರಲ್ಲಿ ಕೂಡ ಈ ವಿಚಾರವನ್ನು ಹಂಚಿಕೊಳ್ಳಿ.ಸ್ನೇಹಿತರೆ ನಮ್ಮದೊಂದು ಪುಟ್ಟ ಮಾಹಿತಿ ಜನಸಾಮಾನ್ಯನರು ಹೇಳುವುದೇನೆಂದರೆ ಪ್ರತಿಯೊಂದು ಹಣ್ಣು ಆಯಾಯ ಸೀಸನ್ ಗೆ ಅದು ಫಲ ಕೊಡುತ್ತದೆ ಪ್ರತಿಯೊಂದು ಸೀಸನ್ನಲ್ಲಿ ನಾವು ಹಣ್ಣುಗಳ ತಿಂದರೆ ನನಗೆ ಯಾವುದೇ ರೀತಿಯ ತೊಂದರೆ ಬರುವುದಿಲ್ಲ ಯಾಕೆಂದರೆ ಆ ಸೀಸನ್ನಲ್ಲಿ ಬೆಳೆದ ಹಣ್ಣುಗಳು ತುಂಬಾ ಸ್ವಾದಿಷ್ಟ ಹಾಗೂ

ಆರೋಗ್ಯಕರವಾಗಿರುತ್ತದೆ ಹಾಗೂ ಕಲ್ಲಂಗಡಿ ಹಣ್ಣಿನಲ್ಲಿ ನೀರಿನಂಶ ತುಂಬಾ ಜಾಸ್ತಿ ಇರುವುದರಿಂದ ಈ ಬಿಸಿಗೆ ಸಮಯದಲ್ಲಿ ಅದನ್ನ ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಯಾಕೆಂದರೆ ನಮ್ಮ ಬಾಡಿನಲ್ಲಿ ದೇವರು ತುಂಬ ಹೋಗುವುದರಿಂದ ನೀರಿನಂಶ ತುಂಬಾನೇ ಅವಶ್ಯಕ ಇರುತ್ತದೆ ಈ ಒಂದು ಸೀಸನ್ನಲ್ಲಿ ಪ್ರತಿಯೊಂದು ವೆಜಿಟೇಬಲ್ ಶಾಪ್ ಗಳಲ್ಲಿ ಹಾಗೂ ರೋಡ್ ನ ಬದಿಯಲ್ಲಿ ಕಲ್ಲಂಗಡಿಯನ್ನು ವ್ಯಾಪಾರಸ್ಥರ ಮಾರುತ್ತಿರುತ್ತಾರೆ ಹಾಗಾಗಿ ಇವಾಗ ಇದು ಸಿಗುವುದು ಸುಲಭ ಕಲ್ಲಂಗಡಿ ಹಣ್ಣನ್ನು ಸಾಕಷ್ಟು ನಾವು ವೆರೈಟಿ ನಲ್ಲಿ ತಿನ್ನಬಹುದು ಹೆಣ್ಣನ್ನು ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ತನಕ ತಿನ್ನಬಹುದು ಯಾವುದೇ ತರಹದ ತೊಂದರೆ ಕಂಡುಬರುವುದಿಲ್ಲ ನಮ್ಮ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರು ಹಾಗೂ ನಿಮ್ಮ ಸಂಬಂಧಿಕರೊಂದಿಗೆ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *