ನಮ ಕನ್ನಡ ಚಿತ್ರರಂಗದಿಂದ ನಟನೆಯನ್ನು ಪ್ರಾರಂಭಿಸಿ ಬೇರೆ ಭಾಷೆಯ ಚಿತ್ರರಂಗಗಳಿಗೆ ಹೋಗಿ ನಟಿಸಿ ಅಲ್ಲಿ ಈಗ ಬಹುಬೇಡಿಕೆ ನಟಿಯರಾಗಿ ಇರುವಂತ ಹಲವಾರು ನಟಿಯರನ್ನು ನಾವು ನೋಡಿದ್ದೇವೆ. ಇಂದು ನಾವು ಅದೇ ಮಾದರಿಯ ನಟಿಯೊಬ್ಬರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಹೌದು ನಾವು ಮಾತನಾಡುತ್ತಿರುವುದು ನಟಿ ರಾಕುಲ್ ಪ್ರೀತ್ ಸಿಂಗ್ ರವರ ಕುರಿತಂತೆ.
ನಿಮಗೆ ಗೊತ್ತಿರಬಹುದು ಗೆಳೆಯರೇ ನಟಿ ರಾಕುಲ್ ಪ್ರೀತ್ ಸಿಂಗ್ ರವರು ನವರಸನಾಯಕ ಜಗ್ಗೇಶ್ ಅವರ ಮಗನಾಗಿರುವ ಗುರು ನಟನೆಯ ಗಿಲ್ಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಿತರಾದವರು. ನಂತರ ಅವರು ತೆಲುಗು ಚಿತ್ರರಂಗಕ್ಕೆ ಹೋಗಿ ಅಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿ ಗೆದ್ದವರು. ಈಗಾಗಲೇ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಕೂಡ ರಾಕುಲ್ ಪ್ರೀತಿ ಸಿಂಗ್ ರವರು ಗುರುತಿಸಿಕೊಂಡಿದ್ದಾರೆ.
ನಟಿ ರಾಕುಲ್ ಪ್ರೀತ್ ಸಿಂಗ್ ರವರು ಈಗ ಬಾಲಿವುಡ್ ಚಿತ್ರರಂಗದಲ್ಲಿ ಟಾಪ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹಲವಾರು ಸ್ಟಾರ್ ನಟರ ಜೊತೆಗೆ ಕೂಡ ನಟಿಸಿ ಟಾಪ್ ನಟಿಯಾಗಿ ಕರೆಸಿಕೊಳ್ಳುತ್ತಿದ್ದಾರೆ. ಇನ್ನು ಈಗ ಸದ್ಯಕ್ಕೆ ಅವರು ಮಾಡುತ್ತಿರುವ ಕೆಲಸ ನೋಡಿ ಎಲ್ಲರೂ ಕೂಡ ಆಶ್ಚರ್ಯ ಪಡುತ್ತಿದ್ದಾರೆ. ಅಷ್ಟಕ್ಕೂ ಆಶ್ಚರ್ಯಪಡುವಂತೆ ಕೆಲಸ ಏನು ಮಾಡುತ್ತಿದ್ದಾರೆ ಎಂದು ನೀವು ಕೇಳಬಹುದಾಗಿದೆ. ಹೌದು ನಟಿ ರಾಕುಲ್ ಪ್ರೀತ್ ಸಿಂಗ್ ರವರು ಕಾಂಡೋ’ಮ್ ಟೆಸ್ಟಿಂಗ್ ಮಾಡುವ ಉದ್ಯೋಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಅರೆ ಇದೇನು ಇಷ್ಟೊಂದು ಸಂಭಾವನೆ ಪಡೆಯುವ ನಟಿ ಇದೇನು ಮಾಡುತ್ತಿದ್ದಾರೆ ಎಂಬುದಾಗಿ ನೀವು ಯೋಚಿಸುತ್ತಿರಬಹುದು. ಇದು ನಿಜ ಜೀವನದಲ್ಲಿ ಅಲ್ಲ ಗೆಳೆಯರೇ ಬದಲಾಗಿ ಅವರ ಮುಂದಿನ ಸಿನಿಮಾ ವಾಗಿರುವ ಛತ್ರಿವಾಲಿ ಸಿನಿಮಾದಲ್ಲಿ ಈ ರೀತಿಯ ಚಾಲೆಂಜಿಂಗ್ ಪಾತ್ರವನ್ನು ರಾಕುಲ್ ಪ್ರೀತ್ ಸಿಂಗ್ ರವರು ನಿರ್ವಹಿಸುತ್ತಿದ್ದಾರೆ. ಈಗಾಗಲೇ ಈ ಮಾದರಿಯ ಪಾತ್ರಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದು ಈಗ ರಾಕುಲ್ ಪ್ರೀತ್ ಸಿಂಗ್ ಅವರು ಕೂಡ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಸಿದ್ಧರಾಗಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ಹೇಳಿ.
