ಕಿಚ್ಚ ಸುದೀಪ್ ಅವರು ಹಿಂದಿ ರಾಷ್ಟ್ರಭಾಷೆ ಅಲ್ಲಾ ಅಂದಿದ್ಕೆ ಈ ಬಾಲಿವುಡ್ ಮಂದಿ ಎಷ್ಟ್ ಉರ್ಕೊಂಡ್ ಇದ್ದಾರೆ ನೋಡಿ ?

ಸುದ್ದಿ

ಕೆಲವು ಗಂಟೆಗಳ ಹಿಂದಷ್ಟೇ ಬಾಲಿವುಡ್ ನಟ ಅಜಯ್ ದೇವಗನ್ ಟ್ವಿಟ್ ಮಾಡಿ ನಮ್ಮ ಅಭಿನಯದ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಹಿಂದಿ ರಾಷ್ಟ್ರ ಭಾಷೆ ಅಲ್ಲದೇ ಇದ್ದಾರೆ, ಹಿಂದಿಯಲ್ಲಿ ನಿಮ್ಮ ಸಿನಿಮಾಗಳನ್ನು ಯಾಕೆ ಡಬ್ ಮಾಡಿ ರಿಲೀಸ್ ಮಾಡುತ್ತೀರಿ.? ಎಂದು ಕಿಚ್ಚ ಸುದೀಪ್ ಅವರಿಗೆ ನೇರವಾಗಿ ಪ್ರೆಶ್ನೆ ಮಾಡಿದ್ದಾರೆ. ಅವರಿಗೆ ಹಿಂದಿ ರಾಷ್ಟ್ರ ಭಾಷೆ ಹಾಗೂ ಮಾತೃ ಭಾಷೆ ಅಂತ ಹೇಳಿಕೊಂಡಿದ್ದರು. ಈ ಅವರ ಟ್ವಿಟ್ ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಪ್ರತಿ ಉತ್ತರ ಕೊಟ್ಟಿದ್ದಾರೆ.

ಅಜಯ್ ದೇವಗನ್ ಮಾಡಿದ ಟ್ವಿಟ್ ಗೆ ಪ್ರತಿ ಉತ್ತರ ನೀಡಿದ ಕಿಚ್ಚ ಸುದೀಪ್, ನಾನು ದೇಶದ ಪ್ರತಿ ಭಾಷೆಯನ್ನು ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ಈ ವಿಷಯವನ್ನು ಇಲ್ಲಿಗೆ ಬಿಡುವಂತೆ ಕೇಳಿಕೊಳ್ಳುತ್ತೇನೆ. ನಾನು ಆ ಸಾಲುಗಳನ್ನು ಯಾವ ಸನ್ನಿವೇಶದಲ್ಲಿ ಹೇಳಿದ್ದೇನೆ ಎನ್ನುವುದು ಇಲ್ಲಿ ಮುಖ್ಯವಲ್ಲ. ಮಚ್ ಲವ್ ಶೀಘ್ರದಲ್ಲಿ ನಿಮ್ಮನು ಕಾಣುವೆ. ಶುಭಾಶಯಗಳು ‘ ಎಂದು ಒಂದು ರೀಟ್ವಿಟ್ ಕಿಚ್ಚ ಸುದೀಪ್ ಮಾಡಿದ್ದಾರೆ. ಅವರು ಮತ್ತೊಂದು ಟ್ವಿಟ್ ನಲ್ಲಿ ವಿಷಯದ ಅರ್ಥದಲ್ಲಿಯೂ ಬರೆದಿದ್ದಾರೆ.

ಕಿಚ್ಚ ಸುದೀಪ್ :- ನಾನು ಯಾವ ಅರ್ಥದಲ್ಲಿ ಆ ಮಾತನ್ನು ಹೇಳಿದ್ದೇನೆ ಎನ್ನುವುದು ನಿಮ್ಮನ್ನು ಮೀಟ್ ಮಾಡಿದಾಗ ಆ ವಿಷಯದ ಬಗ್ಗೆ ವಿವರಿಸುತ್ತೇನೆ. ನನ್ನ ಈ ಹೇಳಿಕೆ ಸಂಪೂರ್ಣ ವಿಭಿನ್ನವಾದದ್ದು. ಯಾರನ್ನಗಲಿ ನೋಯಿಸಲು ಹಾಗೂ ಇನ್ನೊಬ್ರನ್ನು ಪ್ರಚೋದಿಸಲು ಮತ್ತು ಈ ವಿಷಯಯಾದ ಬಗ್ಗೆ ಚರ್ಚೆ ಮಾಡಲು ಅಲ್ಲ ಎಂದು ಸುದೀಪ್ ಮತ್ತೊಂದು ಟ್ವಿಟ್ ಮಾಡಿದ್ದಾರೆ.

ಈ ವಿಷಯವಾಗಿ ಮೂರನೇ ಟ್ವಿಟ್ ಮಾಡಿರುವ ಕಿಚ್ಚ ಸುದೀಪ್, ನೀವು ಹಿಂದಿಯಲ್ಲೇ ಕಳುಹಿಸಿದ ಸಂದೇಶ ನನಗೆ ಅರ್ಥವಾಯಿತು. ನಾವೆಲ್ಲರೂ ಹಿಂದಿಯನ್ನು ಪ್ರೀತಿಸುತ್ತೇವೆ ಹಾಗೂ ಗೌರವಿಸುತ್ತೇವೆ. ನನ್ನ ಉತ್ತರವನ್ನು ಕನ್ನಡದಲ್ಲೇ ಟೈಪ್ ಮಾಡಿದ್ದಾರೆ ಪರಿಸ್ಥಿತಿ ಏನಾಗಬಹುದು ಎಂಬುದು ಅಚ್ಚರಿ ಪಡುತಿದ್ದೇನೆ. ನಾವೆಲ್ಲರೂ ಒಂದೇ ನಾವೆಲ್ಲರೂ ಭಾರತಕ್ಕೆ ಸೇರಿದವರು ಎಂದು ಅಭಿನಯದ ಚಕ್ರವರ್ತಿ ಕಿಚ್ಚ ಸುದೀಪ್ ಟ್ವಿಟ್ ಮಾಡಿದ್ದಾರೆ. ಏನೇ ಆಗಲಿ ಇವರಿಬ್ಬರ ನಡುವೆ ನಡೆದ ಈ ವಿಷಯ ಇಲ್ಲಿಗೆ ನಿಲ್ಲಲಿ ಕಲಾವಿದರು ಎಲ್ಲರು ಒಂದೇ ಎಲ್ಲರು ನಮ್ಮವರು ಎಲ್ಲರು ಒಂದಾಗಿರೋಣ. ಧನ್ಯವಾದಗಳು


Leave a Reply

Your email address will not be published. Required fields are marked *