ನಮಸ್ತೇ ಪ್ರೀತಿಯ ವೀಕ್ಷಕರೇ ಚಂದನವನದ ಕ್ಯೂಟ್ ದಂಪತಿಗಳದ ಚಂದನ್ ಹಾಗೂ ಕವಿತಾ ಗೌಡ ಅವರು ಇತ್ತೀಚಿಗೆ ಹೊಸ ಮನೆಯ ಗೃಹಪ್ರವೇಶ ಮಾಡಿದ್ದಾರೆ ಗೃಹಪ್ರವೇಶದ ಸುಂದರ ಕ್ಷಣಗಳು ಹೇಗಿತ್ತು ಗೊತ್ತಾ.? ಅವರ ಆಹ್ವಾನಕ್ಕೆ ಯಾರೆಲ್ಲ ಬಂದಿದ್ದಾರೆ ಗೊತ್ತಾ? ಕಿರುತೆರೆಯಲ್ಲಿ ಮಿಂಚಿದ ಈ ಜೋಡಿಗಳು ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟದ್ದಾರೆ. ಇದೀಗ ಸುಖಸಂಸಾರವನ್ನು ನಡೆಸುತ್ತಿದ್ದಾರೆ. ಇದೀಗ ಹೊಸ ಮನೆಯನ್ನು ಗೃಹಪ್ರವೇಶ ಮಾಡಿ ಅಭಿಮಾನಿಗಳಿಗೆ ಸಂತಸದ ಸುದ್ಧಿ ನೀಡಿದ್ದಾರೆ. ಹಾಗಾದರೆ ಈ ಕ್ಯೂಟ್ ದಂಪತಿಗಳ ಮನೆಯ ಹೇಗಿತ್ತು, ಯಾರೆಲ್ಲ ಅತಿಥಿಗಳು ಬಂದಿದ್ದಾರೆ ಗೊತ್ತಾ.
ಈ ದಂಪತಿಗಳು ತಮ್ಮ ಅದ್ಭುತ ನಟನೆಯಿಂದ ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಗುರುತಿಸಿಕೊಂಡಿದ್ದಾರೆ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ. ಲಕ್ಶ್ಮಿ ಬಾರಮ್ಮ ಧಾರಾವಾಹಿಯಿಂದ ಕವಿತಾ ಚಿನ್ನು ಹಾಗೂ ಚಂದನ್ ಕರ್ನಾಟಕದ ಮನೆ ಮಾತಾಗಿದ್ದರು.
ಈ ಸೀರಿಯಲ್ ನಲ್ಲಿ ಅಭಿನಯಿಸುತ್ತಿರುವಾಗಲೇ ಇವರಿಬ್ಬರ ನಡುವೆ ಒಳ್ಳೆಯ ಸ್ನೇಹಿತರು ಆಗಿದ್ದರು. ಅಲ್ಲದೇ, ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಕವಿತಾ ಚಿನ್ನು ಹಾಗೂ ಚಂದನ್ ಅವರು ಜೊತೆಯಾಗಿ ಅಭಿಯಿಸುತ್ತಿದ್ದ ಸಮಯದಲ್ಲೇ ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಸುದ್ಧಿ ಕೇಳಿ ಬಂದಿತ್ತು. ಆದರೆ ಎಲ್ಲಿಯೂ ಕೂಡ ಪ್ರೀತಿಯ ವಿಷಯವನ್ನು ಬಹಿರಂಗವಾಗಿ ಹೇಳಿಕೊಂಡಿಲ್ಲ.
ಇವರಿಬ್ಬರು ಪ್ರೀತಿಯ ರೂಪವಾಗಿ ಕಳೆದ ವರ್ಷ ಏಪ್ರಿಲ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇನ್ನು ಕಳೆದ ಮೇ ತಿಂಗಳಿನಲ್ಲಿ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಇನ್ನು ಇವರಿಬ್ಬರು ವೈವಾಹಿಕ ಜೀವನದ ಬಳಿಕ ಮೊದಲ ಬಾರಿಗೆ ಕುಕ್ ವಿಥ್ ಕಿರೀಕ್ಕು ಎಂಬ ರಿಯಾಲಿಟಿ ಶೋ ನಲ್ಲಿ ಈ ಜೋಡಿಗಳು ಕಾಣಿಸಿಕೊಂಡರು ಈ ಜೋಡಿಗಳು ಪ್ರೇಕ್ಷಕರಿಗೆ ಮನೋರಂಜನೆಯನ್ನು ನೀಡಿದ್ದಾರೆ. ಈ ರಿಯಾಲಿಟಿ ಶೋ ನಲ್ಲಿ ಚಂದನ್ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನು ಚಂದನ್ ಅವರು ಸಿನೆಮಾ ಹಾಗೂ ಧಾರಾವಾಹಿಗಳಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಅವರ ಪತ್ನಿ ಕವಿತಾ ಚಿನ್ನು ಕೂಡ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.
ಇವರಿಬ್ಬರೂ ಅದೆಷ್ಟು ಒಬ್ಬರನೊಬ್ಬರು ಇಷ್ಟ ಪಟ್ಟು ಪ್ರೀತಿಸಿದ್ದರೆ ಎಂದರೆ ಈ ವರ್ಷ ಪ್ರೇಮಿಗಳ ದಿನವನ್ನು ಕೂಡ ಸೆಲೆಬ್ರೇಷನ್ ಮಾಡಲು ಸಾಧ್ಯವಾಗಲಿಲ್ಲ. ಈ ಜೋಡಿಗಳು ಪ್ರತಿವರ್ಷ ತುಂಬಾ ಗ್ರ್ಯಾಂಡ್ಆಗಿ ಆಚರಣೆ ಮಾಡುತ್ತಿದ್ದರು. ಅದಕ್ಕೆ ಅಭಿಮಾನಿಯೊಬ್ಬರು ಈ ವರ್ಷ ಯಾಕೆ ಸೆಲೆಬ್ರೇಟ್ ಮಾಡಿಲ್ಲ ಎಂದ ಪ್ರೆಶ್ನೆ ಕೇಳಿದ ಅಭಿಮಾನಿಗೆ, ನಮಗೆ ಪ್ರತಿದಿನವೂ ಪ್ರೇಮಿಗಳ ದಿನವೇ ಎಂದು ಉತ್ತರಿಸಿದ್ದಾರೆ. ಹೀಗೆ ಈ ದಂಪತಿಗಳು ಒಂದಲ್ಲ ಒಂದು ವಿಶೇಷ ಸುದ್ದಿಯ ಮೂಲಕ ಸುದ್ಧಿಯಾಗುತ್ತರೆ.
ಇನ್ನು ಮದುವೆಯದ ಈ ದಂಪತಿಗಳು ಈಗ ತಮ್ಮ ಕನಸಿನ ಹೊಸ ಮನೆಯನ್ನು ಖರೀದಿ ಮಾಡಿ ಗೃಹಪ್ರವೇಶ ಮಾಡಿಸಿದ್ದಾರೆ. ಈ ಸಂಭ್ರಮದ ಕ್ಷಣಕ್ಕೆ ನಿರೂಪಕ ಅಕುಲ್ ಬಾಲಾಜಿ, ಜೀವಿತಾ, ಗಾನ ಭಟ್, ಹಾಗೂ ಕುಟುಂಬಸ್ಥರು ಮತ್ತು ಗಣ್ಯರು ಬಂದು ಶುಭ ಕೊರಿದ್ದಾರೆ. ಕವಿತಾ ಹಾಗೂ ಚಂದನ್ ದಂಪತಿಗಳು ತಮ್ಮ ಮನೆಯ ಗೃಹಪ್ರವೇಶದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ ಅವರ ಆ ಸುಂದರ ಮನೆ ಹೇಗಿದೆ ಒಮ್ಮೆ ನೋಡಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.