ಕುಮಾರಸ್ವಾಮಿಯವರನ್ನು ರಾಧಿಕಾಕುಮಾರಸ್ವಾಮಿ ಮದುವೆ ಆಗಿದ್ದು ಹೇಗೆ ಗೊತ್ತಾ ಇಲ್ಲಿದೆ ನೋಡಿ ಯಾರಿಗೂ ಗೊತ್ತಿಲ್ಲದ ರಹಸ್ಯ..!?

ಸುದ್ದಿ

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ 2000 ಇಸವಿಯ ನಂತರ ಕನ್ನಡ ಚಿತ್ರರಂಗದಲ್ಲಿ ಹಲವಾರು ಯುವ ನಟಿಯರು ಬಂದು ನಟಿಸಿ ಸೂಪರ್ ಹಿಟ್ ಸಿನಿಮಾಗಳ ಮೂಲಕ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ಇವರಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಕೂಡ ಒಬ್ಬರು. ನಟಿ ರಾಧಿಕಾ ಕುಮಾರಸ್ವಾಮಿ ಅವರು ರಮ್ಯಾ ಹಾಗೂ ರಕ್ಷಿತಾ ಅವರ ಸಮಕಾಲೀನರು. ಅವರಷ್ಟೇ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆಯನ್ನು ಹೊಂದಿರುವಂತಹ ನಟಿಯಾಗಿದ್ದರು. ಅತಿ ಚಿಕ್ಕ ವಯಸ್ಸಿನಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಸ್ಟಾರ್ ನಟಿಯಾಗಿ ಕಾಣಿಸಿಕೊಂಡಂತಹ ನಟಿ ರಾಧಿಕಾ ಕುಮಾರಸ್ವಾಮಿ.

ಇನ್ನು ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ನಿಮಗೆಲ್ಲ ಗೊತ್ತಿರುವಂತೆ ಅವರು 14 ವರ್ಷದವರಿರಬೇಕಾದರೆ ರತನ್ ಎನ್ನುವವರನ್ನು ಬಾಲ್ಯ ವಿವಾಹವಾಗಿದ್ದರು. ಇನ್ನು ರಾಧಿಕಾ ಕುಮಾರಸ್ವಾಮಿ ಅವರು ಮೂಲತಹ ಮಂಗಳೂರಿನವರು. ಇದಾದ ನಂತರ ಕೆಲವೇ ವರ್ಷಗಳಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಪತಿ ರತನ್ ರವರು ಹೃದಯಾ’ಘಾತದಿಂದ ಮರ’ಣವನ್ನು ಹೊಂದುತ್ತಾರೆ. ಇನ್ನು ಇದಾದ ನಂತರ ಕನ್ನಡ ಚಿತ್ರರಂಗದಲ್ಲಿ ಕೂಡ ರಾಧಿಕಾ ಕುಮಾರಸ್ವಾಮಿಯವರು ಪಾದಾರ್ಪಣೆ ಮಾಡಿ ಒಳ್ಳೆಯ ಹೆಸರನ್ನು ಸಂಪಾದಿಸುತ್ತಾರೆ.

ಇದಾದ ನಂತರ ಕೆಲವು ವರ್ಷಗಳ ನಂತರ ರಾಧಿಕಾ ಕುಮಾರಸ್ವಾಮಿ ಅವರು ಕನ್ನಡ ಚಿತ್ರರಂಗದಿಂದ ದೂರ ಆಗಿ ಕಾಣೆಯಾಗುತ್ತಾರೆ. ನಂತರ ಅವರು ವಿದೇಶಕ್ಕೆ ಹೋಗಿದ್ದಾರೆ ಎನ್ನುವುದಾಗಿ ತಿಳಿದುಬರುತ್ತದೆ. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರನ್ನು ರಾಧಿಕಾ ರವರು ಮದುವೆಯಾಗಿರುತ್ತಾರೆ. ಆಗ ಅವರಿಗೆ ಶಮಿಕಾ ಎನ್ನುವ ಮಗಳು ಕೂಡ ಜನಿಸುತ್ತಾಳೆ. ಆಗಾಗ ರಾಧಿಕಾ ಹಾಗೂ ಶಮಿಕ ರವರನ್ನು ನೋಡಲು ಕುಮಾರಸ್ವಾಮಿ ಅವರು ಕೂಡ ವಿದೇಶಕ್ಕೆ ಹೋಗಿ ಬರುತ್ತಿರುತ್ತಾರೆ. ಕೆಲವು ಸಮಯಗಳ ನಂತರ ಸ್ವತಃ ರಾಧಿಕಾ ಕುಮಾರಸ್ವಾಮಿ ಅವರೇ ತಮ್ಮ ಮಗಳನ್ನು ಕರೆದುಕೊಂಡು ಭಾರತಕ್ಕೆ ಬರುತ್ತಾರೆ.

ಅವರ ಹೆಸರಿನಲ್ಲಿ ಇದ್ದ ಕೆ ಸ್ವಾಮಿ ಎನ್ನುವ ಪದನಾಮವನ್ನು ನೋಡಿ ಕಂಡಿತವಾಗಿ ಯಾರು ಎನ್ನುವುದು ಎಲ್ಲರಿಗೂ ಕೂಡ ಅನುಮಾನ ಬರುತ್ತದೆ ಕೊನೆಗೆ ರಾಧಿಕಾ ಕುಮಾರಸ್ವಾಮಿ ಅವರೇ ಈ ಕುರಿತಂತೆ ಬಹಿರಂಗಗೊಳಿಸಿದಾಗ ಅನುಮಾನ ವೆನ್ನುವುದು ನಿಜವಾಗುತ್ತದೆ. ಈ ಕುರಿತಂತೆ ಹಲವಾರು ವಾದ-ವಿವಾ’ದಗಳು ಕೂಡ ನಡೆಯುತ್ತದೆ. ಇದಾದ ನಂತರ ಮತ್ತೆ ಈಗ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕಿಯಾಗಿ ಹಾಗೂ ನಟಿಯಾಗಿ ರಾಧಿಕಾ ಕುಮಾರಸ್ವಾಮಿಯವರು ಕಂಬ್ಯಾಕ್ ಮಾಡಿದ್ದಾರೆ. ಮಗಳ ಹೆಸರಲ್ಲಿ ಶಮಿಕಾ ಎಂಟರ್ ಪ್ರೈಸಸ್ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡುತ್ತಾರೆ. ಈಗಾಗಲೇ ರಾಕಿಂಗ್ ಸ್ಟಾರ್ ಯಶ್ ಹಾಗೂ ರಮ್ಯಾ ನಟನೆಯ ಲಕ್ಕಿ ಸಿನಿಮಾ ಸೇರಿದಂತೆ ಹಲವಾರು ಸಿನಿಮಾಗಳ ನಿರ್ಮಾಣವನ್ನು ಮಾಡಿದ್ದಾರೆ. ನಟಿಯಾಗಿ ಕೂಡ ಮಹಿಳಾ ಪ್ರಾಧಾನ್ಯತೆ ಇರುವ ಸಿನಿಮಾಗಳಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಕಾಣಿಸಿಕೊಂಡಿದ್ದಾರೆ. ಇಂದಿಗೂ ಕೂಡ ರಾಧಿಕಾ ಕುಮಾರಸ್ವಾಮಿ ಅವರನ್ನು ದೊಡ್ಡ ಪರದೆಯ ಮೇಲೆ ನಟಿಯಾಗಿ ಕಾಣಲು ಬಯಸುವಂತಹ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ನಟಿ ರಾಧಿಕಾ ಕುಮಾರಸ್ವಾಮಿ ಅವರ ವೈಯಕ್ತಿಕ ಜೀವನ ಹಾಗೂ ಸಿನಿಮಾ ಜೀವನದ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.


Leave a Reply

Your email address will not be published. Required fields are marked *