ಕೆಜಿಎಫ್ ಖ್ಯಾತಿಯ ಅನ್ಮೋಲ್ ಹಾಗೂ ಆದಿತ್ಯರವರಿಗೆ ಡ್ಯಾನ್ಸಿಂಗ್ ಚಾಂಪಿಯನ್ ಶೋ ವಿನ್ನರ್ ಗೆ ಸಿಕ್ಕ ಹಣವೆಷ್ಟು ಗೊತ್ತಾ?

ಸುದ್ದಿ

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗಿದ್ದ ಕನ್ನಡಿಗರ ನೆಚ್ಚಿನ ಶೋ ಡ್ಯಾನ್ಸ್ಯಿಂಗ್ ಚಾಂಪಿಯನ್ ಶೋ ಇದೀಗ ಮುಕ್ತಯವಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಡ್ಯಾನ್ಸ್ಯಿಂಗ್ ಚಾಂಪಿಯನ್ ಶೋ ಮೂಲಕ ಸಾಕಷ್ಟು ಕಲಾವಿದರು ತಮ್ಮ ಪ್ರತಿಭೆಗಳನ್ನು ಹೊರಹಕಿದ್ದಾರೆ. ಅಲ್ಲದೇ ಕಿರುತೆರೆ ಲೋಕದಲ್ಲಿ ಪ್ರಸಾರವಾಗಿದ್ದ.
ಈ ಶೋನಲ್ಲಿ ಮಯೂರಿ, ವಿಜಯ್ ರಾಘವೇಂದ್ರ, ಮೇಘನಾ ರಾಜ್ ಅವರು ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ಕಾರ್ಯಕ್ರಮದ ನಿರೂಪಣೆಯ ಹೊಣೆಯನ್ನು ಅಕುಲ್ ಬಾಲಾಜಿ ಅವರು ತುಂಬಾ ಚನ್ನಾಗಿ ನಡೆಸಿಕೊಟ್ಟಿದ್ದರು. ಡ್ಯಾನ್ಸ್ಯಿಂಗ್ ಚಾಂಪಿಯನ್ ವಿನ್ನರ್ ಆಗಿ ಕೆಜಿಎಫ್ ಖ್ಯಾತಿಯ ಅನ್ಮೋಲ್ ಹಾಗೂ ಆದಿತ್ಯ ಅವರಿಗೆ ಸಿಕ್ಕ ಹಣವೇಸ್ಟು ಎಂದು ನಿಮಗೆ ತಿಳಿದರೆ ನೀವು ಅಚ್ಚರಿ ಪಡ್ತಿರಾ.

ಈ ಡ್ಯಾನ್ಸ್ಯಿಂಗ್ ರಿಯಾಲಿಟಿ ಶೋನಲ್ಲಿ ಪ್ರಾರಂಭದಲ್ಲಿ ಸುಮಾರು 14 ಜೋಡಿಗಳು ಇದ್ದರು. ಈ ಡ್ಯಾನ್ಸ್ಯಿಂಗ್ ಚಾಂಪಿಯನ್ ಶೋಗೆ ಸೃಜನ್ ಲೋಕೇಶ್ ಅವರು ಲೋಕೇಶ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಈ ಶೋಗೆ ಬಂಡವಾಳ ಹೂಡಿಕೆ ಮಾಡಿದ್ದಾರೆ. ಹಾಗಾಗಿ ಈ ಶೋ ತುಂಬಾ ಯಶಸ್ವಿಯಾಗಿ ಕೊನೆಗೊಂಡಿದೆ.
ಈ ಡ್ಯಾನ್ಸ್ಯಿಂಗ್ ಚಾಂಪಿಯನ್ ಶೋ ನಲ್ಲಿ ವಯಸ್ಸಿನ ವಯೋಮಿತಿ ಇಲ್ಲದೆ ಸ್ಪರ್ದಿಗಳು ಭಾಗವಹಿಸಿದ್ದಾರೆ. ನೀವು ನೋಡಿರುವ ಹಾಗೇ ಸೀರಿಯಲ್ ನಾ ನಟಿಯರು ಡ್ಯಾನ್ಸ್ಯಿಂಗ್ ಚಾಂಪಿಯನ್ ಶಿಪ್ ನ ಸ್ಪರ್ಧಿಗಳಾಗಿದ್ದಾರೆ. ನಟಿ ಅನ್ವಿತಾ ಸಾಗರ್, ಅರ್ಜುನ್ ಯೋಗಿ, ಸೂರಜ್, ಅಮೃತ ಮೂರ್ತಿ, ವಸಂತ್, ಐಶ್ವರ್ಯ ಸಿಂದೋಗಿ ಹೀಗೆ ಹಲವಾರು ಆಕ್ಟರ್ ಗಳು ಈ ಶೋ ನಲ್ಲಿ ಭಾಗವಹಿಸಿದ್ದಾರೆ.

ಅದರಲ್ಲಿಯೂ ಈ ಶೋನ ಮುಖ್ಯ ನಿರ್ಣಾಯಕರಾಗಿ ಮೇಘನಾ ರಾಜ್ ಅವರು ಮೊದಲು ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮೊನ್ನೆ ನಡೆದ ಫೈನಲ್ ನಲ್ಲಿ ಒಟ್ಟು ಐದು ಸ್ಪರ್ದಿಗಳು ತಲುಪಿದ್ದು ಯಾರು ವಿಜೇತರಾಗಿದ್ದಾರೆ ಎಂಬ ಮಾಹಿತಿ ವೀಕ್ಷಕರಿಗೆ ಗೊತ್ತೇ ಇದೆ. ಕಲ್ಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಡ್ಯಾನ್ಸ್ಯಿಂಗ್ ರಿಯಾಲಿಟಿ ಶೋ ಅದ್ದೂರಿ ಗ್ರಾಂಡ್ ಫಿನಾಲೆ ಮೊನ್ನೆ ಅದ್ದೂರಿಯಾಗಿ ನಡೆದಿತ್ತು.
ನಡೆದ ಗ್ರಾಂಡ್ ಫೈನಲ್ ನಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ಧ್ರುವ ಸರ್ಜಾ ಇವರಿಬ್ಬರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಾರೆ. ಈ ಅದ್ದೂರಿ ಫಿನಾಲೆಯನ್ನು ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಲಾಗಿದೆ. ಮೊನ್ನೆ ನಡೆದ ಫೈನಲ್ ನಲ್ಲಿ ಎರಡು ರೌಂಡ್ಸ್ ಡಾನ್ಸ್ ಇತ್ತು. ಮೊದಲು ರೌಂಡ್ಸ್ ಮುಗಿದ ನಂತರ ಅಶ್ವಿನಿ ಅವರು ಆಗಮಿಸಿದರು. ಡಾನ್ಸ್ ನಲ್ಲಿ ವಿಜೇತರಾಗುವ ವಿನ್ನರ್ ಟ್ರೋಫಿ ರಿವಿಲ್ ಮಾಡಿದ್ದಾರೆ. ಪುನೀತ್ ಅವರಿಗೆ ಡಾನ್ಸ್ ಡೆಡಿಕೆಟ್ ಮಾಡಿ ಅಪ್ಪು ಡಾನ್ಸ್ ಪೋಸ್ ಶೈಲಿಯಲ್ಲಿ ಟ್ರೋಫಿ ಡಿಸೈನ್ ಮಾಡಲಾಗಿದೆ.

ಫಿನಾಲೆಗೆ ಬಂದಿರುವ ಎಲ್ಲಾ ಸ್ಪರ್ದಿಗಳಿಗೂ ಒಳ್ಳೇದಾಗ್ಲಿ ಎಂದರು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು. ಈ ಡ್ಯಾನ್ಸ್ಯಿಂಗ್ ಶೋ ನಲ್ಲಿ ಅನ್ಮೋಲ್ ಮತ್ತು ಆದಿತ್ಯ ಶೋ ನ ವಿನ್ನರ್ ಆಗಿದ್ದಾರೆ. ಆದರ ಜೊತೆಗೆ ಬರೋಬ್ಬರಿ 5 ಲಕ್ಷ ರೂಪಾಯಿ ಬಹುಮಾನದ ಹಣ ದೊರಕಿದೆ. ಎರಡೇನೇ ಸ್ಥಾನದಲ್ಲಿ ನಿವೇದಿತಾ ಮತ್ತು ಆರಾಧ್ಯ ಹಾಗೂ ಮೂರನೇ ಸ್ಥಾನದಲ್ಲಿ ಚಂದನಾ ಮತ್ತು ಅಕ್ಷತಾ ಪಾಲಿಗೆ ಎರಡು ಲಕ್ಷ ಗೆದ್ದಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಆರತಿ ಮತ್ತು ಸಾಗರ್ ಐದನೇ ಸ್ಥಾನವನ್ನು ಅರ್ಜುನ್ ಹಾಗೂ ರಾಣಿ ಪಡೆದುಕೊಂಡಿದ್ದಾರೆ.
ಈ ಡ್ಯಾನ್ಸ್ಯಿಂಗ್ ಚಾಂಪಿಯನ್ ಶೋ ಯಶಸ್ವಿಯಾಗಿ ಮುಕ್ತಾಯ ಗೊಂಡಿದೆ. ಈ ಶೋನಿಂದ ಅನೇಕ ಪ್ರತಿಭೆಗಳು ವೇದಿಕೆಯಲ್ಲಿ ಹುಟ್ಟಿಕೊಂಡಿದ್ದಾರೆ. ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಡ್ಯಾನ್ಸ್ಯಿಂಗ್ ಶೋ ನಾ ಕಾರ್ಯಕ್ರಮದ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದಗಳು


Leave a Reply

Your email address will not be published. Required fields are marked *