ಕೆಜಿಎಫ್ ಚಾಪ್ಟರ್ 2 ಕ್ಕಾಗಿ ಸಂಭಾವನೆ ಪಡೆದಿಲ್ಲ ರಾಕಿಂಗ್ ಸ್ಟಾರ್ ಯಶ್; ಯಶ್ ಬಳಸಿರೋ ಬುದ್ಧಿವಂತಿಕೆ ನೋಡಿದರೆ ನೀವು ಕೂಡ ದಂಗಾಗ್ತೀರಾ..!?

ಸುದ್ದಿ

ಈಗಾಗಲೇ ಇಡೀ ಭಾರತ ದೇಶದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ವಿಚಾರವೆಂದರೆ ಅದು ಏಪ್ರಿಲ್ 14ರಂದು ನಮ್ಮ ಕನ್ನಡ ಹೆಮ್ಮೆಯ ಚಿತ್ರ ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗುತ್ತಿರುವುದು. ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಮೂಡಿ ಬಂದಿರುವಂತಹ ಕೆಜಿಎಫ್ ಚಾಪ್ಟರ್ 2 ಈಗಾಗಲೇ ಟ್ರೈಲರ್ ಮೂಲಕ ಜಾಗತಿಕವಾಗಿ ಸದ್ದು ಮಾಡುತ್ತಿದೆ.

ಬಾಹುಬಲಿ ಚಿತ್ರದ ನಂತರ ಇಡೀ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚಾಗಿ ಸದ್ದು ಮಾಡಿರುವಂತಹ ಚಿತ್ರವೆಂದರೆ ಅದು ಕೆಜಿಎಫ್ ಚಾಪ್ಟರ್ 1 ಎಂದು ಹೇಳಬಹುದಾಗಿದೆ. ಕೆಜಿಎಫ್ ಚಾಪ್ಟರ್ 1ರ ಯಶಸ್ಸಿನ ನಂತರ ಈಗಾಗಲೇ ಕೆಜಿಎಫ್ ಚಾಪ್ಟರ್ 2 ಹಾಗೂ ನಟ ಯಶ್ ರವರಿಗೆ ಬೇಡಿಕೆ ಪರಭಾಷೆಗಳಲ್ಲಿ ಕೂಡ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಈಗಾಗಲೇ ಕೆಜಿಎಫ್ ಚಾಪ್ಟರ್ 2 ಟ್ರೈಲರ್ ಬಿಡುಗಡೆಯಾಗಿ ಯೂಟ್ಯೂಬ್ನಲ್ಲಿ ನೂರಾರು ಮಿಲಿಯನ್ ವೀಕ್ಷಣೆಗಳನ್ನು ಪಡೆದು ಜಾಗತಿಕ ಮಟ್ಟದಲ್ಲಿ ಕೂಡ ರೆಕಾರ್ಡುಗಳನ್ನು ಅಳಿಸಿಹಾಕಿದೆ. ಇನ್ನು ಇದೇ ಏಪ್ರಿಲ್ 14ರಂದು ಬಿಡುಗಡೆಯಾಗಲು ಸಜ್ಜಾಗಿರುವ ಕೆಜಿಎಫ್ ಚಾಪ್ಟರ್ 2 ಚಿತ್ರದ ಪ್ರಮೋಷನ್ ಈಗಾಗಲೇ ದೆಹಲಿಯಿಂದ ಆರಂಭವಾಗಿದೆ. ಈಗಾಗಲೇ ಪೂರ್ಣ ಕೆಜಿಎಫ್ ಚಾಪ್ಟರ್ 2 ಚಿತ್ರತಂಡ ದೆಹಲಿಯಲ್ಲಿ ಮಾಧ್ಯಮದವರನ್ನು ಭೇಟಿಯಾಗಿದ್ದಾರೆ.

ಈಗಾಗಲೇ ರಾಕಿಂಗ್ ಸ್ಟಾರ್ ಯಶ್ ಶ್ರೀನಿಧಿ ಶೆಟ್ಟಿ ಸಂಜಯ್ ದತ್ ಹಾಗೂ ರವೀನ ತಂಡನ್ ಸೇರಿದಂತೆ ಇಡೀ ಚಿತ್ರತಂಡವೇ ಚಿತ್ರದ ಪ್ರಮೋಷನ್ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಈ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್ ರವರ ಸಂಭಾವನೆ ಕುರಿತಂತೆ ಎಲ್ಲರಿಗೂ ಕೂಡ ಕುತೂಹಲ ಇರಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಯಶ್ ರವರು ಅಷ್ಟೊಂದು ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಇಷ್ಟೊಂದು ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಎಂಬ ಗಾಳಿಸುದ್ದಿಗಳು ಕೂಡ ಹರಿದಾಡುತ್ತಿದೆ. ಆದರೆ ಸತ್ಯ ಬೇರೆಯೇ ಇದೆ.

ಹೌದು ಸಂಭಾವನೆಯ ತೆಗೆದುಕೊಂಡಿಲ್ಲ ಎಂದಮಾತ್ರಕ್ಕೆ ಯಶ್ ರವರು ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಉಚಿತವಾಗಿ ಮಾಡಿಕೊಟ್ಟಿಲ್ಲ. ಸಂಭಾವನೆ ಬದಲಿಗೆ ಚಿತ್ರದ ಲಾಭದಲ್ಲಿ ಪಾಲನ್ನು ಪಡೆಯುವುದಾಗಿ ಯಶ್ ರವರು ಒಪ್ಪಿಕೊಂಡಿದ್ದಾರೆ. ಈಗಾಗಲೇ ಕೆಜಿಎಫ್ ಚಾಪ್ಟರ್ 2 ಕಡಿಮೆಯೆಂದರೂ 500ರಿಂದ 1000 ಕೋಟಿ ಬಾಕ್ಸಾಫೀಸ್ ಕಲೆಕ್ಷನ್ ಮಾಡುವ ಎಲ್ಲ ಸಾಧ್ಯತೆಗಳಿವೆ. ಹೀಗಾಗಿ ಸಂಭಾವನೆಗಿಂತ ಅದೆಷ್ಟೋ ಪಟ್ಟು ಹೆಚ್ಚಾಗಿ ಲಾಭದ ಪಾಲಿನಿಂದ ಹಣ ಯಶ್ ರವರಿಗೆ ಸಿಗಲಿದೆ. ಕೇವಲ ಕನ್ನಡ ಚಿತ್ರರಂಗದಲ್ಲಿ ಯಶ್ ರವರು ಮಾತ್ರವಲ್ಲದೆ ಕಿಚ್ಚ ಸುದೀಪ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಇಂತಹ ಲಾಭದ ಪಾಲುದಾರಿಕೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಚಿತ್ರ ಒಂದುವೇಳೆ ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿದರೆ ಸಂಭಾವನೆಗಿಂತ ಹೆಚ್ಚಾಗಿ ಲಾಭದ ಪಾಲುದಾರಿಕೆಯಲ್ಲಿ ಹಣ ಸಿಗುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಮೂಲಕ ಶೇರ್ ಮಾಡಿಕೊಳ್ಳಿ.


Leave a Reply

Your email address will not be published. Required fields are marked *