ಕೆಜಿಎಫ್ ಚಾಪ್ಟರ್ 2 ಚಿತ್ರದ ಸಕ್ಕತ್ ಡೈಲಾಗ್ ಗೆ ಖಡಕ್ ಲುಕ್ ಕೊಟ್ಟ ವಂಶಿಕಾ… ವೈರಲ್ ವಿಡಿಯೋ ನೋಡಿ ಫಿದಾ ಆದ ಚಿತ್ರತಂಡ..

ಸುದ್ದಿ

ಪ್ರೀತಿಯ ಓದುಗರೇ ಕರ್ನಾಟಕದ ಮನೆಮಾತಾದ ನಿಮ್ಮ ಮೆಚ್ಚುಗೆ ಪಡೆದಿರುವ ರಿಯಾಲಿಟಿ ಶೋ ಅಂದರೆ ಅದು ನನ್ನಮ್ಮ ಸೂಪರ್ ಸ್ಟಾರ್ ಆ ರಿಯಾಲಿಟಿ ಶೋ ನಲ್ಲಿ ಸಾಕಷ್ಟು ಜನಪ್ರಿಯ ಆದವರು ವಂಶಿಕಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕೇವಲ ರಿಯಾಲಿಟಿ ಶೋ ಮಾತ್ರಅಲ್ಲದೇ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ವಂಶಿಕಾ ತುಂಬಾ ಜನಪ್ರಿಯತೆ ಗೊಂಡಿದ್ದಾಳೆ.
ನನ್ನಮ್ಮ ಸೂಪರ್ ಸ್ಟಾರ್ ನಲ್ಲಿ ಕಾಣಿಸಿಕೊಂಡ ನಂತರ ವಂಶಿಕಾ ತನ್ನ ಚುರುಕುತನ ಹಾಗೂ ಚಟಪತಿ ಮಾತಿನಿಂದ ಕರ್ನಾಟಕದ ಸಾಕಷ್ಟು ಜನರ ಮನಸ್ಸನ್ನು ಕದ್ದಿದ್ದಾಳೆ ವಂಶಿಕಾಳನ್ನು ಸೂಪರ್ ಸ್ಟಾರ್ ಕಿಡ್ ಎಂದರೆ ತಪ್ಪಾಗಲ್ಲ. ಖ್ಯಾತ ನಿರೂಪಕ ಮಾಸ್ಟರ್ ಆನಂದ್ ಅವರ ಮುದ್ದಿನ ಮಗಳು ವಂಶಿಕಾ. ಅಪ್ಪ ನಂತೆ ಇವಳು ತುಂಬಾ ಜನಪ್ರಿಯತೆ ಪಡೆದಿದ್ದಾಳೆ.
ಈಗಾಗಲೇ ಕರ್ನಾಟಕದಲ್ಲಿ ವಂಶಿಕಾಳ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೇ ಸಾಕಷ್ಟು ಜನರು ಅವಳಿಗೆ ಅಭಿಮಾನಿಗಳನ್ನು ಹೊಂದಿದ್ದಾಳೆ. ಇನ್ನು ಇವಳು ತನ್ನ ಮಾತಿನ ಮೂಲಕವೇ ಜನರನ್ನು ಮೋಡಿ ಮಾಡಿದ್ದಾಳೆ.
ಹೆಚ್ಚಿನವರಿಗೆ ಮಾಸ್ಟರ್ ಆನಂದ್ ಅವರ ಮಗಳು ಎಂಬುದೇ ಹೆಮ್ಮೆ ಅಪ್ಪ ನಂತೆ ಮಕ್ಕಳು ಆಗೋದು ತುಂಬಾ ಕಷ್ಟ ಅಂಥದ್ರಲ್ಲಿ ಅಪ್ಪ ನನ್ನೇ ಮೀರಿಸುವ ಮಗಳು ಇವಳು ಎಂದು ಕನ್ನಡಿಗರು ಮಾತನಾಡುತ್ತಿದ್ದಾರೆ. ವಂಶಿಕಾ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸಕ್ರಿಯವಾಗಿದ್ದು ಒಂದಲ್ಲ ಒಂದು ವಿಡಿಯೋ ಮಾಡಿ ಹಂಚಿಕೊಳ್ಳುತ್ತಿರುತ್ತಾರೆ. ವಂಶಿಕಾ ಕೂಡ ಸೋಷಿಯಲ್ ಮೀಡಿಯಾದ ಸ್ಟಾರ್ ಎಂದೇ ಹೇಳಬಹುದು. ನನ್ನಮ್ಮ ಸೂಪರ್ ಸ್ಟಾರ್ ಶೋ ಗೆದ್ದ ನಂತರ ಇದೀಗ ವಂಶಿಕಾ ಅವರು ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋನಲ್ಲಿ ಸ್ಪರ್ಧೆಸುತ್ತಿದ್ದಾರೆ.

ರಿಯಾಲಿಟಿ ಶೋ ಗೆದ್ದ ಬಳಿಕ ಅಮ್ಮ ಮಗಳು ಅದರಿಂದ ಬಂದ ಹಣದಿಂದ ಇತ್ತೀಚಿಗೆಅಷ್ಟೇ ಹೊಸ ಕಾರ್ ಮಗಳಿಗಾಗಿ ಖರೀದಿಸಿದ್ದಾರೆ. ಇನ್ನು ವಂಶಿಕ ಆಗಾಗ ಅವಳ ರೀಲ್ಸ್ ವಿಡಿಯೋವನ್ನು ಹಂಚಿಕೊಳ್ಳುತ್ತಾ ಇರುತ್ತಾಳೆ. ಇದೀಗ ಕೆಜಿಎಫ್ ಚಾಪ್ಟರ್ 2 ಸಿನಿಮಾದ “ರಾಕಿಯನ್ನು ಹೊಡಿಯೋಕೆ ಮತ್ತೊಬ್ಬ ರಾಕಿಯನ್ನು ಹುಟ್ಟಿಸೋಕೆ ಆಗಲ್ವ.
ಇನ್ನೊಬ್ಬ ರಾಕಿಯನ್ನು ಹುಟ್ಟಿಸಲು ಅವರ ಅಪ್ಪನ ಕೈಯಲ್ಲಿ ಸಾಧ್ಯ ಇಲ್ಲ…” ಎಂಬ ಡೈಲಾಗ್ ಸಖತ್ ಆಗಿ ರೀಲ್ಸ್ ಮಾಡಿದ್ದಾಳೆ ಮಾಡೆದುಕೊಂಡು ಬರುತ್ತಾ ಜಾಕೆಟ್ ನಂತೆ ಶರ್ಟ್ ಸರಿಸುತ್ತ ಸ್ಟೈಲ್ ನಲ್ಲಿ ಬರುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ನು ಈ ವಿಡಿಯೋ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಂಡಿದೆ. ನೀವು ಆ ವಿಡಿಯೋ ನೋಡಿಲ್ಲ ಅಂದ್ರೆ ಇಲ್ಲಿ ನೋಡಬಹುದು. ನೀವು ನೋಡಿದ್ರೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *