ಕೆಜಿಎಫ್ 2 ಚಿತ್ರದ ಅಧೀರ ಅಲಿಯಾಸ್ ಸಂಜಯ್ ದತ್ 308 ಗರ್ಲ್ ಫ್ರೆಂಡ್ಸ್, 6 ವರ್ಷ ಜೈಲು… ಕಷ್ಟದ ಜೀವನದ ಬಗ್ಗೆ ನಿಮಗೆಷ್ಟು ಗೊತ್ತು? ನೋಡಿ

ಸುದ್ದಿ

ಬಾಲಿವುಡ್ ಮೇರು ನಟ ಸಂಜಯ್ ದತ್ ಅಧೀರ ಇದೀಗ ಕೆಜಿಎಫ್ ಚಾಪ್ಟರ್ 2 ಚಿತ್ರ ಗೆದ್ದ ಖುಷಿಯಲ್ಲಿದ್ದಾರೆ. ಅಧೀರನ ಸಿನಿಮಾರಂಗದ ಹೊರತು ಪಡಿಸಿ ಅವರ ಜೀವನದಲ್ಲಿ ಬಂದ ದಾರಿಯನ್ನು ನಾವು ಒಂದು ಸಲ ನೋಡಲೇಬೇಕು. ಒಬ್ಬ ಸ್ಟಾರ್ ನಟನ ಬದುಕಿನ ದಾರಿ ಅಷ್ಟು ಸುಲಭವಾಗಿರುವುದಿಲ್ಲ. ಸಾಕಷ್ಟು ಅಡೆತಡೆಗಳು ತಿರುವುಗಳು ಇರುತ್ತದೆ. ನಟ ಸಂಜಯ್ ದತ್ ಕೂಡ ಬಾಲಿವುಡ್ ನಲ್ಲಿ ಹೀರೋ ಆಗಿ ಒಂದು ಕಾಲದಲ್ಲಿ ಮಿಂಚಿದ್ದರು. ಬಾಲಿವುಡ್ ನಟರಾದ ಸುನಿಲ್ ದತ್ ಅವರ ಪುತ್ರ ಸಂಜಯ್ ದತ್ ಅವರು 81 ರಲ್ಲಿ ಅವರ ತಂದೆ ಸುನಿಲ್ ದತ್ ಅವರೇ ಆಕ್ಷನ್ ಕಟ್ ಹೇಳಿದ ಚಿತ್ರದ ಮೂಲಕ ಬಾಲಿವುಡ್ ಸಿನಿಮಾ ರಂಗಕ್ಕೆ ಬಂದವರು.
ಹೀಗೆ ಸಿನಿಮಾ ಪಯಣದಲ್ಲಿ ಸಂಜಯ್ ದತ್ ಅವರು ಬರೋಬ್ಬರಿ 180ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಸಂಜುಭಾಯ್ ಎಂದು ಕ್ಯಾತಿಪಡೆದರು. ಅವರ ಅಭಿನಯಕ್ಕೆ ಅನೇಕ ಪ್ರಸಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿದ್ದವು. ಇದರ ನಡುವೆ ನಟ ಸಂಜಯ್ ದತ್ ಅವರ ಬದುಕಿಗೆ ಕಪ್ಪು ಚುಕ್ಕಿಯದದ್ದು ಅ ಒಂದು ನಡೆದ ಘಟನೆ. 1993 ರಲ್ಲಿ ಮುಂಬೈನ ಸರಣಿ ಬಾಂಬ್ ಸ್ಫೋಟ ಮಾಡಿದ ಉಗ್ರರಿಗೆ ನೇರವಾಗಿದ್ದು.

ಅದಲ್ಲದೆ ದತ್ ಅವರ ಮನೆಯಲ್ಲಿ ಉಗ್ರರಿಗೆ ಶಾಸ್ತ್ರಸ್ತಾಗಳನ್ನು ಇಟ್ಟುಕೊಳ್ಳಲು ಅನುವು ಮಾಡಿಕೊಟ್ಟಿದ್ದು ಅದರ ಮೂಲಕ ಸಂಜಯ್ ದತ್ ಅವರಿಗೆ ಬರೋಬ್ಬರಿ 6 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿತ್ತು. ಸಂಜಯ್ ದತ್ ಅವತ್ತು ಸಾಕಷ್ಟು ಕೆಟ್ಟ ಚಟದಲ್ಲಿ ತೊಡಗಿಕೊಂಡಿದ್ದರು. ಅವರ ನಿಜ ಜೀವನದಲ್ಲಿ ಹೀಗೆ ಇದ್ದಾರಾ ಅಂತ ಎನ್ನುವಂತೆ ಇದ್ದರು. ಇನ್ನು, ಇವರ ವೈವಾಹಿಕ ಜೀವನದಲ್ಲಿಯೂ ಒಂದಲ್ಲ ಮೂರು ಮದುವೆಯಾದರು. 1987 ರಲ್ಲಿ ರಿಚಾ ಶರ್ಮಾ ಸಂಜಯ್ ದತ್ ಮದುವೆಯದರು. 1996 ರಲ್ಲಿ ರಿಚಾ ಬ್ರೈನ್ ಟ್ಯೂಮಾರ್ ನಿಂದ ಸಾವು ಸಂಭಾವಿಸಿತು.
ಒಬ್ಬ ಮಗಳಿದ್ದು ಯೂ ಎಸ್ ನಲ್ಲಿ ವಾಸವಾಗಿದ್ದರೆ. ನಂತರ 1998 ರಲ್ಲಿ ರಿಯಾ ಪಿಳ್ಳೆ ಎಂಬ ಮಾಡೆಲ್ ಜೊತೆಗೆ ಎರಡನೇ ಮದುವೆಯಾದರು. ಅದು 2008 ರಲ್ಲಿ ಅವರಿಬ್ಬರಿಗೂ ಡೈವೋರ್ಸ್ ಆಯಿತು. ಅದೇ ವರ್ಷ ಮಾನ್ಯತಾ ಅವರ ಜೊತೆ ಸಂಜಯ್ ಮೂರನೇ ಮದುವೆಯಾದರೂ. ಈಗ ದತ್ ಹಾಗೂ ಮಾನ್ಯತಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರಿಕಾರಣದ ವೇಳೆ ಕ್ಯಾನ್ಸರ್ ಎಂಬ ಕ್ರೂರಿ ಸಂಜಯ್ ದತ್ ಅವರನ್ನು ಕಡಿತ್ತು. ಈ ವಿಚಾರ ದತ್ ಅವರಿಗೆ ಗೊತ್ತಾದಾಗ ಅವರಿಗೆ ನಂಬಲು ಸಾಧ್ಯವೇ ಆಗಲಿಲ್ಲ ಅದನ್ನು ಸಹಿಹಿಸಲಾಗದೆ ಸಂಕಷ್ಟದಲ್ಲಿ ಸಿಲುಕಿದ್ದರು. ಈ ಕೆಲ ದಿನಗಳ ಹಿಂದೆ ಅವರು ಬಹಿರಂಗ ಪಡಿಸಿದ್ದಾರೂ. ಕರೋನ ಲಾಕ್ ಡೌನ್ ಸಂದರ್ಭದಲ್ಲಿ ಜೀವನ ಸಾಮಾನ್ಯ ವಾಗಿತ್ತು. ನನಗೆ ಮೆಟ್ಟಿಲು ಹತ್ತುವಾಗ ಮತ್ತು ಸ್ನಾನ ಮಾಡಿದ ನಂತರ ನಾನು ತುಂಬಾ ಸುಸ್ತುಆಗುತ್ತಿದೆ ಉಸಿರಾಡಲು ತೊಂದರೆ ಆಗುತಿತ್ತು. ತಕ್ಷಣ ನನ್ನ ವೈದ್ಯರನ್ನು ಭೇಟಿಯದೇ.
ಯಲ್ಲ ರೀತಿಯ ಟೆಸ್ಟ್ ಕೂಡ ಮಾಡಿಸಿದೆ. ನನ್ನ ಶ್ವಶಕೋಶದಲ್ಲಿ ಅರ್ಧಕಿಂತ ಹೆಚ್ಚು ನೀರು ತುಂಬಿಕೊಂಡಿದ್ದು ಅದನ್ನೆಲ್ಲಾ ಹೊರ ಹಾಕಬೇಕಾಗಿದೆ. ಮೊದಲು ಇದು ಟಿಬಿ ಎಂದು ಅಂದುಕೊಂಡಿದ್ದರು. ಬಳಿಕ ಗೊತ್ತಾಯಿತು ಇದು ಕ್ಯಾನ್ಸರ್ ಎಂದು ಇದನ್ನು ಎದುರಿಸಲು ಹಾಗೂ ತಡೆಗಟ್ಟಲು ನನಗೆ ದೊಡ್ಡ ಸಮಸ್ಸೆಯಾಗಿತ್ತು. ನನ್ನ ತಂಗಿ ಬಂದಳು. ನನಗೆ ಕ್ಯಾನ್ಸರ್ ಬಂದಿದೆ. ಮುಂದೆ ಏನು ಮಾಡಬೇಕು ಎಂದು ಯೋಚನೆ ಮಾಡಿದರು.

ಆದರೆ ನಾನು ದಿನಕ್ಕೆ ಎರಡು ಮೂರು ಗಂಟೆಗಳ ಕಾಲ ಅಳುತ್ತಿದ್ದೆ. ಯಾಕೆಂದರೆ ನನ್ನ ಮುದ್ದಿನ ಮಕ್ಕಳು ಹಾಗೂ ಹೆಂಡತಿಯ ಬಗ್ಗೆ ಯೋಚಿಸುತಿದ್ದೆ. ಅ ವಿಷಯದಿಂದ ನಾನು ಕುಗ್ಗ ಬಾರದು ಅಂತ ಡಿಸೈಡ್ ಮಾಡಿದೆ. ಮೊದಲು ಯೂ ಎಸ್ ಗೆ ಹೋಗಿ ಟ್ರೇಟ್ಮೆಂಟ್ ಪಡೆಯಲು ನಿರ್ಧರಿಸಿದೆ. ಆದರೆ ನನಗೆ ವೀಸಾ ಸಿಗಲಿಲ್ಲ. ಅದಕ್ಕೆ ಇಲ್ಲೇ ಟ್ರೇಟ್ಮೆಂಟ್ ಪಡೆಯಲು ನಾನು ಹಾಗೂ ನನ್ನ ಕುಟುಂಬವು ತೀರ್ಮಾನಕ್ಕೆ ಬಂದೆವು. ನನ್ನ ಕುಟುಂಬ ಹಾಗೂ ನನ್ನ ಬಂದು ಮಿತ್ರರು ಹಾಗೂ ಅಭಿಮಾನಿಗಳು ನನ್ನ ಬೆಂಬಲಕ್ಕೆ ನಿಂತರು. ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್ ಅವರು ವೈದ್ಯರಿಗೆ ಶಿಫರಾಸ್ ಮಾಡಿದ್ದರು. ನನಗೆ ಕೂದಲು ಉದುರುವಿಕೆ ಅಂತ ಹೇಳಿದ್ದರು. ಮತ್ತೆ ನನಗೆ ವಾಮಿಟ್ ಆಗುತ್ತೆ ಅಂತ ಹೇಳುದರೂ. ಅದಕ್ಕೆ ನಾನು ಒಪ್ಪಲಿಲ್ಲ. ಅದಕ್ಕೆ ವೈದ್ಯರು ಕೂದಲು ಉದಾರಲ್ಲ, ವಾಮಿಟ್ ಆಗಲ್ಲ, ಹಾಸಿಗೆ ಹಿಡಿಯಲ್ಲ ಎಂದರು ವೈದ್ಯರು ನಾನು ನನ್ನ ಕೀಮೊತೆರಪಿ ಮಾಡಿಸಿದೆ ನಂತರ ಹಿಂದಿರುಗಿದೆ. ದುಬೈ ಕಿಮೋ ಮಾಡಿಸಲು ಹೋಗುತ್ತಿದ್ದೆ. ನಂತರ ಪ್ರತಿದಿನ ಬ್ಯಾಡ್ಮಿಂಟನ್ ದಿನ ಎರಡು ಮೂರು ಗಂಟೆಗಳ ಕಾಲ ಆಟ ಆಡುತ್ತಿದ್ದೆ. ಪ್ರತಿದಿನ ವರ್ಕೌಟ್ ಮಾಡುತ್ತಿದ್ದೆ. ತೂಕವನ್ನು ಕಡಿಮೇಮಾಡಿಕೊಳ್ಳುತ್ತಿದ್ದೇನೆ. ನಾನು ಮತ್ತೆ ಮೊದಲಿನ ಹಾಗೇ ಆಗುತ್ತೇನೆ. ನಿಮಗೆ ಗೊತ್ತಿರುವ ಸಂಜಯ್ ದತ್ ಆಗಲು ಬಯಸುತ್ತೇನೆ. ನಾನು ನನ್ನನು ಬಿಟ್ಟುಕೊಡುವುದಿಲ್ಲ ಎಂದು ಸಂಜಯ್ ದತ್ ಹೇಳಿದ್ದಾರೆ.
ಸಂಜಯ್ ಅವರ ಸಿನಿ ಬದುಕಿನಲ್ಲಿ ಹಾಗೂ ನಿಜ ಜೀವನದಲ್ಲಿ ಸಾಕಷ್ಟು ಏಳು ಬಿಳು, ನೋವುಗಳು, ಅವಮಾನಗಳು, ತುಂಬಾ ಅನುಭವಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಅವರು ಮಾದಕ ಚಟಕ್ಕೆ ಒಳಗಾಗಿದ್ದರು. ಅದರಿಂದ ಹೊರ ಬರಲು ಸಂಜಯ್ ಸಾಕಷ್ಟು ಹರಾಸಾಹಸ ಮಾಡಿದ್ದಾರೆ. ಈಗ ಎಲ್ಲದ್ರಿಂದ ದೂರ ಇದ್ದು. ಸಮಾಜದಲ್ಲಿ ಉತ್ತಮ ನಟನಾಗಿ ಮಕ್ಕಳಿಗೆ ಒಳ್ಳೆಯ ತಂದೆಯಾಗಿ, ಹೆಂಡತಿಗೆ ಪ್ರೀತಿಯಾ ಗಂಡನಾಗಿ ಒಳ್ಳೆಯ ಮನುಷ್ಯನಾಗಿ ಹೊಸ ಬದುಕು ಕಟ್ಟಿಕೊಂಡಿದ್ದಾರೆ. ಕೆಜಿಎಫ್ 2 ಚಿತ್ರದ ಅಧೀರನ ಪತ್ರದ ಮೂಲಕ ಮತ್ತೆ ಚಿತ್ರರಂಗದಲ್ಲಿ ಅಬ್ಬರಿಸಿದ್ದಾರೆ. ಇನ್ನಷ್ಟು ಅವಕಾಶಗಳು ಬರಲಿ ಎಂಬುದೇ ನಮ್ಮ ಆಸೆ. ನಮ್ಮ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದಾರೆ ನಿಮ್ಮ ಅನಿಸಿಕೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *