ನಮಸ್ತೆ ಪ್ರೀತಿಯ ವೀಕ್ಷಕರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೇ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅಭಿನಯದ ಬೈರಾಗಿ ಚಿತ್ರ ಇನ್ನೇನು ಬಿಡುಗಡೆಯಗಲು ಸಿದ್ದವಾಗಿದೆ. ಚಿತ್ರದ ಹಾಡುಗಳು ಮತ್ತು ಶಿವಣ್ಣ ನ ಲಕ್ ಭಾರೀ ಸದ್ದು ಮಾಡುತ್ತಿದೆ, ಟಗರು ಚಿತ್ರದ ನಂತರ ಡಾಲಿ ಧನಂಜಯ್ ಹಾಗೂ ಶಿವಣ್ಣ ಮತ್ತೆ ಬೆಳ್ಳಿ ತೆರೆಯ ದೊಡ್ಡ ಪರದೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಸಿನೆಮಾ ಇದಾಗಿದೆ. ಸುಕ್ಕ ಸೂರಿ ನಿರ್ದೇಶನದ ಬೈರಾಗಿ ಚಿತ್ರದಲ್ಲಿ ಶಿವಣ್ಣ ಹಾಗೂ ಡಾಲಿ ಇಬ್ಬರು ಬದ್ದ ವೈರಿಗಳಾಗಿ ಜನರಿಗೆ ಮೋಡಿ ಮಾಡಿದ್ದರು. ಇನ್ನು ಬೈರಾಗಿ ಚಿತ್ರದಲ್ಲಿ ಇನ್ನ್ಯಾವ ಮ್ಯಾಜಿಕ್ ಮಾಡಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಈಗಾಗಲೇ ಬೈರಾಗಿ ಚಿತ್ರದ ಪೋಸ್ಟರ್ ಹಾಗೂ ಟೀಸರ್ ಸಕ್ಕತ್ ಹಿಟ್ ಅಗಿದ್ದು ಚಿತ್ರವನ್ನು ಮತ್ತಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಹೊಸ ಲುಕ್ ನಲ್ಲಿ ಶಿವಣ್ಣ ಅವರನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಚಿತ್ರತಂಡ ಬಿಡುಗಡೆಯ ದಿನಾಂಕವನ್ನು ಖಚಿತ ಗೊಳಿಸಿದ್ದು ಶಿವಣ್ಣ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಹೌದು, ಜುಲೈ 1 ರಂದು ಶಿವಣ್ಣ ಅಭಿನಯದ ಬೈರಾಗಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧಾರಿಸಿದೆ.
ಡಾ. ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ಗಿಫ್ಟ್ ಆಗಿ ಬೈರಾಗಿಯನ್ನು ಎರಡು ವಾರ ಮೊದಲೇ ಶಿವಣ್ಣನ ಅಭಿಮಾನಿಗಳಿಗೆ ನೀಡಲಾಗುತ್ತದೆ. ಜುಲೈ 12 ರಂದು ಶಿವಣ್ಣ ಅವರ 60 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುತ್ತಾರೆ. ಅಭಿಮಾನಿಗಳಿಗೆ ಅದಕ್ಕೂ ಮೊದಲೇ ಹಬ್ಬ ಮಾಡಲು ಚಿತ್ರ ತಂಡ ನಿರ್ಧರಿಸಿದೆ.
ಬೈರಾಗಿ ಚಿತ್ರಕ್ಕೆ ವಿಜಯ್ ಮೇಲ್ಟೊನ್ ನಿರ್ದೇಶನ ಮಾಡಿದ್ದು, ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ಕೃಷ್ಣ ಸಾರ್ಥಕ ನಿರ್ಮಾಣ ಮಾಡಿದ್ದಾರೆ. ಕನ್ನಡದ ಹಿರಿಯ ನಟ ಶಶಿಕುಮಾರ್, ಅಂಜಲಿ ಯಶ ಶಿವಕುಮಾರ್ ಸೇರಿದಂತೆ ಚಿತ್ರದಲ್ಲಿ ದೊಡ್ಡ ತರಬಲಗವೇ ಇದೇ.
ಶಿವಣ್ಣ ಅಭಿನಯದ 123 ನೇ ಚಿತ್ರ ಬೈರಾಗಿ ಅಗಿದ್ದು, ಶಿವಣ್ಣ ಅವರ ಲುಕ್ ಗೆ ಅಭಿಮಾನಿಗಳು ಕಳೆದುಹೋಗಿದ್ದಾರೆ. ಶಿವಣ್ಣ ಅವರ ಹುಲಿ ವೇಷ, ಹೇರ ಸ್ಟೈಲ್ ಹಾಗೂ ಅವರ ಡಿಫರೆಂಟ್ ಲುಕ್ ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಇನ್ನು ಚಿತ್ರ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ.
ಇನ್ನು ಶಿವಣ್ಣ ಅವರಿಗೆ ವಯಸ್ಸು 60 ಆದ್ರು 16 ರ ಚಿರಯುವಕನಂತೆ ಕಾಣುವ ಸದಾ ಲವಲವಿಕೆಯಿಂದ ಇರುವ ಶಿವಣ್ಣ ಹಾಗೂ ಡಾಲಿ ಧನಂಜಯ್ ಇವರಿಬ್ಬರು ಮೋಡಿ ಹೇಗಿರುತ್ತದೆ ಎಂದು ಕಾದು ನೋಡೋಣ. ನೀವು ಶಿವಣ್ಣ ಅಭಿಮಾನಿಯಾಗಿದ್ದಾರೆ ಫಸ್ಟ್ ಡೇ ಫಸ್ಟ್ ಶೋ ನೋಡುತ್ತೀರಾ ಕಾಮೆಂಟ್ ಮಾಡಿ ತಿಳಿಸಿ.