ಕೆಜಿಎಫ್ 2 ನಲ್ಲಿ ಸಣ್ಣ ಪಾತ್ರವಾದರೂ ಉತ್ತಮವಾಗಿ ನಿಭಾಯಿಸಿದ ಈ ನಟಿ ಯಾರು ಗೊತ್ತಾ? ಕೆಜಿಎಫ್2 ಚಿತ್ರದ ನಂತರ ಇವರ ಹಣೆಬರಹನೇ ಬದಲಾಗಿದೆ ಅಂತೆ.?

ಸುದ್ದಿ

ನಮಸ್ಕಾರ ಪ್ರೀತಿಯ ವೀಕ್ಷಕರೆ ಇತ್ತೀಚಿಗೆ ಬಿಡುಗಡೆಯದ ಕೆಜಿಎಫ್ ಪಾರ್ಟ್ 1 ಹಾಗೂ ಕೆಜಿಎಫ್ ಪಾರ್ಟ್ 2 ಚಿತ್ರ ಇಡೀ ದೇಶ ಕನ್ನಡ ಚಿತ್ರರಂಗದ ಕಡೆಗೆ ತಿರುಗಿ ನೋಡುವ ಹಾಗೆ ಮಾಡಿತು. ಕನ್ನಡದಲ್ಲಿಯೂ ಬಾಲಿವುಡ್ ಸಿನೆಮಾಗಳಿಗೆ ಸೆಡ್ಡು ಹೊಡೆಯುವಂತಹ ಚಿತ್ರಗಳು ಬರುತ್ತವೆ ಎಂದು ಯಾರು ಊಹೆ ಕೂಡ ಮಾಡಿರಲಿಲ್ಲ. ಆದರೆ ಅದನ್ನು ಮಾಡಿ ತೋರಿಸಿದವರು ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಾಗುಂಧೂರ್ ಹಾಗೂ ಚಿತ್ರದ ನಾಯಕ ನಟಿ ರಾಕಿಂಗ್ ಸ್ಟಾರ್ ಯಶ್, ಈ ಚಿತ್ರ ಪ್ರಪಂಚದಾದ್ಯಂತ ಸಿಕ್ಕಾಪಟ್ಟೆ ಸದ್ದು ಮಾಡಿತು. ಯಾವಾ ಚಿತ್ರ ಮಾಡಿರದಂತ ಗಳ್ಳಪೆಟ್ಟಿಗೆಯಲ್ಲಿ ಕಲೆಕ್ಷನ್ ನನ್ನು ಮಾಡಿತು.

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ 1500 ಕೋಟಿ ರೂಪಾಯಿ ಗೂ ಅಧಿಕಗಳಿಕೆ ಮಾಡಿದ ಮೊದಲ ಸಿನೆಮಾ ಎಂಬ ಹೆಗ್ಗಳಿಕೆಗೆ ಪತ್ರವಾಯಿತು. ಅಷ್ಟೇ ಅಲ್ಲದೇ ಹಲವು ದಾಖಲೆಗಳನ್ನು ಕೆಜಿಎಫ್ ಸಿನೆಮಾದ ಪಲಾಗಿದೆ. ಇಂತಹದ್ದೇ ಸಿನೆಮಾಕ್ಕಾಗಿ ಜನರು ಕಾದುಕುಳಿತಿದ್ದಾರೆ ಎನ್ನಲಾಗಿದೆ.

ಈ ಆಸೆಯನ್ನು ಈಡೇರಿಸಿದ್ದು ಕೆಜಿಎಫ್ ಚಿತ್ರತಂಡ ಎಂದರೆ ತಪ್ಪಾಗಲಾರದು. ಕೆಜಿಎಫ್ 2 ಸಿನೆಮಾದಲ್ಲಿ ದೊಡ್ಡ ಕಲಾವಿದರ ದಂಡೆ ಇದೇ. ಈ ಚಿತ್ರದಲ್ಲಿ ನಟನೆ ಮಾಡಿದ ಪ್ರತಿಯೊಬ್ಬ ಕಲಾವಿದನಿಗೂ ಒಂದು ಬದುಕನ್ನು ಕಟ್ಟಿಕೊಟ್ಟಿದೆ. ಇದರಲ್ಲಿ ಕನ್ನಡ, ತಮಿಳು, ತೆಲುಗಿನ ಅನೇಕ ಕಲಾವಿದರು ಸಹ ಅಭಿನಯಿಸಿದ್ದಾರೆ. ಅದರಲ್ಲಿ ಈಶ್ವರಿ ರಾವ್ ಅವರು ಕೂಡ ಒಬ್ಬರು.

ಕೆಜಿಎಫ್ 2 ಚಿತ್ರದ ಪ್ರಮುಖ ಪತ್ರವೊಂದರಲ್ಲಿ ನಟಿ ಈಶ್ವರಿ ರಾವ್ ಅವರು ಕಾಣಿಸಿಕೊಂಡಿದ್ದಾರೆ. ಆದರೆ ನಟಿ ಈಶ್ವರಿ ರಾವ್ ಅವರಿಗೆ ಇದೇನು ಮೊದಲು ಸಿನೆಮಾವೇನು ಅಲ್ಲ. ಇವರು ಹಿಂದೆ ತಮಿಳು, ತೆಲುಗಿನಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಸಾಕಷ್ಟು ಸಿನೆಮಾಗಳಲ್ಲಿ ಪೋಷಕ ಪಾತ್ರ ನಿಭಾಯಿಸಿ ಚಿತ್ರರಸಿಕರಿಂದ ಸೈ ಎನಿಸಿಕೊಂಡಿದ್ದಾರೆ. ಆದರೆ ಕೆಜಿಎಫ್ 2 ಚಿತ್ರದ ಪಾತ್ರ ಮಾತ್ರ ಬಹಳ ವಿಭಿನ್ನವಾಗಿತ್ತು.

ಇನ್ನೂ ನಟಿ ಈಶ್ವರಿ ರಾವ್ ಅವರು ಸಿನೆಮಾರಂಗಕ್ಕೆ ಬಂದು ಸುಮಾರು ಇಪ್ಪತ್ತು ವರ್ಷಗಳೇ ಕಳೆದಿವೆ. ಇವರು ತಮಿಳಿನ ಸೂಪರ್ ಸ್ಟಾರ್ ಗಳಾದ ಕಮಲ್ ಹಾಸನ್, ಎಂ.ಜೀ. ಆರ್ ಅವರಂಥ ಮಹಾನ್ ನಟರೊಂದಿದೆ ನಟಿಸಿದ್ದಾರೆ. ಈ ಮೂಲಕ ಸಿನೆಮಾರಂಗದ ನಟನೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅಲ್ಲದೆ ಪೋಷಕ ಪಾತ್ರಗಳಿಗೂ ಇವರು ಹೇಳಿ ಮಾಡಿಸಿರುವ ಹಾಗೆ ಇದ್ದಾರೆ.

ಹಾಗಾಗಿ ನಿರ್ಮಾಪಕರು, ನಿರ್ದೇಶಕರು ಸಹ ಇವರನ್ನು ಹುಡುಕಿಕೊಂಡು ಇವರಿಗೆ ಆಫರ್ ಕೊಡುತ್ತಾರೆ. ಕಳೆದ ವರ್ಷ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆ ಕೆಲ ಸಿನೆಮಾಗಳಲ್ಲಿ ರಜನಿಕಾಂತ್ ಅವರ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾದ ನಂತರ ಇವರ ಹಣೆಬರಹನೇ ಬದಲಾಗಿದೆ ಎಂದು ಹೇಳಬಹುದು. ಈಗ ತೆಲುಗು, ತಮಿಳು ಚಿತ್ರರಂಗದಲ್ಲಿ ಇವರಿಗೆ ಬೇಡಿಕೆ ಹೆಚ್ಚಾಗಿದೆ. ಕೆಜಿಎಫ್ 2 ಚಿತ್ರದಲ್ಲಿಯೂ ಇವರ ಪಾತ್ರ ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳುವಂತ ಪಾತ್ರದಲ್ಲಿ ನಟಿಸಿದ್ದಾರೆ.

ಇನ್ನೂ ಕೆಜಿಎಫ್ 2 ಚಿತ್ರ ನನಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದೆ. ಈ ಸಿನೆಮಾ ಈ ಮಟ್ಟಕ್ಕೆ ಹಿಟ್ ಆಗುತ್ತದೆ. ನನ್ನ ಪತ್ರವನ್ನು ಜನರು ಇಷ್ಟು ಗುರುತ್ತಿಸುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ. ಆದರೆ ನನ್ನ ಪಾತ್ರವನ್ನು ಜನರು ಗುರುತಿಸಿದ್ದಾರೆ. ತುಂಬಾ ಮೆಚ್ಚಿಕೊಂಡಿದ್ದಾರೆ. ಇದಕ್ಕಾಗಿ ಇಡೀ ಚಿತ್ರತಂಡಕ್ಕೆ ಹಾಗೂ ವಿಶೇಷವಾಗಿ ನಿರ್ದೇಶಕರಿಗೆ ಕೃತಜ್ಞಳಾಗಿದ್ದೇನೆ ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ. ನೀವು ಇವರ ನಟನೆಯ ಬಗ್ಗೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *