ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಇದು ಸಿನಿಮಾ ಮಾತ್ರ ಆಗಿ ಉಳಿದಿಲ್ಲ. ಇದೊಂದು ಮೈಲಿಗಲ್ಲಾಗಿದೆ. ಕನ್ನಡ ಕರುನಾಡು ಮಾತ್ರವಲ್ಲ ಭಾರತೀಯ ಚಿತ್ರರಂಗದ ಹೆಮ್ಮೆಯ ಚಿತ್ರಗಳಲ್ಲಿ ಒಂದಾಗಿದೆ. ಹೀಗಾಗಿ ಈ ಚಿತ್ರಕ್ಕೆ ಪರ ಭಾಷಿಗರು ಚಿತ್ರ ನೋಡಿ ಬಹುಪರಾಕ್ ಹಾಕುತಿದ್ದಾರೆ. ಜನ ಮಾತ್ರ ಅಲ್ಲ, ಪರ ಭಾಷೆಯ ಕಲಾವಿದರು ನಟ, ನಟಿಯರು ಕೂಡ ಚಿತ್ರದ ಬಗ್ಗೆ ಪ್ರಸಾಂಸೆ ವ್ಯಕ್ತಪಡಿಸಿದ್ದಾರೆ. ಕೆಜಿಎಫ್ 2 ಏಪ್ರಿಲ್ 14 ಕ್ಕೆ ತೆರೆಕಂಡು. ಚಿತ್ರ ಬಿಡುಗಡೆಯಾಗಿ ಒಂದು ವಾರ ಕಳೆದರು ಚಿತ್ರದ ಕಲೆಕ್ಷನ್ ಇನ್ನೂ ತಗ್ಗಿಲ್ಲ.
ಈ ಚಿತ್ರ ಅತಿ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದು, ಎಲ್ಲೆಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಚಿತ್ರದ ಕಲೆಕ್ಷನ್ ಕೋಟಿ, ಕೋಟಿಯ ಗಾಡಿ ದಾಟಿದೆ ಯಲ್ಲಾ ಬಾಕ್ಸ್ಅಫೀಸ್ ದಾಖಲೆಗಳನ್ನು ಉಡೀಸ್ ಮಾಡಿದೆ.ಕನ್ನಡದಲ್ಲಿ ಮೈಲಿಗಲ್ಲಾದ ಈ ಚಿತ್ರದ ಬಗ್ಗೆ ಕನ್ನಡದ ಹಲವು ತಾರೆಯರು, ನಿರ್ಮಾಪಕ, ನಿರ್ದೇಶಕ, ತಂತ್ರಜ್ಞನರು ಮಾತನಾಡುತ್ತಾರೆ. ಚಿತ್ರದ ಯಶಸ್ಸುನ್ನು ಸಂಭ್ರಮಿಸುತ್ತಿದ್ದಾರೆ. ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ ಈ ಸ್ಟಾರ್ ನಟರನ್ನು ಈ ಬಗ್ಗೆ ಪ್ರೆಶ್ನೆ ಮಾಡಲಾಗುತ್ತಿದೆ.
ಕೆಜಿಎಫ್ 2 ಚಿತ್ರ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ದಾಖಲೆ ಮಾಡುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಹಾಗೂ ಭಾರತದಲ್ಲಿ ಈ ರೀತಿಯ ದಾಖಲೆ ಮಾಡಿದಂಥ ಚಿತ್ರ ಇದೆ ಮೊದಲು 100 ಕೋಟಿ, 200 ಕೋಟಿಯ ಗಾಡಿಯನ್ನು ಅತಿ ವೇಗವಾಗಿ ಮುಟ್ಟಿದೆ. ಆದರೂ ಕೂಡ ಕನ್ನಡದ ಇತರೆ ಖ್ಯಾತ ನಟರು, ನಿರ್ದೇಶಕರು ಈ ಚಿತ್ರದ ಬಗ್ಗೆ ಮಾತನಾಡುತ್ತಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಪ್ರೆಶ್ನೆ ಮಾಡುತ್ತ ಇದ್ದಾರೆ. ಕನ್ನಡದ ಚಿತ್ರ ಪರವಾಗಿ ನಮ್ಮವರೇ ಕನ್ನಡದವರು ಮಾತನಾಡುತ್ತಿಲ್ಲ ಏಕೆ ಎಂಣುತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ನೇರವಾಗಿ ನಮ್ಮ ಕನ್ನಡದ ಸ್ಟಾರ್ ನಟರ ಬಗ್ಗೆಯೇ ಪ್ರೆಶ್ನೆ ಮಾಡಲಾಗಿದೆ. ಒಂದು ಕನ್ನಡ ಸಿನಿಮಾ ಇಷ್ಟು ದೊಡ್ಡ ಯಶಸ್ಸು ಕಂಡರೂ ಯಾಕೆ ನಮ್ಮ ಕನ್ನಡದ ದರ್ಶನ್, ಸುದೀಪ್, ಧ್ರುವ,ಶಿವಣ್ಣ, ಉಪೇಂದ್ರ, ಅಂತಹ ಅದ್ಭುತ ನಟರು ತುಟಿ ಬಿಚ್ಚ್ಚುತ್ತಿಲ್ಲ. ಆದರೆ ಈ ಬಗ್ಗೆ ಪೋಸ್ಟ್ ಗಳುನ್ನು ಹಾಕಿ ಅಸಮಾಧಾನ ವ್ಯಾಕ್ತ ಪಡಿಸಿದ್ದಾರೆ.
ಆದರೆ ಸಾರ್ವಜನಿಕ ವಾಗಿ ಪೋಸ್ಟ್ ಹಾಕಿಲ್ಲ ಅಂದ ಮಾತ್ರಕ್ಕೆ ಅವರು ಚಿತ್ರತಂಡಕ್ಕೆ ಶುಭಕೋರಿಲ್ಲ ಎಂದಲ್ಲ ವ್ಯಕ್ತಿಕವಾಗಿ ಅವರು ಚಿತ್ರ ತಂಡಕ್ಕೆ ತಿಳಿಸಿರಬಹುದು. ಇನ್ನು ಕೆಜಿಎಫ್ 2 ಯಶಸ್ಸುನ್ನು ಕನ್ನಡದ ಹಲವು ತಾರೆಯರು ಸಂಭ್ರಮಿಸಿದ್ದರೆ. ಕನ್ನಡ ಚಿತ್ರರಂಗಕ್ಕೆ ತಂದುಕೊಟ್ಟ ಈ ಯಶಸ್ಸುನ್ನು ಚಿತ್ರತಂಡಕ್ಕೆ ಸ್ಮರಿಸಿದ್ದಾರೆ. ಕನ್ನಡದ ನಿರ್ದೇಶಕ ಕೆ. ಎಂ ಚೈತನ್ಯ, ನಟಿ ಮಾನ್ವಿತಾ ಹರೀಶ್, ಆಶಿಕಾ ರಂಗನಾಥ್, ನಿರ್ದೇಶಕ ಸುನಿ, ಪವನ್ ಒಡೆಯರ್ ಸೇರಿದಂತೆ ಹಲವಾರು ಕೆಜಿಎಫ್ 2 ಚಿತ್ರವನ್ನು ವೀಕ್ಷಿಸಿ ಶುಭಕೊರಿದ್ದಾರೆ.
ಇನ್ನು ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ನೋಡಿದ ಪರಭಾಷಿಗರು ಚಿತ್ರತಂಡಕ್ಕೆ ವ್ಯಕ್ತಿಕ್ಕವಾಗಿ ಕರೆಮಾಡಿ ಶುಭಕೋರಿದ್ದಾರೆ. ಹಾಗೂ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಚಾರವನ್ನು ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಹಂಚಿಕೊಂಡಿದ್ದಾರೆ. ಮಹೇಶ್ ಬಾಬು, ಜೂ ಏನ್ ಟಿ ಆರ್ ಕರೆ ಮಾಡಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ.
ಜೊತಗೆ ಜಗಪತಿ ಬಾಬು, ಶಿವ ಕಾರ್ತಿಕೇಯನ್, ವಿಶಾಲ್ ಅಂತಹ ನಟರು ಸಾಮಾಜಿಕ ಜಾಲತಾಣಗಳಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಬಗ್ಗೆ ಪೋಸ್ಟ್ ಹಂಚಿಕೊಂಡಿರುವುದು. ಕನ್ನಡಿಗರ ಹೆಮ್ಮೆಯ ವಿಷಯ ನಮ್ಮ ಕನ್ನಡದ ಚಿತ್ರ ಕನ್ನಡಿಗರ ಹೆಮ್ಮೆಯ ವಿಷಯ