ನಮ್ಮ ಕನ್ನಡ ಸಿನಿರಂಗ ಮಾತ್ರ ಅಲ್ಲದೇ ಭಾರತೀಯ ಸಿನಿಮಾ ರಂಗದಾದಲ್ಲೊಂದು ಬಿರುಗಾಳಿಯನ್ನೇ ಎಬ್ಬಿಸಿದೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆಯಾಗಿ ಎಲ್ಲಾ ಭಾಷೆಗಳಲ್ಲಿ ಹೊಸ ದಾಖಲೆಗಳನ್ನು ಮಾಡಿದೆ ಎಲ್ಲಾ ಭಾಷೆಯಲ್ಲಿ ಸಹ ಅಪಾರವಾದ ಜನ ಮೆಚ್ಚಿಗೆಯನ್ನು ಪಡೆದುಕೊಂಡಿದೆ.
ಕನ್ನಡ ಚಿತ್ರರಂಗದ ಸಹಾ ಕೆಜಿಎಫ್ 2 ಹವಾ ಜೋರಾಗಿಯೇ ಇದೆ. ಈಗಾಗಲೇ ಯಶ್ ಅಭಿಮಾನಗಳು ಹಾಗೂ ಯಲ್ಲಾ ಸಿನಿ ಪ್ರೇಮಿಗಳು ಸಿನಿಮಾ ನೋಡಿ ಫುಲ್ ಥ್ರಿಲ್ ಆಗಿದ್ದಾರೆ. ಮೆಚ್ಚುಗೆಯ ಮಾತುಗಲ್ಲಳನ್ನು ಆಡುತಿದ್ದರೆ. ಈಗ ನಾವ್ ಎಲ್ಲವುಗಳ ನಡುವೆ ಕೆಜಿಎಫ್ ಟು ಸಿನಿಮಾವನ್ನು ಸೂಪರ್ ಸ್ಟಾರ್ ರಜನಿಕಾಂತ್ ಅವರು ವೀಕ್ಷಣೆ ಮಾಡಿ ಚಿತ್ರವನ್ನು ಹಾಡಿ ಹೊಗಳಿದ್ದಾರೆ.
ಏಪ್ರಿಲ್ 14 ರಂದು ಗುರುವಾರ ವಿಶ್ವದಾದ್ಯಂತ ಕೆಜಿಎಫ್ ಟು ಸೇಮ ಹತ್ತು ಸಾವಿರಕ್ಕೂ ಮೀರಿದ ಸ್ಕ್ರೀನ್ ಗಳಲ್ಲಿ ತೆರೆಕಂಡು. ಕೆಜಿಎಫ್ 2 ಚಿತ್ರ ಬಿಡುಗಡೆಯಾದ ಮೊದಲ ದಿನವೇ ಚೆನ್ನೈ ಚಿತ್ರಮಂದಿರ ಒಂದರಲ್ಲಿ ರಜನಿಕಾಂತ್ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಮತ್ತೊಂದು ವಿಶೇಷ ಏನೆಂದರೆ ರಜನಿಕಾಂತ್ ಕನ್ನಡ ವರ್ಷನ್ ನಲ್ಲಿ ಸಿನಿಮಾ ವನ್ನು ವೀಕ್ಷಿಸಿದ್ದಾರೆ, ಸಿನಿಮಗೆ ಫಿದಾ ಆಗಿದ್ದಾರೆ. ಸಿನಿಮಾ ನೋಡಿದ ನಂತರ ಅವರು ಶುಕ್ರವಾರ ಬೆಳಗ್ಗೆ ಸಿನಿಮಾ ನಿರ್ಮಾಪಕ ವಿಜಯ್ ಕಿರಗಂದೂರುಅವರಿಗೆ ಕರೆ ಮಾಡಿ ಚಿತ್ರತಂಡಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ಕಾಲ್ ಮಾಡಿದ ಚಿತ್ರತಂಡಕ್ಕೆ ರಜನಿಕಾಂತ್ ಅವರು ಒಳ್ಳೆಯ ಸಿನಿಮಾ ಮಾಡಿದ್ದೀರಾ ಸಿನಿಮಾ ತುಂಬಾ ಅದ್ಬುತವಾಗಿದೆ ನನಗೆ ತುಂಬಾ ಇಷ್ಟ ವಾಯಿತು ನಿಮ್ಮ ಟೀಮ್ ತುಂಬಾ ಚನ್ನಾಗಿದೆ ಎಂದು ಹೇಳುವ ಮೂಲಕ ಮೆಚ್ಚುಗೆ ಯನ್ನು ವ್ಯಕ್ತಪಡಿಸಿದರು. ಗುರುವಾರ ಬಿಡುಗಡೆಯದ ಕೆಜಿಎಫ್ 2 ಸಿನಿಮಾ ದೇಶದಲ್ಲಿ ಒಂದು ಹೊಸ ಸಂಚಲನವನ್ನು ಸೃಷ್ಟಿಸಿದೆ. ಪ್ರೇಕ್ಷಕರ ನಿರೀಕ್ಷೆಗಳನ್ನು ಸಿನಿಮಾ ಸಿನಿಮಾದಲ್ಲಿ ಸುಳ್ಳು ಮಾಡಿಲ್ಲ ಬಿಡುಗಡೆಗೊಂಡ ಎಲ್ಲಾ ಕಡೆಗಳಲ್ಲಿ ಸಿನಿಮಾ ಉತ್ತಮ ಕಲೆಕ್ಷನ್ ಮೂಲಕ ಮುನ್ನುಗ್ಗುತ್ತಿದೆ. ಹಿಂದಿ ಭಾಷೆಯಲ್ಲಿ ಸಿನಿಮಾ ಅಲ್ಲಿಯ ಜನರ ಮೋಡಿ ಮಾಡಿದ್ದು. ಅಲ್ಲಿ ಕೊಡ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ನಮ್ಮ ಕನ್ನಡದ ಸಿನಿಮಾ ಈ ಮಟ್ಟಕ್ಕೆ ಹೋಗುತ್ತಿದೆ ಅಂದರೆ ಅದಕ್ಕೆ ಕಾರಣ ನಿರ್ದೇಶಕ ಪ್ರಶಾಂತ್ ನೀಲ್, ನಾಯಕ ನಟ ರಾಕಿಂಗ್ ಸ್ಟಾರ್ ಯಶ್, ನಿರ್ಮಾಪಕ ವಿಜಯ್ ಕಿರಗಂದೂರ್, ರವಿ ಬಸ್ರುರ್, ಭುವನ್ ಗೌಡ, ಹಾಗೂ ಇಡೀ ಟೀಮ್ ಗೆ ಸಾಲ್ಲಲೇಬೇಕು.
ಇಡೀ ಭಾರತ ಚಿತ್ರರಂಗವೇ ಇರುಗಿ ನೋಡುವಹಾಗೆ ಮಾಡಿದೆ ರಾಕಿಂಗ್ ಸ್ಟಾರ್ ಯಶ್ ಅವರ ನಟನೆ ಬಗ್ಗೆ ಇಡೀ ಸಿನಿಮಾ ರಂಗವೆ ಹಾಡಿ ಹೋಗಳುತ್ತಿದೆ. ಪ್ರಶಾಂತ್ ನೀಲ್ ಅವರ ನಿರ್ದೇಶನ ಎರಡು ಮಾತಿಲ್ಲ, ಸಂಗೀತ ನಿರ್ದೇಶಕ ರವಿ ಬಸ್ರುರ್ ಸಂಗೀತ ಚಿತ್ರಮಂದಿರದಲ್ಲಿ ಸೀಟಿನ ತುದಿಯಲಿ ಕುರಿಸುತ್ತದೆ.
ಕ್ಯಾಮರಾ ವರ್ಕ್ ಭುವನ್ ಗೌಡ ಅವರ ಛಾಯಾಗ್ರಹಣ ಅಂತು ಪ್ರತಿಯೊಂದು ಸೀನ್ ಕೂಡ ಹಚ್ಚೆ ಅಂತೆ ಎದ್ದು ಕಾಣಿಸುತಿದ್ದೆ. ಒಟ್ಟಾರೆ ಇಡೀ ಚಿತ್ರ ಒಂದು ಹೊಸ ಇತಿಹಾಸ ವನ್ನು ಸೃಷ್ಟಿಸಿದೆ. ಚಿತ್ರ ಬಿಡುಗಡೆಯಾಗಿ ಇನ್ನು ಎಲ್ಲಾ ಚಿತ್ರಮಂದಿರಗಳನ್ನು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.