ಕೆ.ಜಿ.ಎಫ್-೨ ಸಿನೆಮಾದ ಹಿರೋ ಸಂಜಯ್ ದತ್; ಮಾನ್ಯತಾ ದತ್ ಕಳೆದ ಎರಡು ವರ್ಷಗಳಿಂದ ಕೋವಿಡ್-೧೯ರ ಕಾರಣದಿಂದ ಹೆಚ್ಚಿನ ಸಿನೆಮಾಗಳು ಬಿಡುಗಡೆಯಾಗಿರಲಿಲ್ಲ. ಅದರಲ್ಲೂ ದೊಡ್ಡ ದೊಡ್ಡ ಸಿನೆಮಾಗಳನ್ನು ಬಿಡುಗಡೆ ಮಾಡಲು ನಿರ್ಮಾಪಕರು ಹಿಂದೇಟು ಹಾಕಿದ್ದರು. ಯಾಕೆಂದರೆ ಮೊದಲೇ ನೂರಾರು ಕೋಟಿ ಬಂಡವಾಳ ಹೂಡಿ ಸಿನೆಮಾ ಮಾಡಿದ್ದೇವೆ. ಸಿನೆಮಾ ಏನಾದರೂ ವ್ಯವಹಾರಿಕವಾಗಿ ಸೋತುಹೋದರೆ ಸಾಲ ತೀರಿಸುವ ಬಗೆ ತಿಳಿಯುವುದಿಲ್ಲ. ಹಾಗಾಗಿ ಕರೋನಾ ಮುಗಿದ ನಂತರ ಆಲೋಚನೆ ಮಾಡೋಣ ಎಂದು ಸುಮ್ಮನಿದ್ದರು.
ಈಗ ಕರೋನಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಈ ವರ್ಷ ಸಿನಿಪ್ರಿಯರ ಪಾಲಿಗೆ ಚಿನ್ನದ ವರ್ಷ ಎಂದರೆ ತಪ್ಪಾಗಲಾರದು. ಏಕೆಂದರೆ ಒಂದಕ್ಕಿಂದ ಒಂದು ಹೆಚ್ಚಿನ ಮನರಂಜನೆ ನೀಡುವ ಸಿನೆಮಾಗಳು ತೆರೆಗೆ ಬಂದಿವೆ. ಜನರಿಗೆ ಮನರಂಜನೆಯ ಬಾಡೂವವನ್ನೇ ಬಡಿಸಿವೆ. ಇಡೀ ಭಾರತೀಯ ಚಿತ್ರರಂಗವೇ ತಿರುಗಿ ಕನ್ನಡದತ್ತ ನೋಡುವಂತೆ ಮಾಡಿದ ಸಿನೆಮಾ ಕೆ.ಜಿ.ಎಫ್-೨.
ಪ್ರಶಾಂತ್ ನೀಲ್ ಅವರು ನಿರ್ದೇಶಿಸಿದ ಹೊಂಬಾಳೆ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಅವರು ನಿರ್ಮಿಸಿದ ಸಿನೆಮಾ ಕೆ.ಜಿ.ಎಫ್.-೨. ಈ ಸಿನೆಮಾದಲ್ಲಿ ನಾಯಕನಾಗಿ ರಾಕಿಂಗ್ ಸ್ಟಾರ್ ಯಶ್, ನಾಯಕಿಯಾಗಿ ಶ್ರೀನಿಧಿ ಶೆಟ್ಟಿ, ವಿಲನ್ ಆಗಿ ಸಂಜಯದತ್ ಕಾಣಿಸಿಕೊಂಡಿದ್ದಾರೆ.
ಅಲ್ಲದೆ ಈ ಸಿನೆಮಾದಲ್ಲಿ ರವಿನಾ ಟಂಡನ್, ಪ್ರಕಾಶ ರಾಜ್, ಅರ್ಚನಾ ಜೋಯಿಸ್, ಮಾಳವಿಕಾ ಅವಿನಾಶ್, ನಾಗಾಭರಣ ಸೇರಿದಂತೆ ಹಲವು ದಿಗ್ಗಜ ಕಲಾವಿದರು ನಟಿಸಿದ್ದಾರೆ.
ಕೆ.ಜಿ.ಎಫ್.-೨ ಸಿನೆಮಾವು ಈಗಾಗಲೇ ಹಲವು ದಾಖಲೆಗಳನ್ನು ನಿರ್ಮಿಸಿದೆ. ಏ.೧೪ರಂದು ವಿಶ್ವಾದ್ಯಂತ ಸುಮಾರು ೧೦,೦೦೦ ಸ್ಕ್ರೀನ್ಗಳಲ್ಲಿ ತೆರೆಕಂಡಿತ್ತು.ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ, ಇಂಗ್ಲಿಷ್ ಸೇರಿದಂತೆ ೫ ಭಾಷೆಗಳಲ್ಲಿ ಈ ಸಿನೆಮಾ ಬಿಡುಗಡೆಯಾಗಿತ್ತು. ಭಾರತದಲ್ಲಿಯೇ ೬೦೦೦ ಸ್ಕ್ರೀನ್ಗಳಲ್ಲಿ ಬಿಡುಗಡೆಯಾಗಿತ್ತು. ಕರ್ನಾಟಕದಲ್ಲಿ ಬರೋಬ್ಬರಿ ೫೫೦ ಸ್ಕ್ರೀನ್ಗಳಲ್ಲಿ ತೆರೆಕಂಡಿತ್ತು. ಒಂದೇ ದಿನದಲ್ಲಿ ಬಾಕ್ಸ್ ಆಫೀಸ್ನಲ್ಲಿ ತೂಫಾನ್ ಎಬ್ಬಿಸುವ ಮೂಲಕ ಆರ್ಆರ್ಆರ್ ಸಿನೆಮಾದ ದಾಖಲೆಗಳನ್ನು ಮುರಿದಿದೆ.
ಒಂದೇ ದಿನಕ್ಕೆ ೧೦೦ ಕೋಟಿ ಕ್ಲಬ್ ಸೇರಿದ ಸಿನೆಮಾ, ಬಾಲಿವುಡ್ನಲ್ಲೂ ದಾಖಲೆ ಕಲೆಕ್ಷನ್ ಮಾಡಿದ ಸಿನೆಮಾ ಸೇರಿದಂತೆ ಹಲವು ದಾಖಲೆಗಳನ್ನು ಕೆ.ಜಿ.ಎಫ್-೨ ಸಿನೆಮಾ ಬರೆದಿದೆ. ರಾಕಿಭಾಯ್ ಅಬ್ಬರಕ್ಕೆ ಇಡೀ ಬಾಲಿವುಡ್ ಮಂಕಾಗಿ ಕುಳಿತಿದೆ. ದಕ್ಷಿಣ ಭಾರತದ ಚಿತ್ರವೊಂದು ಬಾಲಿವುಡ್ನಲ್ಲಿ ದಾಖಲೆ ಮಾಡುತ್ತಿರುವುದು ಎಷ್ಟೋ ಬಾಲಿವುಡ್ ಮಂದಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಈ ಸಿನೆಮಾದಲ್ಲಿ ಸಂಜಯ್ ದತ್ ಹಾಗೂ ರವಿನಾ ಟಂಡನ್ ಅವರ ಪಾತ್ರಕ್ಕೂ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂಜಯ್ ದತ್ ಅವರು ಅದೀರನಾಗಿ ರಾಕಿಭಾಯ್ ಎದುರು ಅಬ್ಬರಿಸಿದ್ದಾರೆ. ಯಶ್ ಹಾಗೂ ಸಂಜಯ್ ದತ್ ಅವರ ಮುಖಾಮುಖಿ ದೃಶ್ಯಗಳು ಚಿತ್ರದ ರಂಗನ್ನು ಇನ್ನಷ್ಟು ಹೆಚ್ಚಿಸಿದೆ. ಸಂಜಯ್ ದತ್ ಅವರ ಪತ್ನಿ ಮಾನ್ಯತಾ ದತ್ ಅವರು ಈ ಸಿನೆಮಾ ಕುರಿತು ಮಾತನಾಡಿದ್ದು, ಕೆ.ಜಿ.ಎಫ್-೨ ಸಿನೆಮಾ ಅದೀರನ ಸ್ವತ್ತು ಎಂದು ಹೇಳಿದ್ದಾರೆ.
ಕೆ.ಜಿ.ಎಫ್.-೨ ಸಿನೆಮಾ ಸಂಜಯ್ ದತ್ ಅವರ ಪಾಲಿಗೆ ತುಂಬಾನೇ ಸ್ಪೇಷಲ್ ಸಿನೆಮಾವಾಗಿದೆ. ಯಾರ್ಯಾರು ಸಂಜಯ್ ದತ್ ಅವರನ್ನು ಬಹಳ ಕೆಟ್ಟ ಹುಡುಗ, ಜವಾಬ್ದಾರಿ ಇಲ್ಲದವ ಎಂದು ಬೈದಿದ್ದರೋ ಅವರೆಲ್ಲರೂ ಈ ಸಿನೆಮಾ ನೋಡಲೇ ಬೇಕು. ಜೀವನದ ಬಹಳ ಕಷ್ಟದ ದಿನಗಳಲ್ಲಿ ಅವರು ಕೆ.ಜಿ.ಎಫ್.-೨ ಸಿನೆಮಾದಲ್ಲಿ ನಟಿಸಿದ್ದಾರೆ. ಅವರ ಪಾತ್ರಕ್ಕೆ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಹಾಗಾಗಿ ನನಗೆ ನನ್ನ ಪತಿ ಸಂಜಯ್ ದತ್ ಅವರೇ ಈ ಸಿನೆಮಾದ ಹಿರೋ ಎಂದು ಅನಿಸುತ್ತದೆ ಎಂದು ಮಾನ್ಯತಾ ದತ್ ತಿಳಿಸಿದ್ದಾರೆ.
