ನಮಸ್ತೇ ಪ್ರೀತಿಯ ವೀಕ್ಷಕರೆ ಇತ್ತೀಚಿಗೆ ಬಿಡುಗಡೆಯದ ಕೆಜಿಎಫ್ 2 ಸಿನೆಮಾ ವಿಶ್ವಮಟ್ಟದಲ್ಲಿ ದೊಡ್ಡ ಸುದ್ಧಿ ಹಾಗೂ ಹೆಸರನ್ನು ಮಾಡಿತ್ತು. ಕೆಜಿಎಫ್ 2 ಚಿತ್ರ ಬಿಡುಗಡೆಯಗಿ 2 ವಾರಗಳಲ್ಲಿ ಬರೋಬ್ಬರಿ 900 ಕೋಟಿ ರೂಪಾಯಿ ಹಣದ ಹೊಳೆಯನ್ನೇ ಗಳಿಸಿತ್ತು. ಈಗ 1400 ಕೋಟಿಗಿಂತ ಅಧಿಕ ಹೆಚ್ಚು ಹಣವನ್ನು ಗಳಿಕೆ ಮಾಡಿ, ತೆಲುಗಿನ ರಾಜಮೌಳಿ ನಿರ್ದೇನದ ಆರ್.ಆರ್. ಆರ್ ಚಿತ್ರದ ಕಲೆಕ್ಷನ್ ರೆಕಾರ್ಡ್ ಬ್ರೇಕ್ ಮಾಡಿದೆ. ಕೆಜಿಎಫ್ 2 ಚಿತ್ರ ಬರೇ ಹಣದಿಂದ ಹೆಸರು ಮಾಡಿಲ್ಲ, ಚಿತ್ರದ ಬಗ್ಗೆ ಹಾಗೂ ಎಲ್ಲಾ ವಿಚಾರದಲ್ಲೂ ಸಹ ಕೆಜಿಎಫ್ 2 ದೇಶ ದೇಲ್ಲೆಡೆ ಸದ್ದು ಮಾಡಿತ್ತು.
ಇನ್ನು ಕೆಜಿಎಫ್ 2 ಚಿತ್ರ ಎಲ್ಲೆಡೆ ಒಳ್ಳೆಯ ಪ್ರದರ್ಶನ ಕಂಡು 75ನೇ ದಿನದತ್ತ ದಾಪುಗಲು ಹಾಕುತ್ತಿದೆ. ಕೆಜಿಎಫ್ 2 ಸಿನೆಮಾ ಸಿನೆಮಾ ಅದೆಷ್ಟೋ ಜನರ ಪಾಲಿಗೆ ಬೆಳಕಾಗಿದೆ ಎಂದರೆ ತಪ್ಪಾಗಲ್ಲ. ಯಾಕೆಂದ್ರೆ ಕೆಜಿಎಫ್ 1 ಹಾಗೂ ಕೆಜಿಎಫ್ 2 ಸಿನೆಮಾದಲ್ಲಿ ನಟಿಸಿರುವ ಪ್ರತಿಯೊಬ್ಬ ಕಲಾವಿದನ ಜೀವನ ಬದಲಾಗಿದೆ. ಈ ಎರಡು ಚಿತ್ರಗಳಲ್ಲಿ ದೃಷ್ಟಿ ಸರಿ ಇಲ್ಲದ ಒಬ್ಬ ತಾತನ ಪಾತ್ರ ಸಹ ಇತ್ತು ನೀವು ನೋಡಿರುತ್ತಿರ.
ಇದು ಅವರ ಪಾಲಿಗೆ ಚಿಕ್ಕ ಪಾತ್ರವಾದರು ಕೂಡ, ಆ ಪಾತ್ರ ಬರುವ ಸಂದರ್ಭ, ತರುವ ಟ್ವಿಸ್ಟ್ ಇಂದ ಜನರಿಗೆ ತುಂಬಾ ಇಷ್ಟವಾಗಿತ್ತು. ಜನರ ನೆನಪಿನಲ್ಲಿ ಈ ಪಾತ್ರ ಉಳಿದಿತ್ತು. ಈ ಪಾತ್ರದಲ್ಲಿ ನಟಿಸಿದ ಹಿರಿಯ ಕಲಾವಿದನ ಹೆಸರು ಕೃಷ್ಣ ಜಿ ರಾವ್. ಇವರು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದೆಷ್ಟೋ ಸಿನೆಮಾಗಳಲ್ಲಿ ಕೆಲಸ ಮಾಡಿಯೂ ಸಿಗದ ಅವಕಾಶಗಳು, ಹಣ ಕೆಜಿಎಫ್ ಸಿನಿಮಾದಲ್ಲಿ ಅದೊಂದು ಸಣ್ಣ ಪಾತ್ರದಿಂದ ಸಿಕ್ಕಿದೆಯಂತೆ. ಇದೀಗ ಕೃಷ್ಣ ರಾವ್ ಅವರು ಒಂದು ಸಿನೆಮಾದಲ್ಲಿ ಹೀರೊ ಆಗಿ ಕೂಡ ನಟಿಸಿದ್ದಾರೆ. ಇವರು ಹೊಸ ಚಿತ್ರದ ಹೆಸರು ಮುದುಕನ ಲವ್ ಸ್ಟೋರಿ ಈ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದರೆ.
ಈ ಚಿತ್ರ ಸಂಪೂರ್ಣ ಕಾಮಿಡಿ ಚಿತ್ರವಾಗಿದ್ದು, ಮುದುಕನಿಗೆ ಮದುವೆ ಮಾಡಲು ಹೊರಟಾಗ ಏನೆಲ್ಲಾ ತೊಂದರೆಗಳು ಆಗುತ್ತದೆ ಎನ್ನುದನ್ನು ಹಾಸ್ಯಭರಿತವಾಗಿ ತೋರಿಸಲಾಗಿದೆಯಂತೆ. ಈಗಾಗಲೇ ಸಿನೆಮಾ ಚಿತ್ರಿಕಾರಣ ಎಲ್ಲವೂ ಮುಗಿದಿದ್ದು, ಶೀಘ್ರದಲ್ಲೇ ಬೆಳ್ಳಿತೆರೆಮೇಲೆ ತರುವ ಪ್ರಯತ್ನದಲ್ಲಿದೆ ಚಿತ್ರತಂಡ. ಕೆಜಿಎಫ್ ಬಳಿಕ ಕೃಷ್ಣ ಜಿ ರಾವ್ ಅವರು ಬಹು ಬೇಡಿಕೆಯ ನಟ ಆಗಿದ್ದಾರೆ.
ಕೆಜಿಎಫ್ 2 ಸಿನೆಮಾ ಅಷ್ಟರ ಮಟ್ಟಿಗೆ ಅವರಿಗೆ ಬೇಡಿಕೆಯನ್ನು ತಂದುಕೊಟ್ಟಿದೆ. ಇನ್ನು ಕೆಜಿಎಫ್ ಸಿನೆಮಾ ಮಾಡುವ ಸಮಯದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಅವರು ಕೃಷ್ಣ ಜಿ ರಾವ್ ಅವರಿಗೆ ಒಂದು ಮಾತು ಕೊಟ್ಟಿದ್ದಾರಂತೆ, ಮುಂದಿನ ಸಿನೆಮಾದಲ್ಲೂ ನಿಮಗೆ ಪಾತ್ರ ಮಾಡುವ ಅವಕಾಶ ಕೊಡುತ್ತೇನೆ ಎಂದು ಹೇಳಿದ್ದಾರಂತೆ.
ಇದೀಗ ಪ್ರಶಾಂತ್ ನೀಲ್ ಅವರು ತಾವು ಕೊಟ್ಟಿರುವ ಮಾತನ್ನು ಉಳಿಸಿಕೊಂಡಿದ್ದಾರೆ ಎನ್ನುವ ಸುದ್ಧಿ ಕೇಳಿ ಬರುತ್ತಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅವರ ಮುಂದಿನ ಚಿತ್ರ ಕೃಷ್ಣ ಜಿ ರಾವ್ ಅವರಿಗೆ ಅಭಿನಯಿಸುವ ಅವಕಾಶ ನೀಡಿದ್ದರಂತೆ. ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡುತ್ತಿರುವ ಸಲಾರ್ ಸಿನೆಮಾದಲ್ಲಿ ಸಹ ಕೆಜಿಎಫ್ ಫೇಮಸ್ ತಾತನಿಗೆ ದೊಡ್ಡ ಅವಕಾಶ ನೀಡಲಾಗಿದ್ದು. ಶೀಘ್ರದಲ್ಲೇ ಪ್ರಶಾಂತ್ ನೀಲ್ ಅವರು ಕೃಷ್ಣ ಜಿ ರಾವ್ ಅವರನ್ನು ಚಿತ್ರೀಕಾರಣಕ್ಕೆ ಕರೆಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಪ್ರಶಾಂತ್ ನೀಲ್ ಅವರು ತಾವು ಕೊಟ್ಟ ಮಾತನ್ನು ಉಳಿಸಿಕೊಂಡಿರುವ ವಿಚಾರ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಈ ಸುದ್ಧಿಯನ್ನು ಕೇಳಿ ಪ್ರಶಾಂತ್ ನೀಲ್ ಅವರ ಅಭಿಮಾನಿಗಳು ಹಾಗೂ ಕರ್ನಾಟಕದ ಜನರು ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾರೆ. ಇನ್ನೂ ಕೆಜಿಎಫ್ 1 ಹಾಗೂ ಕೆಜಿಎಫ್ 2 ನಲ್ಲಿ ತಾತನ ಪಾತ್ರವನ್ನು ಮಾಡಿರುವ ಕೃಷ್ಣ ಜಿ ರಾವ್ ಅವರಿಗೆ ಈಗಾಗಲೇ ಹಲವಾರು ಸಿನೆಮಾಗಳಲ್ಲಿ ನಟಿಸುವ ಅವಕಾಶಗಳು ಬರುತ್ತಿದ್ದು, ಮೂರು ಸಿನೆಮಾಗಳನ್ನು ಒಪ್ಪಿಕೊಂಡಿದ್ದಾರೆ. ಕೃಷ್ಣ ಜಿ ರಾವ್ ಅವರು ಮೂಲತಃ ಮೇಸೂರಿನವರಾದ ಇವರು ಸದ್ಯ ಬೆಂಗಳೂರಿನಲ್ಲೇ ಸೆಟಲ್ ಆಗುವ ಪ್ಲಾನ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ..