ಕೊಟ್ಟ ಮಾತಿನಂತೆ ತಾಯಂದಿರ ದಿನದಂದು “ಇಡ್ಲಿ ಅಮ್ಮ”ನಿಗೆ ಮನೆ ಗಿಫ್ಟ್ ಕೊಟ್ಟ ಆನಂದ್‌ ಮಹೀಂದ್ರಾ

ಸುದ್ದಿ

ನಮಸ್ತೆ ಸ್ನೇಹಿತರೆ ನಾವು ಇಂದು ಬರೆದಿರುವ ಲೇಖನದಲ್ಲಿ ತಮಿಳುನಾಡಿನ ಪೆರು ಸನಿಹದ ವಡಿವೇಲಪಾಳಯಂ ನಲ್ಲಿ 1 ರೂಗೆ ಒಂದು ಇಡ್ಲಿ ಕೊಟ್ಟು “ಇಡ್ಲಿ ಅಮ್ಮ” ಎಂದೇ ಪ್ರಸಿದ್ದವಾಗಿರುವ ಎಮ್ ಕಮಲಾಥಲ್ ಅವರಿಗೆ ತಾಯಂದಿರ ದಿನದಕ್ಕೆ ವಿಶೇಷ ಉಡುಗೊರೆ ಸಿಕ್ಕಿದೆ.
ಉದ್ಯಮಿ ಆನಂದ್ ಮಹಿಂದ್ರಾ ಅವರು ಇಡ್ಲಿ ಅಮ್ಮ ನವರಿಗೆ ಮನೆಯೊಂದನ್ನು ಕಟ್ಟಿಸಿದ್ದು ಅದನ್ನು ಅವರು ವಿಶೇಷ ದಿನ ಅಂದರೆ “ಅಮ್ಮಂದಿರ ದಿನದಂದು” ವಿಶೇಷವಾಗಿ ಅವರಿಗೆ ಹಸ್ತತರಿಸಿದ್ದಾರೆ. ಚಿಕ್ಕ ಅಳಿಲು ಸೇವೆಅಂತಯೇ ಸಮಾಜ ಸೇವೆ ಮಾಡಿಕೊಂಡಿದ್ದ ಇಡ್ಲಿ ಅಮ್ಮನ ಬಗ್ಗೆ ಆನಂದ್ ಅವರು 2019 ರಲ್ಲಿ ಟ್ವಿಟ್ ಮಾಡಿದ್ದು. ಅವರಿಗೆ ಮನೆ ಕೊಡುವುದಾಗಿ ಹೇಳಿದ್ದರು. ಇದೀಗ ತಮ್ಮ ಮಾತನ್ನು ನಿಜ ರೂಪಕ್ಕೆ ತಂದಿದ್ದರೆ.

ತಮಿಳುನಾಡಿನ ವಡಿವೇಲಪಾಳಯಂ ನಲ್ಲಿ ಒಂದು ರೂಪಾಯಿಗೆ ಇಡ್ಲಿ ಮಾರುವ ಅಜ್ಜಿ ಕಮಲಾಥಲ್ ಅವರ ಬಗ್ಗೆ ಕೆಲವು ವರ್ಷಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸುದ್ದಿಯಾಗಿತ್ತು. ಆಕೆ ಕಳೆದ ಹಲವು ವರ್ಷಗಳಿಂದಲೂ, ಬಡವರು, ಕೂಲಿ ಕಾರ್ಮಿಕರಿಗೆ ಒಂದೇ ರುಪಾಯಿಗೆ ಇಡ್ಲಿಯನ್ನು ಮಾರಾಟ ಮಾಡುತ್ತಿರುವ ವಿಷಯ ಮಧ್ಯದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾದಾಗ ಜನರು ಇದಕ್ಕೆ ಅಪಾರವಾದ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರು.

ತಾನು ಬಡತನದಲ್ಲಿ ಇದ್ದರೂ ಸಹ ಆಕೆ ಬೇರೆಯವರಿಗೆ, ವಿಶೇಷವಾಗಿ ಬಡವರಿಗೆ ಬಗ್ಗೆ ಮಾಡುವ ಸಹಾಯ ಹಾಗೂ ಈ ವಯಸ್ಸಿನಲ್ಲಿ ಪಡುವ ಶ್ರಮ ಕಂಡು ಇಡೀ ದೇಶದ ಜನರು ಅವರನ್ನು ಅಪಾರ ಮೆಚ್ಚುಗೆ ಪತ್ರರಾದರು.

ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆದಾಗ ಆನಂದ್ ಮಾಹಿಂದ್ರಾ ಉದ್ಯಮಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಚಾರವನ್ನು ಶೇರ್ ಮಾಡಿಕೊಂಡು, ಆ ವೃದ್ಧ ಮಹಿಳೆಗೆ ನೆರವನ್ನು ನೀಡುವ ಮಾತನ್ನು ಆಡಿದ್ದರು. ಅಂದು ಆನಂದ್ ಅವರು ಆಡಿದ ಮಾತಿನಂತೆ ನಡೆದುಕೊಂಡಿದ್ದಾರೆ. ಆನಂದ್ ಮಾಹಿಂದ್ರಾ ಅವರು ಮಹಿಳೆಗೆ ಅಮ್ಮಂದಿರ ದಿನದ ವಿಶೇಷವಾಗಿ ಒಂದು ಅಪರೂಪದ ಉಡುಗೊರೆಯನ್ನು ನೀಡಿದ್ದಾರೆ. ಅವರ ಈ ಕಾರ್ಯಕ್ಕೆ ಇಡೀ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಯ ಸುರಿಮಳೆ ಹರಿದು ಬರುತ್ತಿದೆ.

ನಿಜ, ಉದ್ಯಮಿ ಆನಂದ್ ಮಾಹಿಂದ್ರಾ ಬಡವರಿಗೆ ಒಂದು ರೂಪಾಯಿ ಗೆ ಇಡ್ಲಿ ಮಾರುವ ಅಜ್ಜಿ ಕಮಲಾಥಲ್ ಅವರಿಗೆ ಒಂದು ಸುಂದರವಾದ ಮನೆಯನ್ನು ನಿರ್ಮಾಣ ಮಾಡಿ ಉಡುಗೊರೆಯಾಗಿ ನೀಡಿದ್ದಾರೆ. ಈ ವಿಷಯವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಾನು ಕೊಟ್ಟ ಮಾತಿನಂತೆ ಉಡುಗೊರೆಯಾಗಿ ನೀಡಲು ಶ್ರಮಿಸಿದ ನನ್ನ ತಂಡಕ್ಕೆ ನನ್ನ ಧನ್ಯವಾದಗಳು ಎಂದು ಬರೆದು ವಿಡಿಯೋ ಶೇರ್ ಮಾಡಿದ್ದಾರೆ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಮನಸ್ಸಲ್ಲಿ ಯಾವುದೇ ಭೇದ ಭಾವ ಇಲ್ಲದೆ ಜನರ ಸೇವೆ ಮಾಡುತ್ತಿರುವ ಆ ಅಮ್ಮನಿಗೆ ನೆರವು ನೀಡಲು ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. ಇನ್ನು ಆನಂದ್ ಮಾಹಿಂದ್ರಾ ಅವರು 3.5 ಸೆಂಟ್ ಜಾಗದಲ್ಲಿ ಒಂದು ಬೆಡ್ ರೋಮ್ ಇರುವ ಮನೆ ಹಾಗೂ ಅಜ್ಜಿಯು ಕ್ಯಾಂಟೀನ್ ನಡೆಸಲು ಅನುಕೂಲವಾಗುವಂತೆ ಮನೆಯ ನಿರ್ಮಾಣ ಮಾಡಲಾಗಿದೆ. ಆನಂದ್ ಮಹಿಂದ್ರಾ ಅವರಂತೆ ಇನ್ನು ದೊಡ್ಡ ದೊಡ್ಡ ಉದ್ಯಮಿಗಳು ಇದೇ ರೀತಿ ಆಲೋಚನೆ ಮಾಡಿದರೆ, ನಮ್ಮ ದೇಶದಲ್ಲಿ ಅದೆಷ್ಟೋ ಜನರ ಜೇವನದಲ್ಲಿ ಬದಲಾವಣೆ ಖಂಡಿತ ಬರುತ್ತದೆ. ಇಂತಹ ಆನಂದ್ ಮಹಿಂದ್ರಾ ಅವರು ನೂರು ಜನ ಹುಟ್ಟಲಿ ಎಂದು ಬೇಡಿಕೊಳ್ಳುತ್ತೇನೆ. ನಿಮಗೆ ಈ ಲೇಖನ ಇಷ್ಟ ವಾಗಿದ್ದರೆ ಆನಂದ್ ಮಹಿಂದ್ರಾ ಅವರಿಗೆ ನಿಮ್ಮ ಧನ್ಯವಾದಗಳು ತಿಳಿಸಿ


Leave a Reply

Your email address will not be published. Required fields are marked *