ಕೊನೆಗೂ ಅಪ್ಪು ಕನಸನ್ನು ಈಡೇರಿಸಲು ಸಿದ್ದರಾದ ರಾಜ್ಯದ ಮುಖ್ಯಮಂತ್ರಿಗಳು; ಏನದು ಗೊತ್ತಾ..!?

Uncategorized

ನಮಸ್ಕಾರ ಸ್ನೇಹಿತರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ ಈಗಾಗಲೇ ಹಲವಾರು ತಿಂಗಳುಗಳು ಕಳೆದು ಹೋಗಿದೆ. ನಿಜಕ್ಕೂ ಕೂಡ ಅಂತಹ ಬಂಗಾರದ ಮನುಷ್ಯ ಮನಸ್ಸಿನ ವ್ಯಕ್ತಿತ್ವವನ್ನು ಕಳೆದುಕೊಂಡಿರುವುದು ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.


ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಕೇವಲ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ನಿಜಜೀವನದಲ್ಲಿ ಕೂಡ ಹಲವಾರು ಜನರ ಪಾಲಿಗೆ ಹೀರೋ ದೇವರು ಎಲ್ಲರೂ ಆಗಿದ್ದರು. ಇನ್ನು ಯಾವ ಪ್ರಚಾರವನ್ನು ಪಡೆಯದೆ ಕೂಡ ನೂರಾರು ಜನರಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅವರಿಗೆ ಬೇಕಾದಂತಹ ಆರ್ಥಿಕ ಹಾಗೂ ನೈತಿಕ ಸಹಾಯವನ್ನು ಮಾಡಿ ಯಾವುದೇ ಪ್ರತಿಫಲಾಪೇಕ್ಷೆಯನ್ನು ಪಡೆಯದೆ ಶಾಂತ ಮೂರ್ತಿಯಂತೆ ಇದ್ದವರು. ಇನ್ನು ಮೈಸೂರಿನಲ್ಲಿರುವ ಅನಾಥ ಹೆಣ್ಣು ಮಕ್ಕಳ ಆಶ್ರಮ ವಾಗಿರುವ ಶಕ್ತಿ ಧಾಮವನ್ನು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಣ್ಣಾವ್ರು ಹಾಗೂ ಪಾರ್ವತಮ್ಮನವರ ನಂತರ ನಡೆಸಿಕೊಂಡು ಬಂದಿದ್ದರು. ಮೊದಲಿನಿಂದಲೂ ಕೂಡ ತಮ್ಮ ಗಳಿಕೆಯ ಒಂದು ಭಾಗವನ್ನು ಶಕ್ತಿ ಧಾಮದ ಅಭಿವೃದ್ಧಿಗಾಗಿ ತೆಗೆದಿಡುತ್ತಿದ್ದವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಒಂದು ಕನಸು ಅವರು ಬದುಕಿರುವವರೆಗೂ ಕೂಡ ನಡೆಯಲೇ ಇಲ್ಲ. ಈಗ ಅವರ ಕನಸನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ನಡೆಸಲು ಮುಂದಾಗಿದೆ ಎಂಬುದಾಗಿ ಕೇಳಿಬಂದಿದೆ. ಹಾಗಿದ್ದರೆ ಅದು ಏನೆಂಬುದನ್ನು ನೋಡೋಣ ಬನ್ನಿ.


ಹೌದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಶಕ್ತಿಧಾಮ ದಲ್ಲಿ ಒಂದರಿಂದ 8ನೇ ತರಗತಿಯವರೆಗೆ ಶಾಲೆಯನ್ನು ನಿರ್ಮಾಣ ಮಾಡುವ ಕನಸನ್ನು ಹೊಂದಿದ್ದರು. ಅದಕ್ಕಾಗಿ ಜಾಗವನ್ನು ಖರೀದಿಸಿ ನೀಲಿನಕ್ಷೆಯನ್ನು ಕೂಡ ರೆಡಿ ಮಾಡಿದ್ದರು. ಆದರೆ ಅದನ್ನು ಕಟ್ಟಿಸುವ ಮುನ್ನವೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನು ದೈಹಿಕವಾಗಿ ಆಗಲಿದ್ದಾರೆ. ಆದರೆ ಇತ್ತೀಚೆಗೆ ಬಿಡುಗಡೆಯಾಗಿರುವ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಬಸವರಾಜ ಬೊಮ್ಮಾಯಿ ರವರು ಶಕ್ತಿಧಾಮ ದ ಶಾಲೆಯ ಕಾರ್ಯಕ್ಕೆ ಆರ್ಥಿಕ ನೆರವನ್ನು ನೀಡುವ ಉಲ್ಲೇಖವನ್ನು ಮಾಡಿದ್ದಾರೆ. ಹೀಗಾಗಿ ಅತಿಶೀಘ್ರದಲ್ಲಿ ಪುನೀತ್ ರಾಜಕುಮಾರ್ ರವರ ಕನಸು ನನಸಾಗಲಿದೆ ಎಂಬುದಾಗಿ ತಿಳಿದುಬಂದಿದೆ. ಸದ್ಯಕ್ಕೆ ಶಾಲೆಯ ಉಸ್ತುವಾರಿಯನ್ನು ಶಿವಣ್ಣ ಹಾಗೂ ಗೀತಕ್ಕ ದಂಪತಿಗಳು ವಹಿಸಿಕೊಂಡಿದ್ದಾರೆ. ಖಂಡಿತವಾಗಿ ಅಪ್ಪು ಅವರ ಕನಸನ್ನು ನೆರವೇರಿಸುವುದಕ್ಕೆ ಇವರೆಲ್ಲರ ಪರಿಶ್ರಮ ಕೂಡ ಇದೆ ಎಂಬುದನ್ನು ನಾವು ಈ ಸಮಯದಲ್ಲಿ ಸ್ಮರಿಸಿಕೊಳ್ಳಬೇಕು.


Leave a Reply

Your email address will not be published. Required fields are marked *