ಕೊನೆಗೂ ಚಿರು ಸರ್ಜಾ ಕನಸು ನನಸು ಮಾಡಿದ ತಮ್ಮ ಧ್ರುವ ಸರ್ಜಾ! ತಮ್ಮ ಅಂದರೆ ಹೀಗಿರಬೇಕು ಅಲ್ವಾ

ಸುದ್ದಿ

ಕನ್ನಡದ ಚಿತ್ರರಂಗದಲ್ಲಿ ನಟ ಚಿರಂಜೀವಿ ಸರ್ಜಾ ಎಂದರೆ ಎಲ್ಲಾ ನಟರಿಗು ಪ್ರೀತಿ ಅವರು ನಾಯ, ವಿನಯ, ಅವರು ಕೊಡುವ ಪ್ರೀತಿ ಎಲ್ಲರಿಗೂ ಇಷ್ಟ. ಈಗ ಅವರ ನೆನಪುಗಳು ಮಾತ್ರ ಚಿರುವನ್ನು ಪ್ರತಿಕ್ಷಣವು ನೆನಪಿಸಿಕೊಳ್ಳುತ್ತಿದ್ದಾರೆ. ಚಿರು ನಮ್ಮ ಜೊತೆಗೆ ಇಲ್ಲವಾಗಿ ವರ್ಷಗಳೇ ಉರುಳಿದರು ಅವರನ್ನು ಬೆಳೆಸಿರುವ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಅದಲ್ಲದೇ, ಚಿರು ಅವರನ್ನು ಕೊನೆಯ ಸಿನೆಮಾದ ಮೂಲಕ ಕಣ್ಣುತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.

ತಮ್ಮ ನಗು ಮೊಗದಿಂದಲೇ ಎಲ್ಲರನ್ನು ಗೆದ್ದಿರುವ ನಟ ಚಿರು 1980 ಅಕ್ಟೋಬರ್ 17 ರಂದು ಬೆಂಗಳೂರಿನಲ್ಲಿ ಜನಿಸಿದರು. ಇನ್ನು ಚಿರು ತಮ್ಮ ಮೊದಲ ವಿದ್ಯಾಭ್ಯಾಸವನ್ನು ಬಾಲ್ಡ್ವಿನ್ ನಲ್ಲಿ ಮುಗಿಸಿದರು. ಇನ್ನು ಬೆಂಗಳೂರಿನ ವಿಜಯ ಕಾಲೇಜು ನಲ್ಲಿ ಪದವಿಯನ್ನು ಪೂರ್ಣ ಗೊಳಿಸಿದರು. ನಂತರ ಸಿನೆಮಾರಂಗಕ್ಕೆ ಎಂಟ್ರಿ ಕೊಟ್ಟರು. ಚಿರು ಚಿಕ್ಕಪ್ಪ ಅರ್ಜುನ್ ಸರ್ಜಾ ಅವರ ಕೈ ಕೆಳಗೆ ನಾಲ್ಕು ವರ್ಷಗಳ ಕಾಲ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು.

ನಂತರ 2009 ರಲ್ಲಿ ತೆರೆಕಂಡ ವಾಯುಪುತ್ರ ಚಿತ್ರದ ಮೂಲಕ ಚಿರಿ ಸರ್ಜಾ ಬೆಳ್ಳಿ ಪರದೆಗೆ ಎಂಟ್ರಿ ಕೊಟ್ಟರು. ಇನ್ನು ಅವರ ಅಭಿನಯದ ಐದು ಕ್ಕೂ ಹೆಚ್ಚು ಸಿನೆಮಾಗಳು ಸೂಪರ್ ಹಿಟ್ ಚಿತ್ರಗಳಾಗಿ ಸ್ಯಾಂಡಲ್ವುಡ್ ನಲ್ಲಿ ಹವಾ ಸೃಷ್ಟಿಸಿದರು. ಅಷ್ಟೇ ಅಲ್ಲದೇ ಚಿರು ಅವರ ಕೊನೆ ಸಿನೆಮಾ ರಾಜಮಾರ್ತಾಂಡ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಆದರೆ ಇದೀಗ ಚಿರು ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದು ಹೊರ ಬಿದ್ದಿದೆ.

ಚಿರು ಅಭಿಮಾನಿಗಳ ಕಾಯುವಿಕೆಗೆ ಫಲ ಸಿಕ್ಕಿದ್ದು ಚಿರು ಸರ್ಜಾ ಅಭಿನಯದ ಕೊನೆಯ ಸಿನೆಮಾವು ತೆರೆಗೆ ಯಾವಗ ಬರಲಿದೆ ಎಂಬ ಮಾಹಿತಿಯನ್ನು ಚಿತ್ರತಂಡ ಹೊರ ಹಾಕಿದೆ. ಚಿರು ಸರ್ಜಾ ಇಷ್ಟ ಪಟ್ಟು ಒಪ್ಪಿಕೊಂಡು ನಟಿಸಿದ್ದ ಈ ಚಿತ್ರ ಎಲ್ಲಾ ಅಂದುಕೊಂಡಂತೆ ಆಗಿದ್ದಾರೆ 2019 ರಲ್ಲೇ ಬಿಡುಗಡೆಯಗಬೇಕಿತ್ತು. ಆದರೆ ಚಿರು ಅವರ ಅಕಾಲಿಕ ಮರಣದಿಂದ ಎರಡು ವರ್ಷದ ಬಳಿಕ ಅವರ ಕೊನೆಯ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಈ ವರ್ಷ ಸೆಪ್ಟೆಂಬರ್ 2 ರಂದು ಚಿರು ಸರ್ಜಾ ಅಭಿನಯದ ಕೊನೆಯ ಚಿತ್ರ ರಾಜಮಾರ್ತಾಂಡ ತೆರೆಗೆ ಬರಲು ಸಿದ್ದವಾಗಿದೆ. ಈ ವಿಚಾರವನ್ನು ಚಿರು ಸರ್ಜಾ ಅವರು ಮುದ್ದಿನ ತಮ್ಮ ಧ್ರುವ ಸರ್ಜಾ ಅವರೇ ಹೇಳಿಕೊಂಡಿದ್ದಾರೆ.

ಇನ್ನು ಚಿರು ಸರ್ಜಾ ಅವರು ಪಾತ್ರಕ್ಕೆ ಧ್ರುವ ಸರ್ಜಾ ಅವರು ಅಣ್ಣನ ಪಾತ್ರಕ್ಕೆ ಡಬ್ ಮಾಡಿದ್ದಾರೆ. ಈಗಾಗಲೇ ಅಣ್ಣನ ಪಾತ್ರಕ್ಕೆ ದ್ರುವ ಡಬ್ ಮಾಡಿದ್ದಾರೆ. ಅಲ್ಲದೇ ನಟ ದರ್ಶನ್ ಕೂಡ ಡಬ್ಬಿಂಗ್ ಮಾಡಿದ್ದಾರೆ ಅದರ ಜೊತೆಗೆ ರಾಜಮಾರ್ತಾಂಡ ಸಿನೆಮಾದಲ್ಲಿ ಪುತ್ರ ರಾಯನ್ ಸರ್ಜಾ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಈ ವಿಚಾರವನ್ನು ಸ್ವತಃ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರು ಖಚಿತಪಡಿಸಿದ್ದಾರೆ. ಇನ್ನು ಚಿರು ಅವರು ಈ ಸಿನೆಮಾವನ್ನು ಅತ್ಯಂತ ಹೆಚ್ಚು ಪ್ರೀತಿಸುತ್ತಿದ್ದು ಒಂದೊಂದು ಡೈಲಾಗ್ ಅನ್ನು ಕೂಡ ಮನೆಯಲ್ಲಿ ಆಗಾಗ ಹೇಳಿ ಸಂಭ್ರಮಿಸುತ್ತಿದ್ದರು. ಹೀಗಾಗಿ ಈ ಚಿತ್ರವನ್ನು ಗೆಲ್ಲಿಸಿ ಎಂದು ಚಿರು ಹಾಗೂ ಮೇಘನಾ ಕುಟುಂಬ ಈ ಹಿಂದೆಯೇ ಅಭಿಮಾನಿಗಳಲ್ಲಿ ಮನವಿಯನ್ನು ಮಾಡಿಕೊಂಡಿದ್ದರು. ಇನ್ನು ಕೆಲವೇ ದಿನಗಲ್ಲಿ ಬಿಡುಗಡೆಯಗಳಿದ್ದು ಚಿತ್ರದ ಕುರಿತು ಅಭಿಮಾನಿಗಳಿಗೆ ಕುತೂಹಲ ಹೆಚ್ಚಿಸಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *