ಕೊನೆಗೂ ಪುನೀತ್ ರಾಜಕುಮಾರ್ ರವರ ಆಸೆಯನ್ನು ತೀರಿಸಿದ ದೊಡ್ಮನೆ ಸದಸ್ಯರು..!?

Cinema Entertainment

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಚಿತ್ರರಂಗ ಸಂಪೂರ್ಣವಾಗಿ ಬರಿದಾಗಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ನಾಯಕನಟನಾಗಿ ಗಾಯಕನಾಗಿ ನಿರ್ಮಾಪಕನಾಗಿ ಬಹುಮುಖ ಪ್ರತಿಭೆಯನ್ನು ಕನ್ನಡ ಚಿತ್ರರಂಗಕ್ಕೆ ಪುನೀತ್ ರಾಜಕುಮಾರ್ ಅವರು ತೋರ್ಪಡಿಸಿ ತಮ್ಮನ್ನು ತಾವು ಸಾಬೀತು ಪಡಿಸಿಕೊಂಡಿದ್ದರು. ವರನಟ ಡಾಕ್ಟರ್ ರಾಜಕುಮಾರ್ ಅವರ ಮಗ ಎಂಬ ಕಾರಣಕ್ಕಾಗಿ ಅಲ್ಲದೆ ಪುನೀತ್ ರಾಜಕುಮಾರ್ ಅವರ ಪ್ರತಿಭೆಯನ್ನು ಗುರುತಿಸಿ ಅವರನ್ನು ಪವರ್ ಸ್ಟಾರ್ ಎಂದು ಜನರು ಕರೆಯುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಎಂತಹ ಸರಳ ವ್ಯಕ್ತಿತ್ವದವರು ಎನ್ನುವುದು ನಿಮಗೆಲ್ಲಾ ಗೊತ್ತಿರುವ ವಿಚಾರವಾಗಿದೆ ಅದನ್ನು ನಾವು ವಿಶೇಷವಾಗಿ ಹೇಳಬೇಕಾಗಿಲ್ಲ. ತಮ್ಮ ಗಾಯನದಿಂದ ಬರುವಂತ ಹಣವನ್ನು ವೃದ್ಧಾಶ್ರಮ ಹಾಗು ಅನಾಥಾಶ್ರಮ ಕ್ಕಾಗಿ ಬಳಸುತ್ತಿದ್ದರು. ಮೈಸೂರಿನಲ್ಲಿರುವ ಶಕ್ತಿಧಾಮ ದ ಹೆಣ್ಣು ಮಕ್ಕಳಿಗಾಗಿ ಹಲವಾರು ಉತ್ತಮ ವಾತಾವರಣವನ್ನು ನಿರ್ಮಿಸಿದ್ದರು. ಅದೆಷ್ಟೋ ಗೋಶಾಲೆ ಹಾಗೂ ಅನಾಥ ಮಕ್ಕಳಿಗಾಗಿ ಉಚಿತ ಶಿಕ್ಷಣವನ್ನು ನೀಡಿದ್ದರು. ನಿರ್ಮಾಪಕರಾಗಿ ಹೋಂ ಪ್ರೊಡಕ್ಷನ್ ಹೌಸ್ ನಿಂದ ಅದೆಷ್ಟೋ ಯುವ ಪ್ರತಿಭೆಗಳಿಗೆ ಅವಕಾಶ ಹಾಗೂ ಅದೆಷ್ಟೋ ಜನರಿಗೆ ಉದ್ಯೋಗವನ್ನು ಕೂಡ ನೀಡಿದ್ದಾರೆ. ಯಾರಿಗೆ ಸಹಾಯ ಮಾಡಿದರು ಕೂಡ ಅದರ ಕುರಿತಂತೆ ಎಲ್ಲೂ ಪ್ರಚಾರವನ್ನು ಗಿಟ್ಟಿಸಿ ಕೊಳ್ಳುತ್ತಿರಲಿಲ್ಲ.

ಇಷ್ಟು ಮಾತ್ರವಲ್ಲದೆ ತಮ್ಮ ತಂದೆಯ ಹಾಗೆ ಸರ್ಕಾರಿ ಜಾಹೀರಾತುಗಳಲ್ಲಿ ಸಾಮಾಜಿಕ ಕಳಕಳಿಯನ್ನು ಮೂಡಿಸು ಸಲುವಾಗಿ ಕಾಣಿಸಿಕೊಳ್ಳುತ್ತಿದ್ದರು ಆದರೆ ಒಂದು ರೂಪಾಯಿ ಸಂಭಾವನೆಯನ್ನು ಕೂಡ ಪಡೆದುಕೊಳ್ಳುತ್ತಿರಲಿಲ್ಲ. ಇಂತಹ ಚಿನ್ನದ ಮನಸ್ಸಿನ ವ್ಯಕ್ತಿತ್ವ ಕನ್ನಡ ಚಿತ್ರರಂಗಕ್ಕೆ ಸಿಗುವುದು ಖಂಡಿತ ಕನಸಿನ ಮಾತೇ ಸರಿ. ಕೇವಲ ಇಷ್ಟು ಮಾತ್ರವಲ್ಲದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಇನ್ನೂ ಒಂದು ಆಸೆ ಇತ್ತು.

ನೀವು ಕೇಳಿರಬಹುದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ತಮ್ಮ ತಂದೆಯ ಮನೆಯಾಗಿರುವ ಗಾಜನೂರಿನ ಮನೆ ಎಂದರೆ ಎಲ್ಲಿಲ್ಲದ ಪ್ರೀತಿ. ಸಮಯ ಸಿಕ್ಕಾಗಲೆಲ್ಲ ತಾವೊಬ್ಬರೇ ಅಥವಾ ತಮ್ಮ ಕುಟುಂಬದೊಡನೆ ಗಾಜನೂರಿಗೆ ಹೋಗಿ ಬರುತ್ತಿದ್ದರು‌. ತನ್ನ ತಂದೆ ಹಾಗೂ ಪೂರ್ವಿಕರ ನೆನಪಿರುವ ಗಾಜನೂರಿನ ಮನೆಯಲ್ಲಿ ಸಂತೋಷವಾದ ಸಮಯವನ್ನು ಕಳೆದು ಬರುತ್ತಿದ್ದರು. ಅಲ್ಲಿ ಅಣ್ಣಾವ್ರು ಹಾಗೂ ಅವರ ತಂದೆ-ತಾಯಂದಿರು ಹುಟ್ಟಿ ಬೆಳೆದಿರುವ ಮನೆ ಶಿಥಿಲವಾಗುತ್ತಾ ಬಂದಿತ್ತು.

ಆ ಮನೆಗೆ ಬರೋಬ್ಬರಿ 150 ವರ್ಷಗಳ ಇತಿಹಾಸವಿದೆ. ಇದನ್ನು ಮತ್ತೆ ರಿಪೇರಿ ಮಾಡಿ ನವೀಕರಣಗೊಳಿಸುವ ಅಂತಹ ಯೋಜನೆ ಪುನೀತ್ ರಾಜಕುಮಾರ್ ಅವರಲ್ಲಿ ಬಂದಿತ್ತು. ಆದರೆ ಆ ಮನೆಯನ್ನು ಸರಿ ಮಾಡುವ ಮುನ್ನವೇ ಪವರ್ ಸ್ಟಾರ್ ಬಾರದ ಲೋಕಕ್ಕೆ ಹೋಗಿದ್ದಾರೆ. ಅದೊಂದು ಕನಸು ಪೂರ್ಣ ಆಗಲಿಲ್ಲವೆ ಎಂಬ ಕಳವಳ ಅವರ ಮನಸ್ಸಿನಲ್ಲಿ ಇದ್ದರೂ ಇರಬಹುದು. ಆದರೆ ಅವರ ಸಂಬಂಧಿಕರು ಈಗ ಆ ಮನೆಯನ್ನು ಪೂರ್ತಿ ನವೀಕರಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಗಾಜನೂರಿನಲ್ಲಿ ಅಣ್ಣಾವ್ರ ತಂಗಿ ಅಂದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅತ್ತೆ ಆಗಿರುವ ನಾಗಮ್ಮನವರು ಕೂಡ ಇದ್ದಾರೆ. ಅವರಿಗೀಗ 90 ವರ್ಷವಾಗಿದ್ದು ಪುನೀತ್ ರಾಜಕುಮಾರ್ ಅವರ ಮರಣದ ವಿಚಾರವನ್ನು ಇನ್ನೂ ಕೂಡ ಹೇಳಿಲ್ಲ. ಅದನ್ನು ಕೇಳಿ ಅವರ ಆರೋಗ್ಯ ಸ್ಥಿತಿಯಲ್ಲಿ ಹೆಚ್ಚು ಕಡಿಮೆ ಆಗಬಹುದೆಂಬ ದುಗುಡ ಕಾಡುತ್ತಿದೆ. ಸದ್ಯಕ್ಕೆ ಕಳೆದ ಬಾರಿ ರಾಘಣ್ಣ ಹೋಗಿ ಆರೋಗ್ಯ ಕ್ಷೇಮವನ್ನು ವಿಚಾರಿಸಿಕೊಂಡು ಮಾತನಾಡಿಸಿಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ಗಾಜನೂರಿನಲ್ಲಿ ಇರುವಂತಹ ಸಂಬಂಧಿಕರೊಬ್ಬರು ಹಳೆ ಮನೆಯನ್ನು ನವೀಕರಣಗೊಳಿಸಿ ಹೊಳೆಯುವಂತೆ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಕೊನೆಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಆಸೆ ತೀರಿಸಿದ ಸಮಾಧಾನದಲ್ಲಿ ಅವರು ಇದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಗಲಿಕೆ ನಂತರ ಅವರ ಅಭಿಮಾನಿಗಳು ಅವರು ಮಾಡಿರುವ ದಾನ-ಧರ್ಮ ಸಾಕಷ್ಟು ಕೆಲಸಗಳನ್ನು ನೋಡಿ ಇಡಿ ವಿಶ್ವವೇ ಮೆಚ್ಚಿಕೊಂಡಿದೆ ಅಂತಾದ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುವ ಸಲುವಾಗಿ ಅವರ ಅವರ ಅಭಿಮಾನಿಗಳ ಬಳಗ ಪಣತೊಟ್ಟಿದೆ ಹೊರರಾಜ್ಯದವರು ಸಹ ಅಪ್ಪು ಅವರ ಮಾಡಿರುವಂತ ಕಾರ್ಯಕ್ಕೆ ಮೆಚ್ಚುಗೆ ಮಾತುಗಳು ಬರುತ್ತದೆ ಅಪ್ಪು ಅವರು ಬರೇ ಒಂದು ಚಿತ್ರನಟ ಅಲ್ಲದೆ ಅವರ ತಂದೆಯ ಹಾಗೆ ಹಾಲಿನಂತ ಮನಸ್ಸುಳ್ಳವರು.

ಮನೆಗೆ ಬಂದ ಅಭಿಮಾನಿಗಳ ಆಗಲಿ ಅಥವಾ ಯಾರೇ ಬರಲಿ ಅವರ ಯೋಗಕ್ಷೇಮ ಹಾಗೂ ಅವರ ಉಪಚಾರವನ್ನು ಮಾಡಿಯ ಕಳುಹಿಸುತ್ತಾರೆ ಅಪ್ಪು ಅವರನ್ನು ನಾವು ಕಂಡ ಒಬ್ಬ ಶ್ರೇಷ್ಠ ಮನುಷ್ಯ ಅಂತ ಹೇಳಿದರೂ ತಪ್ಪಾಗಲಾರದು ಆ ಭಗವಂತನಿಗೆ ಗೊತ್ತಾಗಿರಬೇಕು ದೇವರು ಯಾವತ್ತಿದ್ರೂ ಸ್ವರ್ಗದಲ್ಲಿ ಇರಬೇಕು ಹೊರತು ಭೂಲೋಕದಲ್ಲಿ ಅಲ್ಲ ಅಂತ ಏಕೆಂದರೆ ಅಪ್ಪು ಅವರು ಮಾಡುತ್ತಿದ್ದ ಪ್ರತಿಯೊಂದು ಕೆಲಸ ಕೂಡ ದೇವರು ಮೆಚ್ಚುವಂತ ಕೆಲಸ ನಾವು ಕಷ್ಟ ಬಂದಾಗ ದೇವರನ್ನು ಬೇಡಿಕೊಳ್ಳುತ್ತೇವೆ ಆಗ ದೇವರು ನಮ್ಮೆಲ್ಲ ಇಷ್ಟಾರ್ಥಗಳನ್ನು ಪಾಲಿಸುತ್ತಾನೆ ಹಾಗೆ ದೇವರು ನಮಗ್ಯಾರಿಗೂ ಕಣ್ಣಿಗೂ ಕೂಡ ಕಾಣಿಸಲ್ಲ ನಮ್ಮ ತಮ್ಮ ಮನೆಗಳಲ್ಲಿ ದೇವರ ಫೋಟೋಗಳನ್ನು ಇಟ್ಟು ಪೂಜಿಸುತ್ತೇವೆ ಹಾಗೇ ಅಪ್ಪು ಅಭಿಮಾನಿಗಳು ಅಪ್ಪು ಫೋಟೋ ಇಟ್ಟು ಪೂಜಿಸುತ್ತಾರೆ.

ಇವರೇ ನಮ್ಮ ದೇವರು ಅಂತ ಕೂಗಿ ಹೇಳುತ್ತಾರೆ ಡಾಕ್ಟರ್ ರಾಜಕುಮಾರ್ ಅವರು ಮಾಡಿರುವ ಹೆಸರಿಗಿಂತ ನೂರರಷ್ಟು ಹೆಸರು ನಮ್ಮ ಪ್ರೀತಿಯ ಅಪ್ಪು ಅವರು ಮಾಡಿಹೋಗಿದ್ದಾರೆ ಅಪ್ಪು ಅವರ ನೆನಪು ಇನ್ನೂ ನೂರಾರು ಜನ್ಮ ಬಂದರು ಅಳಿಸಲು ಸಾಧ್ಯವಿಲ್ಲ ಸ್ನೇಹಿತರೆ ನಮ್ಮ ನಿಮ್ಮೆಲ್ಲರ ಪ್ರೀತಿಯ ನೆಚ್ಚಿನ ಅಪ್ಪು ಅಭಿನಯದ ಜೇಮ್ಸ್ ಚಿತ್ರ ರಿಲೀಸ್ ಆಗಿದೆ ರಾಜ್ಯದ ಮೂಲೆ ಮೂಲೆಯನ್ನು ಕೂಡ ಒಳ್ಳೆಯ ಪ್ರತಿಕ್ರಿಯೆ ಅನ್ನು ಪಡೆದುಕೊಳ್ಳುತ್ತಿದೆ ನೀವು ನೋಡಿ ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ ಧನ್ಯವಾದಗಳು.


Leave a Reply

Your email address will not be published. Required fields are marked *