ಕೋಟಿ ಕೋಟಿ ಕೊಟ್ರು ನಾನು ಬಿಗ್ ಬಾಸ್ ಮನೆಗೆ ಕಾಲು ಇಡಲ್ಲ ಎಂದು ಖಡಕ್ ಆಗಿ ಹೇಳಿದ ಹಾಸ್ಯ ನಟ ಟೆನ್ನಿಸ್ ಕೃಷ್ಣ! ಕಾರಣ ಕೇಳಿ ಶಾಕ್ ಆದ ಜನತೆ!!

ಸುದ್ದಿ

ಸ್ಯಾಂಡಲ್ವುಡ್ ನಲ್ಲಿ ಅನೇಕ ಹಾಸ್ಯ ನಟರು ನಗೆಗಡಲಲ್ಲಿ ನಮ್ಮನ್ನು ತೇಲಿಸಿ ನಮ್ಮ ಮನಸ್ಸಿನ ನೋವುಗಳನ್ನು ದೂರ ಮಾಡಿ ಅಭಿಮಾನಿಗಳ ಮನಸ್ಸನ್ನು ಗೆದ್ದುಕೊಂಡಿದ್ದಾರೆ. ಕನ್ನಡದ ಖ್ಯಾತ ಹಾಸ್ಯ ನಟ ಟೆನ್ನಿಸ್ ಕೃಷ್ಣನವರ ನೆನಪು ಎಲ್ಲರಿಗೂ ಇರಬಹುದು. ಟೆನ್ನಿಸ್ ಕೃಷ್ಣ ಎಂದ ಕೂಡಲೇ ಕನ್ನಡ ಚಿತ್ರರಸಿಕರಿ ಪಟ್ ಅಂಥ ನೆನಪಾಗುವುದು ಅವರ ಡೈಲಾಗ್… ಇನ್ನೂ ಬೆಲ್ಲು ಹೊಡೀಲಿಲ್ಲವೇ..? ಈ ಡೈಲಾಗ್ ಇಂದ ಸಿಕ್ಕಾಪಟ್ಟೆ ವೈರಲ್ ಆಗಿದ್ದಾರೆ. ಗಡಿಬಿಡಿ ಅಳಿಯ ಚಿತ್ರದಲ್ಲಿ ಬರುವ ಟೆನ್ನಿಸ್ ಕೃಷ್ಣ ಅವರ ಡೈಲಾಗ್ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು.

ಹೌದು, ಅನೇಕ ಸಿನೆಮಾಗಳನ್ನು ತಮ್ಮ ಹಾಸ್ಯ ಚಟಾಕಿ ಹಾಗೂ ನಟನೆಯ ಮೂಲಕವೇ ಮನಸ್ಸನ್ನು ಗೆದ್ದವರು ಟೆನ್ನಿಸ್ ಕೃಷ್ಣ ಎನ್ನುದರಲ್ಲಿ ಎರಡು ಮಾತಿಲ್ಲ. ಹಾಸ್ಯ ನಟ ಟೆನ್ನಿಸ್ ಕೃಷ್ಣ ಬೆಂಗಳೂರುನಲ್ಲಿ ಹುಟ್ಟಿದವರು. ಇವರ ಬಾಲ್ಯ ವಿದ್ಯಾಭ್ಯಾಸ ಬೆಂಗಳೂರಿನಲ್ಲೇ ಪೂರ್ಣಗೊಳಿಸಿದರು. ಇವರಿಗೆ ಟೆನ್ನಿಸ್ ಕೃಷ್ಣ ಎಂದು ಹೆಸರು ಬರಲು ಕೂಡ ಕಾರಣವಿದೆ. ಚಿತ್ರರಂಗಕ್ಕೆ ಬರುವ ಮೊದಲು ಇವರು ಟೆನ್ನಿಸ್ ಕೋಚ್ ಆಗಿದ್ದರು.

ಜೊತೆಗೆ, ಕನ್ನಡ ಚಿತ್ರರಂಗದಲ್ಲಿ ಆ ಸಮಯಕ್ಕಾಗಲೇ ಕೃಷ್ಣ ಹೆಸರಲ್ಲಿ ಬೇರೆ ಕಲಾವಿದರು ಇದ್ದರು. ಈ ಕಾರಣಕ್ಕಾಗಿ ಇವರ ಹೆಸರಿನ ಮುಂದೆ ಟೆನ್ನಿಸ್ ಎಂಬ ಹೆಸರಾನ್ನು ಇಡಲಾಗಿತ್ತು. ಟೆನ್ನಿಸ್ ಕೃಷ್ಣ ಎಂದರೆ ಕನ್ನಡದಲ್ಲಿ 600ಕ್ಕೂ ಹೆಚ್ಚಿನ ಸಿನೆಮಾಗಳಲ್ಲಿ ನಟಿಸಿ, ರೆಕಾರ್ಡ್ ಸೃಷ್ಟಿಸಿದ್ದಾರೆ. ಇನ್ನೂ ನಟ ದೊಡ್ಡಣ್ಣ ಹಾಗೂ ಟೆನ್ನಿಸ್ ಕೃಷ್ಣ ಕಾಂಬಿನೇಶನ್ ದೃಶ್ಯಗಳ ಸಿನಿ ಪ್ರೇಕ್ಷಕರನ್ನು ನಕ್ಕು ನಗಿಸುತ್ತಿದ್ದವು. ಆದರೆ ಟೆನ್ನಿಸ್ ಕೃಷ್ಣನವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದ್ದು.

ಈಗ ಕುರಿತು ಕಾಮಿಡಿ ನಟ ಟೆನ್ನಿಸ್ ಕೃಷ್ಣ ಸ್ಪಷ್ಟನೆ ನೀಡಿದ್ದಾರೆ. ಹಾಗಾದರೆ ಟೆನ್ನಿಸ್ ಕೃಷ್ಣ ಹೇಳಿದ್ದೇನು ಎನ್ನುವುದರ ಕುರಿತಾದ ಮಾಹಿತಿ ಇಲ್ಲಿದೆ. ಅಂದಹಾಗೆ, ಅವರ ಮಾರಮ್ಮನ ಡಿ-ಸ್ಕೊ ಡೈಲಾಗ್ ಇಂದಿಗೂ ಫೇಮಸ್ ಆಗಿದೆ. ಇನ್ನೂ ಕನ್ನಡ ರಾಪ್ ಸಿಂಗರ್ ಅಲ್ ಓಕೇ ಈ ಡೈಲಾಗ್ ಇಟ್ಟುಕೊಂಡು ಹೊಸ ರಾಪ್ ಸಾಂಗ್ ಮಾಡಿದ್ದಾರೆ. ಆ ರಾಪ್ ಸಾಂಗ್ ನಲ್ಲಿ ಟೆನ್ನಿಸ್ ಕೃಷ್ಣ ಅಭಿನಯಿಸಿದ್ದು ಮಾರಮ್ಮ ಡಿಸ್ಕೊ ಹಾಡು ತುಂಬಾ ಫೇಮಸ್ ಆಗಿ ಮೆಚ್ಚುಗೆ ಗಳಿಸಿದ್ದಾರೆ.

ಇನ್ನು 1990ರಲ್ಲಿ ಕನ್ನಡ ಚಿತ್ರರಂಗದಲ್ಲಿ ನಟನೆ ಶುರು ಮಾಡಿದ ಟೆನ್ನಿಸ್ ಕೃಷ್ಣ. ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಫೇಮಸ್ ಆದರು. ಇನ್ನು ರಾಜ ಕಕೆಂಪು ರೋಜಾ ಇವರು ನಟಿಸಿದ ಮೊದಲ ಸಿನೆಮಾವಾಗಿದ್ದು, ನಂತರ ಒಂದಲ್ಲ ಒಂದು ಅವಕಾಶಗಳನ್ನು ಸೃಷ್ಟಿಕೊಂಡು ಫೇಮಸ್ ಆಗಿ ಬಿಟ್ಟರು. ಕನ್ನಡದ ಖ್ಯಾತ ನಟರಾದ ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್, ರೆಬಲ್ ಸ್ಟಾರ್ ಅಂಬರೀಶ್, ಕ್ರೀಜಿ ಸ್ಟಾರ್ ರವಿಚಂದ್ರನ್, ಅನಂತ್ ನಾಗ್, ಸುದೀಪ್, ಎಲ್ಲರ ಸಿನೆಮಾದಲ್ಲಿ ಟೆನ್ನಿಸ್ ಕೃಷ್ಣ ಹಾಸ್ಯ ಪಾತ್ರ ಇದ್ದೆ ಇರುತ್ತಿತ್ತು.

ಅಂದಹಾಗೆ, ಸಾಕಷ್ಟು ಸಿನೆಮಾದಲ್ಲಿ ಹಾಸ್ಯನಟನಾಗಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಅಂದಹಾಗೆ ಟೆನ್ನಿಸ್ ಕೃಷ್ಣನವರ ಮಗಳು ನೋಡಲು ಸುಂದರವಾಗಿದ್ದರೆ. ಇನ್ನು ಇವರ ಮಗಳ ಹೆಸರು ರಂಜಿತಾ. ಮದುವೆ ಕೂಡ ಅಗಿದ್ದು, ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಚಿತ್ರರಂಗದಿಂದ ದೂರ ಇರುವ ರಂಜಿತಾ ಅವರಿಗೂ ಮದುವೆ ಕೂಡ ಅಗಿದ್ದು, ಮಗು ಕೂಡ ಇದೇ.

ಆದರೆ ಟೆನ್ನಿಸ್ ಕೃಷ್ಣ ಸದ್ಯಕ್ಕೆ ಸಿನೆಮಾರಂಗದಿಂದ ದೂರ ಉಳಿದಿದ್ದಾರೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿರುವ ಟೆನ್ನಿಸ್ ಕೃಷ್ಣ ಬಿಗ್ ಬಾಸ್ ಸೀಸನ್ 2 ರಿಂದಲೂ ನನ್ನ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಾ ಇದ್ದಾರೆ. ಕಳೆದ ಸಾರಿಯು ಈಗ ಕುರಿತು ಪ್ರಚಾರವಾಗಿತ್ತು. ಈ ಸಲವು ಈ ಕುರಿತು ದೊಡ್ಡ ಪ್ರಚಾರವೇ ಸಾಮಾಜಿಕ ಜಾಲತಾಣಗಳಲ್ಲಿ ವೈ@ರಲ್ ಆಗೋಗಿದೆ.

ನಾನು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಕೋಟಿ ಕೊಟ್ರು ಕೂಡ ಬಿಗ್ ಬಾಸ್ ಮನೆಗೆ ಹೋಗುವುದಿಲ್ಲ ಎಂದು. ಒಂದು ಸರಿ ಮಾತನಾಡಿದ್ರೆ ನಾನು ಅದೇ ರೀತಿ ನಡೆದುಕೊಳ್ಳೋನು, ಕೋಟಿ ಕೊಟ್ರು ಕೂಡ ಬಿಗ್ ಬಾಸ್ ಮನೆಗೆ ಬರಲ್ಲ ಎಂದು ಹೇಳಿ ಬಿಟ್ಟಿದ್ದೇನೆ. ಇವನನ್ನು ಬಿಗ್ ಬಾಸ್ ಮನೆಗೆ ಕರೆಯಲಿ ಎಂದು ಹೀಗೆ ಮಾತಾಡ್ತಾ ಇದ್ದಾನೆ ಎಂದು ಕೆಲವ್ರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *