ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳ ಶಿಖರವನ್ನೇ ಕಟ್ಟಿಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಿ ಇಂದು ಅಭಿಮಾನಿಗಳು ಮನಸ್ಸಲ್ಲಿ ಡಿ.ಬಾಸ್ ಆಗಿ ಮೆರೆಯುತ್ತಿದ್ದಾರೆ. ಇನ್ನೂ ಸಿನೆಮಾರಂಗದಲ್ಲಿ ಸಾಕಷ್ಟು ಸೂಪರ್ ಹಿಟ್ ಸಿನೆಮಾಗಳನ್ನು ಅಭಿಮಾನಿಗಳಿಗೆ ನೀಡಿದ್ದಾರೆ. ಈಗಾಗಲೇ ದರ್ಶನ್ ಅವರ ಕೈ ನಲ್ಲಿ ಸಾಕಷ್ಟು ಚಿತ್ರಗಳು ಲಿಸ್ಟ್ ನಲ್ಲಿ ಇದೇ.
ಇನ್ನೂ ಸಿನೆಮಾರಂಗದಲ್ಲಿ ನಾಯಕನಟನಾಗಿ ಮಾತ್ರವಾಲ್ಲದೆ ಕಷ್ಟ ಎಂದು ಅವರ ಬಳಿ ಹೋದವರಿಗೆ ಖಾಲಿ ಕೈಯಲ್ಲಿ ಕಳಿಸುವುದೇ ಇಲ್ಲ. ಸಿನೆಮಾ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದರು ಅದರ ಜೊತೆಗೆ ಸಾಕಷ್ಟು ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಕೊಂಡಿದ್ದಾರೆ. ದರ್ಶನ್ ಒಬ್ಬ ಪರಿಸರ ಪ್ರೇಮಿ ಕೂಡ ಪ್ರಾಣಿಗಳೆಂದರೆ ಅಷ್ಟು ಪ್ರೀತಿ.
ಇನ್ನೂ ದರ್ಶನ್ ಅವರ ಸಿನೆಮಾ ಹಾದಿ ಅಷ್ಟು ಸುಲಭವಾಗಿಇರಲಿಲ್ಲ. ದರ್ಶನ್ ಅವರು ಸಿನೆಮಾರಂಗಕ್ಕೆ ಮೊದಲು ಲೈಟ್ ಬಾಯ್ ಆಗಿ ಸೇರಿಕೊಂಡಿದ್ದರು. ಅವರು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಪ್ರಾರಂಭದಲ್ಲಿ ಕಷ್ಟ ಅವಮಾನಗಳನ್ನು ಕಂಡಿದ್ದರು. ಇನ್ನೂ ಇವರ ತಂದೆ ತೂಗುದೀಪ ಶ್ರೀನಿವಾಸ್ ಅವರು ಕೂಡ ಸಿನೆಮಾರಂಗದಲ್ಲಿ ತೊಡಗಿಕೊಂಡಿದ್ದರು. ದರ್ಶನ್ ಅವರು 1990 ರಲ್ಲಿ ಸಿನೆಮಾ ಬದುಕನ್ನು ಶುರು ಮಾಡಿದರು ಸಿನೆಮಾರಂಗಕ್ಕೆ ಎಂಟ್ರಿ ಕೊಡುವ ಮುನ್ನ ಮೊದಲು ಕಿರುತೆರೆಯ ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದರು.
2001 ರಲ್ಲಿ ಬಿಡುಗಡೆಯದ ಮೆಜೆಸ್ಟಿಕ್ ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇದು ಡಿಬಾಸ್ ಅವರಿಗೆ ದೊಡ್ಡ ಯಶಸ್ಸು ಹಾಗೂ ಅವರ ಜೀವನವನ್ನೇ ಬದಲಿಸಿದ ಚಿತ್ರ. ನಂತರ ಸಾಕಷ್ಟು ಯಶಸ್ವಿ ಸಿನೆಮಾಗಳನ್ನು ನೀಡುವ ಮೂಲಕ ಸುದ್ದಿಯಾದ ದರ್ಶನ್ ಅವರು ದೊಡ್ಡ ಸ್ಟಾರ್ ನಾಯಕ ನಟರಾಗಿ ಗುರುತಿಸಿಕೊಂಡರು. ಅಲ್ಲದೆ, 2006 ರಲ್ಲಿ ತೂಗುದೀಪ ಪ್ರೊಡಕ್ಷನ್ ಎಂಬ ನಿರ್ಮಾಣ ಸಂಸ್ಥೆ ಯನ್ನು ಕೂಡ ಶುರು ಮಾಡಿದರು.
ಸದ್ಯಕ್ಕೆ ನಟ ದರ್ಶನ್ ಅವರು ಕ್ರಾಂತಿ ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. 55 ನೇ ಸಿನೆಮಾವಾಗಿರುವ ಕ್ರಾಂತಿ ಸಿನೆಮಾವು ದೊಡ್ಡ ನಿರೀಕ್ಷೆಯನ್ನು ಸೃಷ್ಟಿಸಿದ್ದು, ಈ ಚಿತ್ರದಲ್ಲಿ ದರ್ಶನ್ ಅವರು ಪಡೆದ ಸಂಭಾವನೆ ಎಷ್ಟು ಎಂದು ಕೇಳಿದರೆ ನಿಜಕ್ಕೂ ನಿಮಗೆ ಅಚ್ಚರಿಯಾಗುತ್ತೆ. ದರ್ಶನ್ ಅವರ ಕ್ರಾಂತಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾದಾಗಲೇ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಸಿನೆಮಾವನ್ನು ತೆರೆ ಮೇಲೆ ಕಾಣಲು ಕಾತುರದಿಂದ ಕಾಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ, ರವಿಚಂದ್ರನ್ ಅವರು ಕ್ರಾಂತಿ ಸಿನೆಮಾದ ಶೋಟಿಂಗ್ ಸೆಟ್ ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವ ಸುದ್ಧಿ ಕೇಳಿ ಬಂದಿತ್ತು. ಅದಕ್ಕೆ ಸಾಕ್ಷಿಯಾಗಿ ದರ್ಶನ್ ಹಾಗೂ ರವಿಚಂದ್ರನ್ ಅವರ ಫೋಟೋ ಎಲ್ಲೆಡೆ ವೈರಲ್ ಆಗಿತ್ತು.
ಈ ಚಿತ್ರದಲ್ಲಿ ರವಿಚಂದ್ರನ್ ಕೂಡ ಚಿತ್ರತಂಡದ ಜೊತೆ ಶೋಟಿಂಗ್ ನಲ್ಲಿ ಸೇರಿಕೊಂಡಿದ್ದರು. ಸೆಟ್ನಲ್ಲಿ ರವಿಚಂದ್ರನ್ ಹಾಗೂ ದರ್ಶನ್ ಒಟ್ಟಿಗೆ ತೆಗೆಸಿಕೊಂಡ ಫೋಟೋ ವೈರಲ್ ಆಗಿತ್ತು. ಅವರ ಜೊತೆಗೆ ನಿರ್ಮಾಪಕ ಸುಪ್ರಿತ್ ಕೂಡ ಇದ್ದರು. ಇನ್ನೂ ಕ್ರಾಂತಿ ಸಿನೆಮಾದಲ್ಲಿ ರವಿಚಂದ್ರನ್ ಹೇಗೆ ಕಾಣಿಸಿ ಕೊಳ್ಳಲಿದ್ದಾರೆ ಎಂಬ ಲುಕ್ ರಿವಿಲ್ ಆಗಿತ್ತು. ಸದ್ಯಕ್ಕೆ ದರ್ಶನ್ ಅವರು ಕ್ರಾಂತಿ ಸಿನೆಮಾದ ಚಿತ್ರಿಕಾರಣದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರಕ್ಕೆ ದರ್ಶನ್ ಅವರು ಪಡೆದಿರುವ ಸಂಭಾವನೆ ಮೊತ್ತ ದೊಡ್ಡ ಮಟ್ಟಿಗೆ ಸುದ್ದಿಯಾಗುತ್ತಿದೆ.
ಹೌದು, ಕ್ರಾಂತಿ ಸಿನೆಮಾದ ಒಟ್ಟು ಬಜೆಟ್ ಬರೋಬ್ಬರಿ 75 ಕೋಟಿಗಳು ಎನ್ನಲಾಗಿದೆ. ಸೈಲಜಾ ನಾಗ್ ಹಾಗೂ ಬಿ ಸುರೇಶ್ ಅವರು ಬಂಡವಾಳ ಹೂಡಿದ್ದಾರೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪಡೆದಿರುವ ಸಂಭಾವನೆ ಬರೋಬ್ಬರಿ 20ಕೋಟಿಗಳು ಎನ್ನಲಾಗುತ್ತಿದೆ, ಡಿಬಾಸ್ ಅವರು ಸಂಭಾವನೆ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇನ್ನೂ ಕ್ರಾಂತಿ ಸಿನೆಮಾಕ್ಕಾಗಿ ನೀವು ಕಾಯುತ್ತಿದ್ದೀರಾ ಹಾಗಿದ್ದರೆ ನಿಮ್ಮ ಕಾಮೆಂಟ್ ಮೂಲಕ ತಿಳಿಸಿ.