‘ಕ್ರಾಂತಿ’ ಸಿನೆಮಾಗೆ ಡಿಬಾಸ್ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಅಬ್ಬಬ್ಬಾ ಇಷ್ಟೊಂದಾ ನೋಡಿದ್ರೆ ಪಕ್ಕ ತಲೆ ಗಿರ್ ಅನ್ನುತ್ತೆ!

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಕೋಟ್ಯಂತರ ಅಭಿಮಾನಿಗಳಿಂದ ಬಾಕ್ಸ್ ಆಫೀಸ್ ಸುಲ್ತಾನ ಅಂತ ಹೆಸರು ಪಡೆದಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಈಗಾಗಲೇ ಭಾಗಶಃ ಶೂಟಿಂಗ್ ಕಂಪ್ಲೀಟ್ ಮಾಡಿದೆ ಡಬ್ಬಿಂಗ್ ಕೆಲಸ ಪ್ರಾರಂಭವಾಗುತ್ತಿದೆ. ಈ ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿದ್ದು ಸದ್ಯದಲ್ಲೇ ಈ ಸಿನಿಮಾ ತೆರೆ ಕಾಣಲಿದೆ ಎಂದು ಕೆಲವು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕ್ರಾಂತಿ ಸಿನಿಮಾ ನಿಜಕ್ಕೂ ಒಂದು ಚಾಲೆಂಜಿಂಗ್ ಸಿನಿಮಾ ಅಂತಾನೆ ಹೇಳಬಹುದು ಏಕೆಂದರೆ ಕ್ರಾಂತಿ ಸಿನಿಮಾಗೆ ಯಾವುದೇ ರೀತಿಯಾದಂತಹ ಪ್ರಮೋಷನ್ ಸಿಕ್ಕಿಲ್ಲ.‌ ಸಾಮಾನ್ಯವಾಗಿ ಇಂಡಸ್ಟ್ರಿಯಲ್ಲಿ ಯಾವುದೇ ಹೊಸ ಸಿನಿಮಾ ತೆರೆ ಕಂಡರು ಕೂಡ ಅದಕ್ಕೆ ಮಾಧ್ಯಮದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತದೆ.

ಅಷ್ಟೇ ಅಲ್ಲದೆ ಸಪೋರ್ಟ್ ಕೂಡ ದೊರೆಯುತ್ತದೆ ಆದರೆ ದರ್ಶನವರಿಗೆ ಮಾತ್ರ ಕ್ರಾಂತಿ ಸಿನಿಮಾಗೆ ಯಾವುದೇ ರೀತಿಯಾದಂತಹ ಪ್ರಚಾರ ಕಾರ್ಯ ಆಗಿರಬಹುದು ಸಪೋರ್ಟ್ ಆಗಿರಬಹುದು ಅಥವಾ ಪ್ರೋಮೋಷನ್ ಆಗಿರಬಹುದು ಎಲ್ಲಿಯೂ ಕೂಡ ದೊರೆತಿಲ್ಲ. ಇದಕ್ಕೆ ಮುಖ್ಯ ಕಾರಣ ದರ್ಶನ್ ಅವರು ಕಳೆದ ಏಳೆಂಟು ತಿಂಗಳ ಹಿಂದೆ ಮಾಧ್ಯಮದವರ ವಿರುದ್ಧ ಗುಡುಗಿದ್ದರು ಹೌದು ಅರುಣದೇವಿ ಹಾಗೂ ಖ್ಯಾತ ನಿರ್ಮಾಪಕ ಆದಂತಹ ಉಮಾಪತಿ ಮತ್ತು ದರ್ಶನ್ ಈ ಮೂರು ಜನರ ವೈಯಕ್ತಿಕ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಮಾಧ್ಯಮದವರು ಮೂಗು ತೂರಿಸಿದರು ಈ ವೇಳೆಯಲ್ಲಿ ದರ್ಶನವರು ಮಾಧ್ಯಮದವರಿಗೆ ತರಾಟೆಯನ್ನು ತೆಗೆದುಕೊಂಡಿದ್ದರು.

ಈ ಒಂದು ಕೋಪವನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಂತಹ ಮಾಧ್ಯಮದವರು ದರ್ಶನ್ ಅವರನ್ನು ಬ್ಯಾನ್ ಮಾಡಿದರು. ಅಂದರೆ ದರ್ಶನವರಿಗೆ ಸಂಬಂಧಪಟ್ಟಂತಹ ಸಿನಿಮ ವಿಚಾರ ಆಗಿರಬಹುದು, ವೈಯಕ್ತಿಕ ವಿಚಾರ ಆಗಿರಬಹುದು ಅಥವಾ ಸಾಮಾಜಿಕ ವಿಚಾರ ಆಗಿರಬಹುದು ಎಲ್ಲಿಯೂ ಕೂಡ ಪ್ರಚಾರ ಮಾಡಬಾರದು ಇವರನ್ನು ಸಂಪೂರ್ಣವಾಗಿ ಮಾಧ್ಯಮ ಲೋಕದಿಂದಲೇ ದೂರ ಇಡಬೇಕು ಎಂಬ ಒ.ಳ.ಸಂ.ಚ.ನ್ನು ಹೂಡಿದರು.

ಈ ಕಾರಣಕ್ಕಾಗಿ ಇದೀಗ ಕ್ರಾಂತಿ ಸಿನಿಮಾ ಪ್ರಾರಂಭಗೊಂಡು ಮುಕ್ತಾಯದ ಹಂತಕ್ಕೆ ಬಂದಿದ್ದರು ಕೂಡ ಇದುವರೆಗೂ ಯಾವುದೇ ಚಾನೆಲ್ ನಲ್ಲಿಯೂ ಕೂಡ ಕ್ರಾಂತಿ ಸಿನಿಮಾಗೆ ಸಂಬಂಧಪಟ್ಟಂತಹ ಜಾಹೀರಾತುಗಳು ಕೂಡ ಬಂದಿಲ್ಲ. ಆದರೂ ಕೂಡ ಡಿಬಾಸ್ ಅವರು ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ ನನ್ನ ಸೆಲೆಬ್ರಿಟಿಗಳು ಅಂದರೆ ನನ್ನ ಕೋಟ್ಯಂತರ ಅಭಿಮಾನಿಗಳು ಇರುವವರೆಗೂ ಕೂಡ ನಾನು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ಸತ್ಯಕ್ಕೆ ಮಾತ್ರ ನಾನು ಬಗ್ಗುತ್ತೇನೆ ಮಾಧ್ಯಮದವರ ಪ್ರಚಾರ ನನಗೆ ಬೇಕಿಲ್ಲ ಎಂದು ರಾಜಾರೋಷವಾಗಿ ಹೇಳಿಕೊಂಡಿದ್ದಾರೆ.

ಅಭಿಮಾನಿಗಳು ನನ್ನನ್ನು ಬೆಂಬಲಿಸುತ್ತಾರೆ ನನ್ನ ಕೊನೆ ಉಸಿರು ಇರುವರೆಗೂ ಕೂಡ ನಾನು ನನ್ನ ಅಭಿಮಾನಿಗಳಿಗೆ ಚಿರಋಣಿಯಾಗಿರುತ್ತೇನೆ. ನನ್ನ ಸಿನಿಮಾದ ಪ್ರಮೋಷನ್ ಕಾರ್ಯಕ್ಕೆ ಯಾವುದೇ ಮಾಧ್ಯಮದ ಸಹಾಯ ಬೇಕಿಲ್ಲ ನನ್ನ ಸೆಲೆಬ್ರಿಟಿಗಳೆ ನನ್ನ ಸಿನಿಮಾದ ಪ್ರಮೋಷನ್ ಕಾರ್ಯವನ್ನು ಮಾಡಿಕೊಡುತ್ತಾರೆ ಅವರ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ದರ್ಶನವರು ಹೇಳಿಕೊಂಡಿದ್ದಾರೆ.

ಇದು ಒಂದು ಕಡೆಯಾದರೆ ಮತ್ತೊಂದು ಕಡೆ ದರ್ಶನ್ ಅವರ ಕ್ರಾಂತಿ ಸಿನಿಮಾ ಸುಮಾರು 75 ಕೋಟಿ ಬಡ್ಜೆಟ್ ನಲ್ಲಿ ತಯಾರಾಗುತ್ತಿದೆ ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಈ ಸಿನಿಮಾ ಗೆ ಸೈಲಜಾ ನಾಗ್ ಹಾಗೂ ಬಿ. ಸುರೇಶ್ ಅವರು ಬಂಡವಾಳ ಹೂಡಿದ್ದಾರೆ ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ಸಿನಿಮಾದಲ್ಲಿ ಅಭಿನಯ ಮಾಡುವುದಕ್ಕೆ ಬರೋಬ್ಬರಿ 12 ಕೋಟಿ ಸಂಭಾವನೆಯನ್ನು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಇಲ್ಲಿಯವರೆಗೂ ಕೂಡ ಕನ್ನಡದ ಯಾವ ನಟನೂ ಕೂಡ ಸಂಭಾವನೆಯನ್ನು ಪಡೆದಿಲ್ಲ ಇದೇ ಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಷ್ಟು ದುಬಾರಿ ಬೆಲೆಯ ಸಂಭಾವನೆಯನ್ನು ಪಡೆಯುವುದರ ಮೂಲಕ ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಕ್ರಾಂತಿ ಸಿನಿಮಾ ಐದು ಭಾಷೆಯಲ್ಲಿ ಮೂಡಿ ಬರುತ್ತಿದ್ದು ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ ಇಷ್ಟು ದಿನ ಕರ್ನಾಟಕದಲ್ಲಿ ಮಾತ್ರ ರಾರಾಜಿಸುತ್ತಿದ್ದಂತಹ ದರ್ಶನವರು ಇನ್ನು ಮುಂದೆ ಇಡಿ ಭಾರತದ ಅತ್ಯಂತ ಹೆಸರುವಾಸಿ ಪಡೆಯುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬುದು ದರ್ಶನ ಅಭಿಮಾನಿಗಳ ಮಾತಾಗಿದೆ.

ನಿಮ್ಮ ಪ್ರಕಾರ ದರ್ಶನ್ ಅವರ ಕ್ರಾಂತಿ ಸಿನಿಮಾ ಹಿಟ್ ಆಗುತ್ತಾ ಅಥವಾ ಇಲ್ಲವಾ ಎಂಬುದನ್ನು ತಪ್ಪದೇ ಕಾಮೆಂಟ್ ಮುಖಾಂತರ ನಮಗೆ ತಿಳಿಸಿ ಮಾಹಿತಿಯನ್ನು ಶೇರ್ ಮತ್ತು ಲೈಕ್ ಮಾಡಿ.


Leave a Reply

Your email address will not be published. Required fields are marked *