ಕ್ರಿಕೆಟ್ ಐಪಿಎಲ್ ಇತಿಹಾಸದಲ್ಲೇ ಭಾರೀ ಮುಖಭಂಗ ಅನುಭವಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ದೊಡ್ಡ ಬದಲಾವಣೆ…ನೋಡಿ ನೀವು ಕೂಡ ದಂಗಾಗ್ತೀರಾ..!?

ಸುದ್ದಿ

ಇಡೀ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎಂದರೆ ಅದು ಇಂಡಿಯನ್ ಪ್ರೀಮಿಯರ್ ಲೀಗ್ ಅಂದರೆ ಐಪಿಎಲ್. ಐಪಿಎಲ್ ಪ್ರಾರಂಭವಾದ ನಂತರ ವಿಶ್ವಕ್ರಿಕೆಟಿನಲ್ಲಿ ಹಲವಾರು ಲೀಗ್ ಗಳು ಆರಂಭವಾದರೂ ಕೂಡ ಐಪಿಎಲ್ ನಷ್ಟು ಯಶಸ್ವಿ ಹಾಗೂ ಜನಪ್ರಿಯವಾಗಲು ಸಾಧ್ಯವಾಗಲಿಲ್ಲ. ಇನ್ನು ಐಪಿಎಲ್ ನಲ್ಲಿ ಅದರಲ್ಲಿ ಈ ಬಾರಿ 10 ತಂಡಗಳು ಅಂದರೆ 2 ಹೊಸ ತಂಡಗಳು ಸೇರಿವೆ. ಇನ್ನು ಪ್ರತಿಬಾರಿ ಐಪಿಎಲ್ ಬಂದಾಗ ಕಪ್ ಗೆಲ್ಲುವಂತಹ ಫೇವರೆಟ್ ತಂಡಗಳ ಹೆಸರು ಕೇಳಿ ಬಂದಾಗ ಮೊದಲಿಗೆ ಕೇಳಿಬರುವುದು ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು.

ಆದರೆ ಈ ಬಾರಿ ಐಪಿಎಲ್ ತಂಡಗಳು ಬಹುತೇಕ ಸಂಪೂರ್ಣವಾಗಿ ಬದಲಾಗಿದ್ದು ಎಲ್ಲಾ ಹೊಸ ಆಟಗಾರರು ಬೇರೆಬೇರೆ ತಂಡಗಳನ್ನು ಸೇರಿಕೊಂಡಿದ್ದಾರೆ. ಇನ್ನು ಇಂದಿನ ವಿಚಾರದಲ್ಲಿ ಯಾವ ಪ್ರಮುಖವಾಗಿ ಮಾತನಾಡಲು ಹೊರಟಿರುವುದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕುರಿತಂತೆ. ಹೌದು ಪ್ರತಿಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಹೇಂದ್ರ ಸಿಂಗ್ ಧೋನಿ ಅವರು ನಾಯಕನ ಸ್ಥಾನದಲ್ಲಿ ನಿಂತು ಮುನ್ನಡೆಸುತ್ತಿದ್ದರು. 2020 ಹೊರತುಪಡಿಸಿ ಪ್ರತಿ ಎಲ್ಲಾ ಬಾರಿ ಕೂಡ ನಾಕ್ಔಟ್ ಗೆ ತೇರ್ಗಡೆಯಾಗಲು ಚೆನ್ನೈ ಸೂಪರ್ ಕಿಂಗ್ಸ್ ತಂಡ ಯಶಸ್ವಿಯಾಗಿದೆ. ಅತ್ಯಂತ ಯಶಸ್ವಿ ಆಗಿರುವ ಐಪಿಎಲ್ ತಂಡಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡನೇ ಸ್ಥಾನವನ್ನು ಪಡೆದುಕೊಳ್ಳುತ್ತದೆ.

ಅತ್ಯಂತ ಯಶಸ್ವಿಯಾಗಿರುವ ಮೊದಲ ಸ್ಥಾನದಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡ ಮೊದಲನೇ ಸ್ಥಾನದಲ್ಲಿದ್ದರೆ ನಾಲ್ಕು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡನೇ ಸ್ಥಾನದಲ್ಲಿದೆ. ಖಂಡಿತವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ಸಿನ ಹಿಂದೆ ಮಹೇಂದ್ರ ಸಿಂಗ್ ಧೋನಿ ರವರ ನಾಯಕತ್ವದ ಪ್ರಭಾವ ಇದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಆದರೆ ನಿಮಗೆಲ್ಲರಿಗೂ ತಿಳಿದಿರುವಂತೆ ಈ ಬಾರಿ ಮಹೇಂದ್ರ ಸಿಂಗ್ ದೋನಿ ರವರು ನಾಯಕತ್ವದಿಂದ ಕೆಳಗಿಳಿದಿದ್ದು ರವೀಂದ್ರ ಸಿಂಗ್ ಜಡೇಜಾ ರವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಆದರೆ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾಡಿರುವ ಆರಂಭದ ಮೂರಕ್ಕೆ ಮೂರು ಪಂದ್ಯಗಳನ್ನು ಕೂಡ ಹೀನಾಯವಾಗಿ ಸೋತಿದೆ. ಇದು ಅಭಿಮಾನಿಗಳಲ್ಲಿ ದೊಡ್ಡಮಟ್ಟದ ಅಸಮಾಧಾನಕ್ಕೆ ಕಾರಣವಾಗಿದೆ.

ಇದೇ ಕಾರಣದಿಂದಾಗಿ ಚೆನ್ನೈ ಸೂಪರ್ ಕಿಂಗ್ ತಂಡ ಮುಂದಿನ ದಿನಗಳಲ್ಲಿ ಮಹತ್ವವಾದ ಬದಲಾವಣೆಗಳನ್ನು ಮಾಡಿಕೊಳ್ಳಬಹುದು ಎನ್ನುವ ಗಾಳಿಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆ ಮಹತ್ವದ ಬದಲಾವಣೆ ಏನೆಂದರೆ ಮತ್ತೆ ಪುನಹ ಮಹೇಂದ್ರ ಸಿಂಗ್ ಧೋನಿ ರವರು ರವೀಂದ್ರ ಜಡೇಜ ರವರ ಸ್ಥಾನಕ್ಕೆ ತಂಡದ ನಾಯಕನಾಗಿ ಮತ್ತೆ ಆಯ್ಕೆಯಾಗಬಹುದು ಎನ್ನುವುದಾಗಿ. ಇದು ಎಷ್ಟರ ಮಟ್ಟಿಗೆ ಸತ್ಯ ಹಾಗೂ ಸುಳ್ಳು ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ. ಒಟ್ಟಾರೆಯಾಗಿ ಮಹೇಂದ್ರ ಸಿಂಗ್ ಧೋನಿ ರವರ ನಾಯಕತ್ವ ಇಲ್ಲದೆ ತಂಡ ಸೋಲಿನಿಂದ ಕಂಗೆಟ್ಟಿರುವುದಂತೂ ನಿಜ. ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯವನ್ನು ಕೂಡ ನಮ್ಮೊಂದಿಗೆ ಮಿಸ್ ಮಾಡದೆ ಹಂಚಿಕೊಳ್ಳಿ.


Leave a Reply

Your email address will not be published. Required fields are marked *