ಕ್ರೀಜಿಸ್ಟಾರ್ ರವಿಚಂದ್ರನ್ ಮಗನ ಮದುವೆಯ ಆಮಂತ್ರಣ ಪತ್ರಿಕೆಯ ಬೆಲೆ ಎಷ್ಟು ಗೊತ್ತಾ.? ಒಂದು ಕಾರ್ಡ್ ನ ಬೆಲೆ ಇಷ್ಟೊಂದ.? ಅಬ್ಬಬ್ಬಾ ನೋಡಿದ್ರೆ ನಿಜಕ್ಕೂ ನೀವು ಶಾಕ್ ಆಗ್ತೀರಾ.!

ಸುದ್ದಿ

ಕರ್ನಾಟಕದ ಹೆಣ್ಣುಮಕ್ಕಳ ಹೃದಯ ಕದ್ದ ಚೋರ ಕನ್ನಡ ಚಿತ್ರರಂಗದ ಹಿರಿಯ ನಟರಾದ ಕ್ರೀಜಿಸ್ಟಾರ್ ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ಅವರು ಇದೆ ತಿಂಗಳು ಆಗಸ್ಟ್ 20 ಮತ್ತು 21ಕ್ಕೆ ಸಂಗೀತ ದೀಪಕ್ ಎಂಬ ಯುವತಿಯನ್ನು ಮದುವೆಯಾಗಲಿದ್ದಾರೆ, ಸಂಗೀತ ದೀಪಕ್ ಅವರು ಮೂಲತಹ ವೈದ್ಯಕೀಯ ವೃತ್ತಿಯಲ್ಲಿ ಇದ್ದಾರೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ಇವರ ಮೂಲ ನಿವಾಸವಾಗಿದೆ ಇದೊಂದು ಇಬ್ಬರು ಮನೆಯವರು ಒಪ್ಪಿದ ಪಕ್ಕ ಆರೇಂಜ್ ಮ್ಯಾರೇಜ್.

ಈಗಾಗಲೇ ಅದ್ದೂರಿ ಮದುವೆಗೆ ಸಕಲ ಸಿದ್ಧತೆಯನ್ನು ಕೂಡ ಮಾಡಿಕೊಳ್ಳಲಾಗಿದೆ ನಟ ರವಿಚಂದ್ರನ್ ಅವರು ಏನೇ ಮಾಡಿದರು ಕೂಡ ಬಹಳ ವಿಭಿನ್ನ ಹಾಗೂ ವಿಶೇಷ ರೀತಿಯಲ್ಲಿ ಮಾಡುತ್ತಾರೆ. ಇದರ ಬಗ್ಗೆ ನಾವು ಹೆಚ್ಚಾಗಿ ಏನು ಹೇಳಬೇಕಾದ ಅಗತ್ಯವಿಲ್ಲ ಏಕೆಂದರೆ ನೀವು ರವಿಚಂದ್ರನ್ ಅವರ ಸಿನೆಮಾವನ್ನು ನೋಡಿರುತ್ತೀರ ಅವರ ಸಿನೆಮಾದಲ್ಲಿ ಪ್ರತಿ ಸೀನ್ ನ ಎಫೆಕ್ಟ್ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ ಯಾವುದಾದರು ಒಂದು ವಸ್ತುವನ್ನು ಬಹಳ ವಿಶೇಷವಾಗಿ ಬಳಕೆ ಮಾಡಿ ಅದನ್ನು ಜನರಿಗೆ ತೋರಿಸುದರಲ್ಲಿ ನಟ ರವಿಚಂದ್ರನ್ ಅವರು ಎತ್ತಿದ ಕೈ.

ಇದೇ ಕಾರಣಕ್ಕಾಗಿ ತಮ್ಮ ಮಗಳು ಗೀತಾಂತಲಿ ಮದುವೆಯನ್ನು ಕೂಡ ಬಹಳ ಅದ್ದೂರಿಯಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾಡಿದ್ದರು. ಈ ಮದುವೆಗೆ ಯಾರೂ ಕೂಡ ಊಹೆ ಮಾಡಿರದಂತ ಅದ್ದೂರಿ ಹೂವಿನ ಸೆಟ್ ಗಳನ್ನು ಹಾಕಲಾಗಿತ್ತು. ಅದೇ ಸಾಲಿನಲ್ಲಿ ಇದೀಗ ಅವರ ಮಗ ಆದಂತಹ ಮನೋರಂಜನ್ ಅವರ ಮದುವೆಯ ಆಮಂತ್ರಣ ಪತ್ರಿಕೆಯ ವಿನ್ಯಾಸವನ್ನು ಕೂಡ ಮಾಡಿದ್ದಾರೆ.

ಈ ಮದುವೆಯ ಆಮಂತ್ರಣದ ಪತ್ರಿಕೆಯ ವಿನ್ಯಾಸ ಮತ್ತು ಇದರ ಬೆಲೆ ಕೇಳಿದರೆ ನಿಜಕ್ಕೂ ಕೂಡ ನೀವು ಒಂದು ಕ್ಷಣ ಆಶ್ಚರ್ಯ ಪಡುವುದು ಖಂಡಿತ. ಹೌದು ಯಾವಾಗಲೂ ಕೂಡ ಒಂದು ಹೆಜ್ಜೆ ಮುಂದೆ ಹಾಗೂ ವಿಭಿನ್ನತೆಯನ್ನು ಹುಡುಕುವಂತಹ ರವಿಚಂದ್ರನ್ ತಮ್ಮ ಮಗನ ಮದುವೆಯ ಆಮಂತ್ರಣ ಪತ್ರಿಕೆಯಲ್ಲೂ ಕೂಡ ವಿಭಿನ್ನ ಮಾದರಿಯ ಕಾನ್ಸೆಪ್ಟ್ ಗಳಲ್ಲಿ ಮಾಡಿಸಿದ್ದಾರೆ.

ಈ ಲಗ್ನ ಪತ್ರಿಕೆಯನ್ನು ನೋಡಿದರೆ ಯಾರಿಗೂ ಕೂಡ ಇದು ಮದುವೆಯ ಲಗ್ನಪತ್ರಿಕೆ ಅಂತ ಯಾರಿಗೂ ಅನ್ನಿಸುವುದಿಲ್ಲ ಅಷ್ಟು ಅದ್ದೂರಿಯಾಗಿ ಇದನ್ನು ಸಿದ್ದಪಡಿಸಿದ್ದಾರೆ. ಈ ಮದುವೆ ಪತ್ರಿಕೆ ತುಂಬಾ ವಿಶೇಷತೇಗಳಿವೆ ಈ ಪತ್ರಿಕೆಯಲ್ಲಿ ಕನುಸುಗಾರ ರವಿಚಂದ್ರನ್ ಅವರು ರಾರಾಜಿಸುತ್ತಿದ್ದಾರೆ ಹೃದಯದ ಸಿಂಹಸನ ಇರುವ ವಿನ್ಯಾಸದ ಮೇಲೆ ರವಿಚಂದ್ರನ್ ಕುಳಿತಿದ್ದಾರೆ ಕ್ರೇಜಿಸ್ಟಾರ್ ಅವರ ವಿಭಿನ್ನ ಫೋಟೋವನ್ನು ಇಲ್ಲಿ ಸೃಷ್ಟಿಮಾಡಲಾಗಿದೆ.

ಸಿಂಹಸನದ ಮೇಲೆ ರವಿಚಂದ್ರನ್ ಕುಳಿತರೆ, ಹೃದಯದ ವಿನ್ಯಾಸದಲ್ಲಿ ಮದುಮಗ ಹಾಗೂ ಮಧುಮಗಳು ಹೆಸರು ಮತ್ತು ಮದುವೆಯ ಬಗ್ಗೆ ಹೆಚ್ಚಿನ ಮಾಹಿತಿ ಇದೆ ಈ ಪತ್ರಿಕೆಯ ಪ್ರಕಾರ ಇದೆ ತಿಂಗಳು 20 ಮತ್ತು 21 ರಂದು ಮದುವೆ ಅದ್ದೂರಿಯಾಗಿ ನಡೆಯಲಿದೆ. ಪತ್ರಿಕೆಯ ಕೇಳಭಾಗದಲ್ಲಿ ರವಿಚಂದ್ರನ್ ಅವರ ಧರ್ಮಪತ್ನಿ ಸುಮತಿ ಹಾಗೂ ರವಿಚಂದ್ರನ್ ಎಂಬ ಹೆಸರು ಕೂಡ ನಮೂಡಿಸಲಾಗಿದೆ ಇಷ್ಟು ಅದ್ದೂರಿಯಾಗಿ ಮೂಡಿ ಬಂದಿರುವ ಈ ಒಂದು ಮದುವೆಯ ಲಗ್ನ ಪತ್ರಿಕೆಯ ಖರ್ಚು ಎಷ್ಟಿರಬಹುದು ಎಂಬುದನ್ನು ತಿಳಿದುಕೊಳ್ಳುವಂತಹ ಕುತೂಹಲ ಅಭಿಮಾನಿಗಳಿಗೆ ಹಾಗೂ ಸಾಕಷ್ಟು ಜನರಿಗೆ ಇದೆ ಹಾಗಾದರೆ ನೋಡಣ ಬನ್ನಿ.

ಹೌದು ಒಂದು ಲಗ್ನ ಪತ್ರಿಕೆಯ ಬೆಲೆ ಬರೋಬ್ಬರಿ 3000 ರೂಪಾಯಿ ಹೌದು ನಿಮಗೆ ಆಶ್ಚರ್ಯ ಅನಿಸಿದರೂ ಕೂಡ ಇದು ಸತ್ಯ ವಿಭಿನ್ನ ಮಾದರಿಯಲ್ಲಿ ರವಿಚಂದ್ರನ್ ಅವರ ಫೋಟೋವನ್ನು ಕೆತ್ತಲಾಗಿರುವಂತಹ ಈ ಲಗ್ನಪತ್ರಿಕೆಯ ಬೆಲೆ ರೂ.3000, ಅಂದ ಹಾಗೆ ಕೇವಲ ಒಂದೇಒಂದು ಪತ್ರಿಕೆಯ ಬೆಲೆ 3000 ರೂ ಅಂದರೆ ನೀವೇ ಮನಸ್ಸಿನಲ್ಲಿ ಊಹೆ ಮಾಡಿ ನೋಡಿ ಸಾವಿರ ಪತ್ರಿಕೆಗಳನ್ನು ಪ್ರಿಂಟ್ ಮಾಡಿಸಿದರೆ ಅದರ ಬೆಲೆ ಎಷ್ಟಿರಬಹುದು ಅಂತ ಬರೋಬ್ಬರಿ ಮೂರು ಕೋಟಿ ರೂಪಾಯಿ.

ಕೇವಲ ಲಗ್ನ ಪತ್ರಿಕೆಗೆ ಇಷ್ಟು ಖರ್ಚು ಮಾಡುತ್ತಿರುವ ನಟ ರವಿಚಂದ್ರನ್ ಇನ್ನೂ ಮಗನ ಮದುವೆಯನ್ನು ಇನ್ನೆಷ್ಟು ಅದ್ದೂರಿಯಾಗಿ ಮಾಡಬಹುದು ಎಂಬುದು ಎಲ್ಲರಿಗೂ ಕುತೂಹಲ ಮೂಡಿಸಿದೆ. ಒಟ್ಟಿನಲ್ಲಿ ಚಂದನವನದಲ್ಲಿ ಇದುವರೆಗೂ ಕೂಡ ಯಾರೂ ಕೂಡ ಮಾಡದೇಇರದಂತಹ ವಿಭಿನ್ನ ಮಾದರಿಯ ಮದುವೆಯನ್ನು ನಟ ರವಿಚಂದ್ರನ್ ಅವರು ಮಗನ ಮದುವೆಯನ್ನು ಮಾಡಲಿದ್ದಾರೆ ಎಂಬುದು ಈ ವಿಶೇಷ ಲಗ್ನ ಪತ್ರಿಕೆಯ ಮೂಲಕವೇ ತಿಳಿಯುತ್ತದೆ. ಹಲವಾರು ಜನರಿಗೆ ಮಾದರಿಯಾಗಿರುವ ನಟ ರವಿಚಂದ್ರನ್ ಅವರ ಮಗನ ಮದುವೆಯಾ ಆಮಂತ್ರಣ ಪತ್ರಿಕೆ ಇಷ್ಟು ಖರ್ಚು ಮಾಡುವ ಅವಶ್ಯಕತೆ ಇತ್ತಾ.? ಎಂಬುದನ್ನು ನಿಮ್ಮ ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *