ಕ್ರೇಜಿಸ್ಟಾರ್ ಮನೆಯಲ್ಲಿ ಮದುವೆ ಸಂಭ್ರಮ..ವೈವಾಹಿಕ ಜೀವನಕ್ಕೆ ಕಾಲಿಟ್ಟ ಮನು ರವಿಚಂದ್ರನ್ ಸುಂದರ ಕ್ಷಣದ ಫೋಟೋಸ್ ಇಲ್ಲಿವೆ ನೋಡಿ

ಸುದ್ದಿ

ಪ್ರೇಮ ಲೋಕದ ದೊರೆ ವಿ. ರವಿಚಂದ್ರನ್ ಅವರ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ರವಿಚಂದ್ರನ್ ಅವರ ಪುತ್ರ ಮನೋರಂಜನ್ ಇಂದು ಆಗಸ್ಟ್ 21 ರಂದು ವೈವಾಹಿಕ ಜೀವನಕ್ಕೆ ಕಲಿಡುತ್ತಿದ್ದಾರೆ. ಕನ್ನಡ ಸಿನೆಮಾರಂಗದಲ್ಲಿ ನಟನಾಗಿ ಗುರುತಿಸಿಕೊಂಡಿದ್ದಾರೆ ಮನೋರಂಜನ್. 2017 ರಲ್ಲಿ ಸಾಹೇಬ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿದ್ದ ಮನೋರಂಜನ್ ಆ ಬಳಿಕ ಬೃಹಸ್ಪತಿ, ಮುಗಿಲ್ ಪೇಟೆ, ಪ್ರಾರಂಭ ಹೆಸರಿನ ಚಿತ್ರಗಳಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದರು.

ಈ ಹಿಂದೆ, ಮದುವೆಯ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈ-ರ-ಲ್ ಆಗಿತ್ತು. ಪತ್ರಿಕೆಯಲ್ಲಿ ರವಿಚಂದ್ರನ್ ಅವರ ಫೋಟೋ ಇರುವುದು ಹೈಲೆಟ್ ಆಗಿತ್ತು. ಇಂದು ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಇತ್ತೀಚಿಗೆ ತನ್ನ ಮದುವೆಯ ಬಗ್ಗೆ ಮಾತನಾಡಿರುವ ಮನೋರಂಜನ್ ಅವರು, ಇದೊಂದು ಅರೇಂಜ್ ಮ್ಯಾರೇಜ್ ಆಗಿದೆ. ನಾನು ಮದುವೆ ಅಗಲಿರುವ ಹುಡುಗಿ ಸಂಗೀತ ನಮಗೆ ದೂರದ ಸಂಬಂಧಿ ಆಗಬೇಕು. ನನಗೆ ಈಗ 34 ವರ್ಷ. ಹಾಗೆ ನೋಡಿದ್ರೆ ನಮ್ಮ ಕುಟುಂಬದಲ್ಲಿ ಹುಡುಗ ಮತ್ತು ಹುಡುಗಿಯರ ಮದುವೆ 27 ರ ಒಳಗೇ ನಡೆಯುತ್ತದೆ.

ನಾನು ಮಾತ್ರ ಇಷ್ಟು ತಡವಾಗಿ ಮದುವೆ ಆಗುತ್ತಿದ್ದೇನೆ. ಎಂದು ಮನೋರಂಜನ್ ಹೇಳಿದ್ದಾರೆ. ಈ ಮದುವೆ ಎರಡು ಕುಟುಂಬಗಳು ಒಪ್ಪಿಗೆಯಾಗಿ, ಈಗ ಮದುವೆ ಆಗುತ್ತಿದ್ದೇವೆ ಎಂದಿದ್ದಾರೆ. ರವಿಚಂದ್ರನ್ ಅವರ ಹಿರಿಯ ಪುತ್ರ, ನಟ ಮನೋರಂಜನ್ ಅವರ ಮದುವೆ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯುತ್ತಿದೆ. ಅಂದಹಾಗೆ, ಶುಕ್ರವಾರ ಮೆಹಂದಿ ಹಾಗೂ ಅರಿಸಿನ ಶಾಸ್ತ್ರಗಳು ಮುಗಿದಿವೆ. ಅದಾದ ಬಳಿಕ, ನಿನ್ನ ಆಗಸ್ಟ್ 20ರಂದು ಮನೋರಂಜನ್ ಅವರ ಆರತಕ್ಷತೆ ಕಾರ್ಯಕ್ರಮ ನಡೆದಿದೆ.

ಈ ಕಾರ್ಯಕ್ರಮವನ್ನು ವಧುವಿನ ಕಡೆಯವರು ಆಯೋಜಿಸಿದ್ದಾರೆ. ಇಂದು ಆಗಸ್ಟ್ 21 ಮದುವೆಯ ಶಾಸ್ತ್ರಗಳು ನಡೆಯಲಿದೆ. ಅಂದಹಾಗೆ, ಆಗಸ್ಟ್ 22ಕ್ಕೆ ಚಿತ್ರರಂಗದ ಸ್ನೇಹಿತರಿಗೆ ಮನೋರಂಜನ್ ಆರತಕ್ಷತೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎನ್ನಲಾಗಿದೆ. ನಿನ್ನೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿನ ವೈಟ್ ಪೇಟಲ್ಸ್ ತ್ರಿಪುರವಾಸಿಣಿಯಲ್ಲಿ ಸಂಜೆ 7ಕ್ಕೆ ವಧುವಿನ ಕಡೆಯವರಿಂದ ಆರತಕ್ಷತೆ ಕಾರ್ಯಕ್ರಮ ನಡೆದಿದೆ.

ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ ನ ಹಲವು ಗಣ್ಯರು ಸೇರಿದಂತೆ ಕುಟುಂಬದ ಪ್ರಮುಖರು ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಅದ್ದೂರಿ ನಿನ್ನೆ ನಡೆದ ಮದುವೆಯ ಆರತಕ್ಷತೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈ-ರ-ಲ್ ಆಗಿದೆ. ನೀವು ನೋಡಿ ನವ ದಂಪತಿಗಳಿಗೆ ಶುಭ ಹಾರೈಸಿ ಧನ್ಯವಾದಗಳು.


Leave a Reply

Your email address will not be published. Required fields are marked *