ಖ್ಯಾತ ನಿರೂಪಕಿ ಅನುಶ್ರೀ ಸಂದರ್ಶನದಲ್ಲಿ ಕೊನೆಗೂ ರಶ್ಮಿಕಾ ಮಂದಣ್ಣ ಬಗ್ಗೆ ಭಾವುಕರಾಗಿ ಮಾತಾಡಿದ ನಟ ರಕ್ಷಿತ್ ಶೆಟ್ಟಿ ಹೇಳಿದ್ದೇನು ಗೊತ್ತಾ? ವಿಡಿಯೋ ನೋಡಿ

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಇತ್ತೀಚಿಗೆ ಬಿಡುಗಡೆಯಾಗಿರುವ ೭೭೭ ಚಾರ್ಲಿ ಸಿನಿಮಾ ದೇಶದೆಲ್ಲೆಡೆ ಭರ್ಜರಿಯಾದ ಪ್ರದರ್ಶನ ಕಾಣುತ್ತಿದ್ದು, ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ೭೭೭ ಚಾರ್ಲಿ ಸಿನಿಮಾವನ್ನು ಕನ್ನಡದ ಜೊತೆಗೆ ತಮಿಳು, ತೆಲುಗು, ಹಿಂದಿ ಹಾಗು ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಸಿನಿಮಾವನ್ನು ಕಿರಣ್ ರಾಜ್ ಅವರು ನಿರ್ದೇಶನ ಮಾಡಿದ್ದಾರೆ.

ಇನ್ನೂ ಈಗಾಗಲೇ ಬರೋಬ್ಬರಿ ೩೦ ಕೋಟಿಗೂ ಹೆಚ್ಚಿನ ಕಲೆಕ್ಷನ್ ಮಾಡಿರುವ ೭೭೭ ಚಾರ್ಲಿ ಸಿನಿಮಾವನ್ನು ನೋಡಿರುವ ಪ್ರತಿಯೊಬ್ಬರೂ ಬಹಳ ಇಷ್ಟ ಪಟ್ಟಿದ್ದಾರೆ. ಹಲವಾರು ಜನ ಸಿನಿಮಾವನ್ನು ನೋಡಿ ಭಾವುಕರಾಗಿದ್ದಾರೆ. ಇನ್ನು ಇವತ್ತು ಅನುಶ್ರೀ ಅವರು ತಮ್ಮ ಚಾನಲ್ ನಲ್ಲಿ ರಕ್ಷಿತ್ ಶೆಟ್ಟಿ ಹಾಗು ಸಂಪೂರ್ಣ ಚಾರ್ಲಿ ತಂಡವನ್ನು ಸಂದರ್ಶನ ಮಾಡಿದ್ದಾರೆ. ಅನುಶ್ರೀ ಅವರ ಸಂದರ್ಶನದಲ್ಲಿ ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಸಂಗೀತ ಶೃಂಗೇರಿ, ನಿರ್ದೇಶಕ ಕಿರಣ್ ರಾಜ್ ಅವರು ಪಾಲ್ಗೊಂಡಿದ್ದರು.ಈ ಸಮಯದಲ್ಲಿ ಅನುಶ್ರೀ ಅವರು ಚಿತ್ರ ತಂಡಕ್ಕೆ ಸಿನಿಮಾದ ಬಗ್ಗೆ, ಸಿನಿಮಾದ ಚಿತ್ರೀಕರಣದ ಬಗ್ಗೆ, ಚಾರ್ಲಿ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಇವೆಲ್ಲದರ ನಡುವೆ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಕೂಡ ಒಂದು ಮಾತು ಬಂದಿದೆ.

ಈ ಸಮಯದ್ಲಲಿ ಬಹಳ ಭಾವುಕರಾಗಿ ರಕ್ಷಿತ್ ಶೆಟ್ಟಿ ಅವರು ಹೇಳಿದ್ದು ಹೀಗೆ. “ನೋಡಿ, ಅದು ನನ್ನ ಜೀವನದ ಒಂದು ಮುಗಿದು ಹೋದ ಅದ್ಯಾಯ. ಯಾಕೆ ಈ ಮೀಡಿಯಾದವರು ಪದೇ ಪದೇ ಅದೇ ಪ್ರಶ್ನೆಗಳನ್ನು ನನಗೆ ಕೇಳುತ್ತಾರೆ ನನಗೆ ಗೊತ್ತಿಲ್ಲ! ನಾನು ನನ್ನ ಜೀವನದಲ್ಲಿ ಬ್ಯುಸಿ ಇದ್ದೇನೆ, ರಶ್ಮಿಕಾ ಅವರ ಜೀವನದಲ್ಲಿ ಬ್ಯುಸಿ ಇದ್ದಾರೆ! ನಾವಿಬ್ಬರು ನಮ್ಮ ನಮ್ಮ ಕರಿಯರ್ ನಲ್ಲಿ ಬಹಳ ಬ್ಯುಸಿ ಇದ್ದೇವೆ”

“ನನ್ನ ಪ್ರತಿಯೊಂದ ಸಿನಿಮಾ ಬಿಡುಗಡೆಯಾದ ಮೇಲೆ ಮೀಡಿಯಾದವರು ರಶ್ಮಿಕಾ ಮಂದಣ್ಣ ಬಗ್ಗೆ ಒಂದಲ್ಲ ಒಂದು ಪ್ರಶ್ನೆ ಕೇಳೇ ಕೇಳುತ್ತಾರೆ. ಅದು ನನ್ನ ಪ್ರಕಾರ ತಪ್ಪು! ಪದೇ ಪದೇ ಅದನ್ನು ಕೇಳಬಾರದು. ಈಗ ನೋಡಿ ಚಾರ್ಲಿ ಬಿಡುಗಡೆ ಯಾಗಿ ನನ್ನ ಕೆಲವು ಅಭಿಮಾನಿಗಳು ರಶ್ಮಿಕಾ ಮಂದಣ್ಣ ಬಗ್ಗೆ ಮತ್ತೆ ಹಗುರವಾಗಿ ಮಾತಾಡುತಿದ್ದಾರೆ, ಇದು ತಪ್ಪು! ದಯವಿಟ್ಟು ಇದನೆಲ್ಲಾ ಮಾಡಬೇಡಿ”

“ನಿಮಗೆ ನನ್ನ ಮೇಲೆ ಪ್ರೀತಿ ಇದ್ದರೆ, ನನ್ನ ಬಗ್ಗೆ ಮಾತ್ರ ಮಾತಾಡಿ! ದಯವಿಟ್ಟು ಇನ್ನುಮುಂದೆ ಬೇರೆಯವರ ಬಗ್ಗೆ ಮಾತನಾಡುವುದು ಬೇಡ. ಎಲ್ಲರನ್ನು ಗೌರವಿಸೋಣ! ಅದು ನನ್ನ ಜೀವನದ ಒಂದು ಮುಗಿದಿರುವ ಅದ್ಯಾಯ. ನಾನೇ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ನೀವು ಯಾಕೆ ಅಷ್ಟೊಂದು ಆ ಮ್ಯಾಟರ್ ಬಗ್ಗೆ ಯೋಚನೆ ಮಾಡ್ತೀರಾ” ಎಂದು ಭಾವುಕರಾಗಿ ರಕ್ಷಿತ್ ಶೆಟ್ಟಿ ಅವರು ಮಾತಾಡಿದ್ದಾರೆ.

ಕೆಲವು ಅಭಿಮಾನಿಗಳು ಕೂಡ ೭೭೭ ಚಾರ್ಲಿ ಬಿಡುಗಡೆಯಾದ ನಂತರ ಸಿನಿಮಾವನ್ನು ನೋಡಿದ ನಂತರ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಮತ್ತೆ ಹಗುರವಾಗಿ ಮಾತಾಡಲು ಶುರು ಮಾಡಿದ್ದಾರೆ. ನೀವು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಇದರ ಬಗ್ಗೆ ಸಾಕಷ್ಟು ವಿಡಿಯೋಗಳನ್ನು ನೋಡಿರುತ್ತೀರಾ. ರಶ್ಮಿಕಾ ಮಂದಣ್ಣ ಅವರು ಕೂಡ ನಮ್ಮ ಕನ್ನಡದ ಹುಡುಗಿ ಅವರನ್ನು ಗೌರವಿಸೋಣ.

ಸದ್ಯ ರಕ್ಷಿತ್ ಶೆಟ್ಟಿ ಅವರ ೭೭೭ ಚಾರ್ಲಿ ಸಿನಿಮಾ ಎಲ್ಲಾ ಕಡೆ ಭರ್ಜರಿಯಾದ ಪ್ರದರ್ಶನ ಕಾಣುತ್ತಿದ್ದು, ಇವತ್ತು ನಮ್ಮ ಸಿ ಎಂ ಬಸವರಾಜ್ ಬೊಮ್ಮಾಯಿ ಅವರು ಕೂಡ ಸಿನಿಮಾವನ್ನು ನೋಡಿ ಭಾವುಕರಾಗಿದ್ದಾರೆ. ನೆನ್ನೆ ಸಿನಿಮಾವನ್ನು ಸಾಧು ಕೋಕಿಲ, ಜಗ್ಗೇಶ್, ಆಶಿಕಾ ರಂಗನಾಥ್, ಅದಿತಿ ಪ್ರಭುದೇವ ಸೇರಿದಂತೆ ಹಲವಾರು ಕನ್ನಡದ ತಾರೆಯರು ನೋಡಿ ಬಹಳ ಖುಷಿ ಪಟ್ಟಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ.


Leave a Reply

Your email address will not be published. Required fields are marked *