ಪ್ರತಿಯೊಬ್ಬರ ಜೀವನದಲ್ಲಿ ಮದುವೆಯನ್ನು ವುದು ಪ್ರಮುಖವಾದ ಅಂಶವಾಗಿರುತ್ತದೆ. ಹೀಗಾಗಿ ಮದುವೆಯಾಗುವಾಗ ತಮ್ಮ ಸಂಗಾತಿಯ ಆಯ್ಕೆಯನ್ನು ಸಾಕಷ್ಟು ಯೋಚಿಸಿದ ನಂತರವೇ ನಿರ್ಧಾರ ಮಾಡುವುದು ಉಚಿತವಾಗಿರುತ್ತದೆ. ಕೆಲವೊಮ್ಮೆ ಕೆಲವು ಮದುವೆಗಳು ಇದೇ ಕಾರಣಕ್ಕಾಗಿ ಅರ್ಧದಲ್ಲಿ ನಿಲ್ಲುತ್ತದೆ. ಇತ್ತೀಚಿನ ದಿನಗಳಲ್ಲಿ ವಿವಾಹ ವಿಚ್ಛೇದನಗಳ ಕುರಿತಂತೆ ನೀವು ಕೇಳಿದಾಗ ಈ ವಿಚಾರವನ್ನು ಅರ್ಥಮಾಡಿಕೊಳ್ಳಬಹುದಾಗಿದೆ. ಇಂದಿನ ವಿಚಾರದಲ್ಲಿ ನಾವು ಹೇಳಲು ಹೊರಟಿರುವ ಮದುವೆ ಕೂಡ ನಿಮಗೆ ಆಶ್ಚರ್ಯವನ್ನು ತೋರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಇದು ನಡೆದಿರುವುದು ಬೇರೆ ಯಾವುದು ದೇಶದಲ್ಲಿ ಅಲ್ಲ ಬದಲಾಗಿ ನಮ್ಮ ದೇಶದ ಉತ್ತರಪ್ರದೇಶದಲ್ಲಿ. ಯುವಕ ಎಲ್ಲರಂತೆ ಒಬ್ಬ ಹುಡುಗಿಯನ್ನು ಮದುವೆಯಾಗಿದ್ದ.
ಮದುವೆಯಾದ ನಂತರ ಎಲ್ಲರೂ ಕೂಡ ದೈಹಿಕ ಸಂಬಂಧವನ್ನು ಹೊಂದುವುದು ಸರ್ವೇಸಾಮಾನ್ಯವಾಗಿದೆ. ಆದರೆ ಮದುವೆಯಾಗೆ ಗಂಡನ ಮನೆಗೆ ಬಂದಮೇಲೆ ಕೂಡ ಯುವತಿ ಗಂಡನೊಂದಿಗೆ ಸೇರಲು ಹಿಂಜರಿಯುತ್ತಿದ್ದಳು. ಮೊದಮೊದಲಿಗೆ ಗಂಡನು ಕೂಡ ಆಕೆಗೆ ಆರೋಗ್ಯದ ಸಮಸ್ಯೆ ಇರಬಹುದು ಇದಕ್ಕಾಗಿ ಆಕೆ ಮುಂದೂಡುತ್ತಿದ್ದಾರೆ ಎನ್ನುವುದಾಗಿ ಅಂದುಕೊಳ್ಳುತ್ತಾನೆ. ಆದರೆ ಪ್ರತಿ ಬಾರಿ ಇದೇ ಸಮಸ್ಯೆ ಎದುರಾದಾಗ ಆತನಿಗೆ ಆಕೆಯ ಮೇಲೆ ಅನುಮಾನ ಬರಲು ಪ್ರಾರಂಭವಾಗುತ್ತದೆ. ಕೊನೆಗೂ ಆತ ಹನಿಮೂನ್ ಆರೆಂಜ್ ಮಾಡಿಬಿಡುತ್ತಾನೆ. ಆ ಸಂದರ್ಭದಲ್ಲಿ ಕೂಡ ಆಕೆ ಆತನಿಗೆ ಪ್ರತಿರೋಧ ತೋರಿ ಆತನನ್ನು ಕಚ್ಚಿ ಓಡಿ ಹೋಗುತ್ತಾಳೆ. ನಂತರ ಗಮನಿಸಿದಾಗ ಮನೆಯಲ್ಲಿರುವ ಹಣ ಒಡವೆ ಎಲ್ಲವೂ ಕೂಡ ಕಳವಾಗಿರುತ್ತದೆ. ಪೊಲೀಸ್ ತನಿಖೆಯಿಂದ ಆಕೆ ಕಳ್ಳರ ಗುಂಪಿನ ಸದಸ್ಯೆ ಎನ್ನುವುದಾಗಿ ತಿಳಿದುಬರುತ್ತದೆ. ಮದುವೆ ಸಂದರ್ಭದಲ್ಲಿ ಆಕೆಯ ಸಂಬಂಧಿಕರು ಎಂದು ಬಂದವರೆಲ್ಲರೂ ಫೇಕ್ ಎಂದು ತಿಳಿದುಬರುತ್ತದೆ. ಅದಕ್ಕೆ ಮದುವೆ ಎನ್ನುವುದು ಜೀವನದ ಪ್ರಮುಖ ಘಟ್ಟವಾಗಿದ್ದು ಇದನ್ನು ಸಾಕಷ್ಟು ಯೋಚನೆಯ ನಂತರವೇ ಯೋಜನೆಗೆ ತರಬೇಕು.
